Lok Sabha Election: 20 ವರ್ಷದಿಂದ ಈ ಸಮುದಾಯದ ನಾಯಕನಿಗೆ ಸಿಕ್ಕಿಲ್ಲ ಸಂಸತ್ ಪ್ರವೇಶಿಸುವ ಅವಕಾಶ
ಲೋಕಸಭಾ ಚುನಾವಣೆಗಳ ಬಿಸಿ ಈಗ ರಾಜ್ಯದಲ್ಲಿ ಕಾಣಿಸಿಕೊಳ್ಳುತ್ತಿದೆ. ಈಗಾಗಲೇ ಪಕ್ಷಗಳ ಮುಖಂಡರು ಪ್ರಚಾರ ನಡೆಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ತಮ್ಮ ಚುನಾವಣಾ ಪ್ರಚಾರವನ್ನು ಕಲಬುರಗಿಯಿಂದಲೇ ಆರಂಭಿಸಿದ್ದಾರೆ. ಜಾತಿ ಲೆಕ್ಕಾಚಾರವನ್ನು ನೋಡಿಕೊಂಡೆ ಎಲ್ಲ ಪಕ್ಷಗಳು ಟಿಕೆಟ್ ನೀಡುತ್ತವೆ. ಆದರೆ ಈ ಒಂದು ಸಮುದಾಯದಿಂದ ಸತತ 20 ವರ್ಷವಾದರೂ ಒಬ್ಬನೇ ಒಬ್ಬ ಸಂಸದನಾಗಿ ಸಂಸತ್ ಪ್ರವೇಶಿಸಿಲ್ಲ ಎಂಬುದು ಗಮನಾರ್ಹ ಸಂಗತಿ.
ಕರ್ನಾಟಕದಲ್ಲಿ ಜಾತಿ ಸಮೀಕರಣವನ್ನು ನೋಡಿದಾಗ, ಲಿಂಗಾಯತರು, ಒಕ್ಕಲಿಗರ ಪ್ರಾಭಲ್ಯ ಎದ್ದು ಕಾಣುತ್ತದೆ. ಅಲ್ಲದೆ ಕರ್ನಾಟಕದಲ್ಲಿ ಶೇಕಡಾ 12ರಷ್ಟು ಮುಸ್ಲಿಂ ಮತದಾರರು ಇದ್ದಾರೆ. ಈ ಸಮಾಜವನ್ನು ಪ್ರತಿನಿಧಿಸುವ ಒಬ್ಬ ಸಂಸದ 20 ವರ್ಷಗಳಿಂದ ಸಂಸತ್ ಪ್ರವೇಶಿಸದೇ ಇರುವುದು ಬೇಸರದ ಸಂಗತಿಯಾಗಿದೆ. 2004ರಲ್ಲಿ ಕಲಬುರಗಿಯಿಂದ ಇಕ್ಬಾಲ್ ಅಹ್ಮದ್ ಸರಡಗಿ ಕೊನೆಯ ಬಾರಿಗೆ ಈ ಸಮುದಾಯದಿಂದ ಸಂಸತ್ ಪ್ರವೇಶಿಸಿದ್ದರು. ಅಲ್ಲಿಂದ ಇಲ್ಲಿಯವರೆಗೆ ಬೇರೆ ಯಾರಿಗೂ ಈ ಸಾಧನೆ ಮಾಡಲು ಆಗಿಲ್ಲ.

11 ಅಭ್ಯರ್ಥಿಗಳು ಕಣಕ್ಕೆ
ಕಳೆದ ಮೂರ್ನಾಲ್ಕು ಚುನಾವಣೆಗಳನ್ನು ಗಮನಿಸಿದರೆ, ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಅಷ್ಟಾಗಿ ಈ ಸಮುದಾಯಕ್ಕೆ ಅವಕಾಶವನ್ನು ನೀಡಲಿಲ್ಲ. ಕಳೆದ 4 ಚುನಾವಣೆಗಳ ಅಂಕಿ ಅಂಶಗಳನ್ನು ನೋಡಿದಾಗ ಒಟ್ಟು 112 ಅಭ್ಯರ್ಥಿಗಳನ್ನು ಈ ಮೂರು ಪಕ್ಷಗಳು ಕಣಕ್ಕೆ ಇಳಿಸಿವೆ. ಇದರಲ್ಲಿ ಮುಸ್ಲಿಂ ಸಮುದಾಯದ 11 ಅಭ್ಯರ್ಥಿಗಳು ಕಣಕ್ಕಿಳಿದಿದ್ದರು. ಚುನಾವಣೆಯಿಂದ ಚುನಾವಣೆಗೆ ಈ ಸಂಖ್ಯೆ ಕಡಿಮೆ ಆಗುತ್ತಲೆ ಬಂದಿದೆ.
2004ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ 4 ಮುಸ್ಲೀಂ ಅಭ್ಯರ್ಥಿಗಳಿಗೆ ಅವಕಾಶ ನೀಡಲಾಗಿತ್ತು. ಇದರ ನಂತರ ನಡೆದ 2009, 2014ರ ಕೇಂದ್ರ ಚುನಾವಣೆಯಲ್ಲಿ ಮೂರು ಅಭ್ಯರ್ಥಿಗಳಿಗೆ ಅವಕಾಶ ಸಿಕ್ಕಿತ್ತು. 2019ರಲ್ಲಿ ಒಬ್ಬರಿಗೆ ಮಾತ್ರ ಅಖಾಡದಲ್ಲಿ ಸ್ಪರ್ಧಿಸುವ ಅವಕಾಶ ನೀಡಲಾಗಿತ್ತು. ಈ ಪಟ್ಟಿಯಲ್ಲಿ ಬಿಜೆಪಿ ಯಾವುದೇ ಮುಸ್ಲಿಂ ಅಭ್ಯರ್ಥಿಗೆ ಅವಕಾಶ ನೀಡಿರಲಿಲ್ಲ. ಕ್ಷೇತ್ರ ವಿಂಗಡಣೆ ಸಹ ಮುಸ್ಲಿಂ ನಾಯಕರಿಗೆ ಪೆಟ್ಟು ನೀಡಿದ್ದಂತೂ ಸುಳ್ಳು ಅಲ್ಲವೇ ಅಲ್ಲ.

ಕರ್ನಾಟಕದಿಂದ ಸಂಸತ್ ಪ್ರವೇಶಿಸಿರುವ ಮುಸ್ಲಿಂ ಸಂಸದರು
1989 ಧಾರವಾಡ ದಕ್ಷಿಣದಿಂದ ಬಿ.ಎಂ.ಮುಜಾಹಿದ್ ಹಾಗೂ ಬೆಂಗಳೂರು ಉತ್ತರದಿಂದ ಸಿ.ಕೆ.ಜಾಫರ್ ಷರೀಫ್ ಸಂಸತ್ ಪ್ರವೇಶಿಸಿದ್ದರು. ಅಲ್ಲದೆ ಬೆಂಗಳೂರು ಉತ್ತರದಿಂದ ಮೂರು ಬಾರಿ ಜಾಫರ್ ಷರೀಫ್ ಸಂಸತ್ ಪ್ರವೇಶಿಸಿದಾಗಲೂ ಇವರ ಗೆಲವಿನ ಅಂತರ 60 ಸಾವಿರಕ್ಕೂ ಹೆಚ್ಚೇ ಇತ್ತು. 1991ರಲ್ಲಿ ಕಮರುಲ್ ಇಸ್ಲಾಂ ಜೆಡಿಎಸ್ ಪಕ್ಷದಿಂದ ಗೆದ್ದು ಸಂಸತ್ ಪ್ರವೇಶಿಸಿದ್ದರು. 2004ರಲ್ಲಿ ಕಲಬುರಗಿಯಿಂದ ಇಕ್ಬಾಲ್ ಅಹ್ಮದ್ ಸರಡಗಿ 57 ಸವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆದ್ದು ಸಂಸತ್ ಪ್ರವೇಶಿಸಿದ್ದರು. ಇಲ್ಲಿಂದ ಯಾರೂ ಸಂಸತ್ ಪ್ರವೇಶಿಸಿಲ್ಲ.
ಒಬ್ಬರಿಗೆ ಅವಕಾಶ
ಈ ಬಾರಿಯೂ ಮೂರು ಪಕ್ಷಗಳಿಂದ ಈ ಸಮುದಾಯಕ್ಕೆ ಹೆಚ್ಚಿನ ಸ್ಥಾನ ಸಿಗುವ ಭರವಸೆಯ ಇತ್ತು. ಆದರೆ ಈ ಬಾರಿಯೂ ನಿರಾಸೆ ಆಗಿದೆ. ಕಾಂಗ್ರೆಸ್ ಪಕ್ಷದಿಂದ ಹೆಚ್ಚಿನ ಲಾಭ ಆಗುತ್ತದೆ ಎಂದು ಮುಖಂಡರು ಲೆಕ್ಕಾಚಾರ ಹಾಕಿಕೊಂಡಿದ್ದರು ಆದರೆ ಈ ಬಾರಿ ಒಬ್ಬರಿಗೆ ಮಾತ್ರ ಟಿಕೆಟ್ ನೀಡಿದೆ. ಜಾತಿ ಆಧಾರದ ಮೇಲೆ ಮತ ಹಾಕಿದಾಗ ಅದರ ಆಧಾರದ ಮೇಲೆಯೇ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕಾಗಿದೆ ಎಂದು ಪಕ್ಷದ ಸದಸ್ಯರು ವಾದಿಸುತ್ತಾರೆ.

ಬೆಂಗಳೂರು ಸೆಂಟ್ರಲ್‌ನಲ್ಲಿ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಮುಸ್ಲಿಂ ಸಮುದಾಯಕ್ಕೆ ಅವಕಾಶ ನೀಡಲಾಗಿದೆ. ಮನ್ಸೂರ್ ಅಲಿಖಾನ್ ಈ ಬಾರಿ ಗೆಲುವಿನ ಕನಸು ಕಾಣುತ್ತಿದ್ದಾರೆ. ಇವರು ಹಾಲಿ ಸಂಸದ್ ಪಿಸಿ ಮೋಹನ್ ಅವರಿಗೆ ತೀವ್ರ ಪೈಪೋಟಿ ನೀಡುವ ಆಸೆಯ ಹೊಂದಿದ್ದಾರೆ. ಈ ಲೋಕಸಭಾ ಕ್ಷೇತ್ರದಲ್ಲಿ 8 ವಿಧಾನ ಸಭಾ ಕ್ಷೇತ್ರಗಳು ಬರುತ್ತಿದ್ದು, ಇದರಲ್ಲಿ ಐವರು ಕಾಂಗ್ರೆಸ್ ಎಂಎಲ್‌ಎಗಳು ಇದ್ದು, ಮೂರುರಲ್ಲಿ ಬಿಜೆಪಿ ಶಾಸಕರು ಇದ್ದಾರೆ.
ಕಳೆದ ಬಾರಿಯೂ ಈ ಕ್ಷೇತ್ರ ಎಲ್ಲರ ಚಿತ್ತ ಕದ್ದಿತ್ತು. ಈ ಕ್ಷೇತ್ರದಲ್ಲಿ ಕಳೆದ ಬಾರಿ ಎಚ್.ಟಿ ಸಾಂಗ್ಲಿಯಾ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದರು. ಆದರೆ ಬಿಜೆಪಿ ಅಭ್ಯರ್ಥಿ 35 ಸಾವಿರಕ್ಕೂ ಹೆಚ್ಚಿನ ಮತಗಳಿಂದ ಗೆಲುವು ಸಾಧಿಸಿದ್ದಾರೆ.












Click it and Unblock the Notifications