ಯಡಿಯೂರಪ್ಪ ವಿರುದ್ಧ ರೊಚ್ಚಿಗೆದ್ದು, ಬಿಜೆಪಿ ಕೇಂದ್ರ ನಾಯಕರಿಗೆ ಭ್ರಮೆ ಹಿಡಿದಿದೆ ಎಂದ ಈಶ್ವರಪ್ಪ!
ಯಡಿಯೂರಪ್ಪ ವಿರುದ್ಧ ರೊಚ್ಚಿಗೆದ್ದಿರುವ ಕೆ.ಎಸ್. ಈಶ್ವರಪ್ಪ ಈ ಸಿಟ್ಟಲ್ಲಿ ಈಗ ಬಾಯಿಗೆ ಬಂದಂತೆ ಹೇಳಿಕೆ ನೀಡುತ್ತಿದ್ದಾರೆ. ಅದರಲ್ಲೂ ಬಿಜೆಪಿ ಕೇಂದ್ರ ನಾಯಕರು ಅಂದ್ರೆ ಬಿಜೆಪಿ ಹೈಕಮಾಂಡ್ ನಾಯಕರ ವಿರುದ್ಧವೂ ಈಗ ತಿರುಗಿಬಿದ್ದಿರುವ ಕೆ.ಎಸ್. ಈಶ್ವರಪ್ಪ, ಏನು ಹೇಳಿದ್ದಾರೆ ಗೊತ್ತಾ? ಈಶ್ವರಪ್ಪ ವಿರುದ್ಧ ಬಿಜೆಪಿ ವರಿಷ್ಠರು ಶಿಸ್ತಿನ ಕ್ರಮ ಕೈಗೊಳ್ಳುತ್ತಾರಾ? ಮುಂದೆ ಓದಿ.
ಯಡಿಯೂರಪ್ಪ & ಈಶ್ವರಪ್ಪ ಅವರು ಒಂದು ಕಾಲದಲ್ಲಿ ಕರ್ನಾಟಕದಲ್ಲಿ ಒಗ್ಗಟ್ಟಿನಿಂದಲೇ ಪಕ್ಷವನ್ನು ಕಟ್ಟಿ ಬೆಳೆಸಿದ್ದರು. ಆದರೆ 2008ರಲ್ಲಿ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಪಟ್ಟಕ್ಕೆ ಏರಿದ ನಂತರ ಇಬ್ಬರ ಕಿರಿಕ್ ಜೋರಾಗಿತ್ತು. ಸ್ನೇಹಿತರಂತೆ ಇದ್ದ ಬಿಎಸ್‌ವೈ ಅಂದ್ರೆ ಯಡಿಯೂರಪ್ಪ & ಕೆಎಸ್ ಈಶ್ವರಪ್ಪ ಆಜನ್ಮ ಶತ್ರುಗಳಾಗುತ್ತಾರೆ. ಯಡಿಯೂರಪ್ಪ & ಈಶ್ವರಪ್ಪ ನಡುವೆ ಕಿಚ್ಚು ಹೊತ್ತಿಕೊಳ್ಳುತ್ತದೆ. ಮೊದಲ ಬಾರಿ ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ಈಶ್ವರಪ್ಪ ಡಿಸಿಎಂ ಕೂಡ ಆಗುತ್ತಾರೆ. ಆದರೂ ಅವರಿಬ್ಬರ ಮಧ್ಯೆ ಭಾರಿ ತಿಕ್ಕಾಟ ನಡೆದಿತ್ತು. ಈಗ ಇಬ್ಬರೂ ಚುನಾವಣಾ ರಾಜಕೀಯದಿಂದ ಹಿಂದೆ ಸರಿದಾಗ ಹೊಸ ಬೆಂಕಿ ಹೊತ್ತಿಕೊಂಡಿದೆ.

ಬಿಜೆಪಿ ವರಿಷ್ಠರಿಗೆ ಭ್ರಮೆ ಎಂದ ಈಶ್ವರಪ್ಪ!
ಇಂದು ಶಿವಮೊಗ್ಗದಲ್ಲಿ ಮಾತನಾಡಿದ ಕೆ.ಎಸ್. ಈಶ್ವರಪ್ಪ ಅವರು ಯಡಿಯೂರಪ್ಪ ಬಗ್ಗೆ ವಾಗ್ದಾಳಿ ನಡೆಸಿದರು. ಹಾಗೇ ತಮ್ಮ ಮಾತಿನ ಭರದಲ್ಲಿ ಕೆ.ಎಸ್. ಈಶ್ವರಪ್ಪ ಈಗ, ಬಿಜೆಪಿ ವರಿಷ್ಠರಿಗೆ ಭ್ರಮೆ ಎಂದಿದ್ದಾರೆ. ಈ ಮೂಲಕ ಕರ್ನಾಟಕ ಬಿಜೆಪಿ ಒಳಗೆ ದೊಡ್ಡ ಬೆಂಕಿಯೇ ಹೊತ್ತಿಕೊಂಡಂತೆ ಆಗಿದೆ. ಹಾಗಾದ್ರೆ ಕೆ.ಎಸ್. ಈಶ್ವರಪ್ಪ ಇದೀಗ, ಬಿಜೆಪಿ ವರಿಷ್ಠರಿಗೆ ಭ್ರಮೆ ಅಂತಾ ಹೇಳಿದ್ದು ಯಾಕೆ? ಇದರ ಹಿಂದಿನ ಕಾರಣ ಏನು? ಮುಂದೆ ಈಶ್ವರಪ್ಪ ವಿರುದ್ಧವೂ ಬಿಜೆಪಿ ಹೈಕಮಾಂಡ್ ಶಿಸ್ತಿನ ಕ್ರಮ ಕೈಗೊಳ್ಳುತ್ತಾ? ಬನ್ನಿ ತಿಳಿಯೋಣ.
ದೊಡ್ಡ ಲಿಂಗಾಯತ ನಾಯಕ ಅಂತಾ...
ಯಡಿಯೂರಪ್ಪ ವಿರುದ್ಧ ಈಶ್ವರಪ್ಪ ಇಂದು ವಾಗ್ದಾಳಿ ನಡೆಸುವಾಗ ಜಾತಿ ವಿಚಾರ ಪ್ರಸ್ತಾಪ ಮಾಡಿದರು. ಬಿಜೆಪಿ ಹೈಕಮಾಂಡ್ ನಾಯಕರಿಗೆ ಯಡಿಯೂರಪ್ಪ ಇಲ್ಲಿ ದೊಡ್ಡ ಲಿಂಗಾಯತ ನಾಯಕರು ಎನ್ನುವಂತೆ ಭಾಸವಾಗಿದೆ. ಇದರಿಂದಲೇ ಯಡಿಯೂರಪ್ಪ ಅವರ ಮಾತನ್ನೀಗ ಬಿಜೆಪಿ ವರಿಷ್ಠರು ಕೇಳುತ್ತಾರೆ. ಇದರಿಂದ ಯಡಿಯೂರಪ್ಪ ಅವರ ಮಾತನ್ನ ಹೈಕಮಾಂಡ್ ತಳ್ಳಿಹಾಕಲ್ಲ. ಇದು ಬಿಜೆಪಿ ಪಕ್ಷದ ವರಿಷ್ಠರಿಗೆ ಇರುವ ಭ್ರಮೆ ಎಂದಿದ್ದಾರೆ ಕೆ.ಎಸ್. ಈಶ್ವರಪ್ಪ ಅವರು. ಹಾಗೇ ಯಡಿಯೂರಪ್ಪ ಬೇರೆ ಲಿಂಗಾಯತ ನಾಯಕರನ್ನು ಬೆಳೆಯಲು ಬಿಡುತ್ತಿಲ್ಲ ಎಂಬ ಆರೋಪವನ್ನೂ ಈಶ್ವರಪ್ಪ ಮಾಡಿದ್ದಾರೆ.
ಈಶ್ವರಪ್ಪ ವಿರುದ್ಧ ಕಠಿಣ ಕ್ರಮ?
ಅಂದಹಾಗೆ ಇದೀಗ ಈಶ್ವರಪ್ಪ ಅವರು ಬಾಯಿಗೆ ಬಂದಂತೆ ಮಾತನಾಡುತ್ತಾ ಇರುವುದನ್ನು ನೋಡಿದರೆ, ಬಿಜೆಪಿ ಹೈಕಮಾಂಡ್ ಶಿಸ್ತು ಕ್ರಮ ಕೈಗೊಳ್ಳುವ ಸಾಧ್ಯತೆ ದಟ್ಟವಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಮತ್ತೊಂದು ಕಡೆ ಕೇಂದ್ರದಿಂದ ನಾಯಕರು ಬಂದು ಈಶ್ವರಪ್ಪ ಅವರ ಸಿಟ್ಟು ಕಡಿಮೆ ಮಾಡಲು ಪ್ರಯತ್ನ ಮಾಡಿದ್ದರೂ, ಅದರಕ್ಕೆ ಈಶ್ವರಪ್ಪ ಸೂಕ್ತವಾಗಿ ಸ್ಪಂದಿಸಿಲ್ಲ ಎಂಬ ಆರೋಪ ಕೇಳಿಬಂದಿದೆ. ಹೀಗಿದ್ದಾಗ ಯಡಿಯೂರಪ್ಪ ಅವರು ಬೇರೆಯ ರಣತಂತ್ರ ಹೆಣೆಯುತ್ತಿದ್ದಾರೆ ಎನ್ನಲಾಗಿದೆ.
ಕರ್ನಾಟಕದಲ್ಲಿ ಯಾವಾಗ ಚುನಾವಣೆ?
ಚುನಾವಣಾ ಆಯೋಗದ ಅಧಿಕಾರಿಗಳು ಘೋಷಣೆ ಮಾಡಿರುವ ಪ್ರಕಾರ, ಏಪ್ರಿಲ್ 26 ರಂದು & ಮೇ 7 ರಂದು ಕರ್ನಾಟಕದಲ್ಲಿ ಮತದಾನ ನಡೆಯಲಿದೆ. ಚುನಾವಣೆ ಫಲಿತಾಂಶ ಜೂನ್ 4 ಕ್ಕೆ ಹೊರಬೀಳಲಿದೆ. ಈ ಮೂಲಕ ಇಡೀ ಪ್ರಪಂಚದ ಗಮನ ಸೆಳೆದಿರುವ, ಭಾರತದ ಲೋಕಸಭಾ ಚುನಾವಣೆ ಅಂತಿಮ ಹಂತಕ್ಕೆ ತಲುಪುತ್ತಿದೆ. ಇದೇ ಸಮಯದಲ್ಲಿ ಕರ್ನಾಟಕದಲ್ಲಿ ಬಿಜೆಪಿಯ ಒಳಗೆ ಹೊಸ ಕಿಚ್ಚು ಹೊತ್ತಿಕೊಂಡಿದ್ದು ಭಾರಿ ಸಂಚಲನ ಸೃಷ್ಟಿ ಮಾಡಿದೆ. ಈ ಎಲೆಕ್ಷನ್‌ನ ಮೂಲಕ 400ಕ್ಕೂ ಹೆಚ್ಚು ಸ್ಥಾನ ಗೆಲ್ಲಬೇಕು ಎಂಬ ಗುರಿ ಹಾಕಿಕೊಂಡ, ಬಿಜೆಪಿ ನೇತೃತ್ವದ ಎನ್‌ಡಿಎ ನಾಯಕರಿಗೆ ಕರ್ನಾಟಕದ ಈ ಬೆಳವಣಿಗೆ ಸದ್ಯಕ್ಕೆ ಹೊಸ ತಲೆನೋವು ತರಿಸಿದೆ.












Click it and Unblock the Notifications