Get Updates
Get notified of breaking news, exclusive insights, and must-see stories!

ಲೋಕಸಭಾ ಚುನಾವಣೆ 2024: ಕರ್ನಾಟಕದಲ್ಲಿ ನರೇಂದ್ರ ಮೋದಿ ಪ್ರಚಾರ

ಬೆಂಗಳೂರು ಮಾರ್ಚ್ 11: ಲೋಕಸಭಾ ಚುನಾವಣೆಗೆ ಇನ್ನೂ ದಿನಾಂಕ ಘೋಷಣೆಯಾಗಿಲ್ಲ. ಅದಾಗಲೇ ಪ್ರಬಲ ಪಕ್ಷಗಳು ಕೇಂದ್ರ ನಾಯಕರ ಮೂಲಕ ಮತದಾರರನ್ನು ಸೆಳೆಯುತ್ತ ಚಿಂತನೆ ನಡೆಸಿವೆ. ಈ ನಿಟ್ಟಿನಲ್ಲಿ ಚುನಾವಣೆ ಸಂದರ್ಭದಲ್ಲಿ ಹೆಚ್ಚು ಮತದಾರರ ಗಮನ ಸೆಳೆಯಲು ಕರ್ನಾಟಕದಲ್ಲಿ ಪ್ರಧಾನಿ ಮೋದಿ ಅವರು ಪ್ರಚಾರ ಮಾಡುವ ಸಾಧ್ಯತೆ ಇದೆ.

ಹೌದು.. ಕರ್ನಾಟಕದಲ್ಲಿ ಮಾರ್ಚ್ 15ರಿಂದ ಪ್ರಧಾನಿ ನರೇಂದ್ರ ಮೋದಿ ಚುನಾವಣಾ ಪ್ರಚಾರ ಮಾಡುವ ಸಾಧ್ಯತೆ ಇದೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಈಗಾಗಲೇ ಚುನಾವಣೆ ಪ್ರಚಾರಕ್ಕಾಗಿ ಮೋದಿ ಅವರ ಪ್ರಚಾರ ಪ್ರವಾಸದ ತಾತ್ಕಾಲಿಕ ಪಟ್ಟಿಯೊಂದು ಸಿದ್ಧಗೊಂಡಿದ್ದು, ಅದರ ಪ್ರಕಾರ ಮಾರ್ಚ್ 15ರಿಂದ ಮಾರ್ಚ್ 19ರವರೆಗೆ ನಮೋ ಕರ್ನಾಟಕ ಸೇರಿದಂತೆ ದಕ್ಷಿಣದ ರಾಜ್ಯಗಳಲ್ಲಿ ಸಂಚಾರಿಸಿ ಪ್ರಚಾರ ಮಾಡಲಿದ್ದಾರೆ.

Lok Sabha Election 2024 Narendra Modi Campaign in Karnataka

ಹೀಗಾಗಿ ಕರ್ನಾಟಕದಲ್ಲಿ ಈ ಬಾರಿ ಲೋಕಸಭಾ ಚುನಾವಣೆಗೆ ಮೋದಿ ಪ್ರಚಾರ ಈಗಾಗಲೇ ಫಿಕ್ಸ್ ಆಗಿದೆ ಎಂದು ಹೇಳಲಾಗುತ್ತಿದೆ. ಆಡಳಿತ ವಿರೋಧಿ ಅಂಶಗಳನ್ನು ಎದುರಿಸುತ್ತಿರುವ ರಾಜ್ಯದ ಆಡಳಿತಾರೂಢ ಬಿಜೆಪಿಯು ದೇಶದ ದಕ್ಷಿಣ ಭಾಗದಲ್ಲಿ ತನ್ನ ಕೋಟೆ ಕಟ್ಟಲು ನಿರ್ಧರಿಸಿದೆ. ಇದಕ್ಕಾಗಿ ಮೋದಿ ಪ್ರಚಾರದ ಹವಾ ಸೃಷ್ಟಿಸಲು ಪಕ್ಷ ತೀರ್ಮಾನಿಸಿದೆ.

ತಾತ್ಕಾಲಿಕ ಪಟ್ಟಿ ಪ್ರಕಾರ ಮೋದಿಯವರು ಮಾರ್ಚ್​ 15ಕ್ಕೆ ಕೋಲಾರ, ಮಾರ್ಚ್​ 17ಕ್ಕೆ ಶಿವಮೊಗ್ಗ, ಮಾರ್ಚ್​ 18ಕ್ಕೆ ಬೀದರ್​​, ಮಾರ್ಚ್​ 19ಕ್ಕೆ ಧಾರವಾಡದಲ್ಲಿ ಪ್ರಚಾರ ನಡೆಸಲಿದ್ದಾರೆ ಎನ್ನಲಾಗುತ್ತದೆ. ಈ ಪೈಕಿ ರಾಜ್ಯದ 4 ಜಿಲ್ಲೆಗಳಲ್ಲಿ ಅದರ ಸುತ್ತಮುತ್ತಲಿನ ಕ್ಷೇತ್ರದವರೂ ಭಾಗಿಯಾಗಲಿದ್ದಾರೆ. ಆದರೆ ಚುನಾವಣೆ ದಿನಾಂಕ ನಿಗದಿ ಆಧಾರದ ಮೇಲೆ ಪಟ್ಟಿಯಲ್ಲಿ ಬದಲಾವಣೆಯಾಗುವುದು ಎನ್ನಲಾಗಿದೆ.

Lok Sabha Election 2024 Narendra Modi Campaign in Karnataka

ಹೀಗೆ ರಾಜ್ಯದಲ್ಲಿ ತನ್ನ ಪ್ರಮುಖ ಪ್ರತಿಸ್ಪರ್ಧಿಯಾದ ಕಾಂಗ್ರೆಸ್ ಅನ್ನು ಸೋಲಿಸಲು ಬಿಜೆಪಿ ಇನ್ನಿಲ್ಲದ ಕಸರತ್ತು ನಡೆಸಿದೆ. ಪಕ್ಷದ ಸ್ವಂತ ದಾಖಲೆಗಳ ಪ್ರಕಾರ, ಕಳೆದ ಬಾರಿ ಚುನಾವಣೆಯಲ್ಲಿ ಬಿಜೆಪಿ ಪಕ್ಷವು ರಾಜ್ಯಾದ್ಯಂತ ಒಟ್ಟು 3116 ಚುನಾವಣಾ ಪ್ರಚಾರ ಸಭೆಗಳನ್ನು ನಡೆಸಿತ್ತು. ಪಕ್ಷದ ಸ್ವಂತ ಅಂದಾಜಿನ ಪ್ರಕಾರ ರಾಜ್ಯದಲ್ಲಿ ದೇವಸ್ಥಾನಗಳು ಮತ್ತು ಮಠಗಳಿಗೆ ಪಕ್ಷದ ನಾಯಕರು 311 ಭೇಟಿಗಳು, 9125 ಸಾರ್ವಜನಿಕ ಸಭೆಗಳು, 1377 ರೋಡ್‌ಶೋಗಳನ್ನು ನಡೆಸಿದ್ದಾರೆ, ಜೊತೆಗೆ 9077 ಬೀದಿ ಸಭೆಗಳನ್ನು ರಾಜ್ಯಾದ್ಯಂತ ನಡೆಸಲಾಗಿದೆ.

ಮೋದಿ ಅವರು ಕೇಸರಿ ಪಕ್ಷದ ಮುಖ್ಯ ಪ್ರಚಾರಕರಾಗಿದ್ದಾಗ, 15 ಕೇಂದ್ರ ಸಚಿವರು (ಪ್ರಧಾನಿ ಹೊರತುಪಡಿಸಿ) ಸೇರಿದಂತೆ ಒಟ್ಟು 128 ರಾಷ್ಟ್ರೀಯ ನಾಯಕರು ಈ ಚುನಾವಣಾ ಋತುವಿನಲ್ಲಿ ಕರ್ನಾಟಕದಲ್ಲಿ ಪ್ರಚಾರವನ್ನು ಮಾಡಿದರು. 26 ಮೋದಿ ಶೋಗಳ ಹೊರತಾಗಿ, ಗೃಹ ಸಚಿವ ಅಮಿತ್ ಶಾ ಅವರು 16 ರ‍್ಯಾಲಿಗಳು ಮತ್ತು 15 ರೋಡ್ ಶೋಗಳು ಸೇರಿದಂತೆ ಅತಿ ಹೆಚ್ಚು ಸಾರ್ವಜನಿಕ ಪ್ರಚಾರಗಳನ್ನು ನಡೆಸಿದರು. ಪಕ್ಷದ ಮುಖ್ಯಸ್ಥ ಜೆಪಿ ನಡ್ಡಾ ಅವರು 10 ರ‍್ಯಾಲಿಗಳು ಮತ್ತು 16 ರೋಡ್ ಶೋಗಳನ್ನು ನಡೆಸಿದರು. ಕೇಂದ್ರ ಸಚಿವೆ ಸ್ಮೃತಿ ಇರಾನಿ 17 ಸಾರ್ವಜನಿಕ ಸಭೆಗಳು ಮತ್ತು ಎರಡು ರೋಡ್ ಶೋಗಳನ್ನು ಉದ್ದೇಶಿಸಿ ಮಾತನಾಡಿದರು.

ಅಲ್ಲದೆ ಬಿಜೆಪಿ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳು ಯೋಗಿ ಆದಿತ್ಯನಾಥ್ (ಯುಪಿ) ಒಂಬತ್ತು ರ‍್ಯಾಲಿಗಳು ಮತ್ತು ಮೂರು ರೋಡ್ ಶೋಗಳನ್ನು ನಡೆಸಿದರು. ಹಿಮಂತ ಬಿಸ್ವಾ ಶರ್ಮಾ (ಅಸ್ಸಾಂ) 15 ರ‍್ಯಾಲಿಗಳು ಮತ್ತು ಒಂದು ರೋಡ್ ಶೋ ನಡೆಸಿದರು.

ಜೊತೆಗೆ ಶಿವರಾಜ್ ಸಿಂಗ್ ಚೌಹಾಣ್ (ಮಧ್ಯಪ್ರದೇಶ) ಆರು ರ‍್ಯಾಲಿಗಳು ಮತ್ತು ಒಂದು ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದರು. ರೋಡ್ ಶೋ, ಮಹಾರಾಷ್ಟ್ರ ಸಿಎಂ ಮತ್ತು ಏಕನಾಥ್ ಶಿಂಧೆ ಮತ್ತು ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಒಟ್ಟಾಗಿ 17 ರ‍್ಯಾಲಿಗಳನ್ನು ಉದ್ದೇಶಿಸಿ ಮಾತನಾಡಿದರು.

ಮಾತ್ರವಲ್ಲದೆ ರಾಜ್ಯದಲ್ಲಿ ಪ್ರಚಾರ ನಡೆಸಿದ ಕೇಂದ್ರ ಸಚಿವರಲ್ಲಿ ನಿರ್ಮಲಾ ಸೀತಾರಾಮನ್, ಎಸ್ ಜೈಶಂಕರ್, ಅಶ್ವಿನಿ ವೈಷ್ಣವ್, ಗಜೇಂದ್ರ ಸೆಖಾವತ್, ವಿ ಕೆ ಸಿಂಗ್, ಅರ್ಜುನ್ ಮುಂಡಾ, ಜ್ಯೋತಿರಾದಿತ್ಯ ಸಿಂಧಿಯಾ, ಜಿ ಕಿಶನ್ ರೆಡ್ಡಿ, ಅರ್ಜುನ್ ರಾಮ್ ಮೇಘವಾಲ್, ಸಾಧ್ವಿ ನಿರಂಜನ್ ಜ್ಯೋತಿ ಸೇರಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+