ಬಿಜೆಪಿ ಕರ್ನಾಟಕದಲ್ಲಿ ಎಷ್ಟು ಲೋಕಸಭಾ ಕ್ಷೇತ್ರ ಗೆಲ್ಲಲಿದೆ? ಇಲ್ಲಿದೆ ವರದಿ!
ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ, 2024ರ ಲೋಕಸಭೆ ಚುನಾವಣೆಗೆ ಸಜ್ಜಾಗಿರುವ ಬಿಜೆಪಿ ಪಕ್ಷಕ್ಕೆ ದೊಡ್ಡ ಸವಾಲುಗಳು ಎದುರಾಗುತ್ತಿವೆ. ಹೀಗಿದ್ದರೂ ಸಲೀಸಾಗಿ ಮತ್ತೊಮ್ಮೆ ಕೇಂದ್ರದಲ್ಲಿ ಸರ್ಕಾರ ರಚಿಸಲು ಬಿಜೆಪಿ ರಣತಂತ್ರ ಹೆಣೆಯುತ್ತಿದ್ದು, ದಕ್ಷಿಣ ಭಾರತದಲ್ಲಿನ ಪ್ರಮುಖ ರಾಜ್ಯಗಳ ಪೈಕಿ ಒಂದಾದ ಕರ್ನಾಟಕದಲ್ಲಿ ಹೆಚ್ಚಿನ ಸ್ಥಾನ ಗೆಲ್ಲುವುದು ಅನಿವಾರ್ಯ ಆಗಿದೆ. ಹಾಗಾದರೆ ಎಷ್ಟು ಸ್ಥಾನ ಗೆಲ್ಲಲಿದೆ ಬಿಜೆಪಿ ನೇತೃತ್ವದ ಎನ್‌ಡಿಎ?
ಕರ್ನಾಟಕದಲ್ಲಿ ಒಟ್ಟು 28 ಲೋಕಸಭಾ ಸ್ಥಾನಗಳು ಇದ್ದು, ಈ ಪೈಕಿ ಬಿಜೆಪಿ ನೇತೃತ್ವದಲ್ಲಿ ಎನ್‌ಡಿಎ ಒಕ್ಕೂಟ ಭರ್ಜರಿ ಗೆಲುವು ಕಾಣಲಿದೆ ಎನ್ನಲಾಗಿದ್ದು. ಈ ಕುರಿತು 'ಎಬಿಪಿ & ಸಿ ವೋಟರ್' (ABP CVoter) ಸಮೀಕ್ಷೆಯಲ್ಲಿ ಭರ್ಜರಿ ಸುದ್ದಿ ಹೊರಬಿದ್ದಿದೆ. ಹಾಗಾದ್ರೆ ಈಗ 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಎಷ್ಟು ಸ್ಥಾನಗಳನ್ನ ಕರ್ನಾಟಕದಿಂದ ಗೆದ್ದು ಬೀಗಲಿದೆ? ಸಮೀಕ್ಷೆಗಳಲ್ಲಿ ಜನರ ಅಭಿಪ್ರಾಯ ಏನಾಗಿದೆ? ಕಾಂಗ್ರೆಸ್ ಎಷ್ಟು ಸ್ಥಾನಗಳಲ್ಲೀಗ ಗೆಲುವು ಸಾಧಿಸಬಹುದು? ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯಲು ಮುಂದೆ ಓದಿ.

ಬಿಜೆಪಿ ಪಕ್ಷಕ್ಕೆ ಹ್ಯಾಟ್ರಿಕ್ ಪಕ್ಕಾ?
2024 ಲೋಕಸಭೆ ಚುನಾವಣೆಗೆ ಅಖಾಡ ಸಿದ್ಧವಾಗಿ ಅಭ್ಯರ್ಥಿಗಳು ಕೂಡ ಸಿದ್ಧವಾಗಿ ಕೂತಿದ್ದಾರೆ ಇನ್ನೇನು ಚುನಾವಣೆ ಆಯೋಗ ಡೇಟ್ ಘೋಷಣೆ ಮಾಡಿ ರಣಕಹಳೆ ಮೊಗಳಗಿಸಬೇಕು ಅಷ್ಟೇ. ಹೀಗೆ ಇನ್ನೇನು ಕೆಲವೇ ದಿನದಲ್ಲಿ ಭಾರತೀಯರು ಹೊಸ ಸರ್ಕಾರ ಆಯ್ಕೆ ಮಾಡಲು ಮತದಾನ ಮಾಡಲಿದ್ದಾರೆ. ಹೀಗಿದ್ದಾಗ ಬಿಜೆಪಿ ಸತತ 3ನೇ ಬಾರಿಗೆ ಗೆದ್ದು ಹ್ಯಾಟ್ರಿಕ್ ಸಾಧನೆಯ ಮಾಡುವ ನಿರೀಕ್ಷೆಯಲ್ಲಿ ಇದ್ದಾಗ ಕರ್ನಾಟಕದಿಂದ ಬಿಜೆಪಿಗೆ ಭರ್ಜರಿ ಸಿಹಿಸುದ್ದಿ ಸಿಗುತ್ತಿದೆ. ಹಾಗಾದರೆ ಕರ್ನಾಟಕದಲ್ಲಿ ಬಿಜೆಪಿ ಎಷ್ಟು ಸ್ಥಾನ ಗೆಲ್ಲಲಿದೆ? ಬನ್ನಿ ತಿಳಿಯೋಣ.
28ರಲ್ಲಿ 23 ಸ್ಥಾನ ಗ್ಯಾರಂಟಿ?
ಹೌದು ಈಗ ಹೊರಬಿದ್ದಿರುವ 'ಎಬಿಪಿ & ಸಿ ವೋಟರ್' (ABP CVoter) ಸಮೀಕ್ಷೆ ಪ್ರಕಾರ ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟವು ಕರ್ನಾಟಕದಲ್ಲಿ ಬರೋಬ್ಬರಿ 23 ಸ್ಥಾನ ಗೆಲ್ಲುತ್ತದೆ ಎನ್ನಲಾಗುತ್ತಿದೆ. ಹಾಗೇ ಮತ್ತೊಂದು ಕಡೆ ಕಾಂಗ್ರೆಸ್ ನೇತೃತ್ವದ ಇಂಡಿಯಾ ಒಕ್ಕೂಟಕ್ಕೂ 5 ಸ್ಥಾನಗಳು ಸಿಗಬಹುದು ಎನ್ನಲಾಗಿದೆ. ಹಾಗಾದರೆ, ಬಿಜೆಪಿ & ಕಾಂಗ್ರೆಸ್ ಎಷ್ಟು ಶೇಕಡಾ ಮತಗಳನ್ನು ಪಡೆಯಲಿವೆ? ಈ ಬಗ್ಗೆ ಸಮೀಕ್ಷೆಯಲ್ಲಿ ಗೊತ್ತಾಗಿರುವ ಅಂಶ ಏನು? ಮುಂದೆ ತಿಳಿಯಿರಿ.
ಲೆಕ್ಕಾಚಾರ ಹಾಕಿ ಟಿಕೆಟ್ ಕೊಟ್ಟರು!
ಈಗಿನ ಲೆಕ್ಕಾಚಾರದ ಪ್ರಕಾರ ಬಿಜೆಪಿ & ಜೆಡಿಎಸ್ ನೇತೃತ್ವದ ಎನ್‌ಡಿಎ ಒಕ್ಕೂಟ ಶೇಕಡಾ 53ರಷ್ಟು ಮತಗಳನ್ನು ಸೆಳೆಯಲಿದೆ ಎನ್ನಲಾಗಿದೆ. ಹಾಗೆ ಇನ್ನೊಂದು ಕಡೆ ಕಾಂಗ್ರೆಸ್ ಪರ ಶೇಕಡಾ 42ರಷ್ಟು ಮತ ಬೀಳುವ ನಿರೀಕ್ಷೆ ಇದೆ. ಈ ಮೂಲಕ ಬಿಜೆಪಿ ಮತ್ತೊಂದು ಬಾರಿ ಕರ್ನಾಟಕದಲ್ಲಿ ದೊಡ್ಡ ಹವಾ ಎಬ್ಬಿಸಲು ಸಜ್ಜಾಗಿದೆ. ಹೀಗಾಗಿಯೇ, ಕರ್ನಾಟಕದಲ್ಲಿ ಈ ಬಾರಿ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಭಾರಿ ಲೆಕ್ಕಾಚಾರ ಹಾಕಿ ಟಿಕೆಟ್ ನೀಡಿದೆ ಬಿಜೆಪಿ.

ಮತ್ತೊಂದು ಕಡೆ ಪ್ರಧಾನಿ ಮೋದಿ ಅವರು ಕೂಡ ಕರ್ನಾಟಕದಲ್ಲಿ ಹಲವು ಕಾರ್ಯಕ್ರಮ ನಡೆಸಲಿದ್ದು, ಕರ್ನಾಟಕದ ಸಾಲು ಸಾಲು ಸಮಾರಂಭದಲ್ಲಿ ಚುನಾವಣೆಗೆ ಮೊದಲೇ ಭೇಟಿ ನೀಡಲಿದ್ದಾರೆ. ಅಲ್ಲದೆ ಚುನಾವಣೆ ಸಂದರ್ಭದಲ್ಲೂ ಭರ್ಜರಿ ಪ್ರಚಾರ ನಡೆಯಲಿದ್ದು, ಈ ಕಾರಣಕ್ಕೆ ಈಗಾಗಲೇ ಬಿಜೆಪಿ ರಾಜ್ಯ ನಾಯಕರು ಮತ್ತು ಕೇಂದ್ರ ನಾಯಕರು ಭರ್ಜರಿಯಾಗಿ ರಣತಂತ್ರ ಹೆಣೆಯುತ್ತಿದ್ದಾರೆ ಎನ್ನಲಾಗಿದೆ.












Click it and Unblock the Notifications