ಯಡಿಯೂರಪ್ಪ ಮಾತಿಗೆ ತಲೆಬಾಗಿದ ಬಿಜೆಪಿ ಹೈಕಮಾಂಡ್!

ರಾಜಾಹುಲಿ ಎಂಬ ಬಿರುದು ಪಡೆದು, ಕರ್ನಾಟಕ ಬಿಜೆಪಿ ಪಕ್ಷದಲ್ಲಿ ದೊಡ್ಡ ಹಿಡಿತವನ್ನು ಹೊಂದಿರುವ ಮಾಜಿ ಸಿಎಂ ಯಡಿಯೂರಪ್ಪ ಅವರು ಮತ್ತೊಮ್ಮೆ ತಮ್ಮ ಬಲ ಪ್ರದರ್ಶನ ಮಾಡಿದ್ದಾರೆ. ಅದರಲ್ಲೂ ಬಿಜೆಪಿ ಹೈಕಮಾಂಡ್ ಹಂತದಲ್ಲಿ, ಬಿ.ಎಸ್. ಯಡಿಯೂರಪ್ಪ ಅವರ ಮಾತಿಗೆ ಅದೆಷ್ಟು ಬೆಲೆ ಇದೆ ಅನ್ನೋದಕ್ಕೆ ಇದೀಗ ಬಿಡುಗಡೆ ಆಗಿರುವ ಲೋಕಸಭಾ ಚುನಾವಣೆಯ ಬಿಜೆಪಿ ಅಭ್ಯರ್ಥಿಗಳ ಪಟ್ಟಿಯೇ ಒಂದು ಉದಾಹರಣೆ. ಹಾಗಾದರೆ 2024ರ, ಲೋಕಸಭೆ ಚುನಾವಣೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಲ್ಲಿ ಬಿಎಸ್‌ವೈ ಪಾತ್ರ ಏನು?

ದಕ್ಷಿಣ ಭಾರತದಲ್ಲಿ ಬಿಜೆಪಿಗೆ ನೆಲೆಯೇ ಇಲ್ಲ ಅನ್ನುವಾಗ, ಕರ್ನಾಟಕದಲ್ಲಿ ಬಿಜೆಪಿ ಪಕ್ಷದ ಸಂಘಟನೆ ಮಾಡಿ ಪಕ್ಷವನ್ನು ಗಟ್ಟಿಯಾಗಿ ಕಟ್ಟಿ ಬೆಳೆಸಿದ ಕೀರ್ತಿ ಮಾಜಿ ಮುಖ್ಯಮಂತ್ರಿ & ಬಿಜೆಪಿ ಹಿರಿಯ ನಾಯಕ ಯಡಿಯೂರಪ್ಪ ಅವರಿಗೆ ಸಲ್ಲಬೇಕು. ಅದ್ರಲ್ಲೂ ಕರ್ನಾಟಕದಲ್ಲಿ ಬಿಜೆಪಿ ಮೊದಲ ಬಾರಿಗೆ ಅಧಿಕಾರ ಹಿಡಿಯುವಲ್ಲಿ ಯಡಿಯೂರಪ್ಪ ಅವರ ಪಾತ್ರ ತುಂಬಾ ಮುಖ್ಯವಾಗಿತ್ತು. ಈ ಮೂಲಕ ಬೆಂಗಳೂರಿನ ಬಿಬಿಎಂಪಿ ಬಾಗಿಲು ಕೂಡ ಬಿಜೆಪಿಗೆ ತೆರೆದಿದ್ದು ಕೂಡ ಇದೇ ಯಡಿಯೂರಪ್ಪ ಅವರ ನಾಯಕತ್ವದಲ್ಲಿ. ಹೀಗಿದ್ದಾಗ ಈಗ ಯಡಿಯೂರಪ್ಪ ಅವರು ಮತ್ತೊಮ್ಮೆ ತಮ್ಮ ಬಲ ಪ್ರದರ್ಶನ ಮಾಡಿದ್ದಾರೆ!

Lok Sabha Election 2024 BS Yediyurappa Taken A Major Role In Selecting The Candidates For Karnataka

ಯಡಿಯೂರಪ್ಪ ಆಯ್ಕೆಯೇ ಅಂತಿಮ?

ಬಿಜೆಪಿ ಪಕ್ಷದಲ್ಲಿ ಈಗ ಹಲವು ಹಾಲಿ ಸಂಸದರಿಗೆ ಟಿಕೆಟ್ ಮಿಸ್ ಆಗಿದೆ. ಆದರೆ ಹೀಗೆಲ್ಲಾ ಟಿಕೆಟ್ ಮಿಸ್ ಆಗಲು ಯಡಿಯೂರಪ್ಪ ಅವರೇ ಕಾರಣ ಎಂಬ ಆರೋಪವನ್ನು ಮಾಡ್ತಿದ್ದಾರೆ ಯಡಿಯೂರಪ್ಪ ಅವರ ವಿರೋಧಿ ಪಾಳಯದ ನಾಯಕರು. ಹೀಗಿದ್ದರೂ ಅಸಲಿ ಕಾರಣವೇ ಬೇರೆ ಇದೆ. ಅದೇನಪ್ಪ ಅಸಲಿ ಕಾರಣ? ಪ್ರತಾಪ್ ಸಿಂಹ, ಸದಾನಂದ ಗೌಡ ಮತ್ತು ನಳಿನ್ ಕುಮಾರ್ ಕಟೀಲು ಸೇರಿದಂತೆ ಹಲವರಿಗೆ ಟಿಕೆಟ್ ಮಿಸ್ ಆಗಿದ್ದೇಕೆ? ಮುಂದೆ ಓದಿ.

ಅಂದಹಾಗೆ ಇದೀಗ ಟಿಕೆಟ್ ಮಿಸ್ ಆಗಿರುವ ಹಲವು ಹಾಲಿ ಸಂಸದರ ಅಭಿವೃದ್ಧಿ ಕಾರ್ಯ & ಅವರ ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಸೇರಿದಂತೆ ಎಲ್ಲವನ್ನೂ ಅಳೆದು ತೂಗಿ ಟಿಕೆಟ್ ಕೊಟ್ಟಿದೆ ಬಿಜೆಪಿ ಹೈಕಮಾಂಡ್. ಹೀಗಿದ್ದರೂ ಇಲ್ಲಿ ಪ್ರಮುಖವಾದ ಒಂದು ವಿಚಾರ ಇದೆ, ಅದೇನೆಂದರೆ ಯಡಿಯೂರಪ್ಪ ಅವರ ಸಲಹೆ ಇಲ್ಲದೆ ಬಿಜೆಪಿ ಈ ಬಾರಿ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲವೆಂಬ ಮಾತೂ ಕೂಡ ಓಡಾಡುತ್ತಿದೆ. ಆದರೆ ಇದು ಅದೆಷ್ಟು ಸತ್ಯ ಎಂಬುದು ಬಿಜೆಪಿಯ ಕೇಂದ್ರ ನಾಯಕರಿಗೆ ಮಾತ್ರ ಗೊತ್ತು.

ಪ್ರತಾಪ್ ಸಿಂಹಗೆ ಟಿಕೆಟ್ ಕೈತಪ್ಪಲು ಕಾರಣ ಯಡಿಯೂರಪ್ಪ ಅಲ್ಲ: ಅಸಲಿ ಕಾರಣ ಇಲ್ಲಿದೆ ನೋಡಿ!ye

ಹಿರಿಯ ನಾಯಕನಿಗೆ ಹೈಕಮಾಂಡ್ ಗೌರವ

ಈ ಹಿಂದೆ 2021ರಲ್ಲಿ ಸಿಎಂ ಆಗಿದ್ದ ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಕೆಳಗೆ ಇಳಿಸಲಾಗಿತ್ತು. ಆದರೆ ಹೀಗೆ ಯಡಿಯೂರಪ್ಪ ಅವರನ್ನು, ಸಿಎಂ ಸ್ಥಾನದಿಂದ ಕೆಳಗಿಳಿಸಿದ ನಂತರ. ಕರ್ನಾಟಕದಲ್ಲಿ ಬಿಜೆಪಿ ಪೀಸ್, ಪೀಸ್ ಆಗಿ ಹೋಗಿತ್ತು. 2023 ರ ವಿಧಾನಸಭೆಯ ಚುನಾವಣೆ ವೇಳೆ ಬಿಜೆಪಿ ಹೀನಾಯ ಸೋಲನ್ನು ಕಂಡಿತ್ತು. ಆ ನಂತರ ಯಡಿಯೂರಪ್ಪಗೆ ಮತ್ತೊಮ್ಮೆ ಬುಲಾವ್ ಕೊಟ್ಟ ಬಿಜೆಪಿ ಹೈಕಮಾಂಡ್, ಯಡಿಯೂರಪ್ಪ ಅವರ ವಿರೋಧಿ ಬಣವನ್ನು ಮೂಲೆಗುಂಪು ಮಾಡಿದೆ. ಈಗ ನೋಡಿದರೆ 2024ರ ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಬಿಎಸ್‌ವೈ ಅವರ ಮಾತನ್ನೇ ಸಂಪೂರ್ಣ ಕೇಳಿದೆ ಎಂಬ ಮಾತು ಹರಿದಾಡುತ್ತಿದೆ. ಆದರೂ ಈ ಮೂಲಕ ಬಿಜೆಪಿ ಹೈಕಮಾಂಡ್ ಕ್ರಾಂತಿಕಾರಿ ನಿರ್ಧಾರ ಕೈಗೊಂಡಿದೆ.

ಕರ್ನಾಟಕದ ಬಿಜೆಪಿಯಲ್ಲಿ ಗುಂಪುಗಾರಿಕೆ ಇದ್ದು, ಹೀಗಾಗಿಯೇ 2023ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಸೋಲು ಕಾಣಬೇಕಾಗಿ ಬಂತು ಅನ್ನೋ ಆರೋಪವೂ ಇದೆ. ಈ ಆರೋಪಕ್ಕೆ ಬಲ ನೀಡುವಂತೆ ಬಿಜೆಪಿ ಸರ್ಕಾರದ ಸಚಿವರೆಲ್ಲರೂ ಸೋತು ಸುಣ್ಣವಾಗಿದ್ದರು. ಹೀಗಿದ್ದಾಗಲೇ ಇದೀಗ ಲೋಕಸಭೆ ಚುನಾವಣೆಯಲ್ಲಿ ಯಡಿಯೂರಪ್ಪ ಅವರ ಮಾತಿಗೆ ಮನ್ನಣೆ ನೀಡಲು, ಆ ಮೂಲಕ ಯಡಿಯೂರಪ್ಪ ಅವರ ಆಯ್ಕೆಯ ಅಭ್ಯರ್ಥಿಗಳಿಗೆ ಟಿಕೆಟ್‌ ನೀಡಲು ಬಿಜೆಪಿ ಕೇಂದ್ರದ ನಾಯಕರು ನಿರ್ಧರಿಸಿದ್ದರು ಎನ್ನಲಾಗಿದೆ. ಇದೆಲ್ಲಾ ಏನೇ ಇರಲಿ ಆದರೆ ಬಿಜೆಪಿ ವರಿಷ್ಠರ ಈ ನಿರ್ಧಾರ ಪಕ್ಷದಲ್ಲಿ ದೊಡ್ಡ ಅಸಮಾಧಾನದ ಹೊಗೆ ಎಬ್ಬಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+