ದೇವೇಗೌಡ್ರು ಹಾಸನ, ರಕ್ಷಿತಾಗೆ ಮಂಡ್ಯ ಟಿಕೆಟ್?
ಬೆಂಗಳೂರು, ಫೆ.5: ಮುಂಬರುವ ಲೋಕಸಭೆ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ವಿಷಯ ಬಂದಾಗ ಎಲ್ಲಾ ಪಕ್ಷಗಳಂತೆ ಜೆಡಿಎಸ್ ಕೂಡಾ ಇಕ್ಕಟ್ಟಿಗೆ ಸಿಲುಕಿದೆ. ಒಂದೆರಡು ಕ್ಷೇತ್ರಗಳಲ್ಲಿ ಜಾತ್ಯಾತೀತ ಜನತಾ ದಳದ ಅಭ್ಯರ್ಥಿಗಳು ಯಾರಾಗಲಿದ್ದಾರೆ ಎಂಬ ಕುತೂಹಲ ಜನರಲ್ಲಿ ಮನೆ ಮಾಡಿದೆ.
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರಕ್ಕೆ ತಾರಾ ಕಳೆ ಬರುವ ಸಾಧ್ಯತೆ ಇದೆ. ಮಂಡ್ಯ ಕ್ಷೇತ್ರದಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವುದಾಗಿ ಘೋಷಿಸಿರುವ ನಟಿ ರಕ್ಷಿತಾ ಅವರಿಗೆ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಟಿಕೆಟ್ ನೀಡಲು ಜೆಡಿಎಸ್ ಚಿಂತನೆ ನಡೆಸಿದೆ ಎಂಬ ಸುದ್ದಿ ಬೆನ್ನಲ್ಲೇ ರಕ್ಷಿತಾ ಅವರಿಗೆ ಮಂಡ್ಯದ ಟಿಕೆಟ್ ಸಿಗುವ ಭರವಸೆ ಸಿಕ್ಕಿದೆಯಂತೆ.
ಆದರೆ, ಒಂದು ವೇಳೆ ಭವಾನಿ ರೇವಣ್ಣ ಅವರು ಈ ಬಾರಿ ಸ್ಪರ್ಧೆಗಿಳಿದರೆ ರಕ್ಷಿತಾ ಅವರಿಗೆ ಮಂಡ್ಯ ಟಿಕೆಟ್ ತಪ್ಪಲಿದೆ. ರಕ್ಷಿತಾ ಹಾಗೂ ಭವಾನಿ ಇವರಿಬ್ಬರಿಗೂ ಟಿಕೆಟ್ ಸಿಗದಿದ್ದರೆ ಸಿ.ಎಚ್ ಪುಟ್ಟರಾಜು ಅವರಿಗಂತೂ ಮಂಡ್ಯ ಟಿಕೆಟ್ ಸಿಗುವ ವಿಶ್ವಾಸವಿದೆ. [ಮಂಡ್ಯದಿಂದ ಸ್ಪರ್ಧಿಸುತ್ತೇನೆ : ರಕ್ಷಿತಾ]
ಜೆಡಿಎಸ್ ಪಕ್ಷದ ವರಿಷ್ಠರು ಜಿಲ್ಲಾಧ್ಯಕ್ಷರು, ತಾಲೂಕು ಘಟಕದ ಅಧ್ಯಕ್ಷರು ಹಾಗೂ ಮುಖಂಡರ ಜತೆ ಅಭ್ಯರ್ಥಿಗಳನ್ನು ಅಂತಿಮಗೊಳಿಸುವ ಸಂಬಂಧ ಎರಡು ಸುತ್ತಿನ ಚರ್ಚೆ ನಡೆಸಲಾಗಿದೆ. ಮೊದಲ ಪಟ್ಟಿಯಲ್ಲಿ ಐದು ಕ್ಷೇತ್ರಗಳ ಅಭ್ಯರ್ಥಿಗಳನ್ನು ಅಖೈರುಗೊಳಿಸಿ ಪಟ್ಟಿ ಹೊರಹಾಕುವ ನಿರೀಕ್ಷೆಯಿದೆ. ಯಾವುದು ಈ ಐದು ಕ್ಷೇತ್ರ, ದೇವೇಗೌಡರು ಹಾಸನದಲ್ಲೇ ಸ್ಪರ್ಧಿಸುತ್ತಿದ್ದಾರೆ ಎಂಬುದರ ಬಗ್ಗೆ ಮುಂದೆ ಓದಿ...

ಮಂಡ್ಯದ ಸೊಸೆ ರಕ್ಷಿತಾಗೆ ಜೆಡಿಎಸ್ ಟಿಕೆಟ್?
ನಾನು ಕೂಡಾ ಮಂಡ್ಯದ ಸೊಸೆ ನಾನು ಮಂಡ್ಯದ ಸೊಸೆ, ನನಗೂ ಸ್ಪರ್ಧಿಸ ಬೇಕೆನ್ನುವ ಆಸೆಯಿದೆ. ನಾನು ಚುನಾವಣೆಗೆ ನಿಂತರೆ ಅದು ಮಂಡ್ಯದಿಂದ ಮಾತ್ರ ಎಂದು ಮಂಡ್ಯದ ಗಂಡು ಪ್ರೇಮ್ ಪತ್ನಿ ರಕ್ಷಿತಾ ಹೇಳಿದ್ದಾರೆ. ಆದರೆ, ಸದ್ಯ ಕುಮಾರಸ್ವಾಮಿ ರಕ್ಷಿತಾಗೆ ಟಿಕೆಟ್ ನೀಡುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಸಿಎಸ್ ಪುಟ್ಟರಾಜು ಅಲ್ಲದೆ ಶಾಸಕ ಡಿ.ಸಿ ತಮ್ಮಣ್ಣ ಅವರ ಪುತ್ರ ಡಿ.ಟಿ ಸಂತೋಷ್ ಕೂಡಾ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.

ಮಂಡ್ಯ ಕ್ಷೇತ್ರ ತಾರಾ ಸಮರ ಸಾಧ್ಯತೆ
ಜಿದ್ದಾಜಿದ್ದಿನ ಮಂಡ್ಯ ಕ್ಷೇತ್ರ ತಾರಾ ಸಮರಕ್ಕೆ ಸಜ್ಜಾಗುತ್ತಿದೆ. ಯಾರಿಗೆ ಟಿಕೆಟ್ ಸಿಗುತ್ತೆ ಎನ್ನುವುದು ಸದ್ಯದಲ್ಲೇ ಅಂತಿಮವಾಗಲಿದೆ. ಮೂರು ಪಕ್ಷಗಳು ಯಾವ ರಾಜಕೀಯ ತಂತ್ರ ಬಳಸಿಕೊಳ್ಳಲಿದೆ ಎನ್ನುವುದು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.
ಬಿಜೆಪಿ ಸೂಪರ್ ಸ್ಟಾರ್ ಉಪೇಂದ್ರ ಅವರಿಗೆ ಟಿಕೆಟ್ ನೀಡಿದರೂ ಅಚ್ಚರಿ ಪಡಬೇಕಾಗಿಲ್ಲ. ಹಾಲಿ ಸಂಸದೆ ರಮ್ಯಾ ಅವರು ಕ್ಷೇತ್ರದಲ್ಲಿ ದಿನೇ ದಿನೇ ಹೆಸರು ಮಾಡುತ್ತಿದ್ದಾರೆ ಹೀಗಾಗಿ ಅವರಿಗೆ ಟಿಕೆಟ್ ಸಿಗುವ ಸಾಧ್ಯತೆಯಿದೆ. ಇನ್ನೂ ರಕ್ಷಿತಾ ಅವರು ಕಣಕ್ಕಿಳಿದರೆ ತಾರ ಸಮರ ಗ್ಯಾರಂಟಿ

10 ಕ್ಷೇತ್ರಗಳ ಸಂಭವನೀಯ ಅಭ್ಯರ್ಥಿಗಳ ಪಟ್ಟಿ
2014ರ ಲೋಕಸಭೆ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಯ ಮೊದಲ ಪಟ್ಟಿಯನ್ನು ಜೆಡಿಎಸ್ ಮುಖಂಡ ಎಚ್ ಡಿ ಕುಮಾರಸ್ವಾಮಿ ಅವರು ಜ.23ರಂದು ಘೋಷಿಸಿದ್ದರು. ಜನವರಿ ಅಂತ್ಯಕ್ಕೆ ಅಧಿಕೃತ ಪಟ್ಟಿ ಹೊರ ಬೀಳಲಿದೆ ಎಂದಿದ್ದರು.
10 ಕ್ಷೇತ್ರಗಳ ಸಂಭವನೀಯ ಅಭ್ಯರ್ಥಿಗಳ ಪಟ್ಟಿ
ಉತ್ತರ ಕನ್ನಡ- ಶಿವಾನಂದ ನಾಯ್ಕ (ಪ್ರಕಟಿತ)
ಹಾಸನ- ಎಚ್.ಡಿ.ದೇವೇಗೌಡ
ತುಮಕೂರು- ಎ.ಕೃಷ್ಣಪ್ಪ
ಮಂಡ್ಯ- ಸಿ.ಎಸ್.ಪುಟ್ಟರಾಜು
ಮೈಸೂರು- ಸಾ.ರಾ.ಮಹೇಶ್
ಚಾಮರಾಜನಗರ - ಶಿವಣ್ಣ
ಬೀದರ್- ಬಂಡೆಪ್ಪ ಕಾಶಂಪುರ್
ಶಿವಮೊಗ್ಗ - ಶಕುಂತಲಾ ಬಂಗಾರಪ್ಪ ಅಥವಾ ಗೀತಾ ಶಿವರಾಜ್‌ಕುಮಾರ್
ಬೆಂಗಳೂರು ಗ್ರಾಮಾಂತರ- ಅನಿತಾ ಕುಮಾರಸ್ವಾಮಿ
ಚಿತ್ರದುರ್ಗ- ಗೂಳಿಹಟ್ಟಿ ಶೇಖರ್ (ಜೆಡಿಎಸ್ ಸೇರ್ಪಡೆಯಾದಲ್ಲಿ)

ಮೊದಲ ಅಧಿಕೃತ ಪಟ್ಟಿ ಬಹುತೇಕ ಖಚಿತ
* ಚಿಕ್ಕಬಳ್ಳಾಪುರ- ಅನಿತಾ ಕುಮಾರಸ್ವಾಮಿ
* ಕೋಲಾರ-ಐಎಎಸ್ ಅಧಿಕಾರಿ ಸಿದ್ದಯ್ಯ
* ಹಾಸನ- ಎಚ್ ಡಿ ದೇವೇಗೌಡ
* ತುಮಕೂರು- ಗೌರಿಶಂಕರ್
* ಮೈಸೂರು- ಮೇಲ್ಮನೆ ಮಾಜಿ ಸದಸ್ಯ ಮಲ್ಲಿಕಾರ್ಜುನಪ್ಪ
* ಚಿತ್ರದುರ್ಗದಿಂದ -ಗೂಳಿಹಟ್ಟಿ ಶೇಖರ್
* ಬೆಂಗಳೂರು ಉತ್ತರ- ಪ್ರಭಾಕರ್ ರೆಡ್ಡಿ
* ಮಂಡ್ಯ- ರಕ್ಷಿತಾ, ಸಿ,ಎಸ್ ಪುಟ್ಟರಾಜು, ಭವಾನಿ ರೇವಣ್ಣ(ಮೂವರಲ್ಲಿ ಒಬ್ಬರು)

ಜೆಡಿಎಸ್ ರಾಜ್ಯದಲ್ಲಿ ಶಕ್ತಿ ಪ್ರದರ್ಶಿಸಬೇಕಾಗಿದೆ
ಮಂಡ್ಯ, ಮೈಸೂರು, ಹಾಸನ, ಚಿಕ್ಕಬಳ್ಳಾಪುರ, ತುಮಕೂರು, ಕೋಲಾರ, ಶಿವಮೊಗ್ಗ, ಉತ್ತರ ಕನ್ನಡ, ಬಿಜಾಪುರ, ರಾಯಚೂರು ಮತ್ತು ಚಿತ್ರದುರ್ಗ ಕ್ಷೇತ್ರಗಳನ್ನು ಜೆಡಿಎಸ್ ತನ್ನ ಗೆಲ್ಲುವ ಪಟ್ಟಿಗೆ ಸೇರಿಸಿಕೊಂಡಿದೆ. ಈ ಕ್ಷೇತ್ರದಲ್ಲಿ ಎಷ್ಟೇ ಸ್ಪರ್ಧೆ ಎದುರಾದರೂ ಕ್ಷೇತ್ರ ಕೈ ತಪ್ಪಬಾರದು ಎಂಬ ತಂತ್ರವನ್ನು ಜೆಡಿಎಸ್ ರೂಪಿಸಿದೆ.ಶಿವಮೊಗ್ಗ ಕ್ಷೇತ್ರದಲ್ಲಿ ಮೂವರು ಶಾಸಕರನ್ನ ಹೊಂದಿರುವ ಪಕ್ಷ ಬಂಗಾರಪ್ಪ ಕುಟುಂಬದವರಿಗೆ ಟಿಕೆಟ್ ನೀಡುವ ಮೂಲಕ ಕ್ಷೇತ್ರದಲ್ಲಿ ಜಯ ಸಾಧಿಸಲು ಹಂಬಲಿಸುತ್ತಿದೆ.












Click it and Unblock the Notifications