ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಾಕ್‌ಡೌನ್; ವಶಕ್ಕೆ ಪಡೆದ ವಾಹನ ಬಿಡುಗಡೆಗೆ ಬಂತು ಹೊಸ ನಿಯಮ

|
Google Oneindia Kannada News

ಬೆಂಗಳೂರು, ಜೂನ್ 09; ಕರ್ನಾಟಕದಲ್ಲಿ ಲಾಕ್‌ಡೌನ್ ಜಾರಿಯಲ್ಲಿದೆ. ನಿಯಮಗಳನ್ನು ಉಲ್ಲಂಘನೆ ಮಾಡಿ ಅನಗತ್ಯವಾಗಿ ರಸ್ತೆಗೆ ಇಳಿದ ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈಗ ಅವುಗಳನ್ನು ಬಿಡುಗಡೆ ಮಾಡಲು ಹೊಸ ನಿಯಮ ಬಂದಿದೆ.

ಲಾಕ್‌ಡೌನ್ ಸಂದರ್ಭದಲ್ಲಿ ವಶಕ್ಕೆ ಪಡೆದ ವಾಹನಗಳನ್ನು ಠಾಣೆ ಹಂತದಲ್ಲಿಯೇ ದಂಡವನ್ನು ಕಟ್ಟಿಸಿಕೊಂಡು ಬಿಡುಗಡೆ ಮಾಡಿ. ಅವುಗಳನ್ನು ನ್ಯಾಯಲಯದ ತನಕ ತೆಗೆದುಕೊಂಡು ಹೋಗುವ ಅಗತ್ಯವಿಲ್ಲ ಎಂದು ಕರ್ನಾಟಕ ಹೈಕೋರ್ಟ್‌ ಸೂಚನೆ ನೀಡಿದೆ.

ವಾಹನ ಸವಾರರಿಗೆ ಕೊರೊನಾ ಟೆಸ್ಟ್: ನಾಯಕನಹಟ್ಟಿ ಪೊಲೀಸರ ಚಾಣಾಕ್ಷತನವಾಹನ ಸವಾರರಿಗೆ ಕೊರೊನಾ ಟೆಸ್ಟ್: ನಾಯಕನಹಟ್ಟಿ ಪೊಲೀಸರ ಚಾಣಾಕ್ಷತನ

ರಾಜ್ಯಾದ್ಯಂತ ಬೈಕ್, ಕಾರು, ಆಟೋ ಸೇರಿ ಸುಮಾರು 1.50 ಲಕ್ಷ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ. ಜೂನ್ 14ರ ಮುಂಜಾನೆ 6 ಗಂಟೆಯ ತನಕ ರಾಜ್ಯದಲ್ಲಿ ಲಾಕ್‌ಡೌನ್ ಜಾರಿಯಲ್ಲಿರುತ್ತದೆ.

Vehicle

 ನಿಯಮ ಉಲ್ಲಂಘಿಸಿದ ಪೊಲೀಸ್ ಜೀಪ್‌ಗೆ ದಂಡ ವಿಧಿಸಿದ ಪ್ರಾಮಾಣಿಕ ಪೊಲೀಸ್ ಅಧಿಕಾರಿ! ನಿಯಮ ಉಲ್ಲಂಘಿಸಿದ ಪೊಲೀಸ್ ಜೀಪ್‌ಗೆ ದಂಡ ವಿಧಿಸಿದ ಪ್ರಾಮಾಣಿಕ ಪೊಲೀಸ್ ಅಧಿಕಾರಿ!

ಎಲ್ಲಾ ವಾಹನಗಳ ಮಾಲೀಕರು ಅದನ್ನು ಬಿಡಿಸಿಕೊಳ್ಳಲು ಮ್ಯಾಜಿಸ್ಟ್ರೇಟ್ ಕೋರ್ಟ್‌ಗೆ ಆಗಮಿಸಿದರೆ ಜನಜಂಗುಳಿ ಏರ್ಪಡಲಿದೆ. ವಾಹನಗಳನ್ನು ನಿಲ್ಲಿಸಲು ಸಹ ಸ್ಥಳಾವಕಾಶದ ಕೊರತೆ ಎದುರಾಗಲಿದೆ. ಠಾಣೆ ಹಂತದಲ್ಲೇ ಅವುಗಳನ್ನು ಬಿಡುಗಡೆಗೊಳಿಸಲು ಅವಕಾಶ ನೀಡಿ ಎಂದು ವಕೀಲರೊಬ್ಬರು ಅರ್ಜಿ ಹಾಕಿದ್ದರು.

ದಂಡ ಹಾಕಿದ ದಾವಣಗೆರೆ ಪೊಲೀಸರು: ರಸ್ತೆಯಲ್ಲಿ ಪ್ರತಿಭಟಿಸಿದ ವೃದ್ಧದಂಡ ಹಾಕಿದ ದಾವಣಗೆರೆ ಪೊಲೀಸರು: ರಸ್ತೆಯಲ್ಲಿ ಪ್ರತಿಭಟಿಸಿದ ವೃದ್ಧ

ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ. ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ ಎಲ್ಲಾ ವಾಹನಗಳಿಗೆ ನಿಗದಿತ ದಂಡ ಪಾವತಿಸಿಕೊಂಡು ಠಾಣೆ ಹಂತದಲ್ಲಿಯೇ ಬಿಡುಗಡೆ ಮಾಡಲು ಒಪ್ಪಿಗೆ ನೀಡಿತು.

ಕಳೆದ ವರ್ಷ ಲಾಕ್‌ಡೌನ್ ಘೋಷಣೆ ಮಾಡಿದ ಸಂದರ್ಭದಲ್ಲಿಯೇ ಬಿಬಿಎಂಪಿ ವ್ಯಾಪ್ತಿಯಲ್ಲಿ ಠಾಣೆಯಲ್ಲೇ ವಾಹನ ವಿಲೇವಾರಿಗೆ ಅವಕಾಶ ನೀಡಲಾಗಿತ್ತು. ಈ ಬಾರಿ ಅದನ್ನು ರಾಜ್ಯಕ್ಕೆ ವಿಸ್ತರಣೆ ಮಾಡಲಾಗಿದೆ.

Recommended Video

lockdown ಬಗ್ಗೆ ಮೋದಿ ಭಾಷಣ! | Oneindia Kannada

ಬೆಂಗಳೂರು ಸೇರಿದಂತೆ ಎಲ್ಲಾ ಜಿಲ್ಲೆಗಳಲ್ಲಿ ವಾಹನಗಳನ್ನು ವಶಕ್ಕೆ ಪಡೆಯಲಾಗುತ್ತಿದೆ. ಲಾಕ್‌ಡೌನ್ ಮುಕ್ತಾಯವಾದ ಬಳಿಕ ಅವುಗಳನ್ನು ಮಾಲೀಕರಿಗೆ ವಾಪಸ್ ನೀಡಲಾಗುತ್ತದೆ.

English summary
Karnataka high court directed the police to release vehicle in the police station limits which seized during the time of lockdown. People no need to visit court to get vehicle.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X