ಕರ್ನಾಟಕ; ಒಂದೇ ದಿನ ಹೊರಟ 6 ಶ್ರಮಿಕ್ ರೈಲು, ವಲಸಿಗರು ತವರಿಗೆ

ಬೆಂಗಳೂರು, ಮೇ 11 : ಕರ್ನಾಟಕದಲ್ಲಿ ಲಾಕ್ ಡೌನ್ ನಿಯಮಗಳನ್ನು ಸಡಿಲಗೊಳಿಸಲಾಗಿದೆ. ರಾಜ್ಯದಲ್ಲಿ ಸಿಲುಕಿರುವ ವಿದ್ಯಾರ್ಥಿಗಳು, ವಲಸೆ ಕಾರ್ಮಿಕರು, ಯತ್ರಾರ್ಥಿಗಳು ರಾಜ್ಯದಿಂದ ತಮ್ಮ ತಮ್ಮ ತವರು ರಾಜ್ಯಕ್ಕೆ ವಾಪಸ್ ಆಗುತ್ತಿದ್ದಾರೆ.

ಭಾರತೀಯ ರೈಲ್ವೆ ವಲಸೆ ಕಾರ್ಮಿಕರು, ವಿದ್ಯಾರ್ಥಿಗಳು ತವರು ರಾಜ್ಯಕ್ಕೆ ಮರಳಲು ಅನುಕೂಲವಾಗುವಂತೆ ಶ್ರಮಿಕ್ ವಿಶೇಷ ರೈಲುಗಳನ್ನು ಓಡಿಸುತ್ತಿದೆ. ಭಾನುವಾರ ಒಂದೇ ದಿನ ಕರ್ನಾಟಕದಿಂದ 6 ವಿಶೇಷ ರೈಲುಗಳು ಸಂಚಾರ ನಡೆಸಿವೆ.

ಜಮ್ಮು ಮತ್ತು ಕಾಶ್ಮೀರ, ಪಶ್ಚಿಮ ಬಂಗಾಳ, ಮಧ್ಯಪ್ರದೇಶ, ಬಿಹಾರ, ಉತ್ತರ ಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳಿಗೆ ವಲಸೆ ಕಾರ್ಮಿಕರು ಭಾನುವಾರ ಒಂದೇ ದಿನ ಸಂಚಾರ ನಡೆಸಿದ್ದಾರೆ. ರಾಜ್ಯದಿಂದ ಪ್ರಯಾಣ ಮಾಡಿದವರ ಸಂಖ್ಯೆ 7353.

ಸೇವಾ ಸಿಂಧು ಪೋರ್ಟಲ್ ಮೂಲಕ ಮೊದಲು ವಲಸಿಗರು ಹೆಸರು ನೋಂದಣಿ ಮಾಡಬೇಕು. ಅವರ ತವರು ರಾಜ್ಯದ ಅನುಮತಿ ಸಿಕ್ಕ ಬಳಿಕ ವಿಶೇಷ ರೈಲಿಗಾಗಿ ಸರ್ಕಾರ ಬೇಡಿಕೆ ಇಡುತ್ತದೆ. ವಲಸಿಗರಿಗೆ ಯಾವುದೇ ಟಿಕೆಟ್ ಇಲ್ಲ. ಸರ್ಕಾರ ಕೊಟ್ಟ ಪಟ್ಟಿಯಲ್ಲಿ ಹೆಸರು ಇರುವವರು ಮಾತ್ರ ತವರಿಗೆ ವಾಪಸ್ ಆಗಬಹುದಾಗಿದೆ.

ರೈಲು ನಂಬರ್ 1, 2

ರೈಲು ನಂಬರ್ 1, 2

* ಮೊದಲ ರೈಲು ಚಿಕ್ಕಬಣಾವರದಿಂದ ಜಮ್ಮು ಮತ್ತು ಕಾಶ್ಮೀರಕ್ಕೆ ತೆರಳಿತು. 985 ಪ್ರಯಾಣಿಕರು ಇದರಲ್ಲಿ ಇದ್ದರು. ರೈಲಿನಲ್ಲಿ ಇದ್ದವರು ಬಹುತೇಕ ವಿದ್ಯಾರ್ಥಿಗಳು. ಕರ್ನಾಟಕಕ್ಕೆ ಪ್ರವಾಸಕ್ಕೆ ಬಂದು ಸಿಲುಕಿದ್ದ ಕೆಲವು ಕುಟುಂಬಗಳು ರೈಲಿನಲ್ಲಿ ವಾಪಸ್ ಆದರು.

* ಎರಡನೇ ರೈಲು ಮಾಲೂರಿನಿಂದ ಪಶ್ಚಿಮ ಬಂಗಾಳಕ್ಕೆ ತೆರಳಿತು. 1200 ಜನರು, 47 ಮಕ್ಕಳು ಈ ರೈಲಿನಲ್ಲಿ ಇದ್ದರು. ಈ ರೈಲಿನಲ್ಲಿ ಇದ್ದವರು ಬಹುತೇಕ ವಲಸೆ ಕಾರ್ಮಿಕರು, ಅವರ ಕುಟುಂಬ ಸದಸ್ಯ

ರೈಲು ನಂಬರ್ 3, 4

ರೈಲು ನಂಬರ್ 3, 4

* 1608 ಪ್ರಯಾಣಿಕರು ಇದ್ದ 3ನೇ ರೈಲು ಚಿಕ್ಕಬಣಾವರದಿಂದ ಮಧ್ಯಪ್ರದೇಶದ ಗ್ವಾಲಿಯರ್‌ಗೆ ಸಂಚಾರ ನಡೆಸಿತು. ರೈಲು ಹತ್ತುವ ಮುನ್ನ ಎಲ್ಲರ ಆರೋಗ್ಯ ತಪಾಸಣೆ ನಡೆಸಲಾಯಿತು.

* ಮಾಲೂರಿನಿಂದ 1200 ಪ್ರಯಾಣಿಕರು ಇದ್ದ ರೈಲು ಬಿಹಾರಕ್ಕೆ ಸಂಚಾರ ನಡೆಸಿತು. ಈ ರೈಲಿನಲ್ಲಿ ಇದ್ದವರು ವಲಸೆ ಕಾರ್ಮಿಕರು.

ರೈಲು ನಂಬರ್ 5, 6

ರೈಲು ನಂಬರ್ 5, 6

* ಚಿಕ್ಕಬಣಾವರದಿಂದ 1200 ಪ್ರಯಾಣಿಕರು ಇದ್ದ ರೈಲು ಉತ್ತರ ಪ್ರದೇಶದ ಗೋರಖ್‌ಪುರಕ್ಕೆ ಭಾನುವಾರ ಸಂಚಾರ ಆರಂಭಿಸಿತು.

* 1160 ಪ್ರಯಾಣಿಕರು ಇದ್ದ ವಿಶೇಷ ರೈಲು ಚಿಕ್ಕಬಣಾವರದಿಂದ ತ್ರಿಪುರಕ್ಕೆ ಪ್ರಯಾಣ ಬೆಳೆಸಿತು.

ರೈಲ್ವೆಯೇ ಆಹಾರ ನೀಡುತ್ತದೆ

ರೈಲ್ವೆಯೇ ಆಹಾರ ನೀಡುತ್ತದೆ

ಕಾರ್ಮಿಕರನ್ನು ವಿವಿಧ ಸ್ಥಳಗಳಿಂದ ರೈಲು ನಿಲ್ದಾಣಕ್ಕೆ ಬಿಎಂಟಿಸಿ ಬಸ್‌ಗಳಲ್ಲಿ ಕರೆತರಲಾಗುತ್ತದೆ. ಅವರ ಆರೋಗ್ಯ ತಪಾಸಣೆ ನಡೆಸಲಾಗುತ್ತದೆ. ಕಾರ್ಮಿಕರಿಗೆ ರೈಲ್ವೆಯೇ ಆಹಾರವನ್ನು ನೀಡುತ್ತದೆ. ಶ್ರಮಿಕ್ ರೈಲಿನಲ್ಲಿ ಸಂಚಾರ ನಡೆಸುವವರಿಗೆ ಅನ್ನ/8 ಚಪಾತಿ, ಉಪ್ಪಿನಕಾಯಿ, 1 ಲೀಟರ್‌ನ ಎರಡು ಮಿನರಲ್ ವಾಟರ್, ಮಜ್ಜಿಗೆ, ಚಾಕ್‌ಲೇಟ್‌ ನೀಡಲಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+