Live

ಏನಿದೆಯೋ ಸದನದಲ್ಲಿಯೇ ಎದುರಿಸುತ್ತೇನೆ: ಕುಮಾರಸ್ವಾಮಿ

ಬೆಂಗಳೂರು, ಜುಲೈ 12: ಅತೃಪ್ತ ಶಾಸಕರ ರಾಜೀನಾಮೆ ಮತ್ತು ಅನರ್ಹತೆಯ ಕುರಿತಾದ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂಕೋರ್ಟ್ ಮಂಗಳವಾರಕ್ಕೆ ಮುಂದೂಡಿದೆ. ಅಲ್ಲಿಯವರೆಗೂ ಯಥಾಸ್ಥಿತಿ ಕಾಪಾಡುವಂತೆ ಸೂಚನೆ ನೀಡಿದೆ.

ಇದರ ನಡುವೆ ವಿಧಾನಸಭೆ ಅಧಿವೇಶನ ಆರಂಭವಾಗಿದ್ದು, ತಾವು ವಿಶ್ವಾಸಮತ ಯಾಚನೆಗೆ ಸಿದ್ಧರಾಗಿರುವುದಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ. ವಿಶ್ವಾಸ ಮತ ಯಾಚನೆ ತಮಗೆ ಅನಿವಾರ್ಯವಾಗಿದ್ದು, ಅದಕ್ಕಾಗಿ ಸಮಯಾವಕಾಶ ನಿಗದಿಪಡಿಸುವಂತೆ ಕುಮಾರಸ್ವಾಮಿ ಅವರು ಸ್ಪೀಕರ್ ರಮೇಶ್ ಕುಮಾರ್ ಅವರನ್ನು ಕೋರಿದ್ದಾರೆ.

Live Updates in Kannada Karnataka political crisis developments friday mumbai bengaluru

ಅತೃಪ್ತ ಶಾಸಕರ ಅನರ್ಹತೆ ಕುರಿತಾದ ಅರ್ಜಿ ಹಾಗೂ ರಾಜೀನಾಮೆ ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಸ್ಪಷ್ಟ ನಿರ್ಧಾರಕ್ಕೆ ಬರಲು ಸಾಧ್ಯವಾಗಿಲ್ಲ. ಶಾಸಕರ ಪರ ವಕೀಲ ಮುಕುಲ್ ರೋಹಟಗಿ, ಸ್ಪೀಕರ್ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ಮತ್ತು ಮುಖ್ಯಮಂತ್ರಿ ಪರ ವಕೀಲ ರಾಜೀವ್ ಧವನ್ ವಾದ ಮಂಡಿಸಿದರು. ಈ ದಿನ ಮುಂದೇನು ನಡೆಯಲಿದೆ? ಈ ಎಲ್ಲ ವಿದ್ಯಮಾನಗಳ ಕ್ಷಣ ಕ್ಷಣದ ಮಾಹಿತಿ ಇಲ್ಲಿದೆ.

Jul 12, 2019, 5:52 pm IST

ಬಿಜೆಪಿಯಿಂದ ಗುಬ್ಬಿ ಶಾಸಕ ಎಸ್ ಆರ್ ಶ್ರೀನಿವಾಸ್ ಅವರಿಗೆ 60 ಕೋಟಿ ಆಫರ್ ನೀಡಲಾಗಿತ್ತು ಎಂದು ಕುಮಾರಸ್ವಾಮಿ ಆರೋಪ
Jul 12, 2019, 5:48 pm IST

ಬಿಜೆಪಿಯಿಂದ ಗುಬ್ಬಿ ಶಾಸಕ ಎಸ್ ಆರ್ ಶ್ರೀನಿವಾಸ್ ಅವರಿಗೆ 60 ಕೋಟಿ ಆಫರ್ ನೀಡಲಾಗಿತ್ತು ಎಂದು ಕುಮಾರಸ್ವಾಮಿ ಆರೋಪ
Jul 12, 2019, 5:18 pm IST

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡ ವಿಜಯನಗರ ಕ್ಷೇತ್ರದ ಅತೃಪ್ತ ಶಾಸಕ ಆನಂದ್ ಸಿಂಗ್.
Jul 12, 2019, 5:17 pm IST

ಅತೃಪ್ತ ಶಾಸಕ ಮಹೇಶ್ ಕುಮಟ್ಟಳಿ ಅವರ ನಿವಾಸದ ಎದುರು ಕಾಂಗ್ರೆಸ್ ಪ್ರತಿಭಟನೆ
Jul 12, 2019, 5:16 pm IST

ವಿಶ್ವಾಸ ಮತಯಾಚನೆಗೆ ಸಮಯ ನಿಗದಿಪಡಿಸಲು ಸ್ಪೀಕರ್‌ಗೆ ಸಿಎಂ ಮನವಿ. ಸಲಹಾ ಸಮಿತಿ ಸಭೆಯಲ್ಲಿ ವಿಪಕ್ಷ ನಾಯಕರು ಭಾಗಿಯಾಗಿಲ್ಲ. ಅವರ ಅನುಪಸ್ಥಿತಿಯಲ್ಲಿ ನಿರ್ಧಾರ ತೆಗೆದುಕೊಳ್ಳುವುದು ವಾಡಿಕೆ ಅಲ್ಲ ಎಂದ ರಮೇಶ್ ಕುಮಾರ್
Jul 12, 2019, 5:07 pm IST

ಅತೃಪ್ತ ಶಾಸಕರೆಲ್ಲರೂ ವಿಶ್ವಾಸಘಾತುಕರು. ನಮ್ಮಲ್ಲಿದ್ದ ಬ್ಲ್ಯಾಕ್‌ಶೀಪ್‌ಗಳೆಲ್ಲ ಓಡಿಹೋಗಿವೆ- ಸಿದ್ದರಾಮಯ್ಯ
Jul 12, 2019, 5:06 pm IST

ಮುಂದಿನ ಕಾರ್ಯತಂತ್ರದ ಬಗ್ಗೆ ಕುಮಾರಸ್ವಾಮಿ, ಪರಮೇಶ್ವರ್ ಮತ್ತು ಡಿಕೆ ಶಿವಕುಮಾರ್ ಮಾತುಕತೆ.
Jul 12, 2019, 4:51 pm IST

ಸರ್ಕಾರಕ್ಕೆ ಬೆಂಕಿ ಹೊತ್ತಿದ್ದೇ ಬೆಳಗಾವಿಯಿಂದ. ಅತೃಪ್ತರ ಬೆಂಕಿಯನ್ನು ಆರಿಸಲು ಪ್ರಯತ್ನಿಸುತ್ತಿದ್ದೇವೆ- ಸತೀಶ್ ಜಾರಕಿಹೊಳಿ
Jul 12, 2019, 4:50 pm IST

ಬಿಜೆಪಿಯವರಿಗೆ ಅವರ ಶಾಸಕರ ಮೇಲೆ ನಂಬಿಕೆ ಇಲ್ಲ. ಅದಕ್ಕೆ ರೆಸಾರ್ಟ್‌ಗೆ ಹೋಗುತ್ತಿದ್ದಾರೆ- ಸಿದ್ದರಾಮಯ್ಯ
Jul 12, 2019, 4:41 pm IST

ಸುಪ್ರೀಂಕೋರ್ಟ್ ಆದೇಶದ ಬಗ್ಗೆ ಏನೂ ಮಾತಾಡೊಲ್ಲ- ಸಿದ್ದರಾಮಯ್ಯ
Jul 12, 2019, 4:41 pm IST

ನೋ ಆಪರೇಷನ್. ನನಗೆ ಆಪರೇಷನ್‌ನಲ್ಲಿ ನಂಬಿಕೆ ಇಲ್ಲ. ಆರಾಮಾಗಿ ಇದ್ದೀವಿ ನಾವು. ಮನಸ್ಸು ಆರೋಗ್ಯದಿಂದ ಇದೆ- ಸಿದ್ದರಾಮಯ್ಯ
Jul 12, 2019, 4:40 pm IST

ವಿಶ್ವಾಸಮತ ಯಾಚನೆ ಮಾಡಲು ತೀರ್ಮಾನ ತೆಗೆದುಕೊಂಡಿರುವುದು ಕುಮಾರಸ್ವಾಮಿ ಹೇಳಿದ್ದಾರೆ. ನನಗೂ ಅಷ್ಟು ಗೊತ್ತೇ ಇರುವುದು. ವಿಶ್ವಾಸ ಇರುವುದರಿಂದಲೇ ವಿಶ್ವಾಸಮತ ಯಾಚನೆಗೆ ಮುಂದಾಗಿರುವುದು- ಸಿದ್ದರಾಮಯ್ಯ
Jul 12, 2019, 4:37 pm IST

ಮುನಿರತ್ನ ಅವರ ಮನವೊಲಿಸಿ ರಾಜೀನಾಮೆ ಹಿಂದಕ್ಕೆ ಪಡೆಯುವಂತೆ ಮಾಡುವುದಾಗಿ ಡಿಕೆ ಶಿವಕುಮಾರ್ ಅವರು ಸಿಎಂಗೆ ಭರವಸೆ ನೀಡಿದ್ದಾರೆ ಎಂದು ಹೇಳಲಾಗಿದೆ.
Jul 12, 2019, 4:37 pm IST

ನಾಲ್ವರು ಅತೃಪ್ತ ಶಾಸಕರ ಜತೆ ಕುಮಾರಸ್ವಾಮಿ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.
Jul 12, 2019, 4:25 pm IST

ಸಮ್ಮಿಶ್ರ ಸರ್ಕಾರಕ್ಕೆ ತೊಂದರೆಯಿಲ್ಲ. ಕಾಂಗ್ರೆಸ್-ಜೆಡಿಎಸ್ ಎಂಬುದಿಲ್ಲ, ನಾವೆಲ್ಲ ಒಂದು- ಯುಟಿ ಖಾದರ್
Jul 12, 2019, 4:17 pm IST

ಸಮ್ಮಿಶ್ರ ಸರ್ಕಾರಕ್ಕೆ ಬಹುಮತ ಇಲ್ಲ. ಗೌರವವಿದ್ದಿದ್ದರೆ ರಾಜೀನಾಮೆ ಕೊಟ್ಟು ಹೋಗಬೇಕಿತ್ತು. ವಿಶ್ವಾಸಮತ ಯಾಚನೆಗೆ ನಾವು ಸಿದ್ಧರಿದ್ದೇವೆ, ಕಳೆದ ಒಂದು ತಿಂಗಳಿನಿಂದ ಕಾಂಗ್ರೆಸ್-ಜೆಡಿಎಸ್ ನಾಯಕರು ನಮ್ಮ ಶಾಸಕರನ್ನು ಕರೆಯುತ್ತಿದ್ದಾರೆ. ಹೀಗಾಗಿ ರೆಸಾರ್ಟ್‌ಗೆ ಹೋಗುತ್ತಿದ್ದೇವೆ. ಪಕ್ಷೇತರ ಶಾಸಕರ ಬೆಂಬಲ ನಮಗಿದೆ- ಆರ್. ಅಶೋಕ್
Jul 12, 2019, 4:10 pm IST

ವಿಚಾರಣೆಗೆ ಶಾಸಕರು ಬಾರದೆ ಕಾದು ಕಾದು ಸಮಿತಿ ಸಭೆಗೆ ತೆರಳಿದ ರಮೇಶ್ ಕುಮಾರ್
Jul 12, 2019, 4:06 pm IST

ಸಮ್ಮಿಶ್ರ ಸರ್ಕಾರಕ್ಕೆ ನೀಡಿರುವ ಬೆಂಬಲ ವಾಪಸ್ ಪಡೆದಿಲ್ಲ. ಈಗಲೂ ಸಮ್ಮಿಶ್ರ ಸರ್ಕಾರಕ್ಕೆ ಬೆಂಬಲ ನೀಡುತ್ತಿದ್ದೇನೆ- ಬಿಎಸ್‌ಪಿ ಶಾಸಕ ಎನ್ ಮಹೇಶ್
Jul 12, 2019, 4:05 pm IST

ನಮ್ಮ ಎಲ್ಲ ಶಾಸಕರೂ ಒಟ್ಟಿಗೆ ಇದ್ದರೆ ಸೂಕ್ತ ಎಂದು ಅಭಿಪ್ರಾಯಪಟ್ಟರು. ಹೀಗಾಗಿ ನಾವೆಲ್ಲರೂ ಒಟ್ಟಾಗಿ ರೆಸಾರ್ಟ್‌ನಲ್ಲಿ ಇರಲಿದ್ದೇವೆ. ಸೋಮವಾರ ಒಟ್ಟಿಗೆ ಕಲಾಪಕ್ಕೆ ಬರಲಿದ್ದೇವೆ- ಯಡಿಯೂರಪ್ಪ
Jul 12, 2019, 4:04 pm IST

ಅನೇಕ ರೀತಿ ವಾದಗಳೂ ನಡೆದಿವೆ. ಮುಂಬೈನಲ್ಲಿರುವ ಶಾಸಕರು ನಮ್ಮ ಸ್ನೇಹಿತರನ್ನು ಸಂಪರ್ಕಿಸಿದ್ದರು. ಮಂಗಳವಾರ ತೀರ್ಮಾನ ಬರುತ್ತದೆ. ಸಿಎಂ ವಿಶ್ವಾಸಮತ ಯಾಚಿಸುತ್ತಾರೆ, ಏನು ಮಾತನಾಡುತ್ತಾರೆ ಎಂಬುದನ್ನು ನೋಡಿ ನಾವು ತೀರ್ಮಾನ ತೆಗೆದುಕೊಳ್ಳುತ್ತೇವೆ- ಯಡಿಯೂರಪ್ಪ
Jul 12, 2019, 4:03 pm IST

ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ಸ್ಪೀಕರ್ ಅವರ ಹತ್ತು ಜನ ಶಾಸಕರ ರಾಜೀನಾಮೆ, ಅನರ್ಹತೆ ವಿಚಾರ ತೀರ್ಮಾನಿಸುವಂತಿಲ್ಲ. ನಿರ್ಣಯ ಕೈಗೊಳ್ಳುವಂತಿಲ್ಲ. ವಿಪ್ ಕೊಟ್ಟರೂ ಅದು ಅನ್ವಯವಾಗುವುದಿಲ್ಲ. ಮುಂಬೈನಲ್ಲಿರುವ ಹತ್ತು ಜನ ಶಾಸಕರಿಗೆ ನೈತಿಕ ಶಕ್ತಿ ಬಂದಿದೆ- ಯಡಿಯೂರಪ್ಪ
Jul 12, 2019, 3:55 pm IST

ರಾಜೀನಾಮೆ ನೀಡಿದ ಶಾಸಕರು ಮತ್ತೆ ಪಕ್ಷಕ್ಕೆ ವಾಪಸ್ ಆಗುತ್ತಾರೆ, ಸೋಮವಾರದವರೆಗೂ ಕಾಯಿರಿ- ಕುಮಾರಸ್ವಾಮಿ
Jul 12, 2019, 3:49 pm IST

ಸ್ಪೀಕರ್ ಎದುರು ವಿಚಾರಣೆಗೆ ಹಾಜರಾಗದ ಮೂವರು ಅತೃಪ್ತ ಶಾಸಕರು. ನಾರಾಯಣ ಗೌಡ, ಆನಂದ್ ಸಿಂಗ್ ಮತ್ತು ಪ್ರತಾಪ್ ಗೌಡ ಪಾಟೀಲ್ ಅವರು ಇಂದು ವಿಚಾರಣೆಗೆ ಹಾಜರಾಗಬೇಕಿತ್ತು.
Jul 12, 2019, 3:45 pm IST

ಯಾವುದೇ ಸಂದರ್ಭವಿದ್ದರೂ ಸದನದಲ್ಲಿ ವಿಶ್ವಾಸಮತ ಯಾಚನೆ ಮೂಲಕ ಎದುರಿಸುತ್ತೇನೆ. ನೋಡೋಣ ಏನಾಗುತ್ತದೆ ಎಂದು- ಕುಮಾರಸ್ವಾಮಿ
Jul 12, 2019, 3:36 pm IST

ಕಾರ್ಯಕಲಾಪ ಸಲಹಾ ಸಮಿತಿ ಸಭೆಗೆ ಬಿಜೆಪಿ ಶಾಸಕರ ಗೈರು ಸಾಧ್ಯತೆ
Jul 12, 2019, 3:22 pm IST

ವಿಧಾನಸೌಧದ ಮೊಗಸಾಲೆಯಲ್ಲಿ ಸಚಿವರ ಜತೆ ಕುಮಾರಸ್ವಾಮಿ ಚರ್ಚೆ
Jul 12, 2019, 3:20 pm IST

ವಿಧಾನಸಭೆ ಕಲಾಪವನ್ನು ಸೋಮವಾರಕ್ಕೆ ಮುಂದೂಡಲಾಗಿದೆ.
Jul 12, 2019, 3:08 pm IST

ರಾಜೀನಾಮೆ ನೀಡಿದ ಮೂವರು ಶಾಸಕರನ್ನು ಇಂದು ವಿಚಾರಣೆಗೆ ಕರೆದಿದ್ದೆ. ಅವರು ಬಂದರೆ ವಿಚಾರಣೆ ಮಾಡುತ್ತೇನೆ. ಇಲ್ಲದಿದ್ದರೆ ಮನೆಗೆ ಹೋಗಿ ಮಲಗುತ್ತೇನೆ- ರಮೇಶ್ ಕುಮಾರ್
Jul 12, 2019, 3:04 pm IST

ನಮ್ಮ ಶಾಸಕ ಸ್ಥಾನದಿಂದ ಅನರ್ಹರಾದರೂ ತೊಂದರೆ ಇಲ್ಲ. ಈ ಸರ್ಕಾರ ಉಳಿಯಲೇಬಾರದು. ಏನು ಬೇಕಾದರೂ ಆಗಲಿ. ನಮ್ಮನ್ನು ಅಡ್ಡಡ್ಡಾ ಸೀಳಿದರೂ ಪರವಾಗಿಲ್ಲ- ರಮೇಶ್ ಜಾರಕಿಹೊಳಿ
Jul 12, 2019, 3:01 pm IST

ರಾಜ್ಯ ಕಾಂಗ್ರೆಸ್ ಶಾಸಕರನ್ನು ದೇವನಹಳ್ಳಿ ಸಮೀಪದ ಕ್ಲಾರ್ಕ್ಸ್ ಎಕ್ಸೋಟಿಕಾ ಕನ್ವೆನ್ಷನ್ ರೆಸಾರ್ಟ್‌ಗೆ ವರ್ಗಾಯಿಸಲು ನಿರ್ಧರಿಸಲಾಗಿದೆ.
READ MORE

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+