• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಧಿಕಾರ ತ್ಯಜಿಸುವ ಮುನ್ನ ಋಣಮುಕ್ತ ಕಾಯ್ದೆ ಜಾರಿ ಮಾಡಿದ ಎಚ್‌ಡಿಕೆ

|

ಬೆಂಗಳೂರು, ಜುಲೈ 24: ರಾಜ್ಯ ರಾಜಕಾರಣದಲ್ಲಿ ಮತ್ತೊಂದು ಯುಗ ಆರಂಭವಾಗಿದೆ. ವಿಧಾನಸಭೆ ಚುನಾವಣೆ ನಡೆದು ಅಸ್ತಿತ್ವಕ್ಕೆ ಬಂದ ಮೈತ್ರಿ ಸರ್ಕಾರ ಸರಿಯಾಗಿ 14 ತಿಂಗಳಿಗೆ ಪತನಗೊಂಡಿದೆ. 2018ರ ಮೇ 23ರಂದು ರಚನೆಯಾಗಿದ್ದ ಎಚ್ ಡಿ ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ 2019ರ ಜುಲೈ 23ಕ್ಕೆ ಉರುಳಿಹೋಗಿದೆ.

ಮಂಗಳವಾರದ ವಿಧಾನಸಭೆ ಕಲಾಪದಲ್ಲಿ ಆಡಳಿತ ಪಕ್ಷದ ನಾಯಕರು ಸಂಜೆ ವಿದಾಯ ಮಾತುಗಳನ್ನಾಡಿದರೂ ತಾವು ನೈತಿಕವಾಗಿ ಸೋತಿಲ್ಲ ಎಂದು ಹೇಳಿಕೊಂಡಿದ್ದಾರೆ. ನಾಲ್ಕು ದಿನಗಳ ಸುದೀರ್ಘ ಚರ್ಚೆಯ ಬಳಿಕ ಕೊನೆಗೂ ವಿಶ್ವಾಸಮತ ಯಾಚನೆಗೆ ಮುಂದಾದ ಕುಮಾರಸ್ವಾಮಿ ಅವರು ಸಂಖ್ಯಾಬಲದ ಲೆಕ್ಕಾಚಾರದಲ್ಲಿ ಸೋತಿದ್ದಾರೆ.

ನನ್ನ, ನಿನ್ನ ಯುದ್ದ ಇನ್ನೇನಿದ್ದರೂ ರಣರಂಗದಲ್ಲಿ: ಡಿಕೆಶಿ ಚಾಲೆಂಜ್

ಅತ್ತ, ಬಿಜೆಪಿ ಪಾಳೆಯದಲ್ಲಿ ಸಂಭ್ರಮ ಮುಗಿಲುಮುಟ್ಟಿದೆ. ದೋಸ್ತಿ ಸರ್ಕಾರ ಅಸ್ತಿತ್ವಕ್ಕೆ ಬಂದ ದಿನದಿಂದಲೂ ಸರ್ಕಾರ ಪತನಗೊಳ್ಳಲಿದೆ ಎಂದು ಮುಹೂರ್ತ ನಿಗದಿಪಡಿಸುತ್ತಲೇ ಇದ್ದ ಬಿಜೆಪಿಯ ಬಯಕೆ ಕೊನೆಗೂ ಈಡೇರಿದೆ. ಬಿ.ಎಸ್. ಯಡಿಯೂರಪ್ಪ ಅವರು ಮತ್ತೆ ಗದ್ದುಗೆಗೆ ಏರಲು ಸಿದ್ಧತೆ ನಡೆಸಿದ್ದಾರೆ.

live updates in kannada karnataka political crisis coalition government collapse bjp yeddyurappa

ಇನ್ನೊಂದೆಡೆ ಕಾಂಗ್ರೆಸ್‌ ಮತ್ತು ಜೆಡಿಎಸ್‌ಗೆ ರಾಜೀನಾಮೆ ನೀಡಿರುವ ಅತೃಪ್ತ ಶಾಸಕರು ತಮ್ಮ ಮುಂದಿನ ಹೆಜ್ಜೆ ಇರಿಸಲಿದ್ದಾರೆ. ಅವರ ರಾಜಕೀಯ ಭವಿಷ್ಯ ಏನಾಗಲಿದೆ ಎಂಬ ಕುತೂಹಲವೂ ಮೂಡಿದೆ. ಇಂದಿನ ರಾಜಕೀಯದಲ್ಲಿ ಏನೆಲ್ಲ ಬೆಳವಣಿಗೆಗಳು ನಡೆಯಬಹುದು ಎನ್ನುವ ಮಾಹಿತಿ ಇಲ್ಲಿ ಸಿಗಲಿದೆ.

Newest First Oldest First
4:35 PM, 24 Jul
ಭೂಮಿ ಇಲ್ಲದವರಿಗೆ, ಎರಡು ಹೆಕ್ಟೇರ್‌ಗಿಂತ ಕಡಿಮೆ ಭೂಮಿ ಹೊಂದಿರದ ರೈತರಿಗೆ ಖಾಸಗಿ ಮೂಲಗಳಿಂದ ಪಡೆದ ಸಂಪೂರ್ಣ ಸಾಲ ಮನ್ನಾ ಆಗಲಿದೆ. ಈ ಮೊದಲು ಪಡೆದ ಸಾಲ ಮನ್ನಾ ಆಗಲಿದೆ. ಖಾಸಗಿ ಹಣದ ಮಾಹಿತಿ 90 ದಿನಗಳ ಒಳಗೆ ನೀಡಬೇಕು- ಕುಮಾರಸ್ವಾಮಿ
4:32 PM, 24 Jul
ರಾಜ್ಯ ರಾಜಕಾರಣದಲ್ಲಿ ಅಸ್ಥಿರತೆ ಮುಂದುವರಿಯಲಿದೆ- ಕುಮಾರಸ್ವಾಮಿ
4:31 PM, 24 Jul
ನಿನ್ನೆ ಅಧಿಸೂಚನೆ ಹೊರಡಿಸಿದ್ದೇವೆ. ಋಣಮುಕ್ತ ಕಾಯ್ದೆಯನ್ನು ಜಾರಿಗೊಳಿಸಲಾಗಿದೆ- ಕುಮಾರಸ್ವಾಮಿ
4:30 PM, 24 Jul
ಗೃಹ ಕಚೇರಿಯಲ್ಲಿ ಹಂಗಾಮಿ ಮುಖ್ಯಮಂತ್ರಿ ಕುಮಾರಸ್ವಾಮಿ ಸುದ್ದಿಗೋಷ್ಠಿ
4:30 PM, 24 Jul
ಗೃಹ ಕಚೇರಿಯಲ್ಲಿ ಹಂಗಾಮಿ ಮುಖ್ಯಮಂತ್ರಿ ಕುಮಾರಸ್ವಾಮಿ ಸುದ್ದಿಗೋಷ್ಠಿ
4:11 PM, 24 Jul
ಶ್ರೀಮಂತ್ ಪಾಟೀಲ್ ಅನರ್ಹತೆಗೆ ಕೋರಿ ದೂರು. ಆಕ್ಷೇಪಣೆ ಸಲ್ಲಿಸಲು ಸ್ಪೀಕರ್ ಬಳಿ ಕಾಲಾವಕಾಶ ಕೋರಿದ ವಕೀಲರು.
4:07 PM, 24 Jul
ಅತೃಪ್ತ ಶಾಸಕರಿಗೆ ಯಾವುದೇ ಕಾರಣಕ್ಕೂ ಕ್ಷಮೆ ನೀಡಬಾರದು. ಪಕ್ಷಕ್ಕೆ ದ್ರೋಹ ಮಾಡಿದ್ದಕ್ಕೆ ಶಿಕ್ಷೆ ನೀಡಬೇಕು. ಅವರನ್ನು ವಾಪಸ್ ತೆಗೆದುಕೊಳ್ಳುವ ಪ್ರಶ್ನೆ ಇಲ್ಲ. ಮುಂದೆ ಸಂದರ್ಭ ಬಂದರೂ ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ- ದಿನೇಶ್ ಗುಂಡೂರಾವ್
4:06 PM, 24 Jul
ವಿಪಕ್ಷ ನಾಯಕರ ಆಯ್ಕೆ ಬಗ್ಗೆ ಸಭೆಯಲ್ಲಿ ಯಾವುದೇ ಚರ್ಚೆಯಾಗಿಲ್ಲ- ದಿನೇಶ್ ಗುಂಡೂರಾವ್
4:05 PM, 24 Jul
ಕಾಂಗ್ರೆಸ್ ಪಕ್ಷ ಸಂಘಟನೆಯ ಬಗ್ಗೆ ಚರ್ಚಿಸಲಾಗಿದೆ. ಏಕತೆಯಿಂದ ಎಲ್ಲರೂ ಮುನ್ನಡೆಯುವ ಬಗ್ಗೆ ತೀರ್ಮಾನಿಸಲಾಗಿದೆ. ಜೆಡಿಎಸ್ ಜತೆಗಿನ ಮೈತ್ರಿ ಬಗ್ಗೆ ಚರ್ಚೆಯಾಗಿಲ್ಲ- ದಿನೇಶ್ ಗುಂಡೂರಾವ್
3:58 PM, 24 Jul
ಅತೃಪ್ತರು ಬಿಜೆಪಿ ಬೆಂಬಲಿಸುವುದಾಗಿ ಹೇಳಿದ್ದಾರೆ- ವಿಮಾನ ನಿಲ್ದಾಣದಲ್ಲಿ ಬಿಜೆಪಿ ಶಾಸಕ ಸತೀಶ್ ರೆಡ್ಡಿ
3:40 PM, 24 Jul
ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮುಂದುವರಿಯಲಿದೆ. ವರಿಷ್ಠರ ಸೂಚನೆಯಂತೆ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಪಕ್ಷ ಸಂಘಟನೆಗೆ ಆದ್ಯತೆ ನೀಡಲಾಗುತ್ತದೆ- ಟಿ. ಶರವಣ
3:38 PM, 24 Jul
ಅತೃಪ್ತ ಶಾಸಕರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಬಾರದು ಎಂದು ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ- ದಿನೇಶ್ ಗುಂಡೂರಾವ್
3:24 PM, 24 Jul
ನಾವು ಶಾಸಕರೆಲ್ಲ ಪುಣೆಯಲ್ಲಿ ಒಗ್ಗಟ್ಟಾಗಿ ಇದ್ದೇವೆ. ನಾಲ್ಕು ದಿನಗಳ ಬಳಿಕ ಬೆಂಗಳೂರಿಗೆ ಬರುತ್ತೇವೆ. ಸ್ಪೀಕರ್ ನಡೆಯ ಮೇಲೆ ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇವೆ- ಅತೃಪ್ತ ಶಾಸಕರ ಹೇಳಿಕೆ
3:07 PM, 24 Jul
ಜೆಡಿಎಸ್ ಶಾಸಕಾಂಗ ಪಕ್ಷದ ಸಭೆ ಮುಕ್ತಾಯ
2:19 PM, 24 Jul
ವಿಧಾನಸಭೆ ಪ್ರತಿಪಕ್ಷ ನಾಯಕನ ಸ್ಥಾನಕ್ಕೆ ಪೈಪೋಟಿ ನಡೆದಿದೆ ಎನ್ನಲಾಗಿದೆ. ಸಿದ್ದರಾಮಯ್ಯ, ಪರಮೇಶ್ವರ್, ಡಿಕೆ ಶಿವಕುಮಾರ್ ನಡುವೆ ಸ್ಪರ್ಧೆ ಇದೆ.
2:18 PM, 24 Jul
ಇಂದು ಮುಂದಿನ ಕಾರ್ಯತಂತ್ರಗಳ ಬಗ್ಗೆ ಚರ್ಚಿಸಲು ಸಭೆ ಕರೆದಿದ್ದೇವೆ. ಜನರಲ್ಲಿ ಪಕ್ಷದ ಬಗ್ಗೆ ವಿಶ್ವಾಸ ಬೆಳೆಸುವುದು ನಮ್ಮ ಆದ್ಯತೆ- ಕುಮಾರಸ್ವಾಮಿ
2:15 PM, 24 Jul
ಮದ್ಯ ಮಾರಾಟದ ಮೇಲೆ ಹೇರಿಕೆ ಮಾಡಲಾಗಿದ್ದ ನಿಷೇಧವನ್ನು ಇಂದು ಸಂಜೆ 6 ಗಂಟೆ ಬಳಿಕ ವಾಪಸ್ ತೆಗೆದುಕೊಳ್ಳುತ್ತಿರುವುದಾಗಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ತಿಳಿಸಿದ್ದಾರೆ.
2:11 PM, 24 Jul
ಬಿಜೆಪಿ ಶಾಸಕರಾದ ಅಶ್ವತ್ಥ್ ನಾರಾಯಣ್ ಮತ್ತು ಸತೀಶ್ ರೆಡ್ಡಿ ಅವರು ಅತೃಪ್ತ ಶಾಸಕರನ್ನು ಭೇಟಿ ಮಾಡಲು ಪುಣೆಗೆ ತೆರಳಿದ್ದಾರೆ ಎನ್ನಲಾಗಿದೆ.
2:02 PM, 24 Jul
ನಾನು ಯಾವ ಪಕ್ಷಕ್ಕೂ ಹೋಗುವುದಿಲ್ಲ. ಬಿಎಸ್‌ಪಿಯಲ್ಲಿಯೇ ಇರುತ್ತೇನೆ. ಪಕ್ಷ ಬದಲಿಸುವ ಪ್ರಶ್ನೆಯೇ ಇಲ್ಲ. ಬಿಜೆಪಿ ಸೇರುತ್ತೇನೆ ಎನ್ನುವ ಸುದ್ದಿ ನಾನ್‌ಸೆನ್ಸ್- ಬಿಎಸ್‌ಪಿ ಶಾಸಕ ಎನ್. ಮಹೇಶ್
1:57 PM, 24 Jul
ಅತೃಪ್ತ ಶಾಸಕರು ಪಕ್ಷಕ್ಕೆ ದ್ರೋಹ ಎಸಗಿದ್ದಾರೆ. ಅವರ ಯೋಗ್ಯತೆ ಏನೆಂದು ಮತದಾರರಿಗೆ ಗೊತ್ತಾಗಿದೆ. ನಿನ್ನೆ ಸದನಕ್ಕೆ ಬಂದಿದ್ದರೆ ಸರ್ಕಾರ ಉಳಿಯುತ್ತಿತ್ತು- ಚಿಕ್ಕಬಳ್ಳಾಪುರದಲ್ಲಿ ಮಾಜಿ ಸಚಿವ ಶಿವಶಂಕರ್ ರೆಡ್ಡಿ
1:54 PM, 24 Jul
ಅತೃಪ್ತ ಶಾಸಕರಿಗೆ ಸಚಿವ ಸ್ಥಾನ ನೀಡಲು ಪಕ್ಷ ಸಿದ್ಧವಾಗಿತ್ತು. ನಿನ್ನೆ ಸದನಕ್ಕೆ ಹಾಜರಾಗಬೇಕಿತ್ತು. ಮುಂದಿನ ಚುನಾವಣೆಯಲ್ಲಿ ಜನರು ಅವರಿಗೆ ತಕ್ಕ ಪಾಠ ಕಲಿಸುತ್ತಾರೆ- ಮಾಜಿ ಸಚಿವ ಶಿವಶಂಕರ್ ರೆಡ್ಡಿ
1:50 PM, 24 Jul
ನಾಲ್ಕು ತಿಂಗಳು ಮೈತ್ರಿ ಸರ್ಕಾರದಲ್ಲಿ ಮುಂದಿವರಿದಿದ್ದೆ. ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಹೇಳಿದರು. ಕೊಟ್ಟೆ. ಮುಂದೆ ಏನು ಮಾಡಬೇಕೆಂದು ಕೇಳಿದೆ. ಸ್ವತಂತ್ರವಾಗಿ ಇರುವಂತೆ ಹೇಳಿದರು. ಹಾಗಾಗಿ ಸದನದ ಕಲಾಪದಲ್ಲಿ ಭಾಗವಹಿಸಿರಲಿಲ್ಲ. ವಿಶ್ವಾಸಮತ ಹಾಕಿದಾಗ ನಾನು ಇರಲಿಲ್ಲ, ತಟಸ್ಥವಾಗಿ ಇರುವಂತೆ ಅವರೇ ಹೇಳಿದ್ದರು. ಹೀಗಾಗಿ ಸದನಕ್ಕೆ ಹಾಜರಾಗೊಲ್ಲ ಎಂದಿದ್ದಕ್ಕೆ, ಅಯ್ತು ಎಂದಿದ್ದರು. ಈಗ ನನ್ನನ್ನು ಉಚ್ಚಾಟನೆ ಮಾಡಿದ್ದಾರೆ. ನಾನು ಹೈಕಮಾಂಡ್ ಆದೇಶ ಉಲ್ಲಂಘನೆ ಮಾಡಿಲ್ಲ: ಎನ್ ಮಹೇಶ್ ವಿವರಣೆ
1:47 PM, 24 Jul
ನನ್ನ ಉಚ್ಚಾಟನೆ ಬಗ್ಗೆ ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ನನಗೆ ಹೇಳಿರಲಿಲ್ಲ. ಇಂದು ಬೆಳಿಗ್ಗೆ ಅದರ ಬಗ್ಗೆ ಗೊತ್ತಾಗಿದೆ ಎಂದು ಬಿಎಸ್‌ಪಿ ಕೊಳ್ಳೇಗಾಲ ಶಾಸಕ ಎನ್. ಮಹೇಶ್ ಹೇಳಿಕೆ
1:43 PM, 24 Jul
ಕೆಪಿಸಿಸಿ ಕಚೇರಿಯಲ್ಲಿ ಹಿರಿಯ ನಾಯಕರ ಸಭೆ ಆರಂಭ
1:43 PM, 24 Jul
ಯಡಿಯೂರಪ್ಪ ಭೇಟಿ ಬಳಿಕ ದೆಹಲಿಯತ್ತ ಪ್ರಯಾಣ ಬೆಳೆಸಿದ ಆರ್. ಅಶೋಕ್
1:43 PM, 24 Jul
ರಾಜೀನಾಮೆ ನೀಡಿರುವ ಶಾಸಕರು ವಿಪ್ ಉಲ್ಲಂಘಿಸಿದ್ದಾರೆ. ಅವರನ್ನು ಅನರ್ಹಗೊಳಿಸಲು ಮನವಿ ಮಾಡಿದ್ದೇವೆ. ಸಂವಿಧಾನದ ಪ್ರಕಾರ ಅನರ್ಹರಾಗುತ್ತಾರೆ- ಎಂಎಲ್ಸಿ ಪ್ರಕಾಶ್ ರಾಥೋಡ್
12:41 PM, 24 Jul
ಸ್ಪೀಕರ್ ರಮೇಶ್ ಕುಮಾರ್ ಜತೆ ಸುಮಾರು 1 ಗಂಟೆ ಚರ್ಚಿಸಿದ ಬಳಿಕ ಹೊರಬಂದ ಬಿಜೆಪಿ ಶಾಸಕರಾದ ಬಸವರಾಜ ಬೊಮ್ಮಾಯಿ ಮತ್ತು ಮಾಧುಸ್ವಾಮಿ
12:38 PM, 24 Jul
ಜೆಡಿಎಸ್ ಜತೆ ಮೈತ್ರಿ ಮುಂದುವರಿಸಲು ಕಾಂಗ್ರೆಸ್ ಮುಖಂಡರು ನಿರಾಸಕ್ತಿ ಹೊಂದಿದ್ದಾರೆ ಎನ್ನಲಾಗಿದೆ.
12:26 PM, 24 Jul
ಜೆಪಿ ಭವನದಲ್ಲಿರುವ ಜೆಡಿಎಸ್ ಕಚೇರಿಯಲ್ಲಿ ಶಾಸಕಾಂಗ ಪಕ್ಷದ ಸಭೆ ಆರಂಭ.
12:21 PM, 24 Jul
ಕುದುರೆ ವ್ಯಾಪಾರ ಮುಗಿದಿರುವ ಕಥೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಏನು ತೀರ್ಮಾನ ಮಾಡುತ್ತದೆಯೋ ಗೊತ್ತಿಲ್ಲ- ಕುಮಾರಸ್ವಾಮಿ
READ MORE

ಸದ್ಗುರು ಶ್ರೀ ಸಾಯಿ ಜ್ಯೋತಿಷ್ಯ ಪೀಠ- ದೈವಜ್ಞ ಪ್ರಧಾನ ಜ್ಯೋತಿಷ್ಯರು ಶ್ರೀ ಶ್ರೀನಿವಾಸ್ ಗುರೂಜಿ ಉದ್ಯೋಗದಲ್ಲಿ ತೊಂದರೆ, ಮದುವೆ ವಿಳಂಬ, ಸತಿ- ಪತಿ ಕಲಹ, ಡೈವರ್ಸ್ ಪ್ರಾಬ್ಲಮ್, ಶತ್ರು ಪೀಡೆ, ಅತ್ತೆ -ಸೊಸೆ ಕಲಹ, ಸಂತಾನ ಸಮಸ್ಯೆ, ಆರೋಗ್ಯ ಸಮಸ್ಯೆ, ರಾಜಕೀಯದಲ್ಲಿ ಶತ್ರುಗಳ ಕಾಟ, ಸಿನಿಮಾ ಪ್ರವೇಶ ಇನ್ನೂ ಯಾವುದೇ ಗುಪ್ತ ಸಮಸ್ಯೆಗೆ ಗುರೂಜಿ ಅವರನ್ನು ನೇರವಾಗಿ ಭೇಟಿಯಾಗಬಹುದು. ಗುರೂಜಿ ಅವರ ಸಲಹೆ ಮತ್ತು ಪರಿಹಾರ ಪಡೆದುಕೊಂಡಂಥ ಲಕ್ಷಾಂತರ ಜನರು ಇಂದಿಗೂ ಸಹ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ. ವಿಳಾಸ # 37, 4th block, ಜಯನಗರ, ಬೆಂಗಳೂರು- 9986623344

English summary
Live updates in Kannada Karnataka political crisis: BJP state President BS Yeddyurappa visited Delhi to meet party's leader after Congress and JDS coalition government failed in floor-test on Tuesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X