ಕರ್ನಾಟಕಕ್ಕೆ ಕಣ್ಣೀರಾಗಲಿಲ್ಲ ಕಾವೇರಿ: ಸಂತಸ ತಂದ ಸುಪ್ರೀಂ ತೀರ್ಪು

Recommended Video

      ಕಾವೇರಿ ತೀರ್ಪು ಇಂದು : ಮೈಸೂರಿನ ಕೆ ಆರ್ ಎಸ್ ನಲ್ಲಿ ಬಿಗಿ ಭದ್ರತೆ | Oneindia Kannada

      ಬೆಂಗಳೂರು, ಫೆಬ್ರವರಿ 16: ಕನ್ನಡಿಗರ ಜೀವನದಿ ಕಾವೇರಿ ನದಿ ನೀರಿನ ಹಂಚಿಕೆಯ ಕುರಿತು 2007 ರ ಕಾವೇರಿ ನ್ಯಾಯಾಧಿಕರಣದ ಐ ತೀರ್ಪಿನ ವಿರುದ್ಧ ಕರ್ನಾಟಕ, ತಮಿಳುನಾಡು, ಕೇರಳ ರಾಜ್ಯಗಳು ಸಲ್ಲಿಸಿದ್ದ ವಿಶೇಷ ಮೇಲ್ಮನವಿಗೆ ಸಂಬಂಧಿಸಿದಂತೆ ಅಂತಿಮ ತೀರ್ಪು ಇಂದು(ಫೆ.16) ಹೊರಬೀಳಲಿದೆ.

      ಈ ವಿಶೇಷ ಮೇಲ್ಮನವಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನ್ಯಾಯಪೀಠ 2016 ಅಕ್ಟೋಬರ್ ನಿಂದ ಆರಂಭಿಸಿ, 2017 ಸೆಪ್ಟೆಂಬರ್ ನಲ್ಲಿ ಪೂರ್ಣಗೊಳಿಸಿತ್ತು.

      ಕಾವೇರಿ ವಿವಾದಕ್ಕೆ ಸಂಬಂಧಿಸಿದ ಅರ್ಜಿ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ನ್ಯಾ.ಅಮಿತ್ ರಾಯ್, ನ್ಯಾ.ಎ.ಎಂ.ಖಾನ್ವಿಲ್ಕರ್ ನೇತೃತ್ವದ ತ್ರಿಸದಸ್ಯ ಪೀಠ ನಡೆಸಿತ್ತು.

      Live: SC to pronounce Cauvery verdict today

      ಇಂದು ಹೊರಬೀಳಲಿರುವ ಕಾವೇರಿ ತೀರ್ಪಿಗೆ ಸಂಬಂಧಿಸಿದ ಕ್ಷಣ ಕ್ಷಣದ ಮಾಹಿತಿಯನ್ನು ಒನ್ ಇಂಡಿಯಾ ಕನ್ನಡ ಇಲ್ಲಿ ನೀಡಲಿದೆ.

      Feb 16, 2018, 11:32 am IST

      ಕಾವೇರಿ ತೀರ್ಪಿನ ವಿರುದ್ಧ ತಮಿಳುನಾಡಿನಲ್ಲಿ ಆಕ್ರೋಶ.
      Feb 16, 2018, 11:27 am IST

      "ಈ ತೀರ್ಪು ತಮಿಳುನಾಡಿನ ಜನತೆಗೆ ಅನ್ಯಾಯ ಮಾಡಿದೆ. ಕೇಂದ್ರ ಸರ್ಕಾರ ಕೂಡಲೇ ಕಾವೇರಿ ನಿರ್ವಹಣಾ ಮಂಡಳಿ ರಚಿಸಬೇಕು" ಎಐಡಿಎಂಕೆ ಮುಖಂಡ ವಿ.ಮೈತ್ರೇಯನ್
      Feb 16, 2018, 11:24 am IST

      ತೀರ್ಪು ನಮಗೆ ಬೇಸರ ತಂದಿದೆ. ತೀರ್ಪನ್ನು ಸಂಪೂರ್ಣ ಓದಿದ ನಂತರ ನಾವು ಈ ಕುರಿತು ಅಗತ್ಯ ಕ್ರಮ ಕೈಗೊಳ್ಳುತ್ತೇವೆ. ನಾವು ಕಾನೂನನ್ನು ಗೌರವಿಸುತ್ತೇವೆ. ನಮ್ಮ ಸರ್ಕಾರ ಪರಿಸ್ಥಿತಿಯನ್ನು ನಿರ್ವಹಿಸುವಲ್ಲಿ ಸಶಕ್ತವಾಗಿದೆ. ನೀರು ಹಂಚಿಕೆ ಕಡಿತಗೊಳಿಸಿರುವುದು ಬೇಸರ ತಂದಿದೆ: ತಮಿಳುನಾಡು ಪರ ವಲೀಕ ನವ್ನೀತ್ ಕೃಷ್ಣನ್
      Feb 16, 2018, 11:21 am IST

      ನ್ಯಾಯಾಧಿಕರಣ ಕೇರಳ, ಪಾಂಡಿಚೇರಿಗಳಿಗೆ ಹಂಚಿದ ನೀರಿನಲ್ಲಿ ಯಾವುದೇ ಬದಲಾವಣೆಯಿಲ್ಲ. ಆ ತೀರ್ಪು ಸರಿಯಾಗಿಯೇ ಇದೆ: ಸುಪ್ರೀಂ
      Feb 16, 2018, 11:16 am IST

      ತೀರ್ಪು ಸಂತಸ ತಂದಿದೆ. ತೀರ್ಪಿನ ಅನ್ವಯ ಕರ್ನಾಟಕಕ್ಕೆ 14.75 ಟಿಎಂಸಿ ಅಡಿ ಹೆಚ್ಚುವರಿ ನೀರು ಸಿಕ್ಕಿದೆ. ಇದರಿಂದಾಗಿ ಕರ್ನಾಟಕಕ್ಕೆ ಅನುಕೂಲವಾಗಿದೆ: ಸಿದ್ದರಾಮಯ್ಯ
      Feb 16, 2018, 11:09 am IST

      1921 ರ ಒಪ್ಪಂದವನ್ನು ಈಗ ಪ್ರಶ್ನಿಸುವುದಕ್ಕೆ ಬರುವುದಿಲ್ಲ. ಏಕೆಂದರೆ ಈ ಒಪ್ಪಂದ 1971 ರಲ್ಲೇ ರದ್ದಾಗಿದೆ: ಸುಪ್ರೀಂ
      Feb 16, 2018, 11:07 am IST

      ನದಿ ನೀರು ಹಂಚುವಾಗ ತಮಿಳುನಾಡು 20 ಟಿಎಂಸಿ ಅಡಿ ಅಂತರ್ಜಲವನ್ನೂ ಪರಿಗಣಿಸಬೇಕು
      Feb 16, 2018, 11:03 am IST

      ನಮಗೆ 14.75 ಟಿಎಂಸಿ ಅಡಿ ಹೆಚ್ಚುವರಿ ನೀರನ್ನು ಉಳಿಸಿಕೊಳ್ಳುವಂತೆ ಸುಪ್ರೀಂ ತೀರ್ಪು ನೀಡಿದೆ. ಕೊನೆಗೂ ನಮಗೆ ನ್ಯಾಯ ಸಿಕ್ಕಿದೆ. ಈ ತೀರ್ಪು ಉಭಯ ರಾಜ್ಯಗಳಲ್ಲೂ ಶಾಂತಿ ನೆಲೆಸುವಂತೆ ಮಾಡಲಿ: ಮೋಹನ್ ಕಾತರಕಿ, ಕರ್ನಾಟಕಪರ ವಕೀಲ
      Feb 16, 2018, 10:56 am IST

      15 ವರ್ಷದ ನಂತರ ಸುಪ್ರೀಂ ನ ಈ ತೀರ್ಪನ್ನು ಮರುಪರಿಶೀಲಿಸಬಹುದು: ಸುಪ್ರೀಂ
      Feb 16, 2018, 10:55 am IST

      ಕರ್ನಾಟಕ ನೀರಾವರಿ ಪ್ರದೇಶವನ್ನು ಹೆಚ್ಚಿಸಿಕೊಳ್ಳಬಹುದು.
      Feb 16, 2018, 10:51 am IST

      ಕಾವೇರಿ ನಿರ್ವಹಣಾ ಮಂಡಳಿ ರಚನೆ ಕೇಂದ್ರದ ಕೆಲಸ ಎಂದ ಸುಪ್ರೀಂ ಕೋರ್ಟ್.
      Feb 16, 2018, 10:50 am IST

      ಬೆಂಗಳೂರಿಗೆ ಹೆಚ್ಚುವರಿ 4.75 ಟಿಎಂಸಿ ಅಡಿ ನೀರು ಹರಿಸಲು ಸುಪ್ರೀಂ ಆದೇಶ
      Feb 16, 2018, 10:46 am IST

      ಈ ಮೊದಲು ಕರ್ನಾಟಕ ತಮಿಳುನಾಡಿಗೆ 192 ಟಿಎಂಸಿ ಅಡಿ ನೀರು ಬಿಡುತ್ತಿತ್ತು.
      Feb 16, 2018, 10:43 am IST

      ತಮಿಳುನಾಡು 20 ಟಿಎಂಸಿ ಅಂತರ್ಜಲ ಪರಿಗಣಿಸಬೇಕು. ಕರ್ನಾಟಕ ಇನ್ನು ಮೇಲೆ ತಮಿಳುನಾಡಿಗೆ 177.25 ಟಿಎಂಸಿ ನೀರು ಬಿಡಬೇಕು- ಸುಪ್ರೀಂ
      Feb 16, 2018, 10:42 am IST

      ಕರ್ನಾಟಕ 14.75 ಟಿಎಂಸಿ ಅಡಿ ಹೆಚ್ಚುವರಿ ನೀರು ಉಳಿಸಿಕೊಳ್ಳಬೇಕು- ಸುಪ್ರೀಂ
      Feb 16, 2018, 10:39 am IST

      ಉಭಯ ರಾಜ್ಯಗಳೂ ಸಮಾನ ಹಂಚಿಕೆಯ ಕ್ರಮ ಅನುಸರಿಸಬೇಕು. ನ್ಯಾಯಾಧಿಕರಣ ಅನುಸರಿಸುವ ಕ್ರಮ ಸರಿಯಾಗಿದೆ- ಸುಪ್ರೀಂ
      Feb 16, 2018, 10:39 am IST

      ನದಿಗಳು, ರಾಷ್ತ್ರೀಯ ಸಂಪತ್ತು. ಯಾವುದೇ ಒಂದು ನಿರ್ದಿಷ್ಟ ರಾಷಜ್ಯ ನದಿಗಳ ಮೇಲೆ ಸಂಪೂರ್ಣ ಹಕ್ಕು ಸಾಧಿಸುವಂತಿಲ್ಲ- ಸುಪ್ರೀಂ
      Feb 16, 2018, 10:37 am IST

      ಸಂವಿಧಾನದ ಅಡಿಯಲ್ಲಿ ಕಾವೇರಿ ನದಿ ನೀರಿಗೆ ಸಂಬಂಧಿಸಿದಂತೆ ಚೌಕಾಸಿ ಮಾಡುವ ಅಧಿಕಾರ ಕರ್ನಾಟಕಕ್ಕಿದೆ- ಸುಪ್ರೀಂ
      Feb 16, 2018, 10:34 am IST

      ತೀರ್ಪು ಓದಲು ಆರಂಭಿಸಿದ ನ್ಯಾಯಮೂರ್ತಿ ದೀಪಕ್ ಮಿಶ್ರಾ. ಕೆಲವೇ ಕ್ಷಣದಲ್ಲಿ ಅಂತಿಮ ತೀರ್ಪು.
      Feb 16, 2018, 10:32 am IST

      ಸುಪ್ರೀಂ ಕೋರ್ಟ್ ನಲ್ಲಿ ಕರ್ನಾಟಕ ಮತ್ತು ತಮಿಳುನಾಡು ಪರ ವಕೀಲರು ಉಪಸ್ಥಿತಿ. ಕರ್ನಾಟಕದ ಪರ ವಕೀಲರಾದ ಎಜಿ ಮಧುಸೂದನ್ ನಾಯಕ್, ಮೋಹನ್ ಕಾತರಕಿ, ಬ್ರಿಜೇಶ್ ಕಾಳಪ್ಪ
      Feb 16, 2018, 10:31 am IST

      ಸುಪ್ರೀಂ ಕೋರ್ಟ್ ಹಾಲ್ ಗೆ ಆಗಮಿಸಿದ ನ್ಯಾಯಮೂರ್ತಿಗಳು. ಕೆಲವೇ ಕ್ಷಣಗಳಲ್ಲಿ ಹೊರಬೀಳಲಿರುವ ತೀರ್ಪು.
      Feb 16, 2018, 10:29 am IST

      ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮನೆಗೆ ತೆರಳಿ ಭದ್ರತೆಯ ಕುರಿತು ವರದಿ ಒಪ್ಪಿಸಿದ ಡಿಜಿ - ಐಜಿಪಿ ನೀಲಮಣಿ ರಾಜು.
      Feb 16, 2018, 10:10 am IST

      ಉಭಯ ರಾಜ್ಯಗಳ ನಡುವೆ ಸಂಚರಿಸುವ ಗೂಡ್ಸ್ ಮತ್ತು ಖಾಸಗಿ ವಾಹನಗಳ ಸಂಚಾರಕ್ಕೆ ಯಾವುದೇ ನಿರ್ಬಂಧವಿಲ್ಲ.
      Feb 16, 2018, 10:09 am IST

      ಕರ್ನಾಟಕ ಮತ್ತು ತಮಿಳುನಾಡಿನ ಎಲ್ಲಾ ಶಾಲೆ ಮತ್ತು ಹೊಟೇಲ್, ಇನ್ನಿತರ ಕೇಂದ್ರಗಳಲ್ಲಿ ಬಿಗಿಭದ್ರತೆ.
      Feb 16, 2018, 10:08 am IST

      ತೀರ್ಪಿನ ಹಿನ್ನೆಲೆಯಲ್ಲಿ ದೆಹಲಿಗೆ ದೌಡಾಯಿಸಿದ ಕರ್ನಾಟಕದ ಎಲ್ಲಾ ಪ್ರಮುಖ ಅಧಿಕಾರಿಗಳು.
      Feb 16, 2018, 10:06 am IST

      ತಮಿಳುನಾಡಿನಿಂದ ಬೆಂಗಳೂರಿಗೆ ಬರುತ್ತಿದ್ದ ಎಲ್ಲಾ ಬಸ್ ಗಳನ್ನೂ ಭದ್ರತೆಯ ದೃಷ್ಟಿಯಿಂದ ಹೊಸೂರಿನಲ್ಲೇ ತಡೆಯಲಾಗಿದೆ.
      Feb 16, 2018, 10:04 am IST

      ಸಮಾರು 10.30 ರ ಸುಮಾರಿಗೆ ತೀರ್ಪು ನೀಡಲಿರುವ ನ್ಯಾ.ದೀಪಕ್ ಮಿಶ್ರಾ ನೇತೃತ್ವದ ತ್ರಿಸದಸ್ಯ ನ್ಯಾಯಪೀಠ.
      Feb 16, 2018, 9:49 am IST

      ತಮಿಳುನಾಡಿನಿಂದ ಕರ್ನಾಟಕಕ್ಕೆ ಬರುವ ಬಸ್ ಗಳ ಸಂಚಾರ ಸ್ಥಗಿತ. ಕರ್ನಾಟಕದಿಂದ ತಮಿಳುನಾಡಿಗೆ ತೆರಳುವ ಬಸ್ಸುಗಳು ಎಂದಿನಂತೆ ಕಾರ್ಯನಿರ್ವಹಣೆ
      Feb 16, 2018, 9:44 am IST

      ಕರ್ನಾಟಕ-ತಮಿಳುನಾಡು ಗಡಿಯಲ್ಲಿರುವ ಹೊಸೂರಿನಲ್ಲಿ 100 ಪೊಲೀಸರ ನಿಯೋಜನೆ. ಸೂಕ್ಷ್ಮ ಪ್ರದೇಶವಾಗಿರುವುದರಿಂದ ಹೆಚ್ಚಿನ ಭದ್ರತೆ.
      Feb 16, 2018, 9:41 am IST

      ಭದ್ರತೆ ಹಿನ್ನೆಲೆಯಲ್ಲಿ ಬೆಂಗಳೂರು ಮತ್ತು ಮೈಸೂರಿನಲ್ಲಿ 8000 ಕ್ಕೂ ಹೆಚ್ಚು ಪೊಲೀಸರ ನಿಯೋಜನೆ. ಬೆಂಗಳೂರು ನಗರವೊಂದರಲ್ಲೇ 4000 ಕ್ಕೂ ಹೆಚ್ಚು ಪೊಲೀಸರು.
      READ MORE

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+