ಕರ್ನಾಟಕದಲ್ಲಿರುವ ಒಟ್ಟು ಲೋಕಸಭಾ ಕ್ಷೇತ್ರಗಳು ಎಷ್ಟು, ಯಾವವು?
Recommended Video

ದೇಶದಲ್ಲಿ ಈಗಾಗಲೇ ಲೋಕಸಭಾ ಚುನಾವಣೆಯ ಗೌಜು ಆರಂಭವಾಗಿದೆ. 2019 ರ ಏಪ್ರಿಲ್ -ಮೇ ತಿಂಗಳಿನಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆ ಭಾರೀ ಕುತೂಹಲ ಕೆರಳಿಸಿದ್ದು, ರಾಜಕೀಯ ಪಕ್ಷಗಳು ಈಗಾಗಲೇ ಗೆಲ್ಲಲು ಅಗತ್ಯವಿರುವ ಕಸರತ್ತು ಶುರುಮಾಡಿವೆ.
ದಕ್ಷಿಣ ಭಾರತದಲ್ಲಿ ಲೋಕಸಭಾ ಚುನಾವಣೆಯ ಮೇಲೆ ಮಹತ್ವದ ಪರಿಣಾಮ ಬೀರಬಲ್ಲ ರಾಜ್ಯಗಳಲ್ಲಿ ಕರ್ನಾಟಕವೂ ಒಂದು. ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳದ್ದೇ ಕಾರುಬಾರಾದರೆ, ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ರಾಷ್ಟ್ರೀಯ ಪಕ್ಷಗಳೇ ಹೆಚ್ಚು ಪ್ರಭಾವಶಾಲಿಯಾಗಿರುವುದು ಅದಕ್ಕೆ ಕಾರಣ.
ಕರ್ನಾಟಕದಲ್ಲಿ ಒಟ್ಟು 28 ಲೋಕಸಭಾ ಕ್ಷೇತ್ರಗಳಿದ್ದು, 2014 ರಲ್ಲಿ ಇವುಗಳಲ್ಲಿ 17 ಕ್ಷೇತ್ರಗಳಲ್ಲಿ ಬಿಜೆಪಿ, 9 ರಲ್ಲಿ ಕಾಂಗ್ರೆಸ್ ಮತ್ತು 2 ಜೆಡಿಎಸ್ ಜಯಗಳಿಸಿತ್ತು.
ಲೋಕಸಭೆಯ ಒಟ್ಟು ಸದಸ್ಯರ ಸಂಖ್ಯೆ 545. ಇವರಲ್ಲಿ ಇಬ್ಬರು ಆಂಗ್ಲೋ ಇಂಡಿಯನ್ ಸದಸ್ಯರನ್ನು ಭಾರತದ ರಾಷ್ಟ್ರಪತಿಗಳೇ ನೇಮಿಸುತ್ತಾರೆ. ಇವರು ಜನರಿಂದ ಚುನಾಯಿತರಾಗುವುದಿಲ್ಲ. ಮಿಕ್ಕಂತೆ 543 ಸದಸ್ಯರು ಜನರಿಂದ ಚುನಾಯಿತರಾಗುತ್ತಾರೆ. ಲೋಕಸಭೆಯಲ್ಲಿ ಯಾವುದೇ ಒಂದು ಪಕ್ಷಕ್ಕೆ ಬಹುಮತಕ್ಕೆ ಅಗತ್ಯವಿರುವ ಮ್ಯಾಜಿಕ್ ನಂಬರ್ 272.
80 ಲೋಕಸಭಾ ಕ್ಷೇತ್ರಗಳನ್ನು ಉತ್ತರ ಪ್ರದೇಶ ಹೊಂದಿದ್ದರೆ ಹಲವು ಈಶಾನ್ಯ ರಾಜ್ಯಗಳು ಕೇವಲ ತಲಾ 1 ಲೋಕಸಭಾ ಕ್ಷೇತ್ರಗಳನ್ನು ಹೊಂದಿವೆ.
ಅಷ್ಟಕ್ಕೂ ಕರ್ನಾಟಕದಲ್ಲಿರುವ ಒಟ್ಟು ಲೋಕಸಭಾ ಕ್ಷೇತ್ರಗಳೆಷ್ಟು? ಯಾವವು ಎಂಬ ವಿವರ ಇಲ್ಲಿದೆ ನೋಡಿ.

ಬೆಳಗಾವಿ
ಚಿಕ್ಕೋಡಿ (ಸಾಮಾನ್ಯ)
ಬೆಳಗಾವಿ (ಸಾಮಾನ್ಯ)
ಬಾಗಲಕೋಟೆ (ಸಾಮಾನ್ಯ)
ಬಿಜಾಪುರ (ಪರಿಶಿಷ್ಟ ಜಾತಿ ಮೀಸಲು)

ರಾಯಚೂರು
ಕಲಬುರಗಿ (ಪರಿಶಿಷ್ಟ ಜಾತಿ ಮೀಸಲು)
ರಾಯಚೂರು(ಪರಿಶಿಷ್ಟ ಪಂಗಡ ಮೀಸಲು)
ಬೀದರ್ (ಸಾಮಾನ್ಯ)
ಕೊಪ್ಪಳ (ಸಾಮಾನ್ಯ)

ಹಾವೇರಿ
ಬಳ್ಳಾರಿ (ಪರಿಶಿಷ್ಟ ಪಂಗಡ ಮೀಸಲು)
ಹಾವೇರಿ (ಸಾಮಾನ್ಯ)
ಧಾರವಾಡ (ಸಾಮಾನ್ಯ)
ಉತ್ತರ ಕನ್ನಡ (ಸಾಮಾನ್ಯ)

ಶಿವಮೊಗ್ಗ
ದಾವಣಗೆರೆ (ಸಾಮಾನ್ಯ)
ಶಿವಮೊಗ್ಗ (ಸಾಮಾನ್ಯ)
ಉಡುಪಿ-ಚಿಕ್ಕಮಗಳೂರು (ಸಾಮಾನ್ಯ)
ಹಾಸನ (ಸಾಮಾನ್ಯ)

ಚಿತ್ರದುರ್ಗ
ದಕ್ಷಿಣ ಕನ್ನಡ (ಸಾಮಾನ್ಯ)
ಚಿತ್ರದುರ್ಗ (ಪರಿಶಿಷ್ಟ ಜಾತಿ ಮೀಸಲು)
ತುಮಕೂರು (ಸಾಮಾನ್ಯ)
ಮಂಡ್ಯ (ಸಾಮಾನ್ಯ)
ಮೈಸೂರು-ಕೊಡಗು (ಸಾಮಾನ್ಯ)

ಬೆಂಗಳೂರು
ಚಾಮರಾಜನಗರ (ಪರಿಶಿಷ್ಟ ಜಾತಿ ಮೀಸಲು)
ಬೆಂಗಳೂರು ಗ್ರಾಮಾಂತರ (ಸಾಮಾನ್ಯ)
ಬೆಂಗಳೂರು ಉತ್ತರ (ಸಾಮಾನ್ಯ)
ಬೆಂಗಳೂರು ಕೇಂದ್ರ (ಸಾಮಾನ್ಯ)
ಬೆಂಗಳೂರು ದಕ್ಷಿಣ (ಸಾಮಾನ್ಯ)
ಚಿಕ್ಕಬಳ್ಳಾಪುರ (ಸಾಮಾನ್ಯ)
ಕೋಲಾರ (ಪರಿಶಿಷ್ಟ ಜಾತಿ ಮೀಸಲು)












Click it and Unblock the Notifications