ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೆಡಿಎಸ್, ಕಾಂಗ್ರೆಸ್ ಠೇವಣಿ ಕಳೆದುಕೊಂಡು ಮುಖಭಂಗ ಅನುಭವಿಸಿದ 7 ಕ್ಷೇತ್ರಗಳ ಪಟ್ಟಿ

|
Google Oneindia Kannada News

ಉಪಚುನಾವಣೆಯ ಫಲಿತಾಂಶದ ನಂತರ, ಸರಕಾರ ಅನಿಶ್ಚಿತತೆಗೆ ಹೋಗಿ, ತಾವು ಮತ್ತೊಮ್ಮೆ ಕಿಂಗ್ ಮೇಕರ್ ಆಗಬಹುದು ಎನ್ನುವ ಜೆಡಿಎಸ್ ಕನಸು ನುಚ್ಚುನೂರಾಗಿದೆ.

2018ರ ಅಸೆಂಬ್ಲಿ ಚುನಾವಣೆಯಲ್ಲಿ ಗೆದ್ದಿದ್ದ ಮೂರು ಕ್ಷೇತ್ರಗಳನ್ನು ಜೆಡಿಎಸ್ ಉಳಿಸಿಕೊಳ್ಲಲಾಗದೇ, ಮುಖಭಂಗ ಅನುಭವಿಸಿದೆ. ಇದರ ಜೊತೆಗೆ, ಉಪಸಮರದಲ್ಲಿ ಕಾಂಗ್ರೆಸ್ ಕೂಡಾ ಹತ್ತು ಸ್ಥಾನಗಳನ್ನು ಕಳೆದುಕೊಂಡಿದೆ.

ಉಪಚುನಾವಣೆ: ಅಮಿತ್ ಶಾಗೆ ತನ್ನ ರಾಜಕೀಯ ವಿಲ್ ಪವರ್ ತೋರಿಸಿದ ಯಡಿಯೂರಪ್ಪಉಪಚುನಾವಣೆ: ಅಮಿತ್ ಶಾಗೆ ತನ್ನ ರಾಜಕೀಯ ವಿಲ್ ಪವರ್ ತೋರಿಸಿದ ಯಡಿಯೂರಪ್ಪ

ಒಕ್ಕಲಿಗರು ಪ್ರಾಬಲ್ಯವಿರುವ ಕ್ಷೇತ್ರದಲ್ಲೂ, ಜೆಡಿಎಸ್ ತನ್ನ ಎಂದಿನ ಶಕ್ತಿಯನ್ನು ಪ್ರದರ್ಶಿಸಲು ವಿಫಲವಾಗಿದೆ. ಇದೇ ಮೊದಲ ಬಾರಿಗೆ, ಮಂಡ್ಯ ಜಿಲ್ಲೆಯಲ್ಲಿ, ಬಿಜೆಪಿ, ಬೋಣಿ ಮಾಡಿದೆ. ಕೆ.ಆರ್.ಪೇಟೆಯಲ್ಲಿ ಬಿಜೆಪಿ ಅಭ್ಯರ್ಥಿ ನಾರಾಯಣ ಗೌಡ ಜಯಶೀಲರಾಗಿದ್ದಾರೆ.

ಕೆ.ಆರ್.ಪುರಂನಲ್ಲಿ ಜೆಡಿಎಸ್ಸಿಗೆ ಈ ರೀತಿಯ ಮುಖಭಂಗ ನ್ಯಾಯವೇ?ಕೆ.ಆರ್.ಪುರಂನಲ್ಲಿ ಜೆಡಿಎಸ್ಸಿಗೆ ಈ ರೀತಿಯ ಮುಖಭಂಗ ನ್ಯಾಯವೇ?

ಒಟ್ಟು ಹದಿನೈದು ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಜೆಡಿಎಸ್ ಆರು ಕ್ಷೇತ್ರಗಳಲ್ಲಿ ಮತ್ತು ಕಾಂಗ್ರೆಸ್ ಒಂದು ಕ್ಷೇತ್ರದಲ್ಲಿ ಠೇವಣಿ ಉಳಿಸಿಕೊಳ್ಳಲೂ ವಿಫಲವಾಗಿದೆ. ಆ ಕ್ಷೇತ್ರಗಳ ಪಟ್ಟಿ ಇಂತಿದೆ:

ಕೆ.ಆರ್.ಪುರ ಕ್ಷೇತ್ರ

ಕೆ.ಆರ್.ಪುರ ಕ್ಷೇತ್ರ

ಕೆ.ಆರ್.ಪುರ

ಠೇವಣಿ ಕಳೆದುಕೊಂಡ ಜೆಡಿಎಸ್ ಅಭ್ಯರ್ಥಿ - ಸಿ.ಕೃಷ್ಣಸ್ವಾಮಿ - 2,048 (ಪಡೆದ ಮತಗಳು)
ವಿಜೇತ ಅಭ್ಯರ್ಥಿ - ಬೈರತಿ ಬಸವರಾಜು (ಬಿಜೆಪಿ) - 1,39,879
ಕಾಂಗೆಸ್ ಅಭ್ಯರ್ಥಿ ಎಂ.ನಾರಾಯಣಸ್ವಾಮಿ ಪಡೆದ ಮತ - 76,436

ಕಾಗವಾಡ ಕ್ಷೇತ್ರ

ಕಾಗವಾಡ ಕ್ಷೇತ್ರ

ಕಾಗವಾಡ

ಠೇವಣಿ ಕಳೆದುಕೊಂಡ ಜೆಡಿಎಸ್ ಅಭ್ಯರ್ಥಿ - ಶ್ರೀಶೈಲ ಪರಸಪ್ಪ ತೂಗಶೆಟ್ಟಿ - 2,448 (ಪಡೆದ ಮತಗಳು)
ವಿಜೇತ ಅಭ್ಯರ್ಥಿ - ಶ್ರೀಮಂತ ಪಾಟೀಲ (ಬಿಜೆಪಿ) - 76,952
ಕಾಂಗೆಸ್ ಅಭ್ಯರ್ಥಿ ರಾಜು (ಭರಮಗೌಡ) ಕಾಗೆ ಪಡೆದ ಮತ - 58,395

ಯಲ್ಲಾಪುರ

ಯಲ್ಲಾಪುರ

ಯಲ್ಲಾಪುರ ಕ್ಷೇತ್ರ

ಠೇವಣಿ ಕಳೆದುಕೊಂಡ ಜೆಡಿಎಸ್ ಅಭ್ಯರ್ಥಿ ಚೈತ್ರ ಗೌಡ - 1,235 (ಪಡೆದ ಮತಗಳು)
ವಿಜೇತ ಅಭ್ಯರ್ಥಿ - ಶಿವರಾಂ ಹೆಬ್ಬಾರ್ (ಬಿಜೆಪಿ) - 80,442
ಕಾಂಗೆಸ್ ಅಭ್ಯರ್ಥಿ ಭೀಮಣ್ಣ ನಾಯಕ್ ಪಡೆದ ಮತ - 49,034

ಯಶವಂತಪುರ ಕ್ಷೇತ್ರ

ಯಶವಂತಪುರ ಕ್ಷೇತ್ರ

ಠೇವಣಿ ಕಳೆದುಕೊಂಡ ಕಾಂಗ್ರೆಸ್ ಅಭ್ಯರ್ಥಿ - ಪಿ. ನಾಗರಾಜು - 15,714 (ಪಡೆದ ಮತಗಳು)
ವಿಜೇತ ಅಭ್ಯರ್ಥಿ - ಎಸ್. ಟಿ.ಸೋಮಶೇಖರ್ (ಬಿಜೆಪಿ) - 1,44,722
ಜೆಡಿಎಸ್ ಅಭ್ಯರ್ಥಿ ಜವರಾಯಿಗೌಡ ಪಡೆದ ಮತ - 1,17,023

ರಾಣೇಬೆನ್ನೂರು ಕ್ಷೇತ್ರ

ರಾಣೇಬೆನ್ನೂರು ಕ್ಷೇತ್ರ

ಠೇವಣಿ ಕಳೆದುಕೊಂಡ ಜೆಡಿಎಸ್ ಅಭ್ಯರ್ಥಿ - ಮಲ್ಲಿಕಾರ್ಜುನ ರುದ್ರಪ್ಪ ಹುಲಗೇರಿ - 979 (ಪಡೆದ ಮತಗಳು)
ವಿಜೇತ ಅಭ್ಯರ್ಥಿ - ಅರುಣ್ ಕುಮಾರ್ (ಬಿಜೆಪಿ) - 95,438
ಕಾಂಗ್ರೆಸ್ ಅಭ್ಯರ್ಥಿ ಕೆ.ಬಿ.ಕೋಳಿವಾಡ ಪಡೆದ ಮತ - 72,216

ವಿಜಯನಗರ ಕ್ಷೇತ್ರ

ವಿಜಯನಗರ ಕ್ಷೇತ್ರ

ಠೇವಣಿ ಕಳೆದುಕೊಂಡ ಜೆಡಿಎಸ್ ಅಭ್ಯರ್ಥಿ - ಎನ್.ಎಂ.ನಬಿ - 3,885 (ಪಡೆದ ಮತಗಳು)
ವಿಜೇತ ಅಭ್ಯರ್ಥಿ - ಆನಂದ್ ಸಿಂಗ್ (ಬಿಜೆಪಿ) - 85,477
ಕಾಂಗ್ರೆಸ್ ಅಭ್ಯರ್ಥಿ ವಿ.ವೈ.ಘೋರ್ಪಡೆ ಪಡೆದ ಮತ - 55,352

ಶಿವಾಜಿನಗರ ಕ್ಷೇತ್ರ

ಶಿವಾಜಿನಗರ ಕ್ಷೇತ್ರ

ಠೇವಣಿ ಕಳೆದುಕೊಂಡ ಜೆಡಿಎಸ್ ಅಭ್ಯರ್ಥಿ - ತನ್ವೀರ್ ಅಹಮದ್ - 1,098 (ಪಡೆದ ಮತಗಳು)
ವಿಜೇತ ಅಭ್ಯರ್ಥಿ - ರಿಜ್ವಾನ್ ಅರ್ಷದ್ (ಕಾಂಗ್ರೆಸ್) - 49,890
ಬಿಜೆಪಿ ಅಭ್ಯರ್ಥಿ ಎಂ. ಸರವಣ ಪಡೆದ ಮತ - 36,369

English summary
Karnataka Bypoll: List Of Seven Constituency Where JDS And Congress Lost Deposit.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X