ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಸಂಭವನೀಯ ಅಭ್ಯರ್ಥಿಗಳು
ಬೆಂಗಳೂರು, ಜ 13: ಪ್ರತಿಯೊಂದು ಕ್ಷೇತ್ರಗಳಲ್ಲೂ ಪದಾಧಿಕಾರಿಗಳ ಮತ್ತು ಕಾರ್ಯಕರ್ತರ ಅಭಿಪ್ರಾಯಗಳನ್ನು ಸಂಗ್ರಹಿಸಿ, ಅಳೆದು ತೂಗಿ ರಾಜ್ಯದ 28 ಲೋಕಸಭಾ ಕ್ಷೇತ್ರಗಳಿಗೆ ಕಾಂಗ್ರೆಸ್ ತನ್ನ ಸಂಭವನೀಯ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ದಪಡಿಸಿದೆ ಎಂದು ತಿಳಿದು ಬಂದಿದೆ.
ನಾಲ್ಕು ವಿಧಾನಸಭಾ ಚುನಾವಣೆಯಲ್ಲಿನ ದಯನೀಯ ಸೋಲು, ದೇಶದೆಲ್ಲಡೆ ಹೆಚ್ಚುತ್ತಿರುವ ನರೇಂದ್ರ ಮೋದಿ ಮತ್ತು ಅರವಿಂದ್ ಕೇಜ್ರಿವಾಲ್ ಪ್ರಭಾವವನ್ನು ಮೆಟ್ಟಿ ನಿಂತು ಮತ್ತೆ ಕೇಂದ್ರದಲ್ಲಿ ಮತ್ತೆ ಗದ್ದುಗೇರಲು ಕಾಂಗ್ರೆಸ್ ಸಾಧ್ಯವಾದ ಎಲ್ಲಾ ಪ್ರಯತ್ನವನ್ನು ಮಾಡಲು ನಿರ್ಧರಿಸಿದೆ. (ಲೋಕಸಭೆಗೆ ಬಿಜೆಪಿ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ)
ಇದಕ್ಕೆ ಪೂರಕ ಎನ್ನುವಂತೆ, ಚುನಾವಣೆ ಗೆಲ್ಲಲು ಕಾರ್ಯಕರ್ತರ ಪರಿಶ್ರಮದ ಅಗತ್ಯವನ್ನು ಅರಿತಿರುವ ಕೆಪಿಸಿಸಿ, ಟಿಕೆಟ್ ಘೋಷಿಸುವ ಮೊದಲು ಅಯಾಯ ಕ್ಷೇತ್ರದ ಕಾರ್ಯಕರ್ತರ ಅಭಿಪ್ರಾಯವನ್ನು ಪ್ರಮುಖ ಮಾನದಂಡವನ್ನಾಗಿ ಬಳಸಲು ನಿರ್ಧರಿಸಿದೆ ಎನ್ನಲಾಗುತ್ತಿದೆ.
ಪ್ರತೀ ಕ್ಷೇತ್ರದಲ್ಲಿ ಬಂಡಾಯ ಅಭ್ಯರ್ಥಿಗಳು ಕಣಕ್ಕಿಳಿಯದಂತೆ ಎಚ್ಚರಿಕೆಯ ಹೆಜ್ಜೆ ಇಡಲು ಕೆಪಿಸಿಸಿ ನಿರ್ಧರಿಸಿದೆ. ಹಾಗಾಗಿ ಈಗಿಂದಲೇ ಸಂಭವನೀಯ ಅಭ್ಯರ್ಥಿಗಳ ಜೊತೆ ಮಾತುಕತೆ ನಡೆಸಿ ಚುನಾವಣೆಯ ಸಮಯದಲ್ಲಿ ಸಮಸ್ಯೆ ತಲೆದೋರದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಮುಂದಾಗಿದ್ದಾರೆಂದು ತಿಳಿದು ಬಂದಿದೆ. (ಜನರಿಂದಲೇ ಅಭ್ಯರ್ಥಿ ಆಯ್ಕೆ : ರಾಹುಲ್ ಗಾಂಧಿ)
ಐದರಿಂದ ಆರು ಕ್ಷೇತದಲ್ಲಿ ಮಾತ್ರ ಕೆಪಿಸಿಸಿ ಒಂದೇ ಅಭ್ಯರ್ಥಿಯ ಹೆಸರನ್ನು ಅಖೈರುಗೊಳಿಸಿದ್ದು, ಉಳಿದ ಕ್ಷೇತ್ರಗಳಲ್ಲಿ ಎರಡರಿಂದ ಐದು ಹೆಸರನ್ನು ಹೈಕಮಾಂಡಿಗೆ ಕಳುಹಿಸುವ ಪಟ್ಟಿಯಲ್ಲಿ ನಮೂದಿಸಿದೆ. ಲೋಕಸಭಾ ಚುನಾವಣೆಗೆ ರಾಜ್ಯದ 28 ಕ್ಷೇತ್ರದ ಕಾಂಗ್ರೆಸ್ ಸಂಭವನೀಯ ಅಭ್ಯರ್ಥಿಗಳ ಹೆಸರು ಸ್ಲೈಡಿನಲ್ಲಿ...

ರಾಯಚೂರಿನಲ್ಲಿ ಮಾತ್ರ ಸಿಂಗಲ್ ಕ್ಯಾಂಡಿಡೇಟ್?
1. ಬಾಗಲಕೋಟೆ - ಅಜಯ್ ಕುಮಾರ್ ಸರ್ ನಾಯಕ್, ವಿಶ್ವನಾಥ್
2. ಬಿಜಾಪುರ - ಪ್ರಕಾಶ್ ರಾಥೋಡ್, ಅರ್ಜುನ್ ರಾಥೋಡ್
3. ರಾಯಚೂರು - ರಾಜಾ ರಾಯಪ್ಪ ನಾಯಕ
4. ಹಾವೇರಿ - ಸಲೀಂ ಅಹಮದ್, ಪ್ರೊ. ಐ ಜಿ ಸನದಿ
5. ದಾವಣಗೆರೆ - ಎಸ್ ಎಸ್ ಮಲ್ಲಿಕಾರ್ಜುನ್, ಮಹಿಮಾ ಪಟೇಲ್, ಗಣೇಶ್ ಶ್ಯಾಮನೂರು ಶಿವಶಂಕರಪ್ಪ
6. ಹಾಸನ - ಬಿ ಶಿವರಾಂ, ಎ ಮಂಜು, ಎಚ್ ಎಂ ಆನಂದ್, ಬಿ ಎಂ ಮೋಹನ್

ಜನಾರ್ಧನ ಪೂಜಾರಿ ಭವಿಷ್ಯ ಈ ಬಾರಿ ಏನಾಗುತ್ತೋ?
7. ಬಳ್ಳಾರಿ - ಎನ್ ಎಂ ವೈ ಹನುಮಂತಪ್ಪ, ಟಿ ಆರ್ ರಾಮಪ್ಪ
8. ಕೊಪ್ಪಳ - ಬಸವರಾಜ್ ಹಿಟ್ನಾಳ್, ಅಮರೇಗೌಡ ಭೈರಾಪುರ
9. ದಕ್ಷಿಣಕನ್ನಡ - ಜನಾರ್ಧನ ಪೂಜಾರಿ
10. ತುಮಕೂರು - ಮುದ್ದಹನುಮೇ ಗೌಡ, ಶಫಿ ಅಹಮದ್, ಸತೀಶ್ ಮಲ್ಲಿಕಾರ್ಜುನ್
11. ಚಿತ್ರದುರ್ಗ - ಎಚ್ ಹನುಮಂತಪ್ಪ, ಕೆ ಶಿವರಾಂ, ಚಂದ್ರಣ್ಣ
12. ಶಿವಮೊಗ್ಗ - ಕುಮಾರ್ ಬಂಗಾರಪ್ಪ, ಮಂಜುನಾಥ್ ಬಂಡಾರಿ

ಮೈಸೂರಿನಲ್ಲಿ ಯಾರಿಗೆ ಟಿಕೆಟ್?
13. ಮೈಸೂರು - ಎಚ್ ವಿಶ್ವನಾಥ್, ಪ್ರಮೋದಾ ದೇವಿ
14. ಉತ್ತರಕನ್ನಡ - ನಿವೇದಿತಾ ಆಳ್ವ, ಪ್ರಶಾಂತ್ ದೇಶಪಾಂಡೆ
15. ಗುಲ್ಬರ್ಗ - ಮಲ್ಲಿಕಾರ್ಜುನ ಖರ್ಗೆ
16. ಬೀದರ್ - ಧರಂ ಸಿಂಗ್
17. ಉಡುಪಿ / ಚಿಕ್ಕಮಗಳೂರು - ಜಯಪ್ರಕಾಶ್ ಹೆಗ್ಡೆ

ಮಂಡ್ಯದಿಂದ ಮತ್ತೆ ರಮ್ಯಾ ಮೇಡಂ ಕಣಕ್ಕೆ?
18. ಹುಬ್ಬಳ್ಳಿ, ಧಾರವಾಡ - ಮೋಹನ್ ಆಸುಂಡಿ, ಮಂಜುನಾಥ್ ಕನ್ನೂರು, ಹಿಂಡಸಗೇರಿ, ಸದಾನಂದ
19. ಮಂಡ್ಯ - ರಮ್ಯಾ
20. ಚಾಮರಾಜನಗರ - ಧೃವನಾರಾಯಣ್
21. ಚಿಕ್ಕೋಡಿ - ಎಂ ಬಿ ಪಾಟೀಲ್, ಗಣೇಶ್ ಹುಕ್ಕೇರಿ, ಶಾಮಾ ಭೀಮಾ ಘಾಟಗೆ
22. ಚಿಕ್ಕಬಳ್ಳಾಪುರ - ವೀರಪ್ಪ ಮೊಯ್ಲಿ
23. ಕೋಲಾರ - ಕೆ ಎಚ್ ಮುನಿಯಪ್ಪ

ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಯಾರು?
24. ಬೆಂಗಳೂರು ದಕ್ಷಿಣ - ಪ್ರೊ. ರಾಜೀವ್ ಗೌಡ, ನಂದನ್ ನಿಲೇಕಣಿ (ಬದಲಾವಣೆಗೆ ರಾಜಕೀಯ ಉತ್ತಮ ವೇದಿಕೆ : ನಿಲೇಕಣಿ)
25. ಬೆಂಗಳೂರು ಸೆಂಟ್ರಲ್ - ಸಿ ಕೆ ಜಾಫರ್ ಶರೀಫ್, ರಿಜ್ವಾನ್ ಅರ್ಷದ್, ಅಲೆಕ್ಸಾಂಡರ್, ಎಚ್ ಟಿ ಸಾಂಗ್ಲಿಯಾನ26. ಬೆಂಗಳೂರು ಉತ್ತರ - ಪ್ರೊ. ರಾಜೀವ್ ಗೌಡ, ಬಿ ಕೆ ಹರಿಪ್ರಸಾದ್, ರಮೇಶ್ ಗೌಡ, ನಾರಾಯಣಸ್ವಾಮಿ, ಚಂದ್ರಶೇಖರ್, ನೆ ಲ ನರೇಂದ್ರ ಬಾಬು, ಬಿ ಎಲ್ ಶಂಕರ್
27. ಬೆಂಗಳೂರು ಗ್ರಾಮಾಂತರ - ಡಿ ಕೆ ಸುರೇಶ್
28. ಬೆಳಗಾವಿ - ಲಕ್ಷ್ಮೀ ಹೆಬ್ಬಾಳಕರ್, ರತನ್ ಜಾರಕಿಹೊಳೆ, ರಮೇಶ್ ಜಾರಕಿಹೊಳೆ












Click it and Unblock the Notifications