ಒಮ್ಮೆ ನೋಡಿ: ಅಕ್ಟೋಬರ್ ತಿಂಗಳಲ್ಲಿ ಹತ್ತು ದಿನ ರಜೆ, 21ದಿನ ಮಾತ್ರ ಕೆಲಸ
ಸಾಮಾನ್ಯವಾಗಿ ಅಕ್ಟೋಬರ್ ಮಾಸ ಬಂತು ಎಂದರೆ, ಹಬ್ಬಹರಿದಿನಗಳ, ರಜಾದಿನಗಳ ಸರೆಮಾಲೆ. ಈ ಬಾರಿ ಅಧಿಕ ಮಾಸ ಬಂದಿರುವುದರಿಂದ, ಅಶ್ವಯುಜ ಮತ್ತು ಕಾರ್ತಿಕ ಮಾಸಗಳಲ್ಲಿ ಬರುವ ಹಬ್ಬಗಳು ಒಂದು ತಿಂಗಳು ಮುಂದಕ್ಕೆ ಹೋಗಿವೆ.
ಅಧಿಕ ಮಾಸ ಅಕ್ಟೋಬರ್ ಹದಿನೇಳಕ್ಕೆ ಮುಕ್ತಾಯಗೊಳ್ಳಲಿದೆ. ಆ ನಂತರ, ನವರಾತ್ರಿಯ ಪರ್ವಕಾಲ ಆರಂಭ. ಆಯುಧಪೂಜೆಯ ಪ್ರಯುಕ್ತ ನಡೆಸಲಾಗುವ ಅಂಗಡಿ, ಆಫೀಸ್ ಪೂಜೆಗಳು ಈ ಬಾರಿ, ಕೊರೊನಾ ಹಾವಳಿಯಿಂದ ಕಳೆಗಟ್ಟುವ ಸಾಧ್ಯತೆ ಕಮ್ಮಿ.

ಅಕ್ಟೋಬರ್ ತಿಂಗಳಲ್ಲಿ ಎರಡನೇ, ನಾಲ್ಕನೇ ಶನಿವಾರ ಸೇರಿ ಒಟ್ಟು ಹತ್ತು ದಿನ ಬ್ಯಾಂಕ್/ಸಾರ್ವತ್ರಿಕ ರಜಾದಿನಗಳಿವೆ. ಅದರಲ್ಲೂ, ಆಯುಧಪೂಜೆ ಭಾನುವಾರ ಬಂದಿರುವುದರಿಂದ ಒಂದು ರಜಾ ಖೋತಾ ಆಗಿದೆ. ಅಕ್ಟೋಬರ್ - 2020 ಮಾಸದ ರಜಾದಿನಗಳ ಪಟ್ಟಿ ಇಂತಿದೆ (ಕರ್ನಾಟಕ ವ್ಯಾಪ್ತಿಯ ರಜೆಗಳು):
| 1 | ಅಕ್ಟೋಬರ್ 2, | ಶುಕ್ರವಾರ : ಗಾಂಧಿ ಜಯಂತಿ (ಸಾರ್ವತ್ರಿಕ ರಜೆ) |
| 2 | ಅಕ್ಟೋಬರ್ 4 | ಭಾನುವಾರ |
| 3 | ಅಕ್ಟೋಬರ್ 10 ಶನಿವಾರ | ಎರಡನೇ ಶನಿವಾರ (ಬ್ಯಾಂಕ್ ರಜೆ) |
| 4 | ಅಕ್ಟೋಬರ್ 11 | ಭಾನುವಾರ |
| 5 | ಅಕ್ಟೋಬರ್ 18 | ಭಾನುವಾರ |
| 6 | ಅಕ್ಟೋಬರ್ 24 ಶನಿವಾರ | ನಾಲ್ಕನೇ ಶನಿವಾರ (ಬ್ಯಾಂಕ್ ರಜೆ) |
| 7 | ಅಕ್ಟೋಬರ್ 25 | ಭಾನುವಾರ (ಆಯುಧಪೂಜೆ) |
| 8 | ಅಕ್ಟೋಬರ್ 26 ಸೋಮವಾರ | ವಿಜಯದಶಮಿ (ರಜಾದಿನ) |
| 9 | ಅಕ್ಟೋಬರ್ 30, ಶುಕ್ರವಾರ | ಈದ್ ಮಿಲಾದ್, ಪೈಗಂಬರ್ ಜನ್ಮದಿನ (ಬ್ಯಾಂಕ್ ರಜೆ) |
| 10 | ಅಕ್ಟೋಬರ್ 31, ಶನಿವಾರ | ವಾಲ್ಮೀಕಿ ಜಯಂತಿ (ಬ್ಯಾಂಕ್ ರಜೆ) |












Click it and Unblock the Notifications