Caste Census Report: ಇದು ಅವೈಜ್ಞಾನಿಕ ಹಳೆ ಗಣತಿ ವರದಿ, ಮೂಲೆಗೆ ಹಾಕಿ- ವೀರಶೈವ ಮಹಾಸಭೆ
ಬೆಂಗಳೂರು ಮಾರ್ಚ್ 2: ರಾಜ್ಯ ಸರ್ಕಾರ ಜಾತಿಗಣತಿವರದಿಯನ್ನು ಸ್ವೀಕರಿಸಲುತ್ತಿದ್ದಂತೆಯೇ ಮುಂದುವರೆದ ವರ್ಗಗಳ ವಿರೋಧ ವ್ಯಕ್ತವಾಗಿದೆ. ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾ ಮತ್ತು ಒಕ್ಕಲಿಗರ ಮೀಸಲಾತಿ ಹೋರಾಟ ವೇದಿಕೆಯು ಈ ವರದಿ ಜಾರಿಗೆ ಮುಂದಾದರೆ ಹೋರಾಟ ನಡೆಸುವ ಸುಳಿವು ನೀಡಿದೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಶುಕ್ರವಾರ ಮಾತನಾಡಿದ ವೀರಶೈವ ಮಹಾಸಭಾ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ, ಒಂಬತ್ತು ವರ್ಷ ಹಳೆಯದಾದ ಈ ವರದಿ ಅವೈಜ್ಞಾನಿಕವಾಗಿರುವ ಕಾರಣ ಮೂಲೆಗೆ ಹಾಕಬೇಕು. ಸರ್ಕಾರ ಇನ್ನೊಮ್ಮೆ ವೈಜ್ಞಾನಿಕ ಗಣತಿ ಮಾಡಿಸಬೇಕು. ಅಲ್ಲದೇ, ಮಹಾಸಭಾವತಿಯಿಂದಲೇ ವೀರಶೈವ ಲಿಂಗಾಯತ ಸಮುದಾಯದ ಜಾತಿಗಣತಿ ಮಾಡಿಸುವ ಆಲೋಚನೆ ಇದೆ ಎಂದರು. ವೀರಶೈವ ಲಿಂಗಾಯತ ಮತ್ತು ಉಪ ಪಂಗಡಗಳು ಸೇರಿ ಜನಸಂಖ್ಯೆ ಎರಡು ಕೋಟಿಗಿಂತ ಕಡಿಮೆ ಇಲ್ಲ ಎಂದರು.

ಮತ್ತಷ್ಟು ಲಿಂಗಾಯತ ಶ್ರೀಗಳಿಂದ ವಿರೋಧ:
ಸರ್ಕಾರಕ್ಕೆ ಜಾತಿ ಗಣತಿ ವರದಿ ಸಲ್ಲಿಕೆಯಾದ ಬೆನ್ನಲ್ಲೇ ಆ ವರದಿಗೆ ಸಲ್ಲಿಕೆಯಾದ ಬೆನ್ನಲ್ಲೇ ಆ ವರದಿಗೆ ಸಿದ್ಧಗಂಗಾ ಮಠದ ಡಾ. ಚನ್ನಸಿದ್ದರಾಮ ಪಂಡಿತರಾಧ್ಯ ಶಿವಾಚಾರ್ಯರು, ಕೂಡಲಸಂಗಮ ಪೀಠದ ಜಯಮೃತ್ಯುಂಜಯ ಶ್ರೀಗಳು ಹಾಗೂ ತುಮಕೂರು ಜಿಲ್ಲೆಯ ಹಲವು ಹಾಗೂ ತುಮಕೂರು ಜಿಲ್ಲೆಯ ಹಲವು ಲಿಂಗಾಯತ ಶ್ರೀಗಳು ಶುಕ್ರವಾರ ವಿರೋಧ ವ್ಯಕ್ತಪಡಿಸಿದ್ದಾರೆ. ವೈಜ್ಞಾನಿಕವಾಗಿ ಸಮೀಕ್ಷೆ ನಡೆದಿಲ್ಲ ಎಂದಿದ್ದಾರೆ.
ಜಾತಿಗಣತಿ ವರದಿ ಪರ ಅಹಿಂದ ಸಚಿವರ ದನಿ:
ಜಾತಿ ಗಣತಿಗೆ ಸರ್ಕಾರದ ಕೆಲವು ಸಚಿವರು ಆಕ್ಷೇಪಗಳನ್ನು ಎತ್ತಿದ್ದರೆ, ಮತ್ತೆ ಕೆಲವು ಪ್ರಭಾವಿ ಸಚಿವರು ವರದಿಯ ಪರವಾಗಿ ಧ್ವನಿಗೂಡಿಸಿದ್ದಾರೆ.
ವರದಿಯಲ್ಲಿ ತಮ್ಮ ಜನಸಂಖ್ಯೆ ಕಡಿಮೆಯಾಗುತ್ತದೆ ಎಂಬ ಆತಂಕದಿಂದ ಕೆಲವು ಸಚಿವರು ಜಾತಿಗಣತಿಗೆ ಆಕ್ಷೇಪ ವ್ಯಕ್ತಪಡಿಸಿರಬಹುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದರೆ, ಜಾತಿಗಣತಿ ವರದಿಯಲ್ಲಿ ಸತ್ಯ ಹೊರ ಬಂದಿದೆ ಎಂದು ಸಚಿವ ಜಮೀರ್ ಅಹಮದ್ ತಿಳಿಸಿದ್ದಾರೆ. ಮತ್ತೊಂದೆಡೆ ವರದಿಗೆ ಯಾರ ವಿರೋಧವೂ ಇಲ್ಲ ಎಮದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಇನ್ನೂ ಈ ಬಗ್ಗೆ ಸಿದ್ದರಾಮಯ್ಯ ಅವರು, 'ಜಯಪ್ರಕಾಶ್ ಹೆಗ್ಡೆ ಅವರು ಸರ್ಕಾರಕ್ಕೆ ಜಾತಿ ಗಣತಿ ವರದಿ ಸಲ್ಲಿಸಿದ್ದಾರೆ.ಅ ದನ್ನು ನಾವು ಸ್ವೀಕರಿಸಿದ್ದೇವೆ. ಆ ವರದಿಯಲ್ಲೇನಿದೆ ಎಂಬ ಕುರಿತು ಸಚಿವ ಸಂಪುಟದಲ್ಲಿ ವಿಸ್ತೃತವಾಗಿ ಚರ್ಚೆಸುತ್ತೇವೆ. ಬಳಿಕ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಜಾತಿವಾರು ಜನಸಂಖ್ಯೆಯ ವಿವರ
ರಾಜ್ಯದಲ್ಲಿ ತೀವ್ರ ಚರ್ಚೆ, ಅಪಸ್ವರ, ಕೋಲಾಹಲ ಸೃಷ್ಟಿಸಲಿದೆ ಎನ್ಲಾಗಿರುವ ಜಾತಿವಾರು ಜನಸಂಖ್ಯೆಯ ವಿವರಗಳನ್ನೊಳಗೊಂಡ 'ಸಾಮಾಜಿಕ ಶೈಕ್ಷಣಿಕ ಮತ್ತು ಆರ್ಥಿಕ ವರದಿ'ಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ ಹೆಗ್ಡೆ ಅವರು ಗುರುವಾರ ಹಸ್ತಾಂತರ ಮಾಡಿದರು.
ಈ ವರದಿಯಲ್ಲಿ ಏನಿದೆ ಎಂದು ಅಂಶ ಅಧಿಕೃತವಾಗಿ ಇನ್ನೂ ಬಹಿರಂಗಗೊಂಡಿಲ್ಲವಾದರೂ, ಕೆಲ ಕುತೂಹಲಕಾರಿ ವಿಚಾರಗಳು ಹೊರ ಬಿದ್ದಿವೆ. ಮೂಲಗಳ ಪ್ರಕಾರ ಅಲ್ಪಸಂಖ್ಯಾತ, ದಲಿತ, ಹಾಗೂ ಹಿಂದುಳಿದ ವರ್ಗ (ಅಹಿಂದ)ವು ರಾಜ್ಯದ ಒಟ್ಟಾರೆ ಜನಸಂಖ್ಯೆಯ ಶೇ.60ರಷ್ಟು ಇದೆ. ಅದರಲ್ಲೂ ಅಲ್ಪಸಂಖ್ಯಾತ ಸಮುದಾಯವು ಇದುವರೆಗೂ ರಾಜ್ಯದ ಅತಿ ದೊಡ್ಡ ಸಮುದಾಯಗಳೆನಿಸಿದ್ದ ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯಗಳಿಗಿಂತ ಹೆಚ್ಚಿದೆ.
ಯಾವ ಜಾತಿ ಎಷ್ಟು?
ಎಸ್ಸಿ 1.08 ಕೋಟಿ
ಮುಸ್ಲಿಮರು 70 ಲಕ್ಷ
ಲಿಂಗಾಯತರು 65 ಲಕ್ಷ
ಒಕ್ಕಲಿಗರು 60 ಲಕ್ಷ
ಕುರುಬರು 45 ಲಕ್ಷ
ಎಸ್ಟಿ 40.45 ಲಕ್ಷ
ಈಡಿಗ, ವಿಶ್ವಕರ್ಮ, ಬೆಸ್ತ 15 ಲಕ್ಷ
ಬ್ರಾಹ್ಣಣ 14 ಲಕ್ಷ
ಬಹಿರಂಗಗೊಂಡಿರುವ ಅಂಕಿ-ಅಂಶ ಪ್ರಕಾರ ಮುಸ್ಲಿಮರು 70 ಲಕ್ಷ, ಲಿಂಗಾಯತರು 65 ಲಕ್ಷ, ಒಕ್ಕಲಿಗರು 60 ಲಕ್ಷ ಇದ್ದಾರೆ. ತನ್ಮೂಲಕ ರಾಜ್ಯದಲ್ಲಿ ಅಲ್ಪಸಂಖ್ಯಾತರು ಪ್ರಬಲ ಸಮುದಾಯಗಳಿಗೆ ಹೋಲಿಸಿದಾಗ ಬಹುಸಂಖ್ಯಾತರಾಗುತ್ತಾರೆ. ರಾಜ್ಯದಲ್ಲಿರುವ 5.98 ಕೋಟಿ ಜನಸಂಖ್ಯೆಯ ಪೈಕಿ 3.96 ಕೋಟಿ ಜನರು ಅಹಿಂದ ಸಮುದಾಯಕ್ಕೆ ಸೇರಿದವರಾಗಿದ್ದಾರೆ. 1.87 ಕೋಟಿ ಜನ ಲಿಂಗಾಯತ, ಒಕ್ಕಲಿಗ, ಬ್ರಾಹ್ಮಣ ಹಾಗೂ ಇತರ ಸಮುದಾಯದವರಾಗಿದ್ದಾರೆ. ಪರಿಶಿಷ್ಠ ಜಾತಿಯ 1.08 ಕೋಟಿ ಜನ, ಪರಿಶಿಷ್ಟ ಪಂಗಡದ 40.45 ಲಕ್ಷ ಜನ ಇದ್ದರೆ, ಹಿಂದಳಿದ 45 ಲಕ್ಷ ಜನರಿದ್ದಾರೆ.












Click it and Unblock the Notifications