ಸಿದ್ದರಾಮಯ್ಯ ರಾಜಕೀಯ ನಿವೃತ್ತಿ ಪಡೆದುಕೊಳ್ಳಲಿ: ಅಶ್ವತ್ಥ ನಾರಾಯಣ

ಬೆಂಗಳೂರು,ಡಿಸೆಂಬರ್ 8: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ರಾಜಕೀಯ ನಿವೃತ್ತಿ ಪಡೆದುಕೊಳ್ಳಲಿ ಎಂದು ಸಚಿವ ಡಾ. ಸಿ.ಎನ್ ಅಶ್ವತ್ಥ ನಾರಾಯಣ ಸಲಹೆ ನೀಡಿದರು.

ಈ ಕುರಿತು ಗುರುವಾರ ಮಾತನಾಡಿದ ಅವರು, ಸಿದ್ದರಾಮಯ್ಯ ಅವರಿಗೆ 75 ವರ್ಷ ವಯಸ್ಸಾಗಿದೆ. ಸಿದ್ದರಾಮಯ್ಯ ಎಷ್ಟರ ಮಟ್ಟಿಗೆ ಪ್ರಸ್ತುತ ನಾಯಕರು? ವಯಸ್ಸು ಮೀರಿದ ನಾಯಕರು ಇನ್ನೇನು ಈ ಕಾಲಕ್ಕೆ ಪ್ರಸ್ತುತವಾಗಿಲ್ಲ. 75 ಆಗಿದೆ ಮಾರ್ಗದಶಕರಾಗಿರಬೇಕು ಎಂದರು.

ಸಿದ್ದರಾಮಯ್ಯ ಎಷ್ಟರ ಮಟ್ಟಿಗೆ ಪ್ರಸ್ತುತ ನಾಯಕರು? ವಯಸ್ಸು ಮೀರಿದ ನಾಯಕರು ಇನ್ನೇನು ಈ ಕಾಲಕ್ಕೆ ಪ್ರಸ್ತುತವಾಗಿಲ್ಲ. 75 ಆಗಿದೆ ಮಾರ್ಗದಶಕರಾಗಿರಬೇಕು. ಇನ್ನು ನಾನೇ ಇದ್ದೀನಿ, ನಾನೇ ಇದ್ದೀನಿ ಅಂದ್ರೆ ಎಷ್ಟು ಸ್ವಾರ್ಥಿ ಇದೆ ಎಂದು ಅರ್ಥಮಾಡಿಕೊಳ್ಳಿ. Self delcred ವ್ಯಕ್ತಿ. ಬೇರೆಯವರಿಗೂ ಅವಕಾಶ ಮಾಡಿಕೊಡಬೇಕು ಅಂಥ ಯಾವ ಗುಣನೂ ಇಲ್ಲ. ನಾನು ನಾನು ನಾನು ಎನ್ನುತ್ತಾರೆ ಎಂದು ವಾಗ್ದಾಳಿ ನಡೆಸಿದರು.

Let Siddaramaiah Retire From Politics Ashwath Narayan Advises

ಹಾಗಿದ್ರೆ ಸಿದ್ದರಾಮಯ್ಯ ರಾಜಕೀಯ ನಿವೃತ್ತಿ ತಗೆದುಕೊಳ್ಳಬೇಕಾ ಎಂಬ ಪ್ರಶ್ನೆಗೆ, ಅದ್ರಲ್ಲಿ ಅನುಮಾನವೇ ಇಲ್ಲ 75 ಆದ್ಮೇಲೆ ಏನ್ರಿ? 75 ಆದ್ಮೇಲೆ natural process ನಲ್ಲಿ natural justice ನಲ್ಲಿ ರಿಟೈರ್ ಆಗಬೇಕು ಎಂದರು. ದೇಶದಲ್ಲಿ ವಿವಿಧ ರಾಜ್ಯದಲ್ಲಿ ಆಗುವ ಚುನಾವಣೆಯಲ್ಲಿ ಪುನರ್ ಆಯ್ಕೆಯಾಗ್ತಿದೆ. ಮೋದಿ, ನಮ್ಮ ಪಕ್ಷದ ಮೇಲೆ ಜನರು ವಿಶ್ವಾಸವಿಡುತ್ತಿದ್ದಾರೆ. ಜನಪರ ಕೆಲಸ ಆಗ್ತಿರೋದಕ್ಕೆ ಜನ ಮನ ಸೋತಿದ್ದಾರೆ ಎಂದರು.

ಇನ್ನೂ ದೇಶದಲ್ಲಿ ವಿವಿಧ ರಾಜ್ಯದಲ್ಲಿ ಆಗುವ ಚುನಾವಣೆಯಲ್ಲಿ ಪುನರ್ ಆಯ್ಕೆಯಾಗ್ತಿದೆ. ನರೇಂದ್ರ ಮೋದಿ ಹಾಗೂ ನಮ್ಮ ಪಕ್ಷದ ಮೇಲೆ ಜನರು ವಿಶ್ವಾಸವಿಡುತ್ತಿದ್ದಾರೆ. ಜನಪರ ಕೆಲಸ ಆಗ್ತಿರೋದಕ್ಕೆ ಜನ ಮನಸೋತಿದ್ದಾರೆ. ಗುಜರಾತ್ ನ ಜಯಭೇರಿ ಹಾಗೂ ದೊಡ್ಡ ಸಂದೇಶವಾಗಿದೆ. ಜನರ ಪಕ್ಷವಾಗಿ ಬಿಜೆಪಿ ಬೆಳೆಯುತ್ತಿದೆ ಈ ಕುರಿತು ನಮ್ಮ ಪ್ರಧಾನಿಗೆ, ಅಮಿತ್ ಶಾ ಗೆ ಧನ್ಯವಾದಗಳನ್ನ ತಿಳುಸುತ್ತೇನೆ ಎಂದರು.

Let Siddaramaiah Retire From Politics Ashwath Narayan Advises

ದೆಹಲಿ ಮುನ್ಸಿಪಲ್ ಎಲೆಕ್ಷನ್ ಹಿನ್ನಡೆ ವಿಚಾರವಾಗಿ ಮಾತನಾಡಿದ ಅವರು, ಬಹಳ ವರ್ಷದಿಂದ ನಮ್ಮ ಪಕ್ಷ ಅಲ್ಲಿ ಆಡಳಿತ ನಡೆಸಿದೆ. ಲೋಕಲ್ ಬಾಡಿ ಎಲೆಕ್ಷನ್ ನಲ್ಲಿ ಸ್ವಲ್ಪ ಚಾಲೆಂಜ್ ಬಂದಿರುತ್ತೆ. ಪ್ರಜಾಪ್ರಭುತ್ವದಲ್ಲಿ ಎಲ್ಲಾ ರೀತಿಯ ತಿರ್ಪುನ್ನ ತಗೆದುಕೊಳ್ಳಬೇಕು. ಹೊಸ ಪ್ರಯತ್ನದಲ್ಲಿ ಬೇರೆಯವರಿಗೂ ಅವಕಾಶ ಕೊಟ್ಟಿರ್ತಾರೆ. ನಮಗೆ ತೀರಾ ಹಿನ್ನಡೆಯಾಗಿಲ್ಲ, ಸಣ್ಣ ಹಿನ್ನಡೆಯಾಗಿದೆ ಅಷ್ಟೇ ಎಂದರು.

ಗುಜರಾತ್ ಚುನಾವಣಾ ಫಲಿತಾಂಶ ರಾಜ್ಯದ ಮೇಲೂ ಪರಿಣಾಮ ಬಿರಲಿದೆ. ಕಾಂಗ್ರೆಸ್ ಎಲ್ಲಾ ಕಡೆ ವಾಶ್ ಔಟ್ ಆಗ್ತಿದೆ. ರಾಹುಲ್ ಗಾಂಧಿ ಭಾರತ್ ಜೋಡೋ ವಿಫಲವಾಗಿರೋದು ಇದ್ರಿಂದ ಗೊತ್ತಾಗುತ್ತೆ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+