ಹಾಸನದಲ್ಲಿ ಬಾಲಕನನ್ನು ಕೊಂದು ತಿಂದ ಚಿರತೆ

ನಾಗನಹಳ್ಳಿಯ ಅಣ್ಣೇಗೌಡರ ಪುತ್ರ ತೇಜಸ್ (6)ಚಿರತೆ ದಾಳಿಗೆ ಬಲಿಯಾದ ಬಾಲಕ, ಬುಧವಾರ ಸಂಜೆ ತೇಜಸ್ ಅನ್ನು ಚಿರತೆ ಹೊತ್ತೊಯ್ದದಿದ್ದು, ಅವರ ಶವ ಇನ್ನೂ ಪತ್ತೆಯಾಗಿಲ್ಲ. ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಪೊಲೀಸರು ಬಾಲಕನ ಶವಕ್ಕಾಗಿ ಹುಡುಕಾಟ ಆರಂಭಿಸಿದ್ದಾರೆ.
ನಾಗನಹಳ್ಳಿ ಗ್ರಾಮದ ಅರಣ್ಯದಂಚಿನ ಪೊರೆಯಲ್ಲಿ ಚಿರತೆ ಅಡಗಿರುವ ಶಂಕೆಯನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದು, ಹುಡುಕಾಟ ತೀವ್ರಗೊಳಿಸಿದ್ದಾರೆ. ಚಿರತೆ ಕಂಡರೆ ಗುಂಡಿಕ್ಕಿ ಕೊಲ್ಲಲು ಚಿಂತನೆ ನಡೆಸಲಾಗಿದೆ ಎಂದು ಡಿಎಫ್ಓ ಹೇಳಿದ್ದಾರೆ. ಅಣ್ಣೇಗೌಡರ ತೋಟದ ಪೊದೆಯ ಬಳಿ ತೇಜಸ್ ಬಟ್ಟೆ ಮತ್ತು ರಕ್ತದ ಕಲೆ ಪತ್ತೆಯಾಗಿದ್ದು, ಇಲ್ಲಿಂದಲೇ ಚಿರತೆ ಆತನನ್ನು ಹೊತ್ತುಕೊಂಡು ಹೋಗಿರಬಹದು ಎಂದು ಶಂಕಿಸಲಾಗಿದೆ.
ಬುಧವಾರ ಸಂಜೆ ಶಾಲೆಯಿಂದ ಬಂದ ತೇಜಸ್ ಅಜ್ಜಿಯ ಬಳಿ ಅಪ್ಪ-ಅಮ್ಮ ಎಲ್ಲಿ ಎಂದು ಹೇಳಿದ್ದಾನೆ. ಅವರು ತೋಟದಲ್ಲಿ ಇದ್ದಾರೆ ಎಂದು ಅಜ್ಜಿ ಹೇಳಿದ್ದಾರೆ. ಅವರನ್ನು ನೋಡಲು ತೇಜಸ್ ತೋಟದ ಬಳಿ ಹೋಗುವಾಗ ಚಿರತೆ ದಾಳಿ ಮಾಡಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಬಾಲಕನ ಶವ ಪತ್ತೆ : ಗುರುವಾರ ಮಧ್ಯಾಹ್ನದ ವೇಳೆಗೆ ಬಾಲಕನ ಶವ ನಾಗನಹಳ್ಳಿಯ ಅರಣ್ಯದಂಚಿನ ಪೊದೆಯಲ್ಲಿ ಪತ್ತೆಯಾಗಿದೆ. ಕಾಡಿನಲ್ಲಿ ಚಿರತೆಯೂ ಇದ್ದಿದ್ದು ಗ್ರಾಮಸ್ಥರ ಕಣ್ಣಿಗೆ ಬಿದ್ದಿದ್ದು, ಜನರನ್ನು ನೋಡಿ ಗಾಬರಿಯಾಗಿ ಕಾಡಿಗೆ ಪರಾರಿಯಾಗಿದೆ.












Click it and Unblock the Notifications