ಚಿಕ್ಕಮಗಳೂರು ಟಿಎಂಸಿ ಕಾಲೇಜಿಗೆ ನುಗ್ಗಿದ ಚಿರತೆ
ಚಿಕ್ಕಮಗಳೂರು, ಜುಲೈ 23 : ಚಿಕ್ಕಮಗಳೂರಿನ ಟಿಎಂಎಸ್ ಕಾಲೇಜಿಗೆ ಚಿರತೆ ನುಗ್ಗಿದ್ದು ಮೂರು ಜನರ ಮೇಲೆ ದಾಳಿ ಮಾಡಿ ಗಾಯಗೊಳಿಸಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು, ಬೆಂಗಳೂರಿನಿಂದ ಅರವಳಿಕೆ ತಜ್ಞರ ತಂಡವನ್ನು ಕರೆಸಲಾಗುತ್ತಿದೆ. ನಂತರ ಚಿರತೆಯನ್ನು ಸೆರೆ ಹಿಡಿಯಲಾಗುತ್ತದೆ.
ಗುರುವಾರ ಮಹಿಳಾ ಸಮಾಜ ಶೈಕ್ಷಣಿಕ ಸಂಸ್ಥೆಯ ಆವರಣಕ್ಕೆ ನುಗ್ಗಿದ ಚಿರತೆ ದಾಳಿ ಮೂವರನ್ನು ಗಾಯಗೊಳಿಸಿದೆ. ಕಾಲೇಜಿನ ಆವರಣಕ್ಕೆ ಹೊಂದಿಕೊಂಡಂತಿರುವ ಜೆರಾಕ್ಸ್ ಅಂಗಡಿಗೆ ಚಿರತೆ ನುಗ್ಗಿದ್ದು, ಅದನ್ನು ಅಲ್ಲಿಯೇ ಕೂಡಿ ಹಾಕಲಾಗಿದೆ. [ಚಿತ್ರಗಳು : ಮೂಡಬಿದಿರೆಯಲ್ಲಿ ಬಾವಿಗೆ ಬಿದ್ದ ಚಿರತೆ ರಕ್ಷಣೆ]

ಚಿರತೆಯನ್ನು ನೋಡಲು ಜೆರಾಕ್ಸ್ ಅಂಗಡಿ ಕಿಟಕಿಯ ಬಳಿ ಹೋಗಿದ್ದ ಉಪ ಅರಣ್ಯ ಸಂರಕ್ಷಣಾಧಿಕಾರಿ ಅವರ ಕಾರು ಚಾಲಕ ಗಣೇಶ್ ಸೇರಿದಂತೆ 3 ಜನರ ಮೇಲೆ ಚಿರತೆ ದಾಳಿ ಮಾಡಿದೆ. ಗಾಯಾಳುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. [ಚಿತ್ರಕೃಪೆ : ಮಹೇಶ್ ಗೌಡ ಎಚ್.ಸಿ]
ಮಹಿಳಾ ಸಮಾಜ ಶೈಕ್ಷಣಿಕ ಸಂಸ್ಥೆಯ ಆವರಣದ ಸುತ್ತಮುತ್ತ ಸಿಟಿ ಸಿವಿಲ್ ಕೋರ್ಟ್, ನಗರ ಕೇಂದ್ರ ಗ್ರಂಥಾಲಯ, ಪೊಲೀಸ್ ಮಹಾ ನಿರ್ದೇಶಕರ ಕಚೇರಿ ಮುಂತಾದ ಕಚೇರಿಗಳಿವೆ. ಚಿರತೆ ಕಂಡು ಕಾಲೇಜಿನ ವಿದ್ಯಾರ್ಥಿಗಳು ಆತಂಕಗೊಂಡಿದ್ದಾರೆ. [ಮಂಗಳೂರು : ಚಿರತೆ ಭೀತಿಯಲ್ಲೇ ಗ್ರಾಮಸ್ಥರ ಬದುಕು]

ಅರಣ್ಯ ಇಲಾಖೆ ಅಧಿಕಾರಿಗಳನ್ನು ಚಿರತೆಯನ್ನು ಸೆರೆ ಹಿಡಿಯಲು ನಿರ್ಧರಿಸಿದ್ದಾರೆ. ಬೆಂಗಳೂರಿನಿಂದ ಅರವಳಿಕೆ ತಜ್ಞರ ತಂಡವನ್ನು ಕರೆಸಲಾಗುತ್ತಿದೆ. ನಂತರ ಚಿರತೆಯನ್ನು ಸೆರೆ ಹಿಡಿಯಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.












Click it and Unblock the Notifications