ಯಲಹಂಕ ವ್ಯಾಪ್ತಿಯ ದಾಸನಪುರದಲ್ಲಿ ಚಿರತೆ ದಾಳಿಗೆ ಕರು ಬಲಿ: ಜನರಲ್ಲಿ ಹೆಚ್ಚಿದ ಆತಂಕ
ಜ್ಞಾನಭಾರತಿ, ಯಶವಂತಪುರ, ಯಲಹಂಕ ಸೇರಿದಂತೆ ವಿವಿಧ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಚಿರತೆ ಕಾಣಿಸಿಕೊಂಡಿದ್ದು, ಜನರಲ್ಲಿ ಆತಂಕ ಮೂಡಿಸಿದೆ.
ಬೆಂಗಳೂರು,ಫೆಬ್ರವರಿ21: ಬೆಂಗಳೂರು ನಗರದಲ್ಲಿ ಕಳೆದ ಆರು ತಿಂಗಳಿನಿಂದ ನಗರದ ಸುತ್ತಮುತ್ತ ಭಾಗದಲ್ಲಿ ಚಿರತೆಗಳು ಪ್ರತ್ಯಕ್ಷವಾಗುತ್ತಿದ್ದು, ಇದೀಗ ಯಲಹಂಕ ವಿಧಾನಸಭಾ ಕ್ಷೇತ್ರದ ದಾಸನಪುರ ವ್ಯಾಪ್ತಿಯಲ್ಲಿ ಚಿರತೆ ಕರುವನ್ನ ತಿಂದು ಹಾಕಿದೆ.
ಭಾನುವಾರ ರಾತ್ರಿ(ಫೆಬ್ರವರಿ 19) ಚಿರತೆ ಕರುವನ್ನ ತಿಂದು ಹಾಕಿರುವ ಘಟನೆ ನಡೆದಿದ್ದು, ಜ್ಞಾನಭಾರತಿ, ಯಶವಂತಪುರ, ಯಲಹಂಕ ಸೇರಿದಂತೆ ವಿವಿಧ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಚಿರತೆ ಕಾಣಿಸಿಕೊಂಡಿದ್ದು, ಜನರಲ್ಲಿ ಆತಂಕ ಮೂಡಿಸಿದೆ.

ಕಳದೆ ಐದು ದಿನಗಳ ಹಿಂದಷ್ಟೇ ದಾಸನಪುರ ಪಕ್ಕದ ರಾಮಾಂಜನೇಯ ಲೇಔಟ್ನಲ್ಲಿ ಎರಡು ಚಿರತೆಗಳು ಕಾಣಿಸಿಕೊಂಡಿದ್ದವು. ಇದಾದ ನಂತರ ಈಗ ಚಿರತೆ ಕರು ಒಂದನ್ನು ಅರ್ಧ ತಿಂದಿದೆ. ಇದು ಸ್ಥಳೀಯರಲ್ಲಿ ಮತ್ತಷ್ಟು ಆತಂಕ ಹೆಚ್ಚಿಸಿದ್ದು, ಜನರು ಹೊರಗಡೆ ಓಡಾಡಲು ಭಯ ಪಡುತ್ತಿದ್ದಾರೆ. ಸದ್ಯ ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಇಟ್ಟಿದ್ದು, ಬೋನ್ ಒಳಗೆ ಮೇಕೆ ಮರಿ ಇಟ್ಟು ವ್ಯವಸ್ಥೆ ಮಾಡಿದೆ ಎಂದು ತಿಳಿದು ಬಂದಿದೆ.

ಇನ್ನೂ ಕೆಲ ದಿನಗಳ ಯಶವಂತಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಗೊಂಗಡಿಪುರದಲ್ಲಿ ನಾಯಿಯನ್ನ ತಿಂದು ಕೆಲ ದೇಹದ ಭಾಗವನ್ನು ಬಿಟ್ಟು ಹೋಗಿದ್ದು, ನಾಯಿ ಸತ್ತಿರುವ ಜಾಗದಲ್ಲಿ ಚಿರತೆ ಹೆಜ್ಜೆ ಗುರುತುಗಳು ಪತ್ತೆಯಾಗಿತ್ತು. ಅಲ್ಲದೆ ಚಿರತೆಯ ಎರಡು ಮರಿಗಳನ್ನು ಸ್ಥಳೀಯರು ನೋಡಿದ್ದ, ಮನೆಯಿಂದ ಸಂಜೆ ಹೊರ ಬರಲು ಜನರು ಭಯ ಪಡುತ್ತಿದ್ದಾರೆ.












Click it and Unblock the Notifications