ದೇವೇಗೌಡರ ಮಾನಸ ಪುತ್ರ ಶರವಣಗೆ ಒಲಿಯುತ್ತಾ ಸಚಿವ ಸ್ಥಾನ?
Recommended Video

ಬೆಂಗಳೂರು, ಜೂನ್ 04: ಜೆಡಿಎಸ್ ವರಿಷ್ಠ ದೇವೇಗೌಡ ಅವರ ಪರಮಾಪ್ತ ವಿಧಾನಪರಿಷತ್ ಸದಸ್ಯ ಟಿ.ಎ.ಶರವಣ ಅವರಿಗೆ ಸಚಿವ ಸ್ಥಾನ ಒಲಿಯಲಿದೆ ಎಂಬ ಊಹಾಪೋಹ ಜೆಡಿಎಸ್ ರಾಜಕೀಯ ವಲಯದಲ್ಲಿ ಗಟ್ಟಿಯಾಗಿ ಹರಿದಾಡುತ್ತಿದೆ.
ದೇವೇಗೌಡ ಅವರರ ಮಾನಸಪುತ್ರರಂತೆಯೇ ಇರುವ ಶರವಣ ಅವರು ಪಕ್ಷಕ್ಕಾಗಿ ಸಾಕಷ್ಟು ಕಾರ್ಯ ಮಾಡಿದ್ದಾರೆ. ಚುನಾವಣೆಗಳಲ್ಲಿ ಆರ್ಥಿಕ ನೆರವು ಕೂಡಾ ನೀಡಿದ್ದಾರೆ ಎಂಬ ವಿಷಯವೂ ತಿಳಿದಿರುವುದೇ ಹಾಗಾಗಿ ಅವರಿಗೆ ಸಚಿವ ಸ್ಥಾನ ನೀಡಿ ಋಣಸಂಧಾಯ ಮಾಡುವ ಸಾಧ್ಯತೆ ಹೆಚ್ಚಿದೆ.
ಶರವಣ ಅವರೂ ಕೂಡ ಸಚಿವ ಸ್ಥಾನಕ್ಕಾಗಿ ದೊಡ್ಡಗೌಡರ ಬಳಿ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. ಅವರ ಕೃಪಾಕಟಾಕ್ಷದಿಂದಲೇ ವಿಧಾನಪರಿಷತ್ ಸದಸ್ಯ ಸ್ಥಾನ ಅಲಂಕರಿಸಿರುವ ಶರವಣ ಅವರು ಸಚಿವ ಸ್ಥಾನದ ಮೂಲಕ ರಾಜಕೀಯದ ಮತ್ತೊಂದು ಮೆಟ್ಟಿಲು ಏರುವ ಉಮೇದಿನಲ್ಲಿ ಇದ್ದಾರೆ.

ಆದರೆ ವಿಧಾನಸಭಾ ಸದಸ್ಯರಲ್ಲದಿರುವುದು ಶರವಣ ಅವರಿಗೆ ಸಚಿವ ಸ್ಥಾನ ಸಿಗುವುದರಲ್ಲಿ ಆಗಲಿರುವ ಹಿನ್ನಡೆ ಎನ್ನಲಾಗಿದೆ. ಅಲ್ಲದೆ ಅವರಿಗೆ ನೇರ ಚುನಾವಣಾ ರಾಜಕೀಯದ ಅನುಭವ ಇಲ್ಲದಿರುವುದೂ ಸಹ ಋಣಾತ್ಮಕವಾಗಿ ಪರಿಗಣಿಸಲಿದೆ ಎನ್ನಲಾಗಿದೆ.
ವಿಧಾನಪರಿಷತ್ ಸದಸ್ಯರಿಗೆ ಸಚಿವ ಸ್ಥಾನ ನೀಡಿದರೆ, ಉಳಿದ ಸದಸ್ಯರೂ ಕೂಡ ಸಚಿವ ಸ್ಥಾನಕ್ಕೆ ಬೇಡಿಕೆ ಇಡುವ ಸಾಧ್ಯತೆ ಇರುತ್ತದೆ. ಅಲ್ಲದೆ ಚುನಾವಣೆಯಲ್ಲಿ ಗೆದ್ದು ಬಂದ ಸದಸ್ಯರು ಶರವಣ ಆಯ್ಕೆಗೆ ವಿರೋಧ ವ್ಯಕ್ತಪಡಿಸುವ ಸಾಧ್ಯತೆಯೂ ಇರುತ್ತದೆ. ಹಾಗಾಗಿ ಶರವಣ ಕುರಿತು ಜೆಡಿಎಸ್ ಪಕ್ಷ ಯೋಚಿಸಿ ತೀರ್ಮಾನ ಮಾಡುವ ಸಾಧ್ಯತೆ ಹೆಚ್ಚಿದೆ.












Click it and Unblock the Notifications