ಪರಿಷತ್ ಚುನಾವಣೆ; ಬಿಜೆಪಿಗೆ 15 ಸೀಟು ಗುರಿ, 4 ತಂಡದಿಂದ ಯಾತ್ರೆ!
ಬೆಂಗಳೂರು, ನವೆಂಬರ್ 16; ಕೇಂದ್ರ ಚುನಾವಣಾ ಆಯೋಗ 25 ವಿಧಾನ ಪರಿಷತ್ ಸ್ಥಾನಗಳ ಚುನಾವಣೆಗೆ ದಿನಾಂಕ ಘೋಷಣೆ ಮಾಡಿದೆ. ಕರ್ನಾಟಕ ಬಿಜೆಪಿ ಪರಿಷತ್ ಚುನಾವಣೆಗೆ ಪಕ್ಷವನ್ನು ಸಂಘಟನೆ ಮಾಡಲು ಜನ ಸ್ವರಾಜ್ ಯಾತ್ರೆಯನ್ನು ಹಮ್ಮಿಕೊಂಡಿದೆ. ನವೆಂಬರ್ 19 ರಿಂದ 23ರ ತನಕ ಯಾತ್ರೆ ನಡೆಯಲಿದೆ.
ನವೆಂಬರ್ 16ರ ಮಂಗಳವಾರ ವಿಧಾನ ಪರಿಷತ್ ಚುನಾವಣೆಗೆ ಅಧಿಸೂಚನೆ ಪ್ರಕಟವಾಗಲಿದೆ. ಡಿಸೆಂಬರ್ 10ರಂದು ಚುನಾವಣೆ ನಡೆಯಲಿದ್ದು, 14 ರಂದು ಮತ ಎಣಿಕೆ ನಡೆಯಲಿದೆ. ಆಡಳಿತ ಪಕ್ಷ ಬಿಜೆಪಿಗೆ ಮೇಲ್ಮನೆಯಲ್ಲಿ ಬಹುಮತವಿಲ್ಲ. ಆದ್ದರಿಂದ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಗುರಿ ಇದೆ.
ಪರಿಷತ್ ಚುನಾವಣೆ; ಜೆಡಿಎಸ್ ಹೊಸ ಕಾರ್ಯತಂತ್ರ!
ಕರ್ನಾಟಕ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ, ಜಗದೀಶ್ ಶೆಟ್ಟರ್ ಮತ್ತು ಸಚಿವ ಕೆ. ಎಸ್. ಈಶ್ವರಪ್ಪ ನೇತೃತ್ವದ ತಂಡದಲ್ಲಿ ಸಂಸದರು, ಸಚಿವರು, ಶಾಸಕರು, ಬಿಜೆಪಿಯ ಪದಾಧಿಕಾರಿಗಳು ಇದ್ದಾರೆ. 4 ತಂಡ ನವೆಂಬರ್ 19 ರಿಂದ 23ರ ತನಕ ವಿವಿಧ ಜಿಲ್ಲೆಯಲ್ಲಿ ಪ್ರವಾಸ ಮಾಡಲಿದೆ.
ವಿಧಾನ ಪರಿಷತ್ ಚುನಾವಣೆ; ಸ್ಪರ್ಧಿಸಲು ಅರ್ಹತೆಗಳು
ರಾಜ್ಯದ ಬಿಜೆಪಿ ನಾಯಕರು ಒಟ್ಟು 4 ತಂಡಗಳಾಗಿ 'ಜನ ಸ್ವರಾಜ್ ಯಾತ್ರೆ'ಯನ್ನು ಕೈಗೊಳ್ಳಿದ್ದಾರೆ. ಪರಿಷತ್‌ನ 25 ಸ್ಥಾನಗಳ ಪೈಕಿ ಕನಿಷ್ಠ 15 ಸ್ಥಾನಗಳಲ್ಲಿ ಗೆಲ್ಲುವ ಗುರಿಯೊಂದಿಗೆ ಪಕ್ಷ ಸಂಘಟನೆಗಾಗಿ ಸಮಾವೇಶಗಳನ್ನು ನಡೆಸಿ ಪಕ್ಷಕ್ಕೆ ಬಲ ತುಂಬಲಾಗುತ್ತದೆ. ವಿವಿಧ ಜಿಲ್ಲೆಗಳಲ್ಲಿ ವಿವಿಧ ನಾಯಕರು ಯಾತ್ರೆ ಅಂಗವಾಗಿ ಸಂಚಾರ ನಡೆಸಲಿದ್ದಾರೆ. ತಂಡ ಸಂಚಾರ ನಡೆಸುವ ಜಿಲ್ಲೆಗಳ ವಿವರ ಹೀಗಿದೆ..
ವಿಧಾನ ಪರಿಷತ್ 25 ಸ್ಥಾನಕ್ಕೆ ಚುನಾವಣೆ ಘೋಷಣೆ

ತಂಡ-1; ನಳಿನ್ ಕುಮಾರ್ ಕಟೀಲ್
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೇತೃತ್ವದ ತಂಡದಲ್ಲಿ ಸಂಸದ ಪ್ರತಾಪ್ ಸಿಂಹ, ಭಗವಂತ ಖೂಬಾ, ಸಚಿವರಾದ ವಿ. ಸೋಮಣ್ಣ, ಆರಗ ಜ್ಞಾನೇಂದ್ರ ಮುರುಗೇಶ್ ನಿರಾಣಿ ಇದ್ದಾರೆ. ಉಳಿದಂತೆ ರಾಜೂಗೌಡ, ಎನ್. ಮಹೇಶ್, ಮಾಲೀಕಯ್ಯ ಗುತ್ತೇದಾರ್, ಸಿದ್ದರಾಜು, ಎಸ್. ಕೇಶವ ಪ್ರಸಾದ್ ತಂಡದ ಸದಸ್ಯರು.
ಈ ತಂಡ ನವೆಂಬರ್ 19ರಂದು ಕೊಪ್ಪಳ ಮತ್ತು ಬಳ್ಳಾರಿ. ನವೆಂಬರ್ 20 ರಂದು ರಾಯಚೂರು ಮತ್ತು ಯಾದಗಿರಿ. ನವೆಂಬರ್ 21 ರಂದು ಕಲಬುರಗಿ ಮತ್ತು ಬೀದರ್ ಜಿಲ್ಲೆಗಳಲ್ಲಿ ಪ್ರವಾಸ ಮಾಡಲಿದೆ.

ತಂಡ -2; ಬಿ. ಎಸ್. ಯಡಿಯೂರಪ್ಪ
ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ನೇತೃತ್ವದ ತಂಡದಲ್ಲಿ ಸಂಸದ ಪ್ರಹ್ಲಾದ್ ಜೋಶಿ, ಸಚಿವ ಗೋವಿಂದ ಕಾರಜೋಳ, ಶ್ರೀರಾಮುಲು ಇದ್ದಾರೆ. ಉಳಿದಂತೆ ತೇಜಸ್ವಿನಿ ಅನಂತ ಕುಮಾರ್, ಎಂ. ಬಿ. ನಂದೀಶ್, ಎನ್. ರವಿಕುಮಾರ್, ಕೆ. ಎಸ್. ನವೀನ್ ಸದಸ್ಯರು.
ಈ ತಂಡ ನವೆಂಬರ್ 19ರಂದು ಉತ್ತರ ಕನ್ನಡ ಮತ್ತು ಹಾವೇರಿ. ನವೆಂಬರ್ 20ರಂದು ಧಾರವಾಡ ಮತ್ತು ಗದಗ. ನವೆಂಬರ್ 21ರಂದು ಬಾಗಲಕೋಟೆ ಮತ್ತು ವಿಜಯಪುರ. ನವೆಂಬರ್ 22ರಂದು ಚಿಕ್ಕೋಡಿ ಮತ್ತು ಬೆಳಗಾವಿ ಜಿಲ್ಲೆಗೆ ಭೇಟಿ ನೀಡಲಿದೆ.

ತಂಡ -3; ಕೆ. ಎಸ್. ಈಶ್ವರಪ್ಪ
ಸಚಿವ ಕೆ. ಎಸ್. ಈಶ್ವರಪ್ಪ ನೇತೃತ್ವದ ತಂಡದಲ್ಲಿ ಸಂಸದೆ ಶೋಭಾ ಕರಂದ್ಲಾಜೆ, ಸಚಿವರಾದ ಆರ್. ಅಶೋಕ, ಎಸ್. ಟಿ. ಸೋಮಶೇಖರ್, ಹಾಲಪ್ಪ ಆಚಾರ್, ಎಸ್. ಅಂಗಾರ ಇದ್ದಾರೆ. ಅರವಿಂದ ಲಿಂಬಾವಳಿ, ಎಸ್. ಶಂಕರಪ್ಪ, ಅಶ್ವತ್ಥ ನಾರಾಯಣ, ವಿನಯ್ ಬಿದರೆ ಸದಸ್ಯರು.
ಈ ತಂಡ ನವೆಂಬರ್ 19ರಂದು ಶಿವಮೊಗ್ಗ, ಚಿಕ್ಕಮಗಳೂರು. ನವೆಂಬರ್ 20ರಂದು ಉಡುಪಿ, ಮಂಗಳೂರು. ನವೆಂಬರ್ 21ರಂದು ಕೊಡಗು, ಮೈಸೂರು. ನವೆಂಬರ್ 22ರಂದು ಚಾಮರಾಜನಗರ, ಮಂಡ್ಯ ಮತ್ತು ನವೆಂಬರ್ 23ರಂದು ಹಾಸನ ಜಿಲ್ಲೆಯಲ್ಲಿ ಸಂಚಾರ ನಡೆಸಲಿವೆ.

ತಂಡ -4; ಜಗದೀಶ್ ಶೆಟ್ಟರ್
ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ನೇತೃತ್ವದ ತಂಡದಲ್ಲಿ ಸಂಸದ ಎ. ನಾರಾಯಣ ಸ್ವಾಮಿ. ಸಚಿವರಾದ ಡಾ. ಸಿ. ಎನ್. ಅಶ್ವತ್ಥ ನಾರಾಯಣ, ಬೈರತಿ ಬಸವರಾಜ, ಕೆ. ಗೋಪಾಲಯ್ಯ ಇದ್ದಾರೆ. ಉಳಿದಂತೆ ಬಿ. ವೈ. ವಿಜಯೇಂದ್ರ, ಎಂ. ರಾಜೇಂದ್ರ, ಮಹೇಶ್ ಟೆಂಗಿನಕಾಯಿ, ಮುನಿರಾಜು ಗೌಡ ಸದಸ್ಯರು.
ಈ ತಂಡ ನವೆಂಬರ್ 19ರಂದು ದಾವಣಗೆರೆ ಮತ್ತು ಚಿತ್ರದುರ್ಗ. ನವೆಂಬರ್ 20ರಂದು ತುಮಕೂರು ಮತ್ತು ರಾಮನಗರ. ನವೆಂಬರ್ 21ರಂದು ಕೋಲಾರ ಮತ್ತು ಚಿಕ್ಕಬಳ್ಳಾಪುರ. ನವೆಂಬರ್ 22ರಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪ್ರವಾಸ ಮಾಡಲಿದೆ.