• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆದರೂ, ಸಿಎಂ ತೋರಿದ ಅಸಾಧಾರಣ ರಾಜಕೀಯಕ್ಕೆ ಬಿಲ ಸೇರಿದ ಅತೃಪ್ತರು

|
Google Oneindia Kannada News

ಆಕಡೆ, ಕೊರೊನದ ಇಂತಹ ಸಮಯದಲ್ಲೂ ಇವರಿಗೆ ರಾಜಕೀಯ ಮುಖ್ಯವಾಯಿತು, ಇವರಿಗೆಲ್ಲಾ ಅಧಿಕಾರವೇ ಹೆಚ್ಚಾಯಿತು ಎನ್ನುವ ಮಾತು ಸಾರ್ವಜನಿಕ ವಲಯದಲ್ಲಿ ಬರಬಾರದು. ಇನ್ನೊಂದು ಕಡೆ, ತಮ್ಮ ವಿರುದ್ದ ಕತ್ತಿ ಮಸೆಯುತ್ತಿರುವವರನ್ನೂ ಹೆಡೆಮುರಿ ಕಟ್ಟಬೇಕು.

Recommended Video

   ಯಡಿಯೂರಪ್ಪ ಚಾಣಾಕ್ಷ ನಡೆಗೆ ಬಿಲ ಸೇರಿಕೊಂಡ BJP ಅತೃಪ್ತರು | Oneindia Kannada

   ಹೌದು, ಅಂತಹ ಸಂದಿಗ್ದ ಪರಿಸ್ಥಿತಿಯಲ್ಲಿದ್ದರು ಮುಖ್ಯಮಂತ್ರಿ ಯಡಿಯೂರಪ್ಪ. ಸಿಎಂ ಸ್ಥಾನದಿಂದ ಅವರನ್ನು ಕೆಳಗಿಳಿಸುವ ಹುನ್ನಾರ ಅವರು ಪ್ರಮಾಣವಚನ ಸ್ವೀಕರಿಸಿದ ಒಂದು ವಾರದಲ್ಲೇ ಆರಂಭವಾಗಿತ್ತು. ಆದರೆ, ಯಾವ ಅಡೆತಡೆಗೂ ಅಂಜದೇ ಬಿಎಸ್ವೈ ಇಂದಿಗೂ ಅದೇ ಹಳೇ ಹುಮ್ಮಸ್ಸಿನಿಂದ ಕೆಲಸ ನಿರ್ವಹಿಸುತ್ತಿದ್ದಾರೆ.

   ದೆಹಲಿ ನಾಯಕರ ಮನೆ ಗೇಟ್ ಮುಟ್ಟಿ ಫೋಟೋ ತೆಗಿಸಿಕೊಂಡು ಬರೋದುದೆಹಲಿ ನಾಯಕರ ಮನೆ ಗೇಟ್ ಮುಟ್ಟಿ ಫೋಟೋ ತೆಗಿಸಿಕೊಂಡು ಬರೋದು

   ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರೇ ಹೇಳುವಂತೆ, ಯಡಿಯೂರಪ್ಪನವರಿಗೆ ಪರ್ಯಾಯ ಶಕ್ತಿ ಬಿಜೆಪಿಯಲ್ಲಿ ಇಲ್ಲ. ಅದನ್ನು ಅರಿತೇ, ರಾಜ್ಯ ಮಟ್ಟದ ಯಾವುದೇ ಒತ್ತಡಕ್ಕೆ ಮಣೆಹಾಕದ ಹೈಕಮಾಂಡ್, ಕರ್ನಾಟಕದಲ್ಲಿ ಬಿಎಸ್ವೈ ಅವರೇ ನಮ್ಮ ನಾಯಕ ಎಂದು ಸುಮ್ಮನಾಗುತ್ತಿರುವುದು ಗೊತ್ತಿರುವ ವಿಚಾರ.

    'ನಾವು ಎಲ್ಲದಕ್ಕೂ ಮುಹೂರ್ತವಿಟ್ಟಿದ್ದು ಇಲ್ಲೇ, ಈಗ ಹೊಸದಾಗಿ ಇಟ್ಟಾಗಿದೆ'- ಎಚ್‌. ವಿಶ್ವನಾಥ್ 'ನಾವು ಎಲ್ಲದಕ್ಕೂ ಮುಹೂರ್ತವಿಟ್ಟಿದ್ದು ಇಲ್ಲೇ, ಈಗ ಹೊಸದಾಗಿ ಇಟ್ಟಾಗಿದೆ'- ಎಚ್‌. ವಿಶ್ವನಾಥ್

   ಕೊರೊನಾ ಹಾವಳಿಯ ನಡುವೆ, ಬಿಜೆಪಿಯೊಳಗಿನ ರಾಜಕೀಯ ಮೇಲಾಟದ ಇಂಟರ್ನಲ್ ಇಂಟರೆಸ್ಟಿಂಗ್ ಸ್ಟೋರಿಗಳು ಬೇಕಾದಷ್ಟಿವೆ. ಅದರಲ್ಲಿ ಒಂದು ಯಡಿಯೂರಪ್ಪನವರನ್ನು ಕೆಳಗಿಳಿಸಲು ಭಿನ್ನಮತೀಯರು ಹೂಡಿದ ದಾಳ ಎಂದರೆ ಬಿಜೆಪಿಯ 75+ ವಯಸ್ಸಿನವರು ಅಧಿಕಾರದಲ್ಲಿ ಇರಬಾರದು ಎನ್ನುವುದು..

    ಎಲ್.ಕೆ.ಅಡ್ವಾಣಿ, ಮುರಳಿ ಮನೋಹರ್ ಜೋಷಿ, ಜಸ್ವಂತ್ ಸಿಂತ್ ಮುಂತಾದ ನಾಯಕರು

   ಎಲ್.ಕೆ.ಅಡ್ವಾಣಿ, ಮುರಳಿ ಮನೋಹರ್ ಜೋಷಿ, ಜಸ್ವಂತ್ ಸಿಂತ್ ಮುಂತಾದ ನಾಯಕರು

   ಎಲ್.ಕೆ.ಅಡ್ವಾಣಿ, ಮುರಳಿ ಮನೋಹರ್ ಜೋಷಿ, ಜಸ್ವಂತ್ ಸಿಂತ್ ಮುಂತಾದ ಪಕ್ಷದ ಬೇರುಗಳನ್ನೇ 75+ ಎನ್ನುವ ಕಾರಣಕ್ಕಾಗಿ ಮಾರ್ಗದರ್ಶಕ ಮಂಡಳಿ ಎನ್ನುವ ಹೆಸರಿನಲ್ಲಿ ಬಿಜೆಪಿ ಮಠ ಸೇರಿಸಿತ್ತು. ವಯಸ್ಸಿನ ವಿಚಾರ ಬಿಜೆಪಿಯಲ್ಲಿ ಮುಖ್ಯ ವಾಹಿನಿಗೆ ಬಂದಿದ್ದೇ ಮೋದಿ/ಶಾ ಆಡಳಿತದ ಅವಧಿಯಲ್ಲಿ. ಅದನ್ನೇ ನೆಪವಾಗಿ ಇಟ್ಟುಕೊಂಡು, ಯಡಿಯೂರಪ್ಪನವರ ಮೇಲೆ ಪ್ರಯೋಗಿಸಲು ಅತೃಪ್ತರು ಹೊರಟಿದ್ದರು.

    ಪುತ್ರ ವಿಜಯೇಂದ್ರ ಅವರ ಆಡಳಿತದಲ್ಲಿನ ಹಸ್ತಕ್ಷೇಪ

   ಪುತ್ರ ವಿಜಯೇಂದ್ರ ಅವರ ಆಡಳಿತದಲ್ಲಿನ ಹಸ್ತಕ್ಷೇಪ

   ವಯಸ್ಸು ಮತ್ತು ಇತರ ಕಾರಣಗಳಾದ ಪುತ್ರ ವಿಜಯೇಂದ್ರ ಅವರ ಆಡಳಿತದಲ್ಲಿನ ಹಸ್ತಕ್ಷೇಪ, ಸ್ವಪಕ್ಷೀಯರಿಗೆ ಸಿಗದ ಮರ್ಯಾದೆ, ಕೊರೊನಾ ನಿರ್ವಹಣೆಯಲ್ಲಿನ ವೈಫಲ್ಯತೆ, ವಯಸ್ಸಾಗಿರುವುದರಿಂದ ರಾಜ್ಯಾದ್ಯಂತ ಪ್ರವಾಸ ಮಾಡದಿರುವುದು, ಈ ಎಲ್ಲಾ ವಿಚಾರಗಳನ್ನು ಇಟ್ಟುಕೊಂಡು ದೆಹಲಿ ದೊರೆಗಳಿಗೆ ದೂರಿನ ಮೇಲೆ ದೂರು ಹೋಗಿತ್ತು. ಆದರೆ, ಇದ್ಯಾವುದಕ್ಕೂ ವರಿಷ್ಠರು ಸೊಪ್ಪು ಹಾಕದೇ ಇದ್ದಿದ್ದರಿಂದ ಅತೃಪ್ತರು ಬರೀಗೈಯಲ್ಲಿ ವಾಪಸ್ ಆದರು. ಇದಾದ ಮೇಲೆ, ಯಡಿಯೂರಪ್ಪನವರು ಆಡಿದ ಗೇಂ ಪ್ಲ್ಯಾನ್ ಭಿನ್ನಮತೀಯರ ಲೆಕ್ಕಾಚಾರವನ್ನು ತಲೆಕೆಳಗಾಗಿಸಿತು.

    ಯಡಿಯೂರಪ್ಪ ಜಿಲ್ಲಾ ಪ್ರವಾಸ ಹೋಗುವುದಾಗಿ ಪ್ರಕಟಿಸಿದರು

   ಯಡಿಯೂರಪ್ಪ ಜಿಲ್ಲಾ ಪ್ರವಾಸ ಹೋಗುವುದಾಗಿ ಪ್ರಕಟಿಸಿದರು

   ತಮ್ಮ ವಯಸ್ಸಿನ ವಿಚಾರವನ್ನು ಹೈಕಮಾಂಡ್ ಮುಂದೆ ಅತೃಪ್ತರು ಇಟ್ಟಿದ್ದರಿಂದ, ಯಡಿಯೂರಪ್ಪ ಜಿಲ್ಲಾ ಪ್ರವಾಸ ಹೋಗುವುದಾಗಿ ಪ್ರಕಟಿಸಿದರು. ಅದರ ಭಾಗವಾಗಿ ತುಮಕೂರು ಜಿಲ್ಲೆಗೆ ಹೋಗಿ, ಕೋವಿಡ್ ನಿರ್ವಹಣೆಯನ್ನು ಪರಿಶೀಲಿಸಿದರು. ಸಿದ್ದಗಂಗಾ ಮಠಕ್ಕೂ ಭೇಟಿ ನೀಡಿದರು. ಸಾಲುಸಾಲು ಸಭೆಗಳನ್ನು ನಡೆಸಿ, ಕೋವಿಡ್ ನಿರ್ವಹಣೆಯ ವಿಚಾರವನ್ನು ಹತೋಟಿಗೆ ತೆಗೆದುಕೊಂಡರು.

    ಸದ್ಯದ ಮಟ್ಟಿಗೆ ಯಡಿಯೂರಪ್ಪ ಕಂಪ್ಲೀಟ್ ಸೇಫ್

   ಸದ್ಯದ ಮಟ್ಟಿಗೆ ಯಡಿಯೂರಪ್ಪ ಕಂಪ್ಲೀಟ್ ಸೇಫ್

   ಮುಖ್ಯಮಂತ್ರಿಗಳ ಕಾರ್ಯಕ್ಷಮತೆಯ ಬಗ್ಗೆ ನಮಗೆ ಯಾವುದೇ ಸಂದೇಹವಿಲ್ಲ ಎನ್ನುವ ಮಾತನ್ನು ಕೆಪಿಸಿಸಿ ಅಧ್ಯಕ್ಷರೇ ಹೇಳಿದ್ದನ್ನು ಈ ಸಂದರ್ಭದಲ್ಲಿ ಸ್ಮರಿಸಿಕೊಳ್ಳಬಹುದು. ಯಾವ ವಯಸ್ಸಿನ ವಿಚಾರವನ್ನು ಇಟ್ಟುಕೊಂಡು ಹೈಕಮಾಂಡ್ ಮುಂದೆ ಹೋಗಿದ್ದರೋ, ಅವರೆಲ್ಲಾ ತಲೆತಗ್ಗಿಸುವಂತೆ ಈ ಇಳೀ ವಯಸ್ಸಿನಲ್ಲೂ ಯಡಿಯೂರಪ್ಪ ಚುರುಕಿನಿಂದ ಕೆಲಸ ಮಾಡುತ್ತಾ, ಸಚಿವರು/ಅಧಿಕಾರಿಗಳಿಗೆ ಬಿಸಿಮುಟ್ಟಿಸುತ್ತಾ ಆಡಳಿತ ನಡೆಸುತ್ತಿದ್ದಾರೆ. ಹಾಗಾಗಿ, ಸದ್ಯದ ಮಟ್ಟಿಗೆ ಯಡಿಯೂರಪ್ಪ ಕಂಪ್ಲೀಟ್ ಸೇಫ್.

   English summary
   Leaders Didn't Successful in Changing Yediyurappa from CM Post, Ruling out leadership change, Karnataka Chief Minister B S Yediyurappa asserted he will remain in the post for the remaining over two year period and complete the term, and there was no confusion regarding this within the ruling BJP.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X