Lawyer Jagadish: ಲಾಯರ್ ಜಗದೀಶ್‌ಗೆ ದರ್ಶನ್ ಅಭಿಮಾನಿಗಳಿಂದ ಬಿತ್ತು ಗೂಸಾ ?!
ಎಲ್ಲಾ ವಿಷಯಗಳಿಗೂ ರಿಯಾಕ್ಟ್ ಮಾಡುತ್ತಿದ್ದ ಹಾಗೂ ವಿಡಿಯೋಗಳ ಮೂಲಕ ವೈರಲ್ ಆಗುತ್ತಿದ್ದ ಲಾಯರ್ ಜಗದೀಶ್ ಅವರಿಗೆ ನಟ ದರ್ಶನ್ ಅವರ ಅಭಿಮಾನಿಗಳು ಗೂಸಾ ಕೊಟ್ಟಿದ್ದಾರೆ ಎನ್ನಲಾಗಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕಳೆದ ಕೆಲವು ದಿನಗಳಿಂದ ನಟ ದರ್ಶನ್ ಸೇರಿದಂತೆ ಹಲವರ ಬಗ್ಗೆ ಲಾಯರ್ ಜಗದೀಶ್ ಅವರು ಮಾತನಾಡಿದ್ದರು. ಇದೀಗ ಗುರುವಾರ ದರ್ಶನ್ ಅವರ ಅಭಿಮಾನಿಗಳು ಲಾಯರ್ ಜಗದೀಶ್‌ಗೆ ಹೊಡೆದಿದ್ದಾರೆ ಎನ್ನಲಾಗಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಮೊದಲ ದರ್ಶನ್ ಪರ ಮಾತನಾಡಿದ್ದ ಲಾಯರ್ ಜಗದೀಶ್ ಅವರು ಇತ್ತೀಚಿನ ದಿನಗಳಲ್ಲಿ ದರ್ಶನ್ ಅವರ ಅಭಿಮಾನಿಗಳು ಕೋಪಗೊಳ್ಳುವಂತೆ ಮಾತನಾಡಿದ್ದರು. ಇದೇ ಕಾರಣಕ್ಕೆ ಲಾಯರ್ ಜಗದೀಶ್ ಅವರ ಮೇಲೆ ಹಲ್ಲೆ ನಡೆದಿದೆ ಎನ್ನಲಾಗಿದೆ. ಆದರೆ ಜಗದೀಶ್ ಅವರು ಹಲವು ವಿಷಯಗಳ ಬಗ್ಗೆ ಹೋರಾಟ ಮಾಡಿದ್ದೂ ಇದೆ.
ಕನ್ನಡ ಬಿಗ್‌ಬಾಸ್ ಸೀಸನ್ 11ರ ಸ್ಪರ್ಧಿ ಲಾಯರ್ ಜಗದೀಶ್ ಅವರಿಗೆ ಆರೇಳು ಜನ ಸೇರಿಕೊಂಡು ಗುರುವಾರ ಹೊಡೆದಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ. ಲಾಯರ್ ಜಗದೀಶ್ ಹಾಗೂ ಅಪರಿಚಿತ ಗುಂಪಿನ ನಡುವೆ ಮಾತಿನ ಚಕಮಕಿ ಹಾಗೂ ತಳ್ಳಾಟವಾಗಿದೆ. ಕೆಲವರು ಈ ಸಂದರ್ಭದಲ್ಲಿ ಲಾಯರ್ ಜಗದೀಶ್ ಅವರನ್ನು ಹೊಡೆಯದಂತೆ ತಡೆಯುವುದಕ್ಕೂ ಪ್ರಯತ್ನಪಟ್ಟಿದ್ದಾರೆ. ಜಗದೀಶ್ ಅವರ ಟೀ ಶರ್ಟ್ ಹಿಡಿದು ತಳ್ಳಾಡಲಾಗಿದೆ. ಅಲ್ಲದೆ ಟೀ ಶರ್ಟ್ ಕಿತ್ತು ಹಾಕಲಾಗಿದ್ದು, ಕೆಲವರು ಜಗದೀಶ್‌ಗೆ ಏಟು ಕೊಟ್ಟಿದ್ದಾರೆ.

ದರ್ಶನ್ ಅಭಿಮಾನಿಗಳಿಂದ ಸಂಭ್ರಮ: ಈ ವಿಡಿಯೋವನ್ನು ನೋಡಿ ದರ್ಶನ್ ಅಭಿಮಾನಿಗಳು ಕಮೆಂಟ್‌ನ ಮೂಲಕ ಸಂತೋಷ ಹಂಚಿಕೊಳ್ಳುತ್ತಿದ್ದಾರೆ. ಹೌದು ಡಿ ಬಾಸ್‌ನ ಬಗ್ಗೆ ಮಾತನಾಡಿದ್ದಕ್ಕೆ ಸರಿಯಾಗಿಯೇ ಆಗಿದೆ. ಇನ್ಮುಂದೆಯಾದರೂ ಡಿ ಬಾಸ್ ಹಾಗೂ ಅವರ ಅಭಿಮಾನಿಗಳ ತಂಟೆಗೆ ಬರಬೇಡಿ ಅಂತ ದರ್ಶನ್ ಅಭಿಮಾನಿಗಳು ಕಮೆಂಟ್ ಮಾಡಿದ್ದಾರೆ.
ವಿಡಿಯೋ ಮೂಲಕ ಲಾಯರ್ ಜಗದೀಶ್ ಸ್ಪಷ್ಟನೆ
ಇನ್ನು ಲಾಯರ್ ಜಗದೀಶ್ ಅವರಿಗೆ ಹಲ್ಲೆ ಮಾಡಲಾಗಿದೆ ಎನ್ನುವ ವಿಡಿಯೋ ವೈರಲ್ ಆಗಿರುವ ಬೆನ್ನಲ್ಲೇ ಈ ಸಂಬಂಧ ವಿಡಿಯೋ ಮೂಲಕ ಲಾಯರ್ ಜಗದೀಶ್ ಅವರು ಸ್ಪಷ್ಟನೆ ಕೊಟ್ಟಿದ್ದಾರೆ ಎನ್ನಲಾಗಿರುವ ವಿಡಿಯೋ ಸಹ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಮಾತನಾಡಿರುವ ಅವರು ಬೆಂಗಳೂರಿನ ಕೊಡಿಗೆಹಳ್ಳಿ ವ್ಯಾಪ್ತಿಯ ವಿರೂಪಾಕ್ಷಪುರ ಗೇಟ್ ಸಮೀಪದ ನಮ್ಮ ಮನೆಯ ಕಾಂಪ್ಲೆಕ್ಸ್‌ನ ಮುಂಭಾಗದಲ್ಲಿ ರೋಡ್ ಬ್ಲಾಕ್ ಆಗಿರುವ ಬಗ್ಗೆ ನಾನು ಪೊಲೀಸರಿಗೆ ದೂರು ನೀಡಿದ್ದೆ. ಈ ಭಾಗದಲ್ಲಿ ಅಣ್ಣಮ್ಮ ದೇವಿಯ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ಇದರಿಂದ ನಾವು ಇರುವ ಏರಿಯಾದ ರಸ್ತೆ ಬ್ಲಾಕ್ ಆಗಿದೆ. ಇದರ ಬಗ್ಗೆ ಪೊಲೀಸರಿಗೆ ಕಂಪ್ಲೇಂಟ್ ಮಾಡಿದ್ದೆ.
ಬೆಳಗ್ಗೆ ವಾಕಿಂಗ್ ಹೋದಾಗ 40 ಜನ ಪುಂಡರು ನನ್ನ ಜೊತೆ ಜಗಳ ಮಾಡಿದ್ದಾರೆ. ಈ ಪುಂಡರನ್ನು ಪೊಲೀಸರೇ ಕಳೆಸಿದ್ದಾರೆ ಎನ್ನುವ ಬಗ್ಗೆ ನನಗೆ ಅನುಮಾನ ಇದೆ ಅಂತಲೂ ಅವರು ಆರೋಪ ಮಾಡಿದ್ದಾರೆ.












Click it and Unblock the Notifications