ರಾಜ್ಯದ ಈ ಜಿಲ್ಲೆಯಲ್ಲಿ ಭೂಮಿ ಬೆಲೆ & ಮನೆ ಬಾಡಿಗೆ ಹೆಚ್ಚಳ, ಸರ್ಕಾರಿ ನೌಕರರ ಹೊಸ ಡಿಮ್ಯಾಂಡ್!
Bengaluru South land Price Hike:ರಾಜ್ಯದ ಈ ಭಾಗದಲ್ಲಿ ಏಕಾಏಕಿ ಭೂಮಿ ಬೆಲೆ ಹಾಗೂ ಬಾಡಿಗೆ ಬೆಲೆಯೂ ಹೆಚ್ಚಳವಾಗಿದೆ. ಇದರೊಂದಿಗೆ ಸರ್ಕಾರಿ ನೌಕರರು ಕರ್ನಾಟಕ ಸರ್ಕಾರಕ್ಕೆ ವಿಶೇಷವಾದ ಮನವಿಯೊಂದನ್ನು ಮಾಡಿದ್ದಾರೆ. ಇದು ಸರ್ಕಾರಕ್ಕೆ ಹೊಸ ತಲೆನೋವಾಗಿಯೂ ಪರಿಣಮಿಸಿದೆ. ಸರ್ಕಾರಿ ನೌಕರರು ಸರ್ಕಾರಕ್ಕೆ ಕೊಟ್ಟಿರುವ ಬೇಡಿಕೆ ಏನು ಹಾಗೂ ಬೆಂಗಳೂರು ಹೊರತುಪಡಿಸಿ ಯಾವ ಜಿಲ್ಲೆಯಲ್ಲಿ ಆಸ್ತಿ ಮಾರಾಟ ಹೆಚ್ಚಳವಾಗಿದೆ ಎನ್ನುವ ಸಂಪೂರ್ಣ ವಿವರ ಇಲ್ಲಿದೆ.
ಬೆಂಗಳೂರಿನಲ್ಲಿ ಭೂಮಿ ಬೆಲೆ ಹೆಚ್ಚಳವಾಗುವುದು ಹಾಗೂ ಪ್ರಾಪರ್ಟಿ ಬೆಲೆ, ಬಾಡಿಗೆ ಹೆಚ್ಚಳವಾಗುವುದು ಮಾಮೂಲಿ. ಆದರೆ ಇದೀಗ ಬೆಂಗಳೂರು ಹೊರತುಪಡಿಸಿ ಮತ್ತು ಬೆಂಗಳೂರಿನ ಸಮೀಪದಲ್ಲೇ ಇರುವ ಮತ್ತೊಂದು ಪ್ರಮುಖ ನಗರದಲ್ಲಿ ಭೂಮಿ, ಮನೆಗಳ ಬಾಡಿಗೆ ಹೆಚ್ಚಳವಾಗಿದೆ. ಅಲ್ಲದೇ ಸರ್ಕಾರಕ್ಕೆ ಪ್ರಮುಖ ಬೇಡಿಕೆಯೊಂದನ್ನು ಸರ್ಕಾರಿ ನೌಕರರು ಸಲ್ಲಿಸಿದ್ದಾರೆ. ಈ ಮೂಲಕ ಸರ್ಕಾರದ ಆದೇಶದಿಂದಲೇ ಸರ್ಕಾರಿ ನೌಕರರು ಸಂಕಷ್ಟ ಅನುಭವಿಸುತ್ತಿರುವುದಾಗಿ ಹೇಳುತ್ತಿದ್ದು. ಅದಕ್ಕೆ ಪರಿಹಾರವನ್ನು ಕೇಳುತ್ತಿದ್ದಾರೆ.

ಹೌದು ಬೆಂಗಳೂರಿನ ಸಮೀಪದ ಜಿಲ್ಲೆಯಾಗಿರುವ ರಾಮನಗರ ಜಿಲ್ಲೆಯ ಹೆಸರು ಬೆಂಗಳೂರು ದಕ್ಷಿಣ ಎಂದು ಬದಲಾಯಿಸಿ (ಮರುನಾಮಕರಣ) ಮಾಡಿದ ಮೇಲೆ ಜಿಲ್ಲೆಯ ಸರ್ಕಾರಿ ನೌಕರರು ಸರ್ಕಾರಕ್ಕೆ ಹೊಸ ಬೇಡಿಕೆಯನ್ನು ಮಾಡಿದ್ದಾರೆ. ಇದು ಸರ್ಕಾರಕ್ಕೂ ಅಚ್ಚರಿಯನ್ನುಂಟು ಮಾಡಿದೆ. ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆಯೆಂದು ಮರುನಾಮಕರಣ ಮಾಡಿದ ಮೇಲೆ ಈ ಭಾಗದಲ್ಲಿ ಭೂಮಿ ಬೆಲೆ ಭರ್ಜರಿ ಹೆಚ್ಚಳವಾಗಿದೆ. ಇದು ರಿಯಲ್ ಎಸ್ಟೇಟ್‌ಗೆ ಹೊಸ ಬೂಸ್ಟ್ ಕೊಟ್ಟಿದೆ. ಇದರಿಂದ ಸರ್ಕಾರಿ ನೌಕರರು ಮನೆ ಬಾಡಿಗೆ ಭತ್ಯೆ (HRI) ಹೆಚ್ಚಳ ಮಾಡುವಂತೆ ಮನವಿ ಮಾಡಿದ್ದಾರೆ.
ಇದಕ್ಕೆ ಮುಖ್ಯ ಕಾರಣ ರಿಯಲ್ ಎಸ್ಟೇಟ್ ಬೂಸ್ಟ್. ಹೆಸರು ಬದಲಾವಣೆ ಮಾಡಿದ ಮೇಲೆ ರಿಯಲ್ ಎಸ್ಟೇಟ್‌ನಿಂದ ಮನೆಗಳ ಬಾಡಿಗೆ ದುಬಾರಿಯಾಗಿದೆ. ಅಲ್ಲದೇ ವಾಣಿಜ್ಯ ಅಂಗಡಿಗಳ ಬಾಡಿಗೆ ಪ್ರಮಾಣವೂ ಹೆಚ್ಚಾಗುತ್ತಿದೆ ಅಂತಾ ಸರ್ಕಾರಿ ನೌಕರರು ಹೇಳಿದ್ದಾರೆ.
ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಎರಡು ಪ್ರಮುಖ ಜಿಲ್ಲೆಗಳ ಹೆಸರು ಬದಲಾವಣೆ ಆಗಿದೆ. ಮೊದಲನೆಯದಾಗಿ ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಎಂದು ಬದಲಾವಣೆ ಮಾಡಲಾಯಿತು. ನಂತರ ಬೆಂಗಳೂರು ಗ್ರಾಮಾಂತರ ಪ್ರದೇಶವನ್ನು ಬೆಂಗಳೂರು ಉತ್ತರ ಎಂದು ಬದಲಾವಣೆ ಮಾಡಲಾಯಿತು. ಅಲ್ಲದೇ ಇದೀಗ ದಕ್ಷಿಣ ಕನ್ನಡ ಜಿಲ್ಲೆಯನ್ನು ಮಂಗಳೂರು ಜಿಲ್ಲೆ ಎಂದು ಬದಲಾವಣೆ ಮಾಡುವುದಕ್ಕೆ ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆದಿದೆ. ಈ ರೀತಿ ಜಿಲ್ಲೆಗಳ ಹೆಸರನ್ನು ಬದಲಾವಣೆ ಮಾಡುತ್ತಿರುವುದರಿಂದ ಕೆಲವು ಭಾಗದಲ್ಲಿ ರಿಯಲ್ ಎಸ್ಟೇಟ್‌ಗೆ ಭರ್ಜರಿ ಬಂದಿದ್ದು. ಸಹಜವಾಗಿಯೇ ಭೂಮಿ, ಆಸ್ತಿ ಮತ್ತು ಮನೆ ಬಾಡಿಗೆ ಭರ್ಜರಿ ಹೆಚ್ಚಳವಾಗಿದೆ.
ಇದೀಗ ನೂತನ ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲೂ ಭೂಮಿ ಮತ್ತು ಬಾಡಿಗೆ ಹೆಚ್ಚಾಗಿದೆ. ಈ ಭಾಗದಲ್ಲಿ ಸಿಂಗಲ್ ಬೆಡ್ ರೂಂ ಮನೆ ಬಾಡಿಗೆ ಕನಿಷ್ಠ 6 ಸಾವಿರ ರೂಪಾಯಿಯಿಂದ ಗರಿಷ್ಠ 9 ಸಾವಿರ ರೂಪಾಯಿಯ ವರೆಗೆ ಹೆಚ್ಚಳವಾಗಿದೆ. ಇದರೊಂದಿಗೆ ಡಬಲ್ ಬೆಡ್ ರೂ, ಭೋಗ್ಯಕ್ಕೆ (ಲೀಸ್) ಮನೆಗಳ ಮೊತ್ತವೂ ಹೆಚ್ಚಳವಾಗಿದೆ. ಮನೆಗಳ ಬಾಡಿಗೆ ಜಾಸ್ತಿ ಆಗಿರುವುದರಿಂದ ಸರ್ಕಾರಿ ನೌಕರರಿಗೆ ಮನೆ ಬಾಡಿಗೆ ಭತ್ಯೆ ಹೆಚ್ಚಳ ಮಾಡಬೇಕು ಎನ್ನುವ ಆಗ್ರಹ ಕೇಳಿ ಬಂದಿದೆ.
ಈಗ ಇರುವ ಮನೆ ಭತ್ಯೆ ಮೊತ್ತವು ಕಡಿಮೆ ಇದೆ ಎಂದು ಸರ್ಕಾರಿ ನೌಕರರು ಹೇಳಿದ್ದಾರೆ. ಈ ನಿಟ್ಟಿನಲ್ಲಿ ಸರ್ಕಾರ ಯಾವ ರೀತಿಯ ನಿರ್ಧಾರ ತೆಗೆದುಕೊಳ್ಳಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.












Click it and Unblock the Notifications