ಚಿತ್ರಗಳು : ಕಡೂರಿನಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಗ್ರಾಮ ವಾಸ್ತವ್ಯ

Posted By: Gururaj
Subscribe to Oneindia Kannada

ಚಿಕ್ಕಮಗಳೂರು, ನವೆಂಬರ್ 19 : ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳ್ಕರ್ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಕಲ್ಕರೆ ಗೊಲ್ಲಹರಟ್ಟಿ ಗ್ರಾಮದಲ್ಲಿ ವಾಸ್ತವ್ಯ ಮಾಡಿದರು.

ಶನಿವಾರ ಗ್ರಾಮ ವಾಸ್ತವ್ಯದ ಬಳಿಕ ಭಾನುವಾರ ಇಂದಿರಾ ಗಾಂಧಿ ಅವರ ಜನ್ಮ ಶತಮಾನೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ 'ಇಂದಿರಾ ನಮನ' ಕಾರ್ಯಕ್ರಮದಲ್ಲಿ ಅವರು ಪಾಲ್ಗೊಂಡಿದ್ದರು.

ಲಕ್ಷ್ಮಿ ಹೆಬ್ಬಾಳ್ಕರ್ ಮರಾಠಿ ಪ್ರೀತಿ, ಕನ್ನಡಿಗರು ಮತ್ತೆ ಗರಂ

ಕಡೂರು ತಾಲೂಕಿನಲ್ಲಿ ಸುಮಾರು 24 ಗೊಲ್ಲರಹಟ್ಟಿಗಳಿವೆ. ಗೊಲ್ಲರ ಸಮುದಾಯದ ಜನಸಂಖ್ಯೆ ಸುಮಾರು 12 ಸಾವಿರವಿದೆ. ಈ ಸಮುದಾಯವೂ ಆರ್ಥಿಕ, ಶೈಕ್ಷಣಿಕ ಮತ್ತುಸಾಮಾಜಿಕವಾಗಿ ಹಿಂದುಳಿದಿದೆ.

ಶುಕ್ರವಾರ ಸಂಜೆ 4 ಗಂಟೆ ವೇಳೆಗೆ ಕಡೂರಿಗೆ ಆಗಮಿಸಿದ ಲಕ್ಷ್ಮೀ ಹೆಬ್ಬಾಳ್ಕರ್ ಅವರು, ಗೊಲ್ಲರಹಟ್ಟಿಗೆ 6 ಗಂಟೆಯ ವೇಳೆಗೆ ಆಗಮಿಸಿದರು. ಗ್ರಾಮಸ್ಥರ ಜೊತೆ ಸಭೆ ನಡೆಸಿದ ಬಳಿಕ ಜನರೊಂದಿಗೆ ಕುಳಿತು ಊಟ ಸವಿದರು.

ಕಪಾಳಕ್ಕೆ ಬಿಗಿಸಿಕೊಂಡು ಕ್ಷಮೆ ಕೇಳಿಸಿಕೊಂಡಂತಾಗಿದೆ!

ರಂಗಮ್ಮ ರೇವಣ್ಣ ದಂಪತಿ ಮನೆಯಲ್ಲಿ ವಾಸ್ತವ್ಯ

ರಂಗಮ್ಮ ರೇವಣ್ಣ ದಂಪತಿ ಮನೆಯಲ್ಲಿ ವಾಸ್ತವ್ಯ

ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಕಲ್ಕರೆ ಗೊಲ್ಲರಹಟ್ಟಿ ಗ್ರಾಮದ ರಂಗಮ್ಮ ರೇವಣ್ಣ ದಂಪತಿ ಮನೆಯಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಗ್ರಾಮ ವಾಸ್ತವ್ಯ ಮಾಡಿದರು.

ಲಕ್ಷ್ಮೀ ಹೆಬ್ಬಾಳ್ಕರ್ ಮನವಿ

ಲಕ್ಷ್ಮೀ ಹೆಬ್ಬಾಳ್ಕರ್ ಮನವಿ

ಮಹಿಳೆ ಋತುಮತಿಯಾದಾಗ ಮನೆಯಿಂದ ಹೊರಗೆ ಗುಡಿಸಿಲಿನಲ್ಲಿ ಇಡುವುದು. ಹೆರಿಗೆ ನಂತರ ಬಾಣಂತಿಯನ್ನು ಮನೆಯಿಂದ ಹೊರಗೆ ಇಡುವ ಪದ್ಧತಿಗಳು ಈ ಸಮುದಾಯದಲ್ಲಿ ಜೀವಂತವಾಗಿದೆ. ಇಂತಹ ಪದ್ಧತಿಗಳನ್ನು ನಿಲ್ಲಿಸಿ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಜನರಿಗೆ ಮನವಿ ಮಾಡಿದರು.

ಭಾನುವಾರ ವಿವಿಧ ಕಾರ್ಯಕ್ರಮದಲ್ಲಿ ಭಾಗಿ

ಭಾನುವಾರ ವಿವಿಧ ಕಾರ್ಯಕ್ರಮದಲ್ಲಿ ಭಾಗಿ

ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರಿಗೆ ರಾಜಕೀಯ ಮರುಜನ್ಮ ನೀಡಿದ ಜಿಲ್ಲೆಯಿಂದಲೇ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಗ್ರಾಮ ವಾಸ್ತವ್ಯ ಆರಂಭಿಸಿದ್ದಾರೆ. ಇಂದು ಜಿಲ್ಲೆಯಲ್ಲಿ ನಡೆದ ಹಲವು ಕಾರ್ಯಕ್ರಮಗಳಲ್ಲಿ ಅವರು ಭಾಗಿಯಾಗಿದ್ದಾರೆ.

ಪ್ರತಿ ಜಿಲ್ಲೆಯಲ್ಲೂ ಗ್ರಾಮ ವಾಸ್ತವ್ಯ

ಪ್ರತಿ ಜಿಲ್ಲೆಯಲ್ಲೂ ಗ್ರಾಮ ವಾಸ್ತವ್ಯ

ಲಕ್ಷ್ಮೀ ಹೆಬ್ಬಾಳ್ಕರ್ ಅವರು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಗ್ರಾಮ ವಾಸ್ತವ್ಯ ಮಾಡಲಿದ್ದಾರೆ. ಚಿಕ್ಕಮಗಳೂರಿನಿಂದ ಅವರು ಗ್ರಾಮ ವಾಸ್ತವ್ಯವನ್ನು ಆರಂಭಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka Pradesh Congress Committee's Women's wing president Lakshmi Hebbalkar grama vastavaiya in Kaduru, Chikkamagaluru.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ