ಹಳ್ಳಕ್ಕೆ ಬಿದ್ದ ಲಕ್ಷ್ಮಿ ಹೆಬ್ಬಾಳ್ಕರ್‌ ಮೇಲೆ ಆಳಿಗೊಂದು ಕಲ್ಲು

Recommended Video

      ಸದ್ಯದಲ್ಲೇ ಲಕ್ಷ್ಮಿ ಹೆಬ್ಬಾಳ್ಕರ್ ಗೆ ಕಾದಿದ್ಯಾ ಆಘಾತ? | Oneindia Kannada

      ಬೆಂಗಳೂರು, ಅಕ್ಟೋಬರ್ ೦1: ಪಿಎಲ್‌ಡಿ ಬ್ಯಾಂಕ್ ಚುನಾವಣೆಯಲ್ಲಿ ಜಾರಕಿಹೊಳಿ ಸಹೋದರರನ್ನು ಎದುರು ಹಾಕಿಕೊಂಡ ನಂತರ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಟೈಮೇ ಸರಿ ಇದ್ದಂತಿಲ್ಲ.

      ಹೇಗೋ ಲಕ್ಷ್ಮಿ ಹೆಬ್ಬಾಳ್ಕರ್‌ ಹಳ್ಳಕ್ಕೆ ಬಿದ್ದಿದ್ದಾರೆ ಎಂದು ಆಳಿಗೊಂದು ಕಲ್ಲು ಎಸೆಯುತ್ತಿರುವಂತಿದೆ. ಇದೀಗ ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಸ್ಥಾನದಿಂದ ಕೆಳಗಿಳಿಸಬೇಕು ಎಂಬ ಕೂಗು ಕೇಳುತ್ತಿದೆ.

      ಕೆಪಿಸಿಸಿ ಮಹಿಳಾ ಘಟಕದ ಕೆಲ ಪದಾಧಿಕಾರಿಗಳು ನಿನ್ನೆ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದು, ಕೂಡಲೇ ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಸ್ಥಾನದಿಂದ ಕೆಳಗಿಳಿಸಬೇಕು ಎಂದು ಮನವಿ ಮಾಡಿದ್ದಾರೆ.

      Lakshmi Hebbalkar faces red flags in Women congress

      ಶಾಸಕರಾದವರಿಗೆ ಅಧ್ಯಕ್ಷೆ ಸ್ಥಾನ ಬೇಡ

      ಶಾಸಕರಾದವರಿಗೆ ಅಧ್ಯಕ್ಷೆ ಸ್ಥಾನ ಬೇಡ

      ಒಬ್ಬರಿಗೆ ಒಂದು ಹುದ್ದೆ ಎಂಬ ನಿಯಮ ಇದೆ. ಹಾಗಾಗಿ ಶಾಸಕರಾಗಿರುವ ಅವರಿಗೆ ಮಹಿಳಾ ಘಟಕದ ಅಧ್ಯಕ್ಷ ಸ್ಥಾನ ನೀಡುವುದು ತರವಲ್ಲ ಅವರನ್ನು ಆ ಸ್ಥಾನದಿಂದ ಕೆಳಗಿಳಿಸಬೇಕು ಎಂದು ಕೆಲವರು ಒತ್ತಾಯಿಸಿದ್ದಾರೆ.

      ಡಾ.ನಾಗಲಕ್ಷ್ಮಿ ಚೌಧರಿಗೆ ಅವಕಾಶ ನೀಡಲು ಮನವಿ

      ಡಾ.ನಾಗಲಕ್ಷ್ಮಿ ಚೌಧರಿಗೆ ಅವಕಾಶ ನೀಡಲು ಮನವಿ

      ಲಕ್ಷ್ಮಿ ಹೆಬ್ಬಾಳ್ಕರ್ ಸ್ಥಾನದಕ್ಕೆ ಮಹಿಳಾ ಘಟಕದ ಪ್ರಮುಖ ಪದಾಧಿಕಾರಿಗಳಲ್ಲಿ ಒಬ್ಬರಾಗಿರುವ ನಾಗಲಕ್ಷ್ಮಿ ಚೌಧರಿ ಅವರಿಗೆ ಅಧ್ಯಕ್ಷ ಸ್ಥಾನ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಸ್ವತಃ ದಂತ ವೈದ್ಯೆ ಆಗಿರುವ ನಾಗಲಕ್ಷ್ಮಿ ಚೌಧರಿ ಅವರು ಹಲವು ವರ್ಷಗಳಿಂದ ಕಾಂಗ್ರೆಸ್ ಮಹಿಳಾ ಘಟಕದಲ್ಲಿದ್ದಾರೆ.

      ಬದಲಾವಣೆ ಒತ್ತಾಯಕ್ಕೆ ಕಾರಣವೇನು?

      ಬದಲಾವಣೆ ಒತ್ತಾಯಕ್ಕೆ ಕಾರಣವೇನು?

      ಬದಲಾದ ರಾಜಕೀಯ ಪರಿಸ್ಥಿತಿಗಳೇ ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ಬದಲಾಯಿಸುವಂತೆ ಮಾಡಿರುವ ಮನವಿಗೆ ಕಾರಣ ಎನ್ನಲಾಗಿದೆ. ಈ ಒತ್ತಾಯದ ಹಿಂದೆ ಲಕ್ಷ್ಮಿ ಹೆಬ್ಬಾಳ್ಕರ್ ಹಾಗೂ ಡಿ.ಕೆ.ಶಿವಕುಮಾರ್ ವಿರೋಧಿ ಬಣದ್ದೂ ಕೈವಾಡ ಇದೆಯೆಂದು ಶಂಕಿಸಲು ಕಾರಣಗಳಿವೆ.

      ಅಧ್ಯಕ್ಷ ಸ್ಥಾನ ತಪ್ಪುವ ಸಾಧ್ಯತೆ

      ಅಧ್ಯಕ್ಷ ಸ್ಥಾನ ತಪ್ಪುವ ಸಾಧ್ಯತೆ

      ಸಚಿವ ಸ್ಥಾನದ ಆಕಾಂಕ್ಷಿ ಆಗಿದ್ದ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಸಚಿವ ಸ್ಥಾನ ನೀಡಲಾಗಿರಲಿಲ್ಲ. ಆದರೆ ಅವರಿಗೆ ಶಕ್ತಿಶಾಲಿಯಾದ ನಿಗಮ ಮಂಡಳಿ ಅಧ್ಯಕ್ಷ ಸ್ಥಾನವನ್ನು ನೀಡಲಾಗುವುದು ಎಂಬ ಭರವಸೆ ನಾಯಕರಿಂದ ಸಿಕ್ಕಿದೆ. ಹಾಗಾಗಿ ನಿಗಮ ಮಂಡಳಿ ಸ್ಥಾನ ನೀಡಿದ ಮೇಲೆ ಅವರನ್ನು ಕೆಪಿಸಿಸಿ ಮಹಿಳಾ ಘಟಕ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸುವ ಸಾಧ್ಯತೆ ಇದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+