ಬೆಳಗಾವಿ ವಿಭಜನೆಗಾಗಿಯೇ ಮುಖ್ಯಮಂತ್ರಿಗಳು ಜಿಲ್ಲೆಗೆ ಭೇಟಿ ನೀಡಿದ್ದರು: ಲಕ್ಷ್ಮೀ ಹೆಬ್ಬಾಳ್ಕರ್

ಬೆಳಗಾವಿ: ಕರ್ನಾಟಕದ ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿ ವಿಭಜನೆ ಚರ್ಚೆಗಳು ಜೋರಾಗಿ ನಡೆಯುತ್ತಿವೆ. ಸುಗಮ ಆಡಳಿತ ಹಿತದೃಷ್ಟಿಯಿಂದ ಜಿಲ್ಲೆ ವಿಭಜಿಸಿ ಹೊಸ ಜಿಲ್ಲೆ ಘೋಷಿಸುವ ಉದ್ದೇಶದೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಲ್ಲಿಗೆ ಆಗಮಿಸಿದ್ದರು ಎಂದು ಮಹಿಳಾ ಮತ್ತು ಮಕ್ಕಳ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ತಿಳಿಸಿದರು. ಇದೆಲ್ಲ ನೋಡಿದರೆ ರಾಜ್ಯ ಸರ್ಕಾರ ಯಾವ ಕ್ಷಣದಲ್ಲಾದರೂ ನಿರ್ಧಾರ ಪ್ರಕಟಿಸಬಹುದು. ಹೊಸ ಜಿಲ್ಲೆ ಘೋಷಿಸುವ ಸಾಧ್ಯತೆ ಇದೆ.

ನಗರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು, ಈ ಭಾಗದ ಶಾಸಕರು ಸಚಿವರನ್ನು ಕರೆದು ಚರ್ಚಿಸೋಣ. ಹೊಸ ಜಿಲ್ಲೆ ಘೋಷಣೆ ಬಗ್ಗೆ ಮಾತನಾಡಲೆಂದರೆ ಎಲ್ಲರ ನಿಯೋಗ ಕರೆದುಕೊಂಡು ಸಿಎಂ ಬಂದಿದ್ದರು. ಬೆಳಗಾವಿ ವಿಭಜನೆ ಚಿಂತನೆ ಇನ್ನೂ ಮುಂದುವರಿದಿದೆ ಎಂದು ಅವರು ಹೇಳಿದರು.

Lakshmi Hebbalkar Explained Why Need to Belagavi District Divided

ಬೆಳಗಾವಿ ಜಿಲ್ಲೆಯ ಜನರ ಅಭಿವೃದ್ಧಿ ಮತ್ತು ಆಡಳಿತಾತ್ಮಕ ದೃಷ್ಟಿಯಿಂದ ಬೆಳಗಾವಿ ಜಿಲ್ಲೆ ವಿಭಜನೆ ಮಾಡಬೇಕೆಂಬ ಇರಾದೆಯು ಮುಖ್ಯಮಂತ್ರಿಗಳಲ್ಲಿದೆ. ಬೆಳಗಾವಿ ತಾಲೂಕು ಒಂದರಲ್ಲಿ ಸುಮಾರು 11.5 ಲಕ್ಷ ಜನರಿದ್ದಾರೆ. ಅವರಿಗೆ ಒಬ್ಬರೇ ತಹಶೀಲ್ದಾರ್ ಇದ್ದಾರೆ. ಎಲ್ಲ ಜವಾಬ್ದಾರಿ ಒಬ್ಬರೇ ನೋಡಿಕೊಳ್ಳುವುದು ಕಷ್ಟವಾಗುತ್ತದೆ. ಅಭಿವೃದ್ಧಿ ದೃಷ್ಟಿಯಿಂದ ಇದು ಸರಿಯಲ್ಲ. ಸಾಕಷ್ಟು ತೊಂದರೆ ಎದುರಿಸಬೇಕಾಗುತ್ತದೆ. ಇದೆಲ್ಲ ಗಮನಿಸಿ ಬೆಳಗಾವಿ ವಿಭಜಿಸಿ ಹೊಸ ಜಿಲ್ಲೆ ಘೋಷಣೆಗೆ ಮುಖ್ಯಮಂತ್ರಿಗಳು ಸ್ಥಳೀಯ ನಾಯಕರೊಂದಿಗೆ ಚರ್ಚಿಸಿದ್ದಾರೆ.

ಇನ್ನೂ ಇದೇ ವೇಳೆ ತಮ್ಮ ತಾಲೂಕನ್ನು ಜಿಲ್ಲೆಯನ್ನಾಗಿ ಮಾಡಬೇಕೆಂದು ಕೆಲವು ಶಾಸಕರು, ನಾಯಕರು ಮುಖ್ಯಮಂತ್ರಿ ಬಳಿ ಕೋರಿದ್ದಾರೆ. ಇದು ಸಹಜ. ಹೊಸ ಜಿಲ್ಲೆ ಆಗುತ್ತಿದೆ ಎಂದಾಗ ತಮ್ಮ ತಾಲೂಕನ್ನೇ ನೂತನ ಜಿಲ್ಲೆ ಆಗಿ ಮಾಡಬೇಕೆಂಬ ಆಸೆ ಎಲ್ಲರಲ್ಲಿಯೂ ಇರುತ್ತದೆ ಎಂದು ಅವರು ತಿಳಿಸಿದರು.

ಬೆಳಗಾವಿ ಜಿಲ್ಲೆ ವಿಭಜನೆ ಏಕೆ ಅಗತ್ಯ?

ಕರ್ನಾಟಕದ ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿ ಭೌಗೋಳಿಕವಾಗಿ, ಜನಸಂಖ್ಯೆಯಲ್ಲಿಯೂ ದೊಡ್ಡದಿದೆ. 13ಕ್ಕೂ ಚದರ ಕಿಲೋ ಮೀಟರ್ ವ್ಯಾಪ್ತಿ ಹೊಂದಿದೆ. ತಾಲೂಕೊಂದರಲ್ಲೇ ಹನ್ನೊಂದುವರೆ ಲಕ್ಷ ಜನರಿದ್ದಾರೆ. ಸುತ್ತಮುತ್ತ ಐತಿಹಾಸಿಕ ಸ್ಥಳಗಳು ಮತ್ತು ಪ್ರವಾಸಿ ತಾಣಗಳು ಇವೆ. ಫಲವತ್ತಾದ ಭೂಮಿ ಇದೆ. ಇತರ ಎಲ್ಲ ಸೌಕರ್ಯಗಳು ಇವೆ. ಕೃಷಿ ಮತ್ತು ಕೈಗಾರಿಕೆಗೆ ಜಿಲ್ಲೆ ತನ್ನದೇ ಆದ ಕೊಡುಗೆ ನೀಡುತ್ತಿದೆ.

ವರ್ಷದಿಂದ ವರ್ಷಕ್ಕೆ ಇಲ್ಲಿ ಜನಸಂಖ್ಯೆ ಹೆಚ್ಚಾಗುತ್ತಿದೆ. ಇಲ್ಲಿ ಮತ್ತಷ್ಟು ಅಭಿವೃದ್ಧಿ ಕೆಲಸಗಳು ಆಗಲು, ವ್ಯವಸ್ಥಿತವಾಗಿ ಆಡಳಿತ ನಡೆಸಲು ಜಿಲ್ಲೆ ವಿಭಜಿಸಿ ಮತ್ತೊಂದು ಜಿಲ್ಲೆ ಮಾಡಲು ಸರ್ಕಾರ ಚಿಂತನೆ ನಡೆದಿದೆ. ಈ ವಿಭಜನೆಗೆ ಹಲವು ಕನ್ನಡಿಗರು, ಚಳವಳಿಗಾರರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಖಂಡ ಬೆಳಗಾವಿ ಒಡೆಯದಂತೆ ಕೋರಿದ್ದಾರೆ.

ಗೃಹ ಲಕ್ಷ್ಮೀ ಯೋಜನೆ ಹಣ ಬಿಡುಗಡೆ

ಇದೇ ವೇಳೆ ರಾಜ್ಯದಲ್ಲಿ ಗೃಹ ಲಕ್ಷ್ಮೀ ಹಣ ಬಿಡುಗಡೆ ಬಗ್ಗೆ ಮಾತನಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು, 24ನೇ ಕಂತಿನ 2000 ರೂಪಾಯಿ ಹಣವನ್ನು ಸೋಮವಾರದಿಂದ ಶನಿವಾರದ ಒಳಗಾಗಿ ಫಲಾನುಭವಿಗಳ ಖಾತೆಗೆ ಬಿಡುಗಡೆ ಮಾಡಲಾಗುವುದು. ಒಂದು ಕಂತಿನ ಹಣ ಅರ್ಹ ಮಹಿಳೆಯರ ಬ್ಯಾಂಕ್ ಖಾತೆಗೆ ಜಮೆ ಆಗಲಿದೆ ಎಂದು 2026 ಹೊಸ ವರ್ಷಕ್ಕೆ ಮಹಿಳೆಯರಿಗೆ ಗುಡ್ ನ್ಯೂಸ್ ನೀಡಿದರು.

ಇನ್ನೂ ಗೃಹ ಲಕ್ಷ್ಮೀ ಯೋಜನೆ ಫಲಾನುಭವಿಗಳು ಆಗಿ, ಮೃತಪಟ್ಟವರ ಕೆಲವರ ಬ್ಯಾಂಕ್ ಖಾತೆಗೆ ಯೋಜನೆಯ ಹಣ ಜಮೆ ಆಗುತ್ತಿದೆ. ಈ ಮಾಹಿತಿ ತತ್‌ಕ್ಷಣಕ್ಕೆ ತಿಳಿಯುತ್ತಿಲ್ಲ. ಅದರ ಪರಿಶೀಲನೆ ನಡೆಸಿ, ಹಣ ವಾಪಾಸು ಪಡೆಯುವಂತೆ ಬ್ಯಾಂಕ್ ಸಿಬ್ಬಂದಿಗೆ ಸೂಚಿಸಲಾಗಿದೆ. ಅಲ್ಲದೇ ಮುಂದೆ ಈ ರೀತಿ ಹಣ ಮೃತಪಟ್ಟವರಿಗೆ ಹಣ ಹೋಗದಂತೆ ಬ್ರೇಕ್ ಹಾಕಲು ಜಾಲತಾಣ ಅಭಿವೃದ್ಧಿಪಡಿಸಲಾಗುತ್ತಿದೆ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+