ಸಿಎಂ ಗದ್ದುಗೆ ಗುದ್ದಾಟ; ಸಿದ್ದರಾಮಯ್ಯ ಅವರ ಆಪ್ತ ಸಿಎಂ ಆದ್ರೆ ನನ್ನ ಬೆಂಬಲವಿದೆ: ಅಚ್ಚರಿ ಮೂಡಿಸಿದ ಲಕ್ಷ್ಮಣ್‌ ಸವದಿ ಹೇಳಿಕೆ

ಬೆಳಗಾವಿ, ಸೆಪ್ಟೆಂಬರ್‌ 05: ಸತೀಶ್‌ ಜಾರಕಿಹೊಳಿ ಮುಖ್ಯಮಂತ್ರಿ ಆದ್ರೆ ಓಕೆ. ನಮ್ಮ ಕಡೆಯಿಂದ ಫುಲ್‌ ಸಪೋರ್ಟ್‌ ಇದೆ ಎಂದು ಲಕ್ಷ್ಮಣ್‌ ಸವದಿ ಅವರು ಹೇಳಿದ್ದಾರೆ. ಈ ಮೂಲಕ ಜಿಲ್ಲೆಯ ಮತ್ತೊಬ್ಬ ನಾಯಕನಿಗೆ ಲಕ್ಷ್ಮಣ್‌ ಸವದಿ ಅವರು ಬೆಂಬಲ ನೀಡಿದ್ದಾರೆ.

ಬೆಳಗಾವಿ ಜಿಲ್ಲೆಯವರು ಸಿಎಂ ಆಗುವ ವಿಚಾರವಾಗಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ನಮ್ಮ ಜಿಲ್ಲೆಯವರು ಯಾರೇ ಮುಖ್ಯಮಂತ್ರಿಯಾದರೂ ಅದಕ್ಕೆ ಬೆಂಬಲ ಇದೆ. ಅದರಲ್ಲೂ ಸಚಿವ ಸತೀಶ ಜಾರಕಿಹೋಳಿ ಅವರು ಸಿಎಂ ಆಗುತ್ತಾರೆ ಎಂದಾದರೆ ನನ್ನ ಬೆಂಬಲವಿದೆ ಎಂದು ಕಾಂಗ್ರೆಸ್‌ ಶಾಸಕ ಲಕ್ಷ್ಮಣ್‌ ಸವದಿ ಹೇಳಿದರು.

Lakshmana Savadi Said That He Will Support Satish Jarkiholi As Cm Candidate

ನಮ್ಮ ಜಿಲ್ಲೆಯವರು ಯಾರೆ ಆಗಲಿ‌ ಅದಕ್ಕೆ ಬೆಂಬಲ ಇದೆ. ಸಚಿವ ಸತೀಶ ಜಾರಕಿಹೋಳಿ ಸಿಎಂ ಆದರೆ ನನ್ನ ಸಂಪೂರ್ಣ ಬೆಂಬಲವಿದೆ ಎಂದು ಹೇಳುವ ಮೂಲಕ ಜಿಲ್ಲೆಯ ಮತ್ತೊಬ್ಬ ನಾಯಕನಿಗೆ ಬೆಂಬಲ ಸೂಚಿಸಿದರು. ಮುಂದುವರೆದು, ಎಲ್ಲರಿಗೂ ಅಧಿಕಾರ ಬೇಕಾಗಿದೆ. ಸನ್ಯಾಸಿ ಇದ್ದವರು ಯಾರು ರಾಜಕಾರಣಕ್ಕೆ ಬರುತ್ತಿರಲಿಲ್ಲ, ಆದರೆ ಸದ್ಯ ಸನ್ಯಾಸಿಗಳು ರಾಜಕಾರಣಿಗೆ ಬರುತ್ತಿದ್ದಾರೆ ಎಂದು ಕಾಂಗ್ರೆಸ್‌ ಶಾಸಕ ಲಕ್ಷ್ಮಣ್‌ ಸವದಿ ತಿಳಿಸಿದ್ದಾರೆ.

ಇಷ್ಟೋತ್ತಿಗಾಗಲೇ ಲಕ್ಷ್ಮಣ್‌ ಸವದಿ ಅವರಿಗೆ ಮಂತ್ರಿ ಸ್ಥಾನ ಸಿಗಬೇಕಿತ್ತು ಎನ್ನುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಈಗಾಗಲೇ ನಾನು ಹಲವಾರು ಜವಾಬ್ದಾರಿ ಇಲಾಖೆ ನಿಭಾಯಿಸಿದ್ದೇನೆ, ಈಗಾಗಲೆ ರಾಜ್ಯದ ಡಿಸಿಎಂ ಆಗಿದ್ದೇನೆ, ನನಗೆನೂ ಹೊಸದಾಗಿ ಮಂತ್ರಿ ಆಗಬೇಕು ಅನ್ನುವ ಆಸೆ ಇಲ್ಲ, ಮುಂದಿನ ದಿನಗಳಲ್ಲಿ ಒಳ್ಳೆಯ ದಿನಮಾನಗಳು ಇವೆ. ನನಗೆ ಯಾವುದೇ ಅನುದಾನದ ಕೊರತೆ ಇಲ್ಲ, ಒಂದೂವರೆ ವರ್ಷದಲ್ಲಿ ಎರಡು ಸಾವಿರ ಕೋಟಿ ಅಷ್ಟು ಅನುದಾನ ನೀಡಿದ್ದಾರೆ. ಕ್ಷೇತ್ರದಲ್ಲಿ ಅಗತ್ಯ ಕಾಮಗಾರಿಯನ್ನು ಕೈಗೊಂಡಿದ್ದೇನೆ. ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ ಎಂದು ಲಕ್ಷ್ಮಣ್‌ ಸವದಿ ಹೇಳಿದರು.

ಇನ್ನೂ ಮುಡಾ ಪ್ರಕರಣ 20 ವರ್ಷಗಳ ಹಿಂದೆ ಆಗಿರುವಂತದ್ದು, ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವುದೇ ಬೇಡಿಕೆ ಇಟ್ಟಿಲ್ಲ, ಯಾವುದೇ‌ ಆದೇಶ ಮಾಡಿಲ್ಲ, ತಮ್ಮ ಪತ್ನಿಗೆ ನಿವೇಶನ ಬೇಕಂತ ಎಲ್ಲಿಯೂ ಅರ್ಜಿ ಸಲಿಸಿಲ್ಲ, ಸಿಎಂ ಸಿದರಾಮಯ್ಯ ಅವರ ಪತ್ನಿಗೆ ಸಹೋದರ ಅಕ್ಕನಿಗಾಗಿ ಅರಶಿನ ಕುಂಕುಮ ಎಂಬ ವ್ಯವಸ್ಥೆಯಲ್ಲಿ ದಾನದ ರೂಪದಲ್ಲಿ ನೀಡಿದ್ದಾರೆ ಎಂದು ಶಾಸಕ ಲಕ್ಷ್ಮಣ್‌ ಸವದಿ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+