ಕುಂದಾಪುರ : ಭೀಕರ ಅಪಘಾತ, 8 ಶಾಲಾ ಮಕ್ಕಳ ದುರ್ಮರಣ

By: ಒನ್ ಇಂಡಿಯಾ ಪ್ರತಿನಿಧಿ
Subscribe to Oneindia Kannada

ಉಡುಪಿ, ಜೂನ್ 21 : ಕುಂದಾಪುರದಲ್ಲಿ ಮಂಗಳವಾರ ಬೆಳಗ್ಗೆ ನಡೆದ ರಸ್ತೆ ಅಪಘಾತದಲ್ಲಿ 8 ಶಾಲಾ ಮಕ್ಕಳು ದುರ್ಮರಣಕ್ಕೀಡಾಗಿದ್ದಾರೆ. 5ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಾಯಗೊಂಡಿದ್ದು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ತ್ರಾಸಿಯ ಡಾನ್ ಬೊಸ್ಕೊ ಶಾಲೆಯ ಮಕ್ಕಳನ್ನು ಕರೆದುಕೊಂಡು ಹೋಗುತ್ತಿದ್ದ ಮಾರುತಿ ಓಮಿನಿಗೆ ಖಾಸಗಿ ಬಸ್ ಡಿಕ್ಕಿ ಹೊಡೆದು ಈ ಅಪಘಾತ ನಡೆದಿದೆ. ಡಾನ್ ಬೊಸ್ಕೊ ಶಾಲೆಗೆ ಹೆದ್ದಾರಿಯಿಂದ ತಿರುಗುವ ಕಡೆ ಈ ಅಪಘಾತ ಸಂಭವಿಸಿದೆ. [ಮಂಗಳೂರು: 5 ಜೀವ ಬಲಿ ಪಡೆದ ಸರಣಿ ಅಪಘಾತ]

accident

ಓಮಿನಿ ಕಾರಿನಲ್ಲಿ 16 ಮಕ್ಕಳು ಮತ್ತು ಕಾರು ಚಾಲಕನ ಪತ್ನಿ ಇದ್ದರು. ಒಟ್ಟು 8 ಮಕ್ಕಳು ಸಾವನ್ನಪ್ಪಿದ್ದು, ಹಲವರ ಸ್ಥಿತಿ ಗಂಭೀರವಾಗಿದೆ. ಬಸ್ ಡಿಕ್ಕಿ ಹೊಡೆದ ರಭಸಕ್ಕೆ ಓಮಿನಿ ಎದುರಿಗಿದ್ದ ಕಂಬಕ್ಕೆ ಡಿಕ್ಕಿ ಹೊಡೆದು, ನಜ್ಜುಗುಜ್ಜಾಗಿದೆ. [ರಸ್ತೆ ಅಪಘಾತ : ಶಾಸಕ ಟಿ.ರಘುಮೂರ್ತಿ ಪುತ್ರ ದುರ್ಮರಣ]

ಮೃತಪಟ್ಟ ಮಕ್ಕಳು ತಲ್ಲೂರು ಹೆಮ್ಮಾಡಿ ಸುತ್ತಮುತ್ತಲಿನವರು. ಗಂಭೀರ ಸ್ಥಿತಿಯಲ್ಲಿರುವ ಮಕ್ಕಳನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ.

road accident

ಮೃತಪಟ್ಟವರ ಹೆಸರು : ಅನ್ಸಿಟಾ, ಅನನ್ಯಾ, ರಾಯ್‌ಸ್ಟನ್‌, ಅಲ್ವಿಟಾ, ಕ್ಲರೀಶಾ, ಸೆಲಿಸ್ಪಾ, ನಿಖಿತಾ, ಡೆಲ್ವಿನ್. ಗಾಯಗೊಂಡವರು ಮಿನೋಶಾ, ಅರ್ಫಾ, ಮಾರಿಯೊ, ಪ್ರಿನ್ಸಿಟಾ, ರೆಯ್ಸಾ ಕ್ರಾಸ್ತಾ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
8 school going children died in a tragic accident near Mohadi Cross near Trasi, Kundapur, Udupi district. As per details, the head-on collision took place between a private bus and Maruti Omni van carrying children going to Don Bosco school.
Please Wait while comments are loading...