ಕುಮಾರಸ್ವಾಮಿ ಗ್ರಾಮ ವಾಸ್ತವ್ಯ: ಲಾಭ ಜೆಡಿಎಸ್‌ಗೋ, ಕಾಂಗ್ರೆಸ್‌ಗೊ?
ಬೆಂಗಳೂರು, ಜೂನ್ 28: ಕುಮಾರಸ್ವಾಮಿ ಅವರ ಗ್ರಾಮ ವಾಸ್ತವ್ಯ ಸದ್ಯದ ರಾಜ್ಯ ರಾಜಕಾರಣದಲ್ಲಿ ಚರ್ಚೆಯ ವಿಷಯ. ಲೋಕಸಭೆ ಚುನಾವಣೆಯಲ್ಲಿ ಕಳೆದುಕೊಂಡ ಮಾನವನ್ನು ಮರಳಿ ಗಳಿಸಲು ಕುಮಾರಸ್ವಾಮಿ ಇರಿಸಿದ ಸರಿಯಾದ ಹೆಜ್ಜೆ 'ಗ್ರಾಮ ವಾಸ್ತವ್ಯ'.
ಆದರೆ ಮೈತ್ರಿ ಪಕ್ಷಗಳ ನಡುವೆ ಈಗಾಗಲೇ ಇರುವ ಗೊಂದಲಗಳ ಜೊತೆ ಗ್ರಾಮ ವಾಸ್ತವ್ಯದ ನಂತರ ಹೊಸದೊಂದು ಸಂಘರ್ಷ ಸೇರಿಕೊಂಡಿದ್ದು, ಅದುವೇ 'ಗ್ರಾಮ ವಾಸ್ತವ್ಯದ ಕ್ರೆಡಿಟ್ ಯಾರಿಗೆ ಸಲ್ಲಬೇಕು' ಎಂಬುದು.
ಮೇಲ್ನೋಟಕ್ಕೆ ನೋಡಿದಲ್ಲಿ, ಗ್ರಾಮ ವಾಸ್ತವ್ಯ ಎಂಬುದು ಕುಮಾರಸ್ವಾಮಿ ಅವರ ಒನ್ ಮ್ಯಾನ್ ಶೋ ನಂತೆ ಗೋಚರವಾಗುತ್ತಿದೆ. ಗ್ರಾಮ ವಾಸ್ತವ್ಯದ ಕಾರ್ಯಕ್ರಮ ಕುಮಾರಸ್ವಾಮಿ ಕೇಂದ್ರಿತ ಕಾರ್ಯಕ್ರಮವೇ ಆಗಿದೆ. ಇದು ಕಾಂಗ್ರೆಸ್‌ನ ಕೆಲವು ನಾಯಕರಲ್ಲಿ ತಳಮಳ ತಂದಿದೆ.
ಗ್ರಾಮ ವಾಸ್ತವ್ಯವನ್ನು ಸರ್ಕಾರದ ಕಾರ್ಯಕ್ರಮ ಎಂದು ಬಿಂಬಿಸುವುದಕ್ಕೂ ಮಿಗಿಲಾಗಿ ಕುಮಾರಸ್ವಾಮಿ ಕಾರ್ಯಕ್ರಮ ಎಂದು ಬಿಂಬಿಸುತ್ತಿರುವ ಬಗ್ಗೆ ಕಾಂಗ್ರೆಸ್‌ನ ಕೆಲವು ನಾಯಕರು ಈಗಾಗಲೇ ಸಿದ್ದರಾಮಯ್ಯ ಮತ್ತು ವೇಣುಗೋಪಾಲ್ ಅವರ ಬಳಿ ದೂರು ಹೇಳಿಕೊಂಡಿದ್ದಾರೆ.

ಪ್ರಿಯಾಂಕ್ ಖರ್ಗೆ ಕೆಲವು ಕಾರ್ಯಕ್ರಮದಲ್ಲಿ ಕಂಡರು
ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿಯೂ ಸಹ ಬಹುಪಾಲು ಜೆಡಿಎಸ್‌ನ ಶಾಸಕರು, ಮಂತ್ರಿಗಳೇ ಮುನ್ನೆಲೆಯಲ್ಲಿರುತ್ತಾರೆ. ಕಾಂಗ್ರೆಸ್‌ನ ಪ್ರಿಯಾಂಕ್ ಖರ್ಗೆ ಅವರು ಮಾತ್ರ ಎರಡು ಗ್ರಾಮ ವಾಸ್ತವ್ಯಗಳಲ್ಲಿ ಕಾಣಿಸಿಕೊಂಡಿದ್ದರು. ಅವರನ್ನು ಹೊರತು ಪಡಿಸಿದರೆ, ಕುಮಾರಸ್ವಾಮಿ ಅವರ ಆಪ್ತ ಜೆಡಿಎಸ್ ಮಂತ್ರಿಗಳು, ಶಾಸಕರುಗಳೇ ಗ್ರಾಮ ವಾಸ್ತವ್ಯದ ಮುನ್ನೆಲೆಯಲ್ಲಿದ್ದಾರೆ. ಇದು ಸಹ ಕಾಂಗ್ರೆಸ್ ಶಾಸಕರ ಅಸಮಾಧಾನಕ್ಕೆ ಕಾರಣವಾಗಿದೆ.

ಡಿಸಿಎಂ ಪರಮೇಶ್ವರ್ ಹೇಳಿದ್ದೇನು?
ಈ ಬಗ್ಗೆ ಚರ್ಚೆಗಳು ಪ್ರಾರಂಭವಾಗುತ್ತಿದ್ದಂತೆ, ಡಿಸಿಎಂ ಪರಮೇಶ್ವರ್ ಅವರು, ಗ್ರಾಮ ವಾಸ್ತವ್ಯವು ಯಾವುದೇ ಪಕ್ಷದ ಕಾರ್ಯಕ್ರಮವಲ್ಲ, ಅದು ಸರ್ಕಾರದ ಕಾರ್ಯಕ್ರಮವಾಗಿದೆ. ಇದರಿಂದ ಮೈತ್ರಿಗೆ ಸಹಾಯವಾಗಲಿದೆ ಎಂದಿದ್ದಾರೆ. ಸಿದ್ದರಾಮಯ್ಯ ಸಹ ಇಂತಹುದೇ ಮಾತುಗಳನ್ನಾಡಿದ್ದಾರೆ.

ಕುಮಾರಸ್ವಾಮಿ ಹೇಳಿದ್ದೇನು?
ಕುಮಾರಸ್ವಾಮಿ ಅವರು ಸಹ ಗ್ರಾಮ ವಾಸ್ತವ್ಯವನ್ನು ಪಕ್ಷದ ದೃಷ್ಟಿಯಿಂದ ನೋಡಲಾಗುವುದಿಲ್ಲವೆಂದೇ ಹೇಳಿದ್ದಾರಾದರೂ, ಕಾರ್ಯಕ್ರಮದಲ್ಲಿ ಜೆಡಿಎಸ್ ಮುಖಂಡರು, ಸಚಿವರು, ಶಾಸಕರು ಮುನ್ನೆಲೆಯಲ್ಲಿರುವುದು ಮತ್ತು ಕಾರ್ಯಕ್ರಮವು ಮತ್ತು ಅದರ ಪ್ರಚಾರವು ತಮ್ಮ ಸುತ್ತಲೇ ಗಿರಕಿ ಹೊಡೆಯುವಂತೆ ಕುಮಾರಸ್ವಾಮಿ ನಿಗಾ ವಹಿಸಿರುವುದು ಅಸತ್ಯವೇನಲ್ಲ.

ಆಗ ಯಡಿಯೂರಪ್ಪ ಅವರು ಜಂಟಿ ವಾಸ್ತವ್ಯ ಮಾಡಿದ್ದರು
ಈ ಹಿಂದೆ 2006 ರಲ್ಲಿ ಕುಮಾರಸ್ವಾಮಿ ಅವರು ಗ್ರಾಮ ವಾಸ್ತವ್ಯ ಮಾಡಿದ್ದಾಗಲೂ ಸಹ, ಆಗ ಮೈತ್ರಿ ಪಕ್ಷವಾಗಿದ್ದ ಬಿಜೆಪಿಗೆ ಸಹ ಇದೇ ಅನುಮಾನ ಬಂದಿತ್ತು. ಆಗ ಡಿಸಿಎಂ ಆಗಿದ್ದ ಯಡಿಯೂರಪ್ಪ ಅವರು ಒಂದು ದಿನ ಕುಮಾರಸ್ವಾಮಿ ಅವರ ಜೊತೆ ಜಂಟಿ ಗ್ರಾಮ ವಾಸ್ತವ್ಯ ಮಾಡಿದ್ದರು.

ಕುಮಾರಸ್ವಾಮಿ-ಪರಮೇಶ್ವರ್ ಜಂಟಿ ಗ್ರಾಮ ವಾಸ್ತವ್ಯ
ಈಗಲೂ ಸಹ ಇಂತಹುದೇ ಯೋಜನೆಯೊಂದನ್ನು ಕೆಪಿಸಿಸಿ ಡಿಸಿಎಂ ಪರಮೇಶ್ವರ್ ಅವರ ಮುಂದೆ ಇಟ್ಟಿದೆ ಎನ್ನಲಾಗಿದೆ. ಉಪಮುಖ್ಯಮಂತ್ರಿ ಪರಮೇಶ್ವರ್ ಅವರು ಕುಮಾರಸ್ವಾಮಿ ಅವರೊಂದಿಗೆ ಗ್ರಾಮ ವಾಸ್ತವ್ಯಕ್ಕೆ ತೆರಳುವ ಸಾಧ್ಯತೆ ಇಲ್ಲದಿಲ್ಲ.
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications