• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭಾರತೀಯರ ವಿಜಯಾಚರಣೆ ಕುರಿತ ಕುಮಾರಸ್ವಾಮಿ ಹೇಳಿಕೆಗೆ ತೀವ್ರ ಆಕ್ಷೇಪ

|
   Surgical Strike 2: ಭಾರತೀಯರ ವಿಜಯಾಚರಣೆ ಕುರಿತ ಕುಮಾರಸ್ವಾಮಿ ಹೇಳಿಕೆಗೆ ತೀವ್ರ ಆಕ್ಷೇಪ

   ಬೆಂಗಳೂರು, ಮಾರ್ಚ್‌ 02: ಪಾಕಿಸ್ತಾನದ ಮೇಲೆ ಭಾರತೀಯ ಸೈನಿಕರು ದಾಳಿ ನಡೆಸಿದ ನಂತರ ಭಾರತದಲ್ಲಿ ನಡೆದ ಸಂಭ್ರಮಾಚರಣೆ ಬಗ್ಗೆ ಆಕ್ಷೇಪಣೆ ವ್ಯಕ್ತಪಡಿಸಿದ ಸಿಎಂ ಕುಮಾರಸ್ವಾಮಿ ಅವರ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗಿದೆ.

   ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಕುಮಾರಸ್ವಾಮಿ ಅವರು, ಪಾಕಿಸ್ತಾನದ ಉಗ್ರಗಾಮಿಗಳನ್ನ ಬಾಂಬ್ ಹಾಕಿ ಸಿಡಿಸಿ ಬಂದುಬಿಟ್ಟುದ್ದೀವಿ ಎಂದು ದೊಡ್ಡದಾಗಿ ಇಲ್ಲಿ ರಸ್ತೆಯ ಮೇಲೆ ನಿಂತು ಸಿಹಿ ಹಂಚಿ, ಇಲ್ಲಿ ಚಿಜಯಪತಾಕೆ ಹಾರಿಸಲಾಗುತ್ತಿದೆ, ಇದು ನಾಡಿನ ಒಳಗೆ ಸಂಘರ್ಷಕ್ಕೆ ದಾರಿ ಮಾಡಿಕೊಟ್ಟು, ಎರಡು ಸಮಾಜಗಳ ಮಧ್ಯೆ ಮತ್ತೆ ಸಂಘರ್ಷಕ್ಕೆ ದಾರಿ ಮಾಡಿಕೊಟ್ಟಂತಾಗುತ್ತಿದೆ' ಎಂದಿದ್ದರು.

   ಮೈಸೂರಿನಿಂದ ಲೋಕಸಭಾ ಚುನಾವಣೆಗೆ ಸ್ಫರ್ಧಿಸುತ್ತಾರಾ ಎಚ್‌ಡಿಕೆ ಪುತ್ರ ನಿಖಿಲ್ ?

   ಇದಕ್ಕೆ ಬಿಜೆಪಿಯೇ ಕಾರಣ ಎಂಬುದಾಗಿಯೂ ಪರೋಕ್ಷವಾಗಿ ಹೇಳಿರುವ ಸಿಎಂ, ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ ಎರಡು ಸಮಾಜದ ಮಧ್ಯೆ ಸಂಘರ್ಷಕ್ಕೆ ಎಡೆ ಮಾಡಿಕೊಟ್ಟು, ಅಮಾಯಕರನ್ನು ಬಲಿ ಪಡೆಯುವ ಕೆಲಸ ಮಾಡಲಾಗುತ್ತಿದೆ ಎಂದು ಕುಮಾರಸ್ವಾಮಿ ನಿನ್ನೆ ಹೇಳಿದ್ದರು.

   ಆದರೆ ಇದಕ್ಕೆ ಬಿಜೆಪಿಯ ಮುಖಂಡರು ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಸಹ ತೀವ್ರ ಆಕ್ಷೇಪ ವ್ಯಕ್ತಪಡಿಸಲಾಗುತ್ತಿದೆ.

   'ಹೋರಾಟದ ಹಿನ್ನೆಲೆಯಿಲ್ಲದ ಕುಮಾರಸ್ವಾಮಿ'

   'ಹೋರಾಟದ ಹಿನ್ನೆಲೆಯಿಲ್ಲದ ಕುಮಾರಸ್ವಾಮಿ'

   ಬಿಜೆಪಿಯ ಮುಖಂಡ ಸುರೇಶ್ ಕುಮಾರ್ ಅವರು ಫೇಸ್‌ಬುಕ್‌ನಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿ, 'ಪುಲ್ವಾಮಾ ದಾಳಿಗೆ ಪ್ರತೀಕಾರದ ದಾಳಿ ನಡೆದಾಗ ಭಾರತ್ ಮಾತಾ ಕೀ ಜೈ ಎಂದು ಕರೆಯುವುದು ಅಪಚಾರ ಎಂದು ಸಿಎಂ ಹೇಳಿದ್ದಾರೆ. ಹೋರಾಟದ ಹಿನ್ನೆಲೆಯಿಲ್ಲದೆ ಬಂದಿರುವವರಿಂದ ಇನ್ನು ಏನು ತಾನೆ ನಿರೀಕ್ಷಿಸಲು ಸಾಧ್ಯ ಎಂದು ಸುರೇಶ್ ಕುಮಾರ್ ಅವರು ಹೇಳಿದ್ದಾರೆ.

   'ಮೋದಿ ದ್ವೇಷದಿಂದ ಪಾಕ್‌ಗೆ ಬೆಂಬಲ'

   ಕುಮಾರಸ್ವಾಮಿ ಅವರ ಹೇಳಿಕೆಯನ್ನು ಶೋಭಾ ಕರಂದ್ಲಾಜೆ ಅವರು ತೀವ್ರವಾಗಿ ಖಂಡಿಸಿದ್ದು, ಉಗ್ರರ ವಿರುದ್ಧ ದಾಳಿಗೆ ಭಾರತೀಯರು ಸಿಹಿ ಹಂಚುವುದು ಎರಡು ಕೋಮುಗಳ ಮಧ್ಯೆ ಸಂಘರ್ಷಕ್ಕೆ ಕಾರಣವಾಗುತ್ತದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಇದು ಮತ ಬ್ಯಾಂಕ್‌ ರಾಜಕೀಯ. ಮೋದಿ ವಿರುದ್ಧ ದ್ವೇಷದಿಂದಲೇ ಇವರು ಪಾಕಿಸ್ತಾನವನ್ನು ಬೆಂಬಲಿಸುತ್ತಿದ್ದಾರೆ ಎಂದು ಶೋಭಾ ಕರಂದ್ಲಾಜೆ ಟ್ವಿಟ್ಟರ್‌ನಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.

   ಮೈಸೂರಿಗೆ ಕಾಂಗ್ರೆಸ್ ಟಿಕೆಟ್ ಕೊಡಲು ಷರತ್ತು ಹಾಕಿದ ಸಿದ್ದರಾಮಯ್ಯ

   ಸಾಮಾಜಿಕ ಜಾಲತಾಣದಲ್ಲಿ ವಿರೋಧ

   ಸಾಮಾಜಿಕ ಜಾಲತಾಣದಲ್ಲಿ ವಿರೋಧ

   ಸಾಮಾಜಿಕ ಜಾಲತಾಣಗಳಲ್ಲಿ ಹಲವರು ಕುಮಾರಸ್ವಾಮಿ ಅವರ ಹೇಳಿಕೆಯನ್ನು ವಿರೋಧಿಸಿದ್ದಾರೆ. ಮುಸ್ಲಿಂ, ಕ್ರಿಶ್ಚಿಯನ್ನರು, ಹಿಂದೂಗಳು ಮೂವರು ಒಟ್ಟಿಗೆ ನಿನ್ನೆ ಹಾಗೂ ಪಾಕ್‌ ಉಗ್ರರ ಮೇಲೆ ದಾಳಿ ನಡೆದಾಗ ಸಂಭ್ರಮಿಸಿದ್ದಾರೆ. ಆದರೆ ಸಿಎಂ ಅವರಿಗೆ ಇದು ಕೋಮು ಸಂಘರ್ಷಕ್ಕೆ ದಾರಿ ಎಂಬಂತೆ ಕಂಡಿದೆ ಎಂದು ಅಣಕವಾಡಿದ್ದಾರೆ.

   ಯಡಿಯೂರಪ್ಪ ವಿವಾದ ಮಾಡಿಕೊಂಡಿದ್ದರು

   ಯಡಿಯೂರಪ್ಪ ವಿವಾದ ಮಾಡಿಕೊಂಡಿದ್ದರು

   ಮೊನ್ನೆಯಷ್ಟೆ ಯಡಿಯೂರಪ್ಪ ಅವರು ಸರ್ಜಿಕಲ್ ಸ್ಟ್ರೈಕ್ 2 ಮಾಡಿರುವುದರಿಂದ ಬಿಜೆಪಿಗೆ ಲಾಭವಾಗಿದೆ. ಇದರಿಂದಾಗಿ ನಮ್ಮ ಪಕ್ಷ ಕರ್ನಾಟಕದಲ್ಲಿ 22 ಸೀಟುಗಳಲ್ಲಿ ಜಯಗಳಿಸಲಿದೆ ಎಂದು ಹೇಳಿ ವಿವಾದ ಸೃಷ್ಟಿಸಿದ್ದರು. ಈಗ ಕುಮಾರಸ್ವಾಮಿ ಅವರು ಅದೇ ಸರ್ಜಿಕಲ್ ಸ್ಟ್ರೈಕ್ 2 ಬಗ್ಗೆ ಮಾತನಾಡಿ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ.

   English summary
   BJP leaders and social media users opposing HD Kumaraswamy statement said surgical strike2. He said in a function that Indians celebrating surgical strike 2, this may create tension between two communities.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X