ಸಿದ್ದರಾಮಯ್ಯ ನಮ್ಮ ನಾಯಕ, ಅವರಿಂದಲೇ ಸರ್ಕಾರ ಉಳಿಯುತ್ತೆ: ಎಚ್‌ಡಿಕೆ

ಬೆಂಗಳೂರು, ಫೆಬ್ರವರಿ 12: ಸದನದಲ್ಲಿ ಇಂದು ಸಹ ಆಪರೇಷನ್ ಕಮಲ ಆಡಿಯೋ ಕ್ಲಿಪ್ ಚರ್ಚೆಗೆ ಕಾರಣವಾಯಿತು. ಇಂದಿನ ಕಲಾಪ ಮುಗಿಯುವ ಮುಂಚೆ ಮಾತನಾಡಿದ ಕುಮಾರಸ್ವಾಮಿ ಅವರು ಸಿದ್ದರಾಮಯ್ಯ ಅವರ ಬಗ್ಗೆ ಸದನದಲ್ಲಿ ಆಡಿದ ಮಾತುಗಳು ಗಮನ ಸೆಳೆದವು.

ಆಡಿಯೋ ಕ್ಲಿಪ್ ಬಗ್ಗೆ ಹಾಗೂ ಅದರ ತನಿಖೆ ಬಗ್ಗೆ ವಿರೋಧ ಪಕ್ಷಗಳು ಎತ್ತಿದ್ದ ಆಕ್ಷೇಪಗಳ ಬಗ್ಗೆ ಸಿಎಂ ಮಾತನಾಡುತ್ತಿದ್ದಾಗ ಎದ್ದ ಬಿಜೆಪಿಯ ಮಾಧುಸ್ವಾಮಿ ಅವರು ಎದ್ದು, ನಿಮ್ಮ ವಿರುದ್ಧ ಕಾಂಗ್ರೆಸ್ ಶಾಸಕರು ಅಪನಂಬಿಕೆ ವ್ಯಕ್ತಪಡಿಸಿದ್ದರು, ಕುಮಾರಸ್ವಾಮಿ ನಮ್ಮ ಸಿಎಂ ಅಲ್ಲ, ಸಿದ್ದರಾಮಯ್ಯ ನಮ್ಮ ಸಿಎಂ ಎಂದಿದ್ದರು, ಅದಕ್ಕೆ ನೀವು ಬೇಸರಪಟ್ಟುಕೊಂಡು ಹೇಳಿಕೆಗಳನ್ನು ನೀಡಿದ್ದಿರಿ ಎಂದು ನೆನಪಿಸಿದರು.

ಇದಕ್ಕೆ ಉತ್ತರಿಸಿದ ಕುಮಾರಸ್ವಾಮಿ ಅವರು, 'ಹೌದು ಈ ಸದನದಲ್ಲಿ ಸಿದ್ದರಾಮಯ್ಯ ಅವರ ಬೆಂಬಲಿಗರು ಹೆಚ್ಚಿಗಿದ್ದಾರೆ. ಸಿದ್ದರಾಮಯ್ಯ ಅವರ ಬೆಂಬಲದಿಂದಲೇ ಬೆಳೆದವರು ಹಲವರಿದ್ದಾರೆ, ಅವರ ಬಲದಿಂದ ಹಲವರು ಗೆದ್ದಿದ್ದಾರೆ ಹಾಗಾಗಿ ಅವರ ಮೇಲೆ ಕೆಲವರಿಗೆ ಸಹಜವಾಗಿಯೇ ಪ್ರೀತಿ ಹೆಚ್ಚಿದೆ ಎಂದರು.

Kumaraswamy praises Siddaramaiah in assembly session

ಮುಂದುವರೆದು ಮಾತನಾಡಿ, 'ನಾನೇ ಹಲವು ಬಾರಿ ಹೇಳಿದ್ದೇನೆ, ಸಿದ್ದರಾಮಯ್ಯ ನಮ್ಮ ನಾಯಕರು, ಅವರಿಂದಲೇ ನಮ್ಮ ಸರ್ಕಾರ ಉಳಿದಿದೆ ಮತ್ತು ಉಳಿಯುತ್ತದೆ ಎಂದು ಕುಮಾರಸ್ವಾಮಿ ಹೇಳಿದರು. ಕುಮಾರಸ್ವಾಮಿ ಅವರ ಈ ಮಾತಿಗೆ ಆಡಳಿತ ಪಕ್ಷದ ಸದಸ್ಯರು ಮೇಜು ಕುಟ್ಟಿ ಸ್ವಾಗತಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+