ಕುಮಾರಸ್ವಾಮಿ ಬಂಧನ ಹೇಳಿಕೆ, ರಾಜಕೀಯ ಷಡ್ಯಂತ್ರ - ಸಿಎಂಗೆ ತಿರುಗೇಟು ಕೊಟ್ಟ ನಿಖಿಲ್

ರಾಮನಗರ ಆಗಸ್ಟ್ 23: ಸಂದರ್ಭ ಬಂದರೆ ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಅವರನ್ನು ಬಂಧನ ಮಾಡುತ್ತಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿರುಗೇಟು ಕೊಟ್ಟಿದ್ದಾರೆ. ಇಂದು ಚನ್ನಪಟ್ಟಣದ ಕೆಂಗಲ್‌ನಲ್ಲಿ ಮಾತನಾಡಿದ ಅವರು, 'ಇದು ರಾಜಕೀಯ ಷಡ್ಯಂತ್ರ, ರಾಜ್ಯದ ಜನ ಇದನ್ನ ಗಮನಿಸುತ್ತಿದ್ದಾರೆ' ಎಂದು ಹೇಳಿದರು.

ಹೆಚ್‌ಡಿ ಕುಮಾರಸ್ವಾಮಿ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವಂತೆ ಆಡಳಿತ ಪಕ್ಷಗಳ ಒತ್ತಾಯದ ಬಗ್ಗೆ ಮಾತನಾಡಿದ ನಿಖಿಲ್ ಕುಮಾರಸ್ವಾಮಿ ಅವರು, 'ವೆಂಕಟೇಶ್ವರ ಮೈನಿಂಗ್ ಕುಮಾರಸ್ವಾಮಿ ಅನುಮತಿ ಕೊಟ್ರು ಅಂತ ಆರೋಪ ಇದೆ. ಈ ಬಗ್ಗೆ 2017ರಲ್ಲೇ ಕುಮಾರಣ್ಣ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಈಗ ಮುಡಾ, ವಾಲ್ಮೀಕಿ ಹಗರಣದ ಬಗ್ಗೆ ನಾವು ಪಾದಯಾತ್ರೆ ಮಾಡಿದ್ವಿ. ಆಡಳಿತ ಪಕ್ಷವೇ ವಿಪಕ್ಷಗಳನ್ನ ಪ್ರಶ್ನೆ ಮಾಡುವ ಪರಿಸ್ಥಿತಿ ಬಂದಿದೆ. ಇದು ರಾಜ್ಯದ ಜನತೆಯ ದಿಕ್ಕು ತಪ್ಪಿಸುವ ಕೆಲಸ. ಕುಮಾರಸ್ವಾಮಿ ಅವರು ಯಾವುದೇ ಕಡತಕ್ಕೂ ಸಹಿ ಹಾಕಿಲ್ಲ. ಪ್ರಕರಣ ಸುಪ್ರೀಂ ನಲ್ಲಿರೋದ್ರಿಂದ ಪ್ರಾಸಿಕ್ಯೂಷನ್ ಕೊಡುವ ಅಗತ್ಯ ಇಲ್ಲ. ಸುಪ್ರೀಂ ಕೋರ್ಟ್ ಎಸ್ಐಟಿ, ಲೋಕಾಯುಕ್ತಕ್ಕೆ ಡೈರೆಕ್ಷನ್ ಕೊಟ್ಟ ಮೇಲೆ ಪ್ರಾಸಿಕ್ಯೂಷನ್ ಗೆ ಯಾಕೆ ಅನುಮತಿ ಕೊಡಬೇಕು' ಎಂದು ಸರ್ಕಾರಕ್ಕೆ ನಿಖಿಲ್ ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ.

Kumaraswamy Arrest Statement Political Conspiracy - Nikhil Kumaraswamy

ಜನ ಕುಮಾರಣ್ಣ ಪರ ಇರುವುದು ಕಾಂಗ್ರೆಸ್‌ಗೆ ಹತಾಶೆ-

ಲೋಕಸಭಾ ಚುನಾವಣೆ ಬಳಿಕ ಹಳೇ ಮೈಸೂರು ಭಾಗದ ಫಲಿತಾಂಶ ಕಾಂಗ್ರೆಸ್ ನಿದ್ದೆಗೆಡಿಸಿದೆ. ಹಾಸನ ಹೊರತು ಪಡಿಸಿ ಬಹುತೇಕ ಕ್ಷೇತ್ರಗಳು ಮೈತ್ರಿ ಪಕ್ಷದ ಪಾಲಾಗಿದೆ. ರಾಜ್ಯದ ಜನತೆ ಕುಮಾರಸ್ವಾಮಿ ಅವರಿಗೆ ಶಕ್ತಿ ತುಂಬಿದ್ದಾರೆ. ಬಹುಶಃ ಇದು ಕಾಂಗ್ರೆಸ್ ನವರಿಗೆ ಹತಾಶೆ ತರಿಸಿದೆ. ಹಾಗಾಗಿ ಈ ರೀತಿಯ ಹೇಳಿಕೆ ಕೊಡ್ತಿದ್ದಾರೆ ಎಂದು ನಿಖಿಲ್ ಅವರು ಕೆಣಕಿದ್ದಾರೆ.

ನೀರಿನ ದರ ಏರಿಕೆ

ರಾಜ್ಯದ ಡಿಸಿಎಂ ನೀರಿನ ದರ ಏರಿಕೆ ಬಗ್ಗೆ ಮಾತನಾಡಿದ ನಿಖಿಲ್, 'ಕಳೆದ 10ವರ್ಷಗಳಿಂದ ಬಿಡಬ್ಲ್ಯೂಎಸ್ಎಸ್ಡಿ ಸಂಕಷ್ಟದಲ್ಲಿದೆ. ಅದಕ್ಕೆ ಶಕ್ತಿ ತುಂಬಲು ದರ ಏರಿಕೆ ಮಾಡ್ತೀವಿ ಅಂದವ್ರೆ. ರಾಜ್ಯದ ಜನತೆಗೆ ಒಂದು ಕಡೆ ಪೆಟ್ರೋಲ್, ಡೀಸೆಲ್‌ ದರ ಏರಿಕೆ ಬರೆ, ಮತ್ತೊಂದೆಡೆ ಹಾಲಿನ ದರ ಏರಿಕೆ ಬರೆ ಹಾಕಲಾಗಿದೆ. ರೈತರಿಗೆ ಹಾಲಿನ ಪ್ರೋತ್ಸಾಹ ಧನವನ್ನೂ ಕೊಡ್ತಿಲ್ಲ' ಎಂದು ಕಿಡಿ ಕಾರಿದರು.

Kumaraswamy Arrest Statement Political Conspiracy - Nikhil Kumaraswamy

ಡಿಸಿಎಂಗೆ ನಿಖಿಲ್ ತಿರುಗೇಟು

ಇನ್ನೂ ಬೆಂಗಳೂರು ನಾಗರೀಕರ ಬಗ್ಗೆ ಡಿಸಿಎಂ ಲಘುವಾಗಿ ಮಾತಮಾಡಿದ್ದಾರೆ. ಬೆಂಗಳೂರಿಗರಿಗೆ ಉಪಕಾರ ಸ್ಮರಣೆ ಇಲ್ಲ ಅಂದವ್ರೆ. ಅವರಿಗೆ ನಾನು ಒಂದು ಪ್ರಶ್ನೆ ಕೇಳ್ತೇನೆ. 136 ಜನ ಶಾಸಕರನ್ನ ಗೆಲ್ಲಿಸಿದಾಗ ಉಪಕಾರ ಸ್ಮರಣೆ ಇತ್ತಾ.? ಬೆಂಗಳೂರಿನಲ್ಲಿ 12 ಮಂದಿ ಶಾಸಕರನ್ನ ಗೆಲ್ಲಿಸಿದಾಗ ಉಪಕಾರ ಸ್ಮರಣೆ ಇತ್ತಾ.? ಜನಾಭಿಪ್ರಾಯ ಜೊತೆಯಲ್ಲಿ ಇದ್ದಾಗ ಎಲ್ಲವೂ ಸರಿ. ಲೋಕಸಭಾ ಚುನಾವಣೆ ಬಳಿಕ ಈ ರೀತಿಯ ಲಘುವಾಗಿ ಮಾತನಾಡೋದು ಅವರ ಸ್ಥಾನಕ್ಕೆ ಶೋಭೆ ತರಲ್ಲ. ಜನ ಆಶಿರ್ವಾದ ಮಾಡಿದ್ದಾರೆ, ಅದಕ್ಕೆ ತಕ್ಕನಾಗಿ ನಡೆದುಕೊಳ್ಳಿ. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ನಿಮ್ಮ 136 ಸ್ಥಾನ ಎಲ್ಲಿಗೆ ಬಂದು ನಿಲ್ಲುತ್ತೋ ನೋಡಿಕೊಳ್ಳಿ ಎಂದು ಡಿಸಿಎಂ ಡಿಕೆ ಶಿವಕುಮಾರ್‌ಗೆ ನಿಖಿಲ್ ಕುಮಾರಸ್ವಾಮಿ ತಿರುಗೇಟು ಕೊಟ್ಟಿದ್ದಾರೆ.

ತಳಮಟ್ಟದ ಕಾರ್ಯಕರ್ತರನ್ನು ಗುರುತಿಸುವ ಕೆಲಸ ಮಾಡುವೆ...

ಚನ್ನಪಟ್ಟಣದಲ್ಲಿ ನಿಖಿಲ್ ಕುಮಾರಸ್ವಾಮಿ ಕ್ಷೇತ್ರ ಸಂಚಾರ ವಿಚಾರದ ಬಗ್ಗೆ ಮಾತನಾಡಿದ ಅವರು, 'ನಾನು ನಾಳೆಯೆ ಶಾಸಕನಾಗಬೇಕು, ವಿಧಾನಸೌಧದ ಮೆಟ್ಟಿಲು ಹತ್ತಬೇಕು ಎಂಬ ನಿರೀಕ್ಷಿ ಇಟ್ಟುಕೊಂಡು‌ ಕೆಲಸ ಮಾಡುತ್ತಿಲ್ಲ. ದೇವೇಗೌಡರು ಪ್ರಾದೇಶಿಕ ಪಕ್ಷ ಕಟ್ಟಿ ಬೆಳೆಸಿದ್ದಾರೆ. ಇದನ್ನ ಕುಮಾರಣ್ಣ ಉಳಿಸಿಕೊಂಡು ಬೆಳೆಸಿಕೊಂಡು ಹೋಗುತ್ತಿದ್ದಾರೆ. ತಳಮಟ್ಟದ ಕಾರ್ಯಕರ್ತರನ್ನು ಗುರುತಿಸುವ ಕೆಲಸ ಆಗಬೇಕು' ಎಂದರು.

ನಿಖಿಲ್ ಕುಮಾರಸ್ವಾಮಿ ರಾಜಕೀಯ ಷಡ್ಯಂತ್ರಕ್ಕೆ ಬಲಿಯಾದ್ರು ಅಂತ ನನ್ನ ಮೇಲೆ ಸಾಕಷ್ಟು ಒತ್ತಡ ಇತ್ತು. ಆದ್ರೆ ನಾನು ಈಗ ಚುನಾವಣೆಗೆ ಸ್ಪರ್ಧೆ ಮಾಡೊ ಸೂಕ್ತ ಸಮಯ ಅಲ್ಲ. ರಾಜ್ಯದಾದ್ಯಂತ ಕಾರ್ಯಕರ್ತರ ಜೊತೆ ಒಡನಾಟ ಬೆಳೆಸಿಕೊಳ್ಳಬೇಕು ಅಂತ ಕೆಲಸ ಆರಂಭಿಸಿದ್ದೇನೆ. ನನಗೆ ಯಾವುದೇ ಆಕಾಂಕ್ಷಿ ಅಲ್ಲ‌, ಅಪೇಕ್ಷೆಯೂ ಇಲ್ಲ. ಏನಾದ್ರು ಜನತಾದಳದ ಚಿನ್ಹೆ ಅಡಿ ಚನ್ನಪಟ್ಟಣದಲ್ಲಿ ಸ್ಪರ್ಧೆ ಮಾಡಬೇಕು ಅನ್ನೊ ಸಂದರ್ಭ ಬಂದರೆ ನೂರಕ್ಕೆ ನೂರರಷ್ಟು ನಮ್ಮ ಕಾರ್ಯಕರ್ತರಿಗೆ ಅವಕಾಶ ಮಾಡಿಕೊಡುತ್ತೇವೆ' ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.

ಉಪ ಚುನಾವಣೆಗೆ ಸಮಸ್ಯೆ ಬಗೆಹರಿಸುತ್ತೇನೆ...

ಇನ್ನೂ ಉಪ ಚುನಾವಣೆಯ ಬಗ್ಗೆ ಮಾತನಾಡಿದ ಅವರು, ರಾಜ್ಯದಲ್ಲಿ ಮೂರು ಕ್ಷೇತ್ರದಲ್ಲಿ ಚನ್ನಪಟ್ಟಣ, ಶಿಂಗ್ಗಾವಿ, ಸಂಡೂರು ಕ್ಷೇತ್ರದಲ್ಲಿ ಬೈ ಎಲೆಕ್ಷನ್ ನಡೆಯಬೇಕಿದೆ. ಇದಕ್ಕೆ ಶೀಘ್ರವೇ ದಿನಾಂಕ ಘೋಷಣೆಯಾಗಲಿದೆ. ಹೆಚ್‌ಡಿಕೆ ಸ್ವಕ್ಷೇತ್ರದಲ್ಲಿ ಹಲವಾರು ಸಮಸ್ಯೆ ಇವೆ. ಹೀಗಾಗಿ ಜನರ ಸಮಸ್ಯೆ ಆಲಿಸಲು ಬಂದಿದ್ದೇನೆ ಎಂದರು.

ಅಲ್ಲದೇ ಉಪಚುನಾವಣೆ ಬಗ್ಗೆ ಮುಖಂಡರ ಜತೆ ಚರ್ಚೆ ಮಾಡಲು ಬಂದಿದ್ದೇನೆ. ಚನ್ನಪಟ್ಟಣದಲ್ಲಿ ಎನ್‌ಡಿಎ ಅಭ್ಯರ್ಥಿ ಗೆಲುವಾಗಬೇಕು. ಹೀಗಾಗಿ ತಳಮಟ್ಟದಿಂದ ಎರಡೂ ಪಕ್ಷದ ಕಾರ್ಯಕರ್ತರು ಒಗ್ಗಟ್ಟಾಗಿ ಕೆಲಸ ಮಾಡಬೇಕಿದೆ. ಚನ್ನಪಟ್ಟಣ ಕ್ಚೇತ್ರಕ್ಕೆ ಸಂಬಂಧಿಸಿದಂತೆ ವರದಿ ಸಿದ್ದಪಡಿಸಿದ್ದೇವೆ. ಆ ವರದಿಯನ್ನ ಬಿಜೆಪಿ ರಾಷ್ಟ್ರೀಯ ನಾಯಕರು ಗಮನಕ್ಕೆ ಕುಮಾರಸ್ವಾಮಿ ತರುತ್ತಾರೆ‌ ಎಂದರು.

ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವ ಬಗ್ಗೆ ಯೋಗೇಶ್ವರ್ ಹೇಳಿಕೆ ವಿಚಾರ ವಾಗಿ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, ಯೋಗೇಶ್ವರ್ ಬಿಜೆಪಿಯಲ್ಲಿ ಎಂಎಲ್‌ಸಿ ಇದ್ದಾರೆ. ಯೋಗೇಶ್ವರ್ ಅಥವಾ ಕುಮಾರಸ್ವಾಮಿ ಆಗಲಿ ಯಾವುದೆ ಅಪಸ್ವರಕ್ಕೆ ದಾರಿ ಮಾಡಿಕೊಟ್ಟಿಲ್ಲ. ಅಂತಿಮ ತಿರ್ಮಾನ ಏನಾದ್ರೂ ಇದ್ರೆ ದೆಹಲಿ‌ಮಟ್ಟದಲ್ಲಿ ತಿರ್ಮಾನ ಆಗುತ್ತೆ. ಎಲ್ಲಾ ವಿಚಾರಗಳಿಗೂ ತಲೆ ಭಾಗಿ ಒಳ್ಳೆಯ ತಿರ್ಮಾನಕ್ಕೆ ಬರುತ್ತೇವೆ. ಯೋಗೇಶ್ವರ್ ರನ್ನೂ ಕೂಡ ವಿಶ್ವಾಸವಾಗಿ ತೆಗೆದುಕೊಳ್ಳುತ್ತೇವೆ ಎಂದು ಚನ್ನಪಟ್ಟಣದಲ್ಲಿ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+