ಕುದುರೆಮುಖ-ಮಂಗಳೂರು ಸಂಚಾರ ಆರಂಭ, ಒನ್ ವೇ ಓಡಾಟಕ್ಕೆ ಅನುವು
ಚಿಕ್ಕಮಗಳೂರು, ಆಗಸ್ಟ್.19: ಕುದುರೆಮುಖ-ಮಂಗಳೂರು ಸಂಚಾರ ಆರಂಭವಾಗಿದೆ. ಗುಡ್ಡ ಕುಸಿದು ಇಂದು ಭಾನುವಾರ ಬೆಳಗ್ಗಿನಿಂದಲೂ ಸಂಚಾರವಿರಲಿಲ್ಲ. ನೂರಾರು ವಾಹನಗಳು ಸಾಲುಗಟ್ಟಿ ನಿಂತಿದ್ದವು.
ಮಲೆನಾಡಿನ ಮಳೆಯಿಂದ ನಾಲ್ಕು ಕಡೆ ಗುಡ್ಡ ಕುಸಿದಿದ್ದು, ಕುದುರೆಮುಖ-ಮಂಗಳೂರು ಮಾರ್ಗದಲ್ಲಿ ಬಿದ್ದಿದ್ದ ಗುಡ್ಡವನ್ನು ತಾತ್ಕಾಲಿಕವಾಗಿ ತೆರವುಗೊಳಿಸಲಾಗಿದೆ. ಅಧಿಕಾರಿಗಳು ಒನ್ ವೇ ಓಡಾಟಕ್ಕೆ ಅನುವು ಮಾಡಿಕೊಟ್ಟಿದ್ದು, ನಿಧಾನವಾಗಿ ಒಂದೊಂದೆ ವಾಹನಗಳ ಸಂಚಾರ ಆರಂಭಿಸಿವೆ.
ಪೊಲೀಸ್ ಹಾಗೂ ಅಗ್ನಿಶಾಮಕ ಸಿಬ್ಬಂದಿ ಸ್ಥಳದಲ್ಲೇ ಬೀಡುಬಿಟ್ಟಿದ್ದು, ಸುರಿಯೋ ಮಳೆಯಲ್ಲಿ ಸಹ ಸಿಬ್ಬಂದಿಗಳು ಗುಡ್ಡವನ್ನು ತೆರವು ಮಾಡಿದ್ದಾರೆ.

ರಾಜ್ಯ ಹೆದ್ದಾರಿಯಲ್ಲಿ ನಾಲ್ಕು ಕಡೆ ಗುಡ್ಡ ಕುಸಿದಿದ್ದು, ಜೆಸಿಬಿ ಮೂಲಕ ಕುಸಿದು ಬಿದ್ದ ಗುಡ್ಡದ ಮಣ್ಣನ್ನು ತೆರವುಗೊಳಿಸಲಾಗಿದೆ. ಸ್ಥಳಕ್ಕೆ ಮೂಡಿಗೆರೆ ಶಾಸಕ ಕುಮಾರ ಸ್ವಾಮಿ ಭೇಟಿ ನೀಡಿದ್ದರು. ಸಂಜೆಯೊಳಗೆ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸುವಂತೆ ಶಾಸಕರು ಆದೇಶ ನೀಡಿದ ಮೇರೆಗೆ ಇದೀಗ ಸಂಚಾರ ಆರಂಭವಾಗಿದೆ.
ಬೆಳಗ್ಗೆಯಷ್ಟೇ ರಾಜ್ಯ ಹೆದ್ದಾರಿಯಲ್ಲಿ ಗುಡ್ಡ ಕುಸಿತದಿಂದ ಸಂಚಾರ ಬಂದ್ ಮಾಡಲಾಗಿತ್ತು. ಕುದುರೆಮುಖ ಪೊಲೀಸರು ಹಾಗೂ ಅರಣ್ಯ ಸಿಬ್ಬಂದಿಯಿಂದ ಕಾರ್ಯಚರಣೆ ನಡೆದಿದ್ದು,
ಮಣ್ಣು ತೆರವಿನ ನಂತರ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.












Click it and Unblock the Notifications