ಕುದುರೆಮುಖ ಕೆವಿ ವಿದ್ಯಾರ್ಥಿಗಳ ಭವಿಷ್ಯ ತೂಗುಯ್ಯಾಲೆ

ಏಪ್ರಿಲ್ 1ರಿಂದ ಶಾಲೆ ಪುನರಾರಂಭವಾಗಬೇಕಿತ್ತು. 1ನೇ ತರಗತಿಯಿಂದ 10ನೆಯ ತರಗತಿವರೆಗೆ ಸುಮಾರು 200 ವಿದ್ಯಾರ್ಥಿಗಳು ಈ ವರ್ಷ ಶಿಕ್ಷಣ ಪಡೆಯುವುದು ದುಸ್ತರವಾಗಿದೆ. ಕಂಪನಿಯ ಮಾನವ ಸಂಪನ್ಮೂಲ ವಿಭಾಗದ ಈ ನಿರ್ಧಾರವನ್ನು ವಿರೋಧಿಸಿ ಪೋಷಕರ ಒಕ್ಕೂಟ ರಾಜ್ಯ ಹೈಕೋರ್ಟಿನಲ್ಲಿ ರಿಟ್ ಅರ್ಜಿ ಸಲ್ಲಿಸಿದೆ.
ಏಪ್ರಿಲ್ 3ರಂದು ರಿಟ್ ಅರ್ಜಿಯನ್ನು ಆಲಿಸಿದ ಹೈಕೋರ್ಟ್, ಶಾಲೆಯನ್ನು ಜಿಲ್ಲಾಧಿಕಾರಿ ಸುಪರ್ದಿಗೆ ನೀಡುವಂತೆ KIOCLಗೆ ಸೂಚಿಸಿದೆ. ಜತೆಗೆ ಶಾಲೆಯನ್ನು ನಡೆಸುವ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳುವಂತೆ ರಾಜ್ಯ ಸರಕಾರಕ್ಕೆ ಆದೇಶಿಸಿದೆ.
ಕುದುರೆಮುಖ ಅದಿರು ಕಂಪನಿಯು ಕೇಂದ್ರೀಯ ವಿದ್ಯಾಲಯ ಶಾಲೆಗೆ ಹಣಕಾಸು ನೆರವು ಮುಂದುವರಿಸುವುದಕ್ಕೆ ತನಗೆ ಸಾಧ್ಯವಾಗುತ್ತಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದೆ.












Click it and Unblock the Notifications