ಮತ್ತೆ ಹಳಿ ಮೇಲೆ ಐಷಾರಾಮಿ ಗೋಲ್ಡನ್ ಚಾರಿಯಟ್ ಸಂಚಾರ
ಬೆಂಗಳೂರು, ಸೆಪ್ಟೆಂಬರ್ 21 : ಕೆಎಸ್‌ಟಿಡಿಸಿ ತನ್ನ ಹೆಮ್ಮೆಯ ಗೋಲ್ಡನ್ ಚಾರಿಯಟ್ ರೈಲು ಸೇವೆಗೆ ಕೆಲವು ಬದಲಾವಣೆಗಳನ್ನು ತಂದಿದ್ದು ಮರು ಚಾಲನೆ ನೀಡಲಿದೆ. ಕರ್ನಾಟಕದ ವಿವಿಧ ಪ್ರವಾಸಿ ತಾಣಗಳ ಭೇಟಿಗೆ ಅವಕಾಶ ಒದಗಿಸುವ ಗೋಲ್ಡನ್ ಚಾರಿಯಟ್ ಸೇವೆ ಆರಂಭವಾಗಿ 10 ವರ್ಷಗಳು ಕಳೆದಿವೆ.
ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (ಕೆಎಸ್‌ಟಿಡಿಸಿ) ಐಷಾರಾಮಿ ಗೋಲ್ಡನ್ ಚಾರಿಯಟ್ ರೈಲು ಸೇವೆಯ ಮೂಲಸೌಕರ್ಯ ಮತ್ತು ವಾಣಿಜ್ಯ ವಹಿವಾಟು ನೋಡಿಕೊಳ್ಳಲು ಟೆಂಡರ್ ಆಹ್ವಾನಿಸಿದೆ. ಮಲ್ಪೆ ಗ್ರೂಪ್ ಆಫ್ ಹೋಟೆಲ್‌ಗೆ ನೀಡಿದ್ದ ಟೆಂಡರ್ ಈ ವರ್ಷದ ಆರಂಭದಲ್ಲಿ ಅಂತ್ಯಗೊಂಡಿತ್ತು.
ಸೆಪ್ಟೆಂಬರ್ ಅಂತ್ಯದ ತನಕ ಟೆಂಡರ್ ಹಾಕಲು ಅವಕಾಶವಿದೆ. ಅಕ್ಟೋಬರ್ 20ರ ವೇಳೆಗೆ ಟೆಂಡರ್ ಪ್ರಕ್ರಿಯೆ ಮುಗಿಯುವ ನಿರೀಕ್ಷೆ ಇದೆ. ಐಷಾರಾಮಿ ರೈಲಿನ ಒಳಾಂಗಣ ವಿನ್ಯಾಸದಲ್ಲಿಯೂ ಹಲವು ಬದಲಾವಣೆಗಳನ್ನು ಮಾಡಿ, ಸೇವೆಗೆ ಮರು ಚಾಲನೆ ನೀಡಲಾಗುತ್ತದೆ.
10 ವರ್ಷಗಳಿಂದ ಕೆಎಸ್‌ಟಿಡಿಸಿ ಐಷಾರಾಮಿ ಗೋಲ್ಡನ್ ಚಾರಿಯಟ್ ರೈಲನ್ನು ಓಡಿಸುತ್ತಿದೆ. ಆದರೆ, ಈ ರೈಲಿನಿಂದ ಲಾಭಕ್ಕಿಂತ ನಷ್ಟವಾಗಿದ್ದೆ ಹೆಚ್ಚು ಎಂಬ ಆರೋಪವಿದೆ. ಹತ್ತು ವರ್ಷದಲ್ಲಿ ಸುಮಾರು 40 ಕೋಟಿ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ. ಈಗ ರೈಲನ್ನು ಲಾಭವದ ಹಳಿ ಮೇಲೆ ತರುವ ಪ್ರಯತ್ನ ಸಾಗಿದೆ.....

ಹೊಸ ಕಂಪನಿಗೆ ಕೈಗೆ ರೈಲು
ಟೆಂಡರ್ ಪಡೆದ ಹೊಸ ಕಂಪನಿಯ ಕೈಗೆ ಗೋಲ್ಡನ್ ಚಾರಿಯಟ್ ಸಿಗಲಿದೆ. ಮೂಲಸೌಕರ್ಯ, ಮಾರ್ಕೆಟಿಂಗ್, ಟಿಕೆಟ್ ಮಾರಾಟ, ದೇಶ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ರೈಲು ಸೇವೆ ಬಗ್ಗೆ ಪ್ರಚಾರ ನಡೆಸುವ ಕೆಲಸವನ್ನು ಕಂಪನಿ ಮಾಡಬೇಕಾಗುತ್ತದೆ.
ಅಕ್ಟೋಬರ್ 20ರ ವೇಳೆಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳಿದ್ದು, ಹೊಸ ಕಂಪನಿ ಐಷಾರಾಮಿ ರೈಲಿನ ಸೇವೆಯ ಹೊಣೆಯನ್ನು ಹೊತ್ತುಕೊಳ್ಳಲಿದೆ. ರೈಲು ನೂತನ ಮಾದರಿಯಲ್ಲಿ ಮತ್ತೆ ಹಳಿಯ ಮೇಲೆ ಸಂಚಾರ ನಡೆಸಲಿದೆ.

ರೈಲಿನ ವಿನ್ಯಾಸ ಬದಲಾವಣೆ
ಹೊಸ ಕಂಪನಿ ರೈಲಿನ ವಿನ್ಯಾಸದಲ್ಲಿಯೂ ಹಲವು ಬದಲಾವಣೆಗಳನ್ನು ಮಾಡಬಹುದಾಗಿದೆ. ಆದರೆ, ರೈಲಿನ ಮೂಲ ವಿನ್ಯಾಸಕ್ಕೆ ಯಾವುದೇ ಧಕ್ಕೆ ಆಗುವಂತಿಲ್ಲ. ರೈಲಿನ ಬೋಗಿಗಳ ಸಂಖ್ಯೆ, ಬಾರ್, ಹೋಟೆಲ್, ಜಿಮ್, ಸ್ಪಾ ಸೇವೆಯಲ್ಲಿ ಯಾವುದೇ ಬದಲಾವಣೆ ಮಾಡುವುದಿಲ್ಲ.

ಈ ವರ್ಷದ ಬೇಸಿಗೆಯಲ್ಲಿ ಸಂಚಾರವಿಲ್ಲ
ರೈಲಿನ ವಿನ್ಯಾಸ ಬದಲಾವಣೆಗೆ ಕಾಲಾವಕಾಶ ಬೇಕಾಗಿದೆ. ಆದ್ದರಿಂದ, ಈ ಬಾರಿಯ ಅಕ್ಟೋಬರ್ ನಿಂದ ಫೆಬ್ರವರಿ ತನಕ ಗೋಲ್ಡನ್ ಚಾರಿಯಟ್ ಸಂಚಾರ ಇರುವುದಿಲ್ಲ. 2019ರ ಸೆಪ್ಟೆಂಬರ್‌ನಲ್ಲಿ ರೈಲು ನೂತನ ಮಾದರಿಯಲ್ಲಿ ಸಿದ್ಧವಾಗಲಿದೆ ಎಂಬುದು ಕೆಎಸ್‌ಟಿಡಿಸಿ ಅಧಿಕಾರಿಗಳ ನಿರೀಕ್ಷೆ.
ಹೊಸದಾಗಿ ಟೆಂಡರ್ ಪಡೆದ ಕಂಪನಿ ವರ್ಷಕ್ಕೆ 15 ಟ್ರಿಪ್ ನಡೆಸಲೇಬೇಕು. ಪ್ರತಿ ವರ್ಷ ಟ್ರಿಪ್‌ಗಳ ಸಂಖ್ಯೆಯನ್ನು ಹೆಚ್ಚಿಸುತ್ತಾ ಹೋಗಬೇಕಾಗಿದೆ.

ನಷ್ಟದಲ್ಲಿ ಐಷಾರಾಮಿ ರೈಲು
'ಕಳೆದ 10 ವರ್ಷಗಳಲ್ಲಿ ಐಷಾರಾಮಿ ಗೋಲ್ಡನ್ ಚಾರಿಯಟ್ ರೈಲಿನಿಂದ ರಾಜ್ಯ ಸರ್ಕಾರಕ್ಕೆ 40 ಕೋಟಿ ನಷ್ಟ ಉಂಟಾಗಿದೆ. ಕರ್ನಾಟಕ ಸರ್ಕಾರ, ರೈಲ್ವೆ ಇಲಾಖೆ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಈ ಸೇವೆ ಒದಗಿಸಲಾಗುತ್ತಿದೆ. ಆದರೆ, ಕೆಲವು ಸಮಸ್ಯೆಗಳಿಂದಾಗಿ ನಷ್ಟವಾಗಿದೆ' ಎಂದು ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಹೇಳಿದ್ದಾರೆ.
'ರೈಲು ಲಾಭದಾಯಕವಾಗಲು ಅಗತ್ಯ ಬದಲಾವಣೆಗಳನ್ನು ತಂದು ಮತ್ತೆ ಓಡಿಸಲಾಗುತ್ತದೆ. ಪ್ರವಾಸಿಗರಿಗೆ ಅನುಕೂಲವಾಗಬೇಕು ಎಂಬುದು ನಮ್ಮ ಉದ್ದೇಶವಾಗಿದೆ' ಎಂದು ಸಚಿವರು ತಿಳಿಸಿದ್ದಾರೆ.
-
ನಟಿ ನೋರಾ ಫತೇಹಿ ವೃತ್ತಿಜೀವನಕ್ಕೆ ಕುತ್ತು ತಂದ 'ಸೆರಗ ಸರ್ಸೆ' ವಿವಾದ: ಗಡಿಪಾರು ಮಾಡುವಂತೆ ಗೃಹ ಸಚಿವಾಲಯಕ್ಕೆ ದೂರು -
Bengaluru: ಬಿಡಿಎಗೆ 50ರ ಸಂಭ್ರಮ; ಹೊಸ ಲೋಗೋ, ಟ್ಯಾಗ್ಲೈನ್ ವಿನ್ಯಾಸ ಮಾಡಿ 1 ಲಕ್ಷ ರೂ. ಬಹುಮಾನ ಗೆಲ್ಲಿ -
ಹಿಂದುಳಿದ, ದುರ್ಬಲ ವರ್ಗದ ಮಕ್ಕಳಿಗೆ ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ ಶೇ. 25 ರಷ್ಟು ಉಚಿತ ಪ್ರವೇಶಕ್ಕೆ ಅರ್ಜಿ ಆಹ್ವಾನ -
ಮಾರ್ಚ್ 23ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ












Click it and Unblock the Notifications