KSRTC: ಬಸ್ ಜಾಹೀರಾತು ಮೂಲಕ 'ಬಿಹಾರ ಪ್ರವಾಸೋದ್ಯಮ' ಪ್ರಚಾರ, ಇದು ಮಾನ್ಯವೇ?
ಬೆಂಗಳೂರು, ಆಗಸ್ಟ್ 23: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ತನ್ನ ಕಾರ್ಯ ನಿರ್ವಹಣೆಯಿಂದ ಹೆಸರುವಾಸಿ. ಹೊಸ ಹೊಸ ಮಾದರಿಯ ಬಸ್ ಪರಿಚಯಿಸುವ ಜೊತೆಗೆ ಸಾರಿಗೆ ಇಲಾಖೆ ಪ್ರಯಾಣಿಕರಿಗೆ ಅನುಕೂಲವಾಗುವ ಉಪಕ್ರಮಗಳನ್ನು ಪರಿಚಯಿಸುತ್ತಲೇ ಇರುತ್ತದೆ. ಈ ಸಂಬಂಧ ಸಂಸ್ಥೆಗೆ ಸಾಕಷ್ಟು ಪ್ರಶಸ್ತಿಗಳು ಬಂದಿವೆ. ಹೀಗಿದ್ದರೂ 'ಬಿಹಾರ ಪ್ರವಾಸೋದ್ಯಮ'ವನ್ನು ಪ್ರಚಾರ ಮಾಡುತ್ತಿರುವುದೇಕೆ?
ಹೌದು, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಬಸ್‌ಗಳ ಹಿಂಭಾಗ ಬಿಹಾರ ಪ್ರವಾಸೋದ್ಯಮ (Bihar Tourism) ಜಾಹೀರಾತು ಹಾಕಲಾಗಿದೆ. ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ವೇದಿಕೆಯಲ್ಲಿ ಸಾರ್ವಜನಿಕರು ಪ್ರಶ್ನೆ ಮಾಡಿದ್ದಾರೆ. ಸಂಸ್ಥೆಯ ಈ ನಡೆ ವಿರುದ್ಧ ಕನ್ನಡಗರು ಬೇಸರ ಹೊರ ಹಾಕಿದ್ದಾರೆ. ಇದಕ್ಕೆ ಕೆಎಸ್‌ಆರ್‌ಟಿಸಿ ತಕ್ಕ ಪ್ರತ್ಯುತ್ತ ಸಹ ನೀಡಿದೆ.

ಎಕ್ಸ್ ವೇದಿಕೆಯಲ್ಲಿ ಮಧುಕೇಶ್ ಜಿ ಎಂಬುವವರು ಬಸ್ ಹಿಂಬದಿಯಲ್ಲಿರುವ ಬಿಹಾರ್ ಟೂರಿಸಂ ಇರುವ ಬಸ್‌ಗಳು ಫೋಟೋ ಟ್ವೀಟ್ ಮಾಡಿದ್ದಾರೆ. 'ಬಹುತೇಕ ನಮ್ಮ ಬಸ್‌ಗಳಲ್ಲಿ ಬಿಹಾರ ಟೂರಿಸಂ ಬಗ್ಗೆ ಪ್ರಚುರ ಆಗುತ್ತಿದ್ದು, ಏಕೆ ನಮ್ಮ ರಾಜ್ಯದ ಪ್ರವಾಸೋದ್ಯಮ ಬಗ್ಗೆ ನಮ್ಮ ಬಸ್ ಗಳಲ್ಲಿ ಪ್ರಚುರ ಆಗುತ್ತಿಲ್ಲ. ಇದು ಕೇವಲ ಚಾಮರಾಜನಗರ ಜಿಲ್ಲೆ ಅಲ್ಲದೆ ರಾಜ್ಯದ ಎಲ್ಲಾ ಬಸ್ ಗಳಲ್ಲಿ ನೋಡುತ್ತಿದ್ದೇವೆ'' ಎಂದು ಬರೆದುಕೊಂಡಿದ್ದಾರೆ. ಅಲ್ಲದೇ ಅವರು ಕೆಎಸ್‌ಆರ್‌ಟಿಸಿ ಟ್ವಿಟ್ಟರ್ ಹ್ಯಾಂಡಲ್ ಅನ್ನು ಟ್ಯಾಗ್ ಮಾಡಿದ್ದಾರೆ.
ಈ ವಿಚಾರಕ್ಕೆ ಸಂಬಂಧಿಸದಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಪ್ರತ್ಯುತ್ತರ ನೀಡಿದೆ. ನಮ್ಮ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಕುರಿತು ಜಾಹೀರಾತನ್ನು ಬೇರೆ ರಾಜ್ಯಗಳಲ್ಲಿ ಸಹ ಪ್ರದರ್ಶಿಸಲಾಗುತ್ತದೆ. ಅಲ್ಲದೇ ಎಲ್ಲ ರಾಜ್ಯಗಳು ಟೂರಿಸಂ ಉತ್ತೇಜಿಸಿಸುವ ಸಲುವಾಗಿ ಈ ಜಾಹೀರಾತನ್ನು ನೀಡಲಾಗುತ್ತಿದೆ. ಮತ್ತು ಇದು ಮಾನ್ಯವಾಗಿದೆ'' ಎಂದು ತನ್ನ ನಡೆಯನ್ನು ಸಂಸ್ಥೆಯು ಸಮರ್ಥಿಸಿಕೊಂಡಿದೆ.
ಬಹುತೇಕ ನಮ್ಮ @KSRTC_Journeys ಬಸ್ ಗಳಲ್ಲಿ ಬಿಹಾರ ಟೂರಿಸಂ ಬಗ್ಗೆ ಪ್ರಚುರ ಆಗುತ್ತಿದ್ದು, ಏಕೆ ನಮ್ಮ ರಾಜ್ಯದ ಪ್ರವಾಸೋದ್ಯಮ ಬಗ್ಗೆ ನಮ್ಮ ಬಸ್ ಗಳಲ್ಲಿ ಪ್ರಚುರ ಆಗುತ್ತಿಲ್ಲ. ಇದು ಕೇವಲ ಚಾಮರಾಜನಗರ ಜಿಲ್ಲೆ ಅಲ್ಲದೆ ರಾಜ್ಯದ ಎಲ್ಲಾ ಬಸ್ ಗಳಲ್ಲಿ ನೋಡುತ್ತಿದ್ದೇವೆ@KarnatakaWorld @HKPatilINC @CMofKarnataka @osd_cmkarnataka pic.twitter.com/kno7xbM734
— ಮಧುಕೇಶ್ ಜಿ | Madhukesh G 🇮🇳 (@g_madhukesh) August 22, 2024
ಈ ಸಾರಿಗೆ ಸಂಸ್ಥೆ ತನ್ನ ವಿಶೇಷ ಸೇವೆ ಹಾಗೂ ದಕ್ಷತೆಯಿಂದ ಗುರುತಿಸಿಕೊಂಡಿದೆ. ಬೇರೆ ಬೇರೆ ರಾಜ್ಯಗಳ ಸರ್ಕಾರಿ ಸಾರಿಗೆ ಸಂಸ್ಥೆಗಳಿಗೆ ನಮ್ಮ ಕೆಎಸ್‌ಆರ್‌ಟಿಸಿ ಮಾದರಿಯಾಗಿದೆ. ಕೆಎಸ್‌ಆರ್‌ಟಿಸಿಗೆ ಇತ್ತೀಚಿನ ವರ್ಷಗಳಲ್ಲಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸೇರಿ ಹತ್ತಾರು ಪ್ರತಿಷ್ಠಿತ ಪ್ರಶಸ್ತಿಗಳು ಲಭವಿಸಿವೆ.
ಕಳೆದ ವಾದ ಟಿವಿ-9 ನೆಟ್ವರ್ಕ್ ನ ದೇಶದ ಲೀಡರ್ಸ್ ಆಫ್ ರೋಡ್ ಟ್ರಾನ್ಸಪೋರ್ಟ್ ಪ್ರಶಸ್ತಿ-2024 ಅನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ನೀಡಿ ಗೌರವಿಸಲಾಗಯಿತು. ಬ್ರ್ಯಾಂಡಿಂಗ್ ಹಾಗೂ ಮಾನವ ಸಂಪನ್ಮೂಲ ಉಪಕ್ರಮದ ಆಧಾರದಲ್ಲಿ ಈ ಪ್ರಶಸ್ತಿಯು ಸಂಸ್ಥೆಗೆ ಲಭಿಸಿದೆ. ನವದೆಹಲಿಯಲ್ಲಿ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಖಾತೆ ರಾಜ್ಯ ಸಚಿವರಾದ ಹರ್ಷ್ ಮಲೋತ್ರ ಅವರು ಪ್ರಶಸ್ತಿ ಪ್ರದಾನ ಮಾಡಿದರು.












Click it and Unblock the Notifications