KSRTC: ಬಸ್‌ಗಳ ಲೈವ್ ಲೋಕೇಶನ್ ಇನ್ಮುಂದೆ ನಿಮ್ಮ ಮೊಬೈಲ್‌ನಲ್ಲಿ, ವಿಟಿಎಂಎಸ್ ವ್ಯವಸ್ಥೆ ಶೀಘ್ರವೇ ಜಾರಿ
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ವ್ಯಾಪ್ತಿಯಲ್ಲಿ 8,000 ಕ್ಕೂ ಅಧಿಕ ಬಸ್‌ಗಳು ನಿತ್ಯ ಲಕ್ಷಾಂತರ ಕಿಲೋ ಮೀಟರ್ ಸಂಚರಿಸಿ ಸಾರ್ವಜನಿಕರಿಗೆ ದಕ್ಷ ಸೇವೆ ನೀಡುತ್ತಿವೆ. ಇವುಗಳ ಮೇಲ್ವಿಚಾರಣೆಗೆ ಮತ್ತು ಪ್ರಯಾಣಿಕರಿಗೆ ಅನುಕೂಲ ಒದಗಿಸುವ ಉದ್ದೇಶದಿಂದ ಬಹುನಿರೀಕ್ಷಿತ ವಾಹನ ಟ್ರ್ಯಾಕಿಂಗ್ ಮತ್ತು ಮಾನಿಟರಿಂಗ್ ಸಿಸ್ಟಮ್ (VTMS) ಸಾರಿಗೆ ಇಲಾಖೆ ಜಾರಿಗೆ ತರಲು ಮುಂದಾಗಿದೆ.
ಈ ಹೊಸ ವಿಟಿಎಂಎಸ್ ವ್ಯವಸ್ಥೆ ಶೀಘ್ರದಲ್ಲೇ ಜಾರಿಗೆ ಬರಲಿದೆ. ಇದರಿಂದ ಪ್ರಯಾಣಿಕರು ಮೊಬೈಲ್ ಆಪ್‌ನಲ್ಲಿ ಬಸ್‌ಗಳ ಸಂಚಾರದ ನೈಜ ಸಮಯದಲ್ಲಿ ಟ್ರ್ಯಾಕ್ ಮಾಡಬಹುದಾಗಿದೆ. ಬಸ್ ಪ್ರಯಾಣವನ್ನು ಈ ಅಪ್ಲಿಕೇಷನ್ ಹೆಚ್ಚು ಪರಿಣಾಮಕಾರಿ ಆಗಿಸಲಿದೆ. ವಿಟಿಎಂಎಸ್ ಕಾರ್ಯಾಚರಣೆಗಳ ನಿರ್ವಹಿಸಲು ಮತ್ತು ಮೇಲ್ವಿಚಾರಣೆ ಮಾಡಲು ಈಗಾಗಲೇ ಕಮಾಂಡ್ ಆಂಡ್ ಕಂಟ್ರೋಲ್ ಸೆಂಟರ್ ಸಹ ನಿರ್ಮಿಸಲಾಗಿದೆ ಎಂದು 'ದಿ ಹಿಂದೂ' ವರದಿ ಮಾಡಿದೆ.

ಕೆಎಸ್‌ಆರ್‌ಟಿಸಿ ಬಸ್ ಜಾಲಗಳ ವ್ಯಾಪ್ತಿಯಲ್ಲಿ ಈ ಸುಧಾರಿತ ವಿಟಿಎಂಎಸ್ ಸಕ್ರಿಯಗೊಳಿಸಲು ಸಾರಿಗೆ ನಿಗಮವು ಟೆಂಡರ್ ಆಹ್ವಾನಿಸಿದೆ. ಇದರಿಂದ ಬಸ್‌ಗಳ ಕಾರ್ಯಾಚರಣೆ ಆಧುನೀಕರಣಗೊಳಿಸುವುದು, ಪ್ರಯಾಣಿಕರ ಸುರಕ್ಷತೆ ಸುಧಾರಿಸುವುದಾಗುತ್ತದೆ. ಬಸ್ ಸಂಚಾರದ ಮೇಲ್ವಿಚಾರಣೆ ಬಲಪಡಿಸುವ ಉದ್ದೇಶ ನಿಗಮದ್ದಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬಸ್‌ಗಳ 24/7 ಮೇಲ್ವಿಚಾರಣೆ
ಈ ಟೆಂಡರ್, ಮೇಲ್ವಿಚಾರಣೆಯು ಬಸ್‌ಗಳ ನೈಜ ಸಮಯದ ಟ್ರ್ಯಾಕಿಂಗ್, ವೇಳಾಪಟ್ಟಿ, ಬಸ್ ಸಂಚಾರದ ಮಾರ್ಗಗಳು, ಕಾರ್ಯಾಚರಣೆಯ ಎಚ್ಚರಿಕೆ ನೀಡುವುದು, ಬಸ್‌ಗಳ ಒಳಗಿನ ಪ್ಯಾನಿಕ್ ಬಟನ್‌ಗಳನ್ನು ಒತ್ತಿದಾಗ ತುರ್ತು ಸ್ಪಂದನೆಗೆ ವಿನ್ಯಾಸಗೊಳಿಸುವು ಹಲವು ಅಂಶಗಳನ್ನು ಒಳಗೊಂಡಿದೆ. ಈ ವಿಟಿಎಂಎಸ್ ಮೊಬೈಲ್ ಅಪ್ಲಿಕೇಷನ್ ನಲ್ಲಿ ಸಾರಿಗೆ ಕೇಂದ್ರ ನಿಯಂತ್ರಣ ಸೆಂಟರ್ (ಸಿಸಿಎಸ್) ಅನ್ನು ಸಂಯೋಜಿಸಿ ದಿನ 24/7 ಮೇಲ್ವಿಚಾರಣೆಗೆ ಮಾಡುವಂತೆ ಮಾಡಲಾಗುತ್ತಿದೆ. ಕೆಎಸ್‌ಆರ್‌ಟಿಸಿ ಮಟ್ಟಿಗೆ ಇದು ಪ್ರಸ್ತುತದಲ್ಲಿರುವ ದೊಡ್ಡ ಯೋಜನೆಯಾಗಿದೆ. ಇದರಿಂದ ಪ್ರಯಾಣಿಕರಿಗೂ ಸಾಕಷ್ಟು ಅನುಕೂಲವಾಗಲಿದೆ.
735 ಹೊಸ ಬಸ್‌ಗಳಿಗೂ ಯೋಜನೆ ಅನ್ವಯ
ಕೆಎಸ್‌ಆರ್‌ಟಿಸಿ ಎಲ್ಲಾ ಬಸ್‌ಗಳ ಪೈಕಿ ಎಐಎಸ್ -140-ಪ್ರಮಾಣೀಕೃತ ವಾಹನ ಟ್ರ್ಯಾಕಿಂಗ್ ಸಾಧನಗಳನ್ನು ಹಾಗೂ ತುರ್ತು ಗುಂಡಿಗಳನ್ನು 1,286 ವಾಹನಗಳಲ್ಲಿ ಅಳವಡಿಕೆ ಮಾಡಲಾಗಿದೆ. ಎಲ್ಲ ಬಸ್‌ಗಳಿಗೆ ಅಳವಡಿಕೆ ಮಾಡಿ, ವಿಟಿಎಂಎಸ್ ನಿಯೋಜಿಸುವ ಪ್ರಕ್ರಿಯೆ ನಡೆಯುತ್ತಿದೆ. ಹಾಲಿ ಕಾರ್ಯಾಚರಣೆಗೆ ಲಭ್ಯ ಇರುವ ಬಸ್‌ಗಳ ಹೊರತಾಗಿ, ಕೆಎಸ್‌ಆರ್‌ಟಿಸಿ ನಿಗಮಕ್ಕೆ ಸೇರ್ಪಡೆಗೊಳ್ಳಲಿರುವ 735 ಹೊಸ ಬಸ್‌ಗಳು ಇದೇ ಸುಧಾರಿತ ವಿಟಿಎಂಎಸ್ ವ್ಯಾಪ್ತಿಗೆ ಬರುತ್ತವೆ ಎಂಬುದನ್ನು ಅಧಿಕಾರಿಗಳು ವಿವರಿಸಿದ್ದಾರೆ.
ಒಂದು ಬಸ್‌ನಲ್ಲಿ 9 ಪ್ಯಾನಿಕ್ ಬಟನ್
ಈ ಯೋಜನೆಯಡಿ ಸಾರಿಗೆ ಸಂಸ್ಥೆ ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ ನೀಡುತ್ತಿದೆ. ಪ್ರತಿ ಬಸ್‌ಗೆ ಕನಿಷ್ಠ ಒಂಬತ್ತು ಪ್ಯಾನಿಕ್ ಬಟನ್ ಅಳವಡಿಸಲಾಗುತ್ತದೆ. ಎಂಟು ಪ್ರಯಾಣಿಕರಿಗೆ, ಒಂದು ಚಾಲಕನಿಗೆ. ತುರ್ತು ವೇಳೆ ಈ ಬಟನ್ ಒತ್ತಿದರೆ ತಕ್ಷಣವೇ ಸಿಸಿಎಸ್ ಕೇಂದ್ರ ಹಾಗೂ ರಾಜ್ಯ ಬ್ಯಾಕೆಂಡ್ ಸಿಬ್ಬಂದಿಗೆ ಎಚ್ಚರಿಕೆ ಹೋಗುತ್ತದೆ. ಪ್ರಯಾಣಿಕರು ಇರುವ ಯಾವ ಬಸ್‌ನಲ್ಲಿ ಸಮಸ್ಯೆ ಆಗಿದೆ ಎಂದು ಪತ್ತೆ ಮಾಡಲು ಸಿಬ್ಬಂದಿಗೆ ಲೈವ್ ಲೋಕೆಷನ್ ಮಾಹಿತಿ ಸಿಗುತ್ತದೆ. ಇದರಿಂದ ತುರ್ತಾಗಿ ಸ್ಪಂದಿಸಲು ಸಾಧ್ಯವಾಗುತ್ತದೆ. ಇದನ್ನು ಬೆಂಗಳೂರಿನ ಮೈಸೂರು ರಸ್ತೆಯ ಸ್ಯಾಟ್‌ಲೈಟ್ ಬಸ್ ನಿಲ್ದಾಣದಲ್ಲಿರುವ ಕೇಂದ್ರ ನಿಯಂತ್ರಣ ಕೇಂದ್ರದಿಂದ ನಿರ್ವಹಿಸಲಾಗುತ್ತದೆ. ಸಹಾಯವಾಣಿ, ಕಾಲ್ ಸೆಂಟರ್ ಕೆಲಸ, ಮಾಹಿತಿ ವಿಶ್ಲೇಷಣೆಗೂ ಈ ಯೋಜನೆ ಪೂರಕವಾಗಲಿದೆ ಎಂದು ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪ್ರಯಾಣಿಕ ಸ್ನೇಹಿ ವೈಶಿಷ್ಟತೆಗಳು
VTMS ತಂತ್ರಜ್ಞಾನವು ಪ್ರಯಾಣಿಕ ಸ್ನೇಹಿ ಆಗಿದ್ದು, ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಚಾರದ ನೈಜ ಸಮಯದ ಮಾಹಿತಿ ಪ್ರಯಾಣಿಕರಿಗೆ ಒದಗಿಸುತ್ತದೆ. ಸಾರ್ವಜನಿಕರು ಮೊಬೈಲ್ ಅಥವಾ ವೆಬ್‌ಸೈಟ್‌ನಲ್ಲಿ ಬಸ್‌ಗಳ ಲೈವ್ ಲೋಕೇಶನ್ ಮತ್ತು ನಿಲ್ದಾಣಕ್ಕೆ ಬರುವ ನಿಖರ ಸಮಯವನ್ನು ನಕ್ಷೆಯ ಮೂಲಕ ತಿಳಿಯಬಹುದು. ಬಸ್ ನಿಲ್ದಾಣಗಳಲ್ಲಿರುವ ಎಲ್‌ಇಡಿ ಪರದೆಗಳು ಹಾಗೂ ಧ್ವನಿ ಘೋಷಣೆಗಳ ಮೂಲಕವೂ ಈ ಮಾಹಿತಿ ಲಭ್ಯವಿರಲಿದೆ. ಇದರಿಂದ ಪ್ರಯಾಣಿಕರು ಸುಲಭವಾಗಿ ಮತ್ತು ನಿಖರವಾಗಿ ತಮ್ಮ ಪ್ರಯಾಣವನ್ನು ಯೋಜಿಸಲು ಸಾಧ್ಯವಾಗುತ್ತದೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ.












Click it and Unblock the Notifications