ಪ್ರಯಾಣಿಕರ ಸುರಕ್ಷತೆಗಾಗಿ ಸರ್ಕಾರಿ ಬಸ್‌ನಲ್ಲಿ ಹೊಸ ತಂತ್ರಜ್ಞಾನ

ಬೆಂಗಳೂರು, ಜೂನ್ 10; ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ ನೀಡುತ್ತದೆ. ಇದೇ ಮೊದಲ ಬಾರಿಗೆ ಬಸ್ಸುಗಳಲ್ಲಿ ಎ.ಐ ಟೆಕ್ನಾಲಜಿ ಅಳವಡಿಸುವ ಮಹತ್ವದ ಯೋಜನೆ ಆರಂಭಿಸಲಾಗಿದೆ.

Recommended Video

      KSRTC ಬಸ್ ಡ್ರೈವರ್ ಗಳು ನಿದ್ರೆ ಮಾಡಿ ಆಕ್ಸಿಡೆಂಟ್ ಮಾಡಲ್ಲ ಬಿಡಿ | Oneindia Kannada

      ಸಾರಿಗೆ ಸಚಿವ ಲಕ್ಷ್ಮಣ ಸವದಿ ಈ ಕುರಿತು ಫೇಸ್ ಬುಕ್‌ನಲ್ಲಿ ಮಾಹಿತಿ ನೀಡಿದ್ದಾರೆ. Artificial intelligence (AI) ತಂತ್ರಜ್ಞಾನ ಅಳವಡಿಸುವ ಮಹತ್ವದ ಯೋಜನೆ ಆರಂಭಿಸಲಾಗಿದೆ. ಮೊದಲ ಹಂತದಲ್ಲಿ 1044 ಬಸ್‌ಗಳಿಗೆ ಇದನ್ನು ಅಳವಡಿಕೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.

      ಕೆಲವು ಮುಂದುವರಿದ ರಾಷ್ಟ್ರಗಳಲ್ಲಿ ಇಂತಹ ತಂತ್ರಜ್ಞಾನವನ್ನು ಬಳಸಲಾಗುತ್ತಿದೆ. ನಮ್ಮ ಸರ್ಕಾರಿ ಸಾರಿಗೆ ಕ್ಷೇತ್ರದ ಇತಿಹಾಸದಲ್ಲಿ ಇದೊಂದು ವಿನೂತನ ಪ್ರಯೋಗ ಎನ್ನಲಾಗಿದೆ ಎಂದು ಸಚಿವರು ಹೇಳಿದ್ದಾರೆ.

      KSRTC

      ಸಿಡಬ್ಲ್ಯುಎಸ್ ಮತ್ತು ಡಿಡಿಎಸ್ ಎಂಬ ಎರಡು ರೀತಿಯ ತಂತ್ರಜ್ಞಾನವನ್ನು ಅಳವಡಿಸಲಾಗುತ್ತಿದೆ. ಸಿಡಬ್ಲ್ಯುಎಸ್ ಎಂದರೆ ಕೊಲಿಜಿಯನ್ ವಾರ್ನಿಂಗ್ ಸಿಸ್ಟಮ್. ಡಿಡಿಎಸ್ ಎಂದರೆ ಡ್ರೈವರ್ ಡ್ರೋಜಿನೆಸ್ ಡಿಟೆಕ್ಷನ್ ಸಿಸ್ಟಮ್.

      ಬಸ್ ಸಮೀಪಕ್ಕೆ ಬರುವ ಇತರೆ ವಾಹನಗಳು ಹಾಗೂ ಚಾಲಕ ನಿದ್ರಿಸಿ ಡಿವೈಡರ್ ಕಡೆ ಹೋಗುವುದನ್ನು ಮತ್ತು ಇನ್ನೊಂದು ವಾಹನಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸುವಂತಹ ತಂತ್ರಜ್ಞಾನ ಇದಾಗಿದೆ.

      ವಾಹನದ ಸಮೀಪಕ್ಕೆ ಬಂದಾಗ ಅಥವಾ ಚಾಲಕ ನಿದ್ರಿಸುತ್ತಿರುವಾಗ ಶಬ್ದ ಮಾಡಿ ಇದು ಎಚ್ಚರಿಸುತ್ತದೆ. ಜೊತೆಗೆ ಕಂಟ್ರೋಲ್ ರೂಮ್‌ಗೆ ಮಾಹಿತಿ ರವಾನೆ ಮಾಡುತ್ತದೆ. ಇದರಿಂದಾಗಿ ಚಾಲಕ ಸದಾ ಜಾಗರೂಕತೆಯಿಂದ ಇರುವಂತೆ ಮಾಡುವುದರ ಜೊತೆಗೆ ಅಪಘಾತ ಮತ್ತು ಅನಾಹುತಗಳನ್ನು ತಪ್ಪಿಸುವಂತಹ ಕೆಲಸ ಈ ತಂತ್ರಜ್ಞಾನದಿಂದ ಆಗುತ್ತದೆ.

      ನಮ್ಮ ಜನರ ಜೀವ ಮುಖ್ಯ. ಇದರಿಂದಾಗಿ ಅಪಘಾತ ರಹಿತ ಸಾರಿಗೆ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಈ ತಂತ್ರಜ್ಞಾನವನ್ನು 1044 ಬಸ್ಸುಗಳಿಗೆ ಮೊದಲು ಅಳವಡಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಇದನ್ನು ಮತ್ತಷ್ಟು ವಾಹನಗಳಿಗೆ ಹೆಚ್ಚಿಸಲು ಚಿಂತನೆ ನಡೆದಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+