ಶಿವಮೊಗ್ಗ, ಮಧುರೈಗೆ ಕೆಎಸ್ಆರ್‌ಟಿಸಿಯಿಂದ ಫ್ಲೈ ಬಸ್ ಸೇವೆ

Posted By:
Subscribe to Oneindia Kannada

ಬೆಂಗಳೂರು, ಡಿಸೆಂಬರ್ 10 : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಫ್ಲೈ ಬಸ್ ಸೇವೆಯನ್ನು ವಿಸ್ತರಣೆ ಮಾಡಲು ಮುಂದಾಗಿದೆ. ಸದ್ಯ, ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮೈಸೂರು ಮತ್ತು ಮಣಿಪಾಲ್‌ಗೆ ಫ್ಲೈ ಬಸ್ ಸಂಚಾರ ನಡೆಸುತ್ತಿವೆ.

ಕೆಎಸ್ಆರ್‌ಟಿಸಿ ಮತ್ತು ಕೆಂಪೇಗೌಡ ವಿಮಾನ ನಿಲ್ದಾಣ ಜಂಟಿಯಾಗಿ ಸಂಸ್ಥೆಯೊಂದರ ಮೂಲಕ ಸಮೀಕ್ಷೆ ನಡೆಸಿದ್ದು, ಯಾವ ನಗರಗಳಿಗೆ ಬಸ್ ಸೇವೆ ವಿಸ್ತರಣೆ ಮಾಡಬಹುದು? ಎಂಬ ವರದಿ ಸಿದ್ಧಪಡಿಸಿದೆ. ಸೇವೆ ವಿಸ್ತರಣೆ ಮಾಡುವುದರಿಂದ ಸಂಸ್ಥೆಯ ಆದಾಯವೂ ಹೆಚ್ಚಾಗಲಿದೆ ಎಂದು ಸಮೀಕ್ಷೆ ಹೇಳಿದೆ. [ಫ್ಲೈ ಬಸ್ ಸೇವೆ ವಿಸ್ತರಣೆ]

ksrtc

2016ರ ಜನವರಿಯಿಂದ ಶಿವಮೊಗ್ಗ, ಕೊಯಮತ್ತೂರು, ಪುದುಚೇರಿ, ಮಧುರೈ ಮುಂತಾದ ನಗರಗಳಿಗೆ ಫ್ಲೈ ಬಸ್ ಸೇವೆ ಆರಂಭಿಸುವ ಸಾಧ್ಯತೆ ಇದೆ. ಸದ್ಯ, ವಿಮಾನ ನಿಲ್ದಾಣದಿಂದ ಮೈಸೂರು ಮತ್ತು ಮಣಿಪಾಲ್‌ಗೆ ಫ್ಲೈ ಬಸ್ ಸಂಚಾರ ನಡೆಸುತ್ತಿವೆ. [ಮಣಿಪಾಲ್-ಬೆಂಗಳೂರು ಫ್ಲೈ ಬಸ್ ದರಪಟ್ಟಿ]

ವೊಲ್ವೋ ಬಸ್ : ಕೆಎಸ್ಆರ್‌ಟಿಸಿ ಫ್ಲೈ ಬಸ್ ಸೇವೆಗಾಗಿ ವೊಲ್ವೋ ಬಸ್ಸುಗಳನ್ನು ಬಳಸಿಕೊಳ್ಳಲಿದೆ. ಈ ಬಸ್ಸಿನಲ್ಲಿ ವಿಮಾನದ ವೇಳಾಪಟ್ಟಿ, ಜಿಪಿಎಸ್, ವೈಫೈ ಸೌಲಭ್ಯ, ಪ್ಯಾಂಟ್ರಿ ಮತ್ತು ರಾಸಾಯನಿಕ ಶೌಚಾಲಯಗಳ ವ್ಯವಸ್ಥೆ ಇರುತ್ತದೆ.

2013ರಲ್ಲಿ ಆರಂಭ : 2013ರಲ್ಲಿ ಕೆಎಸ್ಆರ್‌ಟಿಸಿ ದೇಶದಲ್ಲಿಯೇ ಮೊದಲ ಬಾರಿಗೆ ವಿಮಾನ ನಿಲ್ದಾಣಗಳಿಂದ ಬೇರೆ-ಬೇರೆ ನಗರಗಳಿಗೆ ಸಂಪರ್ಕ ಕಲ್ಪಿಸುವ ಫ್ಲೈ ಬಸ್ ಸೇವೆಯನ್ನು ಆರಂಭಿಸಿತು. ಮೊದಲು ಪ್ರಾಯೋಗಿಕವಾಗಿ ಬೆಂಗಳೂರಿನಿಂದ ಮೈಸೂರಿಗೆ ಬಸ್ ಸಂಚಾರ ಆರಂಭಿಸಲಾಗಿತ್ತು. ಸದ್ಯ, ಮಂಗಳೂರು-ಉಡುಪಿ ಮಾರ್ಗವಾಗಿ ಮಣಿಪಾಲ್‌ಗೂ ಫ್ಲೈ ಬಸ್ ಸಂಚರಿಸುತ್ತಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Karnataka State Road Transport Corporation (KSRTC) will soon extend its Flybus service to Shivamogga, Coimbatore, Puducherry and Madurai. Fly-bus service from kempegowda international airport to Mysuru and Manipal getting good response.
Please Wait while comments are loading...