KSRTC Jobs Recruitment: ನೂತನ ಈ ಉದ್ಯೋಗಿಗಳಿಗೆ ನೇಮಕಾತಿ ಆದೇಶ, ಕಾರ್ಯಾಚರಣೆಯ ಅಂಕಿ-ಅಂಶಗಳು
ಬೆಂಗಳೂರು, ಜನವರಿ 18: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಇತ್ತಿಚೆಗೆ ಕರೆದಿದ್ದ ತಾಂತ್ರಿಕ ಸಹಾಯಕ ಹುದ್ದೆಗೆ ನೇಮಕಾತಿ ನಡೆಸಿತ್ತು. ಜನವರಿ 17ರಂದು ಕೌನ್ಸೆಲಿಂಗ್ ನಡೆದು ಆಯ್ಕೆ ನಡೆದಿದ್ದು, ನೇಮಕಾತಿ ಆದೇಶ ಸಹ ಸಾರಿಗೆ ಇಲಾಖೆ ಸಚಿವ ರಾಮಲಿಂಗಾ ರೆಡ್ಡಿ ಅವರು ವಿತರಿಸಿದರು. KSRTC ನಿಗಮದಲ್ಲಿ ನೂತನವಾಗಿ ತಾಂತ್ರಿಕ ಸಹಾಯಕ ಹುದ್ದೆಗೆ ನೇಮಕಗೊಂಡ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶವನ್ನು ವಿತರಿಸಿ ರಾಮಲಿಂಗಾ ರೆಡ್ಡಿ ಮಾತನಾಡಿದರು.
ನೇಮಕಾತಿಯನ್ನು ಸಂಪೂರ್ಣವಾಗಿ ಪಾರದರ್ಶಕವಾಗಿ ನಡೆಸಿ, ಅಭ್ಯರ್ಥಿಗಳಿಗೆ ಅವರಿಚ್ಚೆಯಂತೆಯೆ ಘಟಕಗಳನ್ನು ಸಹ ಆರಿಸಿಕೊಳ್ಳಲು ಗಣಕೀಕರಣದ ಮೂಲಕ ಮೊದಲ ಬಾರಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು. ನೇಮಕಗೊಂಡಿರುವ ಸಿಬ್ಬಂದಿಗಳು ಶ್ರಮವಹಿಸಿ ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಿ ನಿಗಮಕ್ಕೆ ಕೀರ್ತಿ ತರಬೇಕು ಎಂದು ಸಿಬ್ಬಂದಿ ಜವಾಬ್ದಾರಿಯನ್ನು ಸಚಿವರು ತಿಳಿಸಿದರು.

ನಿಗಮದ ಪ್ರಸಕ್ತ ಕಾರ್ಯಾಚರಣೆ ಅಂಕಿಅಂಶಗಳ ಹೀಗಿವೆ
* ವಿಭಾಗಗಳು - 17
* ಘಟಕಗಳು - 83
* ಬಸ್ಸು ನಿಲ್ದಾಣಗಳು - 175
* ಸಾರಿಗೆ ಸೇವೆಗಳು - 7640
* ಒಟ್ಟು ಬಸ್ಸುಗಳು - 8358
* ಪ್ರತಿನಿತ್ಯ ಕಾರ್ಯಾಚರಿಸಿರುವ ಕಿ.ಮೀ - 27.84 ಲಕ್ಷ ಕಿಮೀ
* ಪ್ರತಿನಿತ್ಯ ಪ್ರಯಾಣಿಸಿರುವ ಅಂದಾಜು ಒಟ್ಟು ಪ್ರಯಾಣಿಕರ ಸಂಖ್ಯೆ - 32.34 ಲಕ್ಷ,
* ಶಕ್ತಿ ಯೋಜನೆ- ಪ್ರಯಾಣಿಸುವ ಮಹಿಳೆಯರ ಸಂಖ್ಯೆ -18.40 ಲಕ್ಷ,
* ಶಕ್ತಿ ಯೋಜನೆ- ಪ್ರಯಾಣಿಸುವ ಮಹಿಳೆಯರ ಟಿಕೇಟ್ ಮೊತ್ತ- 5.48 ಕೋಟಿ,
* ಒಟ್ಟು ಸಿಬ್ಬಂದಿ - 33932
ನೇಮಕಾತಿ ಪ್ರಕ್ರಿಯೆಯ ಅಂಶಗಳು
* ನಿಗಮದಲ್ಲಿ ಪ್ರಸ್ತುತ 4588 ತಾಂತ್ರಿಕ ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದು, ಈ ಪೈಕಿ 353 ಮಹಿಳಾ ತಾಂತ್ರಿಕ ಸಿಬ್ಬಂದಿ ಇರಲಿದ್ದಾರೆ.
* ಕೋವಿಡ್-19ರ ಕಾರಣ ಸ್ಥಗಿತಗೊಂಡಿದ್ದ 726 ತಾಂತ್ರಿಕ ಸಹಾಯಕ ಹುದ್ದೆಗಳಲ್ಲಿ 300 ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರವು ಸುಮಾರು 08 (ಕೊನೆಯ ನೇಮಕಾತಿ 2016 ನಡೆದದ್ದು) ವರ್ಷಗಳ ನಂತರ ಅಂದರೆ ದಿನಾಂಕ: 13-10-2023 ರಂದು ಅನುಮತಿ ನೀಡಿರುತ್ತದೆ.
* ನಿಗಮದ ಪದವೃಂದ & ನೇಮಕಾತಿ ನಿಯಮಾವಳಿಯನ್ವಯ ಸಾಮಾನ್ಯ ಸಾಮರ್ಥ್ಯ ಪರೀಕ್ಷೆಯಲ್ಲಿ ಕನಿಷ್ಟ ಶೇಕಡ 30 ಹಾಗೂ ಅದಕ್ಕಿಂತ ಹೆಚ್ಚಿನ ಅಂಕ ಪಡೆದ ಅಭ್ಯರ್ಥಿಗಳು ಮಾತ್ರ ಮುಂದಿನ ಆಯ್ಕೆ ಪ್ರಕ್ರಿಯೆಗೆ ಅರ್ಹರಿದ್ದು, ಅದರಂತೆ 554 ಅಭ್ಯರ್ಥಿಗಳು ಅರ್ಹರಾಗಿರುತ್ತಾರೆ.
* ಸರ್ಕಾರವು ಅನುಮತಿ ನೀಡಿದ 300 ಹುದ್ದೆಗಳ ನೇಮಕಾತಿಗೆ ನಿಗಮದ ವಿಶೇಷ ನಿರ್ದೇಶಕ ಮಂಡಳಿಯ ಅನುಮೋದನೆ ಪಡೆದು ಅಧಿಸೂಚನೆ ಸಂದರ್ಭದಲ್ಲಿ ಚಾಲ್ತಿಯಲ್ಲಿದ್ದ ಮೀಸಲಾತಿ ನಿಯಮಗಳನ್ವಯ ವರ್ಗವಾರು ಹುದ್ದೆಗಳ ಸಂಖ್ಯೆಯನ್ನು ವಿಂಗಡಣೆ ಮಾಡಿ ಅಭ್ಯರ್ಥಿಗಳ ಮಾಹಿತಿಗಾಗಿ ಪ್ರಕಟಿಸಲಾಗಿರುತ್ತದೆ.
* ಅರ್ಹರಾದ ಅಭ್ಯರ್ಥಿಗಳಿಗೆ ಮೂಲ ದಾಖಲಾತಿ ಮತ್ತು ದೇಹದಾಢ್ರ್ಯತೆ ಪರಿಶೀಲನೆಯನ್ನು ಡಿಸೆಂಬರ್ 26 ರಿಂದ 28-12-2023 ರವರೆಗೆ ಹಾಗೂ ಹೆಚ್ಚುವರಿಯಾಗಿ (ಗೈರುಹಾಜರಾದ ಅಭ್ಯರ್ಥಿಗಳಿಗೆ) ಜನವರಿ 01 ರಂದು ನಡೆಸಲಾಯಿತು.

* ಜನವರಿ 05 ರಂದು 262 ಆಯ್ಕೆಯಾದ ಅಭ್ಯರ್ಥಿಗಳ ಸಂಭವನೀಯ ಆಯ್ಕೆಪಟ್ಟಿಯನ್ನು ಪ್ರಕಟಿಸಿ ಆಕ್ಷೇಪಣೆಗಳಿದ್ದಲ್ಲಿ ಪೂರಕ ದಾಖಲೆಗಳೊಂದಿಗೆ ಸಲ್ಲಿಸಿಲು 7 ದಿನಗಳ ಕಾಲಾವಕಾಶ ನೀಡಲಾಗಿರುತ್ತದೆ.
* ಸಲ್ಲಿಸಲಾದ ಆಕ್ಷೇಪಣೆಗಳನ್ನು ಪರಿಶೀಲಿಸಿ ಅರ್ಹ ಆಕ್ಷೇಪಣೆಗಳನ್ನು ಪುರಸ್ಕರಿಸಿ ಅಂತಿಮವಾಗಿ ಜನವರಿ 13 ರಂದು 264 ಅಭ್ಯರ್ಥಿಗಳ ಅಂತಿಮ ಆಯ್ಕೆಪಟ್ಟಿ ಪ್ರಕಟಿಸಲಾಗಿರುತ್ತದೆ.
* ಆಯ್ಕೆಗೊಂಡ ಅಭ್ಯರ್ಥಿಗಳಿಗೆ ಜನವರಿ 17 ರಂದು ಮೆರಿಟ್ ಕಂ ರೋಸ್ಟರ್ ಆಧಾರದ ಮೇಲೆ ನೇರವಾಗಿ ಅವರ ಆಯ್ಕೆಯ ಘಟಕಗಳಿಗೆ ನಿಯೋಜನೆ ಮಾಡಲಾಗಿದೆ.
* ಇದೇ ಪ್ರಪ್ರಥಮ ಬಾರಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಗಣಕೀಕೃತ ಕೌನ್ಸಿಲಿಂಗ್ ಮೂಲಕ ನೇರವಾಗಿ ಘಟಕಗಳನ್ನು ಆಯ್ಕೆ ಮಾಡುವ ಅವಕಾಶವನ್ನು ಒದಗಿಸಿ ಕೊಟ್ಟು ಸ್ಥಳ ನಿಯೋಜನೆಯಲ್ಲಿ ಸಂಪೂರ್ಣ ಪಾರದರ್ಶಕತೆಯನ್ನು ಅನುಸರಿಸಲಾಗಿದೆ. ತಾಂತ್ರಿಕ ಸಹಾಯಕರ ನೇಮಕಾತಿ ಪ್ರಕ್ರಿಯೆಯನ್ನು 03 ತಿಂಗಳ ಒಳಗಾಗಿಯೇ ಪೂರ್ಣಗೊಳಿಸಲು ಕ್ರಮವಹಿಸಲಾಗಿದೆ.
* ಆಯ್ಕೆಗೊಂಡ ಅಭ್ಯರ್ಥಿಗಳಿಗೆ ಅಧಿಸೂಚನೆ ಸಂದರ್ಭದಲ್ಲಿ ನಿಗಧಿಪಡಿಸಲಾಗಿದ್ದ 02 ವರ್ಷಗಳ ತರಬೇತಿ ಅವಧಿಯನ್ನು 01 ವರ್ಷಕ್ಕೆ ಇಳಿಕೆ ಮಾಡಲಾಗಿದೆ. ಮುಂದುವರೆದು, ಮಾಹೆಯಾನ ನಿಗಧಿಪಡಿಸಲಾಗಿದ್ದ ತರಬೇತಿ ಭತ್ಯೆಯನ್ನು ರೂ.9,100/- ರಿಂದ ರೂ.14,000/- ಕ್ಕೆ ಏರಿಕೆ ಮಾಡಲಾಗಿದೆ.
* ನಿಗಮವು 2000 ಚಾಲಕ ಕಂ ನಿರ್ವಾಹಕ ಹುದ್ದೆಯ ನೇಮಕಾತಿಗಾಗಿ ಸದ್ಯದಲ್ಲಿಯೇ ಚಾಲನಾ ಪರೀಕ್ಷೆಗೆ ಕ್ರಮ ಜರುಗಿಸಲಿದೆ..
ಕೆಎಸ್‌ಆರ್‌ಟಿಸಿ ಸೇರಿದಂತೆ ಎಲ್ಲ ನಿಗಮಗಳಿಗೆ ಅನುಕೂಲವಾಗುವಂತಹ ಹಲವು ಕ್ರಮಗಳನ್ನು, ಯೋಜನೆಗಳನ್ನು ಸರ್ಕಾರ ಈ ವರ್ಷ ಕೈಗೊಳ್ಳುತ್ತಿದೆ.
ಕಾರ್ಯಕ್ರಮದಲ್ಲಿ ಇಲಾಖೆ ವ್ಯವಸ್ಥಾಪಕ ನಿರ್ದೇಶಕರು, ನಿಗಮದ ನಿರ್ದೇಶಕಿ (ಸಿಬ್ಬಂದಿ ಮಾತ್ತು ಜಾಗೃತೆ) ಡಾ. ನಂದಿನಿ ದೇವಿ, ನಿಗಮದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು..
-
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
Property Mutation: ಆಸ್ತಿ ನೋಂದಣಿ ನಂತರ ಶೇ.98ರಷ್ಟು ಖಾತೆಗಳು ಸ್ವಯಂ ಚಾಲಿತವಾಗಿ ಬದಲಾವಣೆ: ಸಚಿವ ಕೃಷ್ಣ ಬೈರೇಗೌಡ -
ಬೆಂಗಳೂರಿನಿಂದ ಬೀದರ್-ಕಲಬುರಗಿಗೆ ವಿಮಾನಸೇವೆ: 23ರೊಳಗೆ ಪ್ರಸ್ತಾವನೆ ಸಲ್ಲಿಸಲು ಸೂಚನೆ -
ಲಂಡನ್ ಮೆಟ್ರೋಗಿಂತ ಬೆಂಗಳೂರಿನ 'ನಮ್ಮ ಮೆಟ್ರೋ' ಬೆಸ್ಟ್: Viral ಪೋಸ್ಟ್ನಲ್ಲಿ ಅಚ್ಚರಿಯ ಸತ್ಯ ಬಿಚ್ಚಿಟ್ಟ ಯುವತಿ -
Gold Price Today: ಯುಗಾದಿಗೂ ಮೊದಲೇ ಚಿನ್ನದ ದರದಲ್ಲಿ ಭಾರೀ ಇಳಿಕೆ; ಆಭರಣ ಪ್ರಿಯರಿಗೆ ಇಂದೇ ಹಬ್ಬ -
Karnataka: ಧಾರ್ಮಿಕ ಮೆರವಣಿಗೆ, ಜಯಂತಿಗಳಲ್ಲಿ DJ ಸದ್ದಿಗೆ ಬ್ರೇಕ್? 'ಐಟಂ ಸಾಂಗ್' ಬ್ಯಾನ್ ಮಾಡಲು ರಾಜ್ಯ ಸರ್ಕಾರ ಒಲವು -
Gold Price: ಯುಗಾದಿಗೆ ಚಿನ್ನಪ್ರಿಯರಿಗೆ ಶುಭ ಸುದ್ದಿ: ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ, ಬೆಳ್ಳಿ ದರ 15,000 ರೂ.ಕುಸಿತ -
ಯುದ್ಧದ ಬಿಸಿ: ಬೆಂಗಳೂರಿಗೆ ಅರಬ್ ರಾಷ್ಟ್ರಗಳ ವಿಮಾನ ಸಂಚಾರ ಕಡಿತ; ರಾಜ್ಯ ಟ್ರಾವೆಲ್ಸ್ ಮಾಲೀಕರಲ್ಲಿ ಆತಂಕ -
ಉನ್ನತ ಶಿಕ್ಷಣಕ್ಕೆ ಭಾರತದ ಯಾವ ನಗರ ಬೆಸ್ಟ್? QS ರ್ಯಾಂಕಿಂಗ್ ಪಟ್ಟಿಯಲ್ಲಿದೆ ಬೆಂಗಳೂರು ಸೇರಿದಂತೆ 4 ನಗರಗಳ ಹೆಸರು -
SSLC ಪರೀಕ್ಷೆ-1 ಆರಂಭ: ಮಲ್ಲೇಶ್ವರಂನ ಕೆಪಿಎಸ್ ಶಾಲೆಗೆ ಸಚಿವ ಮಧು ಬಂಗಾರಪ್ಪ ಭೇಟಿ, ವಿದ್ಯಾರ್ಥಿಗಳಿಗೆ ಶುಭಹಾರೈಕೆ -
Nora Fatehi: ಸರ್ಸೆ ನಿನ್ನ ಸೆರಗ ಹಾಡು ವಿವಾದ: ಹೇಳಿದ್ದೊಂದು- ಮಾಡಿದ್ದು ಇನ್ನೊಂದು, ನನ್ನ ನಂಬಿ ಪ್ಲೀಸ್ -
"ಕೆಡಿ" ಸಿನಿಮಾದ ಹಾಡು ಅಶ್ಲೀಲವಾಗಿದ್ರೆ ಕೂಡಲೇ ಎಲ್ಲ ಕಡೆ ತೆರವು ಮಾಡಿ: ಸೆನ್ಸಾರ್ ಮಂಡಳಿಗೆ ಕೇಂದ್ರ ಸರ್ಕಾರ ಸೂಚನೆ












Click it and Unblock the Notifications