KSRTC: ಬೆಂಗಳೂರು-ತಿರುಪತಿ ಮಾರ್ಗಗಳಲ್ಲಿ ಖಾಸಗಿ ಬಸ್‌ಗಳ ದರ್ಬಾರ್: KSRTC ಬಸ್‌ಗಳಿಗೆ ಹೆಚ್ಚಿದ ಬೇಡಿಕೆ
Bengaluru-Tirupati Bus Routes: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC)ಯಿಂದ ಈಗಾಗಲೇ ಬೆಂಗಳೂರಿನಿಂದ ತಿರುಪತಿಗೆ ಸಾರಿಗೆ ಬಸ್‌ಗಳು ಇವೆ. ಆದರೆ ಇವು ಸಾಕಾಗುತ್ತಿಲ್ಲ. ಹಬ್ಬಗಳು, ವಾರಾಂತ್ಯ ಹಾಗೂ ಉತ್ಸವದಂತಹ ಸಂದರ್ಭಗಳಲ್ಲಿ ಬೆಂಗಳೂರು ಗ್ರಾಮಾಂತರ ಭಾಗದ ಪ್ರಯಾಣಿಕರು ಹಾಗೂ ವಿವಿಧ ಭಾಗದ ಪ್ರಯಾಣಿಕರು ಖಾಸಗಿ ಬಸ್ ಅವಲಂಬಿಸುವಂತಾಗಿದೆ. ಸುರಕ್ಷತೆ ದೃಷ್ಟಿಯಿಂದ ಹಾಗೂ ಪ್ರಯಾಣಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಹೆಚ್ಚುವರಿ ಬಸ್‌ಗಳ ಕಾರ್ಯಾಚರಣೆಗೆ ಪ್ರಯಾಣಿಕರು ಕರ್ನಾಟಕ ಸಾರಿಗೆ ಇಲಾಖೆಗೆ ಒತ್ತಾಯ ಮಾಡಿದ್ದಾರೆ.
ಬೆಂಗಳೂರಿನಿಂದ ಚಿಂತಾಮಣಿ ಮೂಲಕ ಮದನಪಲ್ಲಿಗೆ, ಬೆಂಗಳೂರಿನಿಂದ ಯಲಹಂಕ, ಚಿಂತಾಮಣಿ ಮೂಲಕ ತಿರುಪತಿಗೆ ತೆರಳುವ ಕೆಎಸ್‌ಆರ್‌ಟಿಸಿ ಬಸ್ಸುಗಳು ತೀರಾ ಕಡಿಮೆ ಇದೆ. ಈ ಮಾರ್ಗವಾಗಿ ದಿನನಿತ್ಯ ಮತ್ತು ವಾರಾಂತ್ಯ ಹಾಗೂ ಹಬ್ಬ-ಹರಿದಿನಗಳ ಸಂದರ್ಭದಲ್ಲಿ KSRTC ಬಸ್‌ಗಳಿಗೆ ಹೆಚ್ಚಿನ ಬೇಡಿಕೆ ಕಂಡು ಬರುತ್ತಿದೆ. ಆದ್ದರಿಂದ ಈ ಮಾರ್ಗದಲ್ಲಿ ಪ್ರಯಾಣಿಕರು ಅನುಣಭವಿಸುತ್ತಿರುವ ಸಮಸ್ಯೆ ಪರಿಗಣಿಸುವಂತೆ ಪ್ರಯಾಣಿಕರಾದ ಶ್ರೀಸಾಯಿ ಕೊಕಾಟೆ ಅವರು ಕೋರಿದ್ದಾರೆ.

ಅರ್ಧಗಂಟೆಗೊಂದು ಬಸ್ ಬಿಟ್ಟರೂ ಒಳಿತು
ಕೋಲಾರ, ಮುಳಬಾಗಿಲು, ಮದನಪಲ್ಲಿ ಸೇರಿದಂತೆ ಈ ಭಾಗದ ವಿವಿಧ ಊರುಗಳ ಮಾರ್ಗವಾಗಿ ಪ್ರತಿ ಅರ್ಧಗಂಟೆಗೆ ಒಂದು KSRTC ಸೇವೆ ನೀಡಿದರೆ ಸಹಾಯವಾಗುತ್ತದೆ. ವಾರಾಂತ್ಯ ಮತ್ತು ಹಬ್ಬಗಳ ಸಂದರ್ಭಗಳಲ್ಲಿ ಸಮಸ್ಯೆ ಆಗುತ್ತಿದೆ. ಹೀಗಾಗಿ ಬೆಳಗ್ಗೆ 5:00 ಗಂಟೆಯಿಂದ ಮಧ್ಯರಾತ್ರಿ 12:00 ಗಂಟೆವರೆಗೆ ಈ ಮೇಲಿನ ಮಾರ್ಗಗಳಲ್ಲಿ ಬಸ್ ಕಾರ್ಯಾಚರಿಸಲು ಆದೇಶಿಸುವಂತೆ ಪ್ರಯಾಣಿಕರು ಮನವಿ ಮಾಡಿದ್ದಾರೆ.
ಪರವಾನಿಗೆ ಇಲ್ಲದೇ ಖಾಸಗಿ ಬಸ್ ಸಂಚಾರ?
ಕ್ಕಬಳಾಪುರ ವಿಭಾಗ ಚಿಂತಾಮಣಿ ಮದನಪಲ್ಲಿ ಕಡಪ ಮಾರ್ಗವಾಗಿ ಮತ್ತು ಕರ್ನಾಟಕ ಮತ್ತು ಆಂಧ್ರ ಗಡಿಗಳಿಂದ ಅಂತಾರಾಜ್ಯ ಖಾಸಗಿ ಬಸ್‌ಗಳು ಪರವಾನಿಗೆ ಇಲ್ಲದೆ ಕಾರ್ಯ ನಿರ್ವಹಿಸುತ್ತಿವೆ. ಜನರನ್ನು ವಾರಾಂತ್ಯ, ಹಬ್ಬಗಳ ವೇಳೆ ಬಸ್‌ಗಳಲ್ಲಿ ತುಂಬಿಸಲಾಗುತ್ತದೆ. ಸಂಚಾರ ವೇಳೆ ಏನಾದರು ಹೆಚ್ಚು ಕಡಿಮೆ ಆದರೆ, ಪ್ರಯಾಣಿಕರ ಜೀವಕ್ಕೆ ಯಾರು ಜವಾಬ್ದಾರರು?. ಇಲ್ಲಿರುವ ಖಾಸಗಿ ಬಸ್ ಗಳ ದರ್ಬಾರಿಗೆ ಬ್ರೇಕ್ ಹಾಕಬೇಕು. ನಿಯಮ ಪಾಲಿಸದೇ ಸಂಚರಿಸುವ ಖಾಸಗಿ ಬಸ್ ನಿರ್ವಾಹಕರ ವಿರುದ್ಧ ದಯವಿಟ್ಟು ಕ್ರಮ ಕೈಗೊಳ್ಳಬೇಕು ಎಂದರು.
ಕರ್ನಾಟಕ KSRTC ಬಸ್ಸುಗಳು ಸುರಕ್ಷಿತ ಪ್ರಯಾಣ ಒದಗಿಸುತ್ತಿವೆ. ರಾಜ್ಯ, ಅಂತಾರಾಜ್ಯ ಮಟ್ಟಿಗೆ ಹೆಸರು ಮಾಡಿವೆ. ಖಾಸಗಿ ಬಸ್‌ಗಳಿಂದಾಗಿ ಪ್ರಯಾಣಿಕರನ್ನು ಕಳೆದುಕೊಳ್ಳದೇ ಅಗತ್ಯತೆ ಪರಿಗಣಿಸುವ ಸೂಕ್ತ ಮಾರ್ಗಗಳಲ್ಲಿ ಬಸ್ ಬಿಡಬೇಕು.
ಗಡಿ ಆಚೆಗಿನ ಕನ್ನಡಿಗರಿಂದ KSRTC ಬಸ್‌ಗಳಿಗೆ ಬೇಡಿಕೆ
ರಾಮಸಮುದ್ರದಿಂದ ಬೆಂಗಳೂರಿಗೆ, ಕೋಲಾರ, ಕೆಜಿಎಫ್, ಮುಳಬಾಗಲು ಮೂಲಕ ಬೆಂಗಳೂರು ಮತ್ತು ಪುಂಗನೂರಿನಿಂದ ಕೆಜಿಎಫ್, ಕೋಟಿಲಿಂಗೇಶ್ವರದಿಂದ ಬೆಂಗಳೂರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಓಡಾಡುತ್ತಾರೆ. ಈ ಮಾರ್ಗದಲ್ಲಿ KSRTC ಬಸ್‌ಗಳು ತೀರಾ ಕಡಿಮೆ ಇದ್ದು, ಬೇಡಿಕೆ ಹೆಚ್ಚಾಗಿದೆ. ವಾರಾಂತ್ಯದಲ್ಲಂತೂ ಪ್ರಯಾಣಿಕರು ಸಂಚಾರ ಸಮಸ್ಯೆ ಎದುರಿಸುತ್ತಿದ್ದಾರೆ. ಆದ್ದರಿಂದ ಪರಿಸ್ಥಿತಿ ಅರಿತುಕೊಂಡು ಸೂಕ್ತ ನಿರ್ಧಾರ ಪ್ರಕಟಿಸುವಂತೆ ಪ್ರಯಾಣಿಕರು ಕೋರಿದ್ದಾರೆ.
ಈ ಮಾರ್ಗಗಳಲ್ಲಿ ಭಕ್ತರ ಸಂಚಾರ ಅಧಿಕ
ಕರ್ನಾಟಕದ ಬೆಂಗಳೂರಿನಿಂದ ಆಂದ್ರಪ್ರದೇಶ, ಕಡಪಾ ಹಾಗೂ ತಿರುಪತಿಗೆ ಸಂಚರಿಸುವ KSRTC ಬಸ್‌ಗಳ ಸಂಖ್ಯೆ ಕಡಿಮೆ ಇದೆ. ಆಂಧ್ರಪ್ರದೇಶದ ಕಡಪದಲ್ಲಿ ಹಾಗೂ ತಿರುಪತಿಯಲ್ಲಿ ಕನ್ನಡಿಗರು ಅಧಿಕ ಸಂಖ್ಯೆಯಲ್ಲಿ ವಾಸವಾಗಿದ್ದಾರೆ. ಅಲ್ಲದೇ ಶ್ರೀಕ್ಷೇತ್ರ ರಾಯಚೂಟಿ ವೀರಭದ್ರೇಶ್ವರ ದೇವಸ್ಥಾನಕ್ಕೆ ಹೋಗಲು ಭಕ್ತರು ಕಡಪ ಅಥವಾ ತಿರುಮಲ ತಿರುಪತಿಗೆ ಬಸ್ ಕಾರ್ಯಾಚರಣೆಯ ಅವಶ್ಯಕತೆ ಇದೆ. ಜನರಿಗೆ ಅನುಕೂಲವಾಗುವಂತೆ ಈ ಮಾರ್ಗಗಳಲ್ಲಿ ಬಸ್ ಕಾರ್ಯಾಚರಣೆಗೆ ಅವಕಾಶ ಮಾಡಿಕೊಡಬೇಕು.
ಗಡಿ ಆಚೆಗೆ ಆಂಧ್ರದಲ್ಲಿರುವ ಕನ್ನಡಿಗರ ಪ್ರಯಾಣ ಸುರಕ್ಷತೆಗಾಗಿ ಅಗತ್ಯ ಸಾರಿಗೆ ಸೇವೆ ಒದಗಿಸಬೇಕು. ಗಡಿ ಆಚೆಗೆ ತೆರಳುವ ಕನ್ನಡಿಗರಿಗೆ ಉತ್ತಮ ಸಾರಿಗೆ ಸೇವೆ ಬಯಸಿದ್ದಾರೆ. ಈ ಸಂಬಂಧ ಸಾರಿಗೆ ಇಲಾಖೆ ಸಚಿವರು, ಅಧಿಕಾರಿಗಳು ಕೂಡಲೇ ಕ್ರಮ ವಹಿಸಬೇಕೆಂಬ ಕೂಗು ಕೇಳಿ ಬಂದಿದೆ.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications