KSRTC: ಮೈಸೂರು ದಸರಾ, ರಜೆ ಪ್ರಯುಕ್ತ 3000ಕ್ಕೂ ಹೆಚ್ಚು ಬಸ್‌ಗಳ ವ್ಯವಸ್ಥೆ, ಟೂರ್ ಪ್ಯಾಕೇಜ್ ಘೋಷಣೆ, ಸಂಪೂರ್ಣ ವೇಳಾಪಟ್ಟಿ
ಬೆಂಗಳೂರು: ಮೈಸೂರು ದಸರಾ-2026 ಆಚರಣೆ ನಾಳೆಯ ಮಹಾಲಯ ಅಮವಾಸ್ಯೆಯಿಂದ ಆರಂಬವಾಗಲಿದೆ. ಇದರೊಂದಿಗೆ ಶಾಲೆಗಳಿಗೆ ರಜೆ ನೀಡಲಾಗಿದೆ. ವಿವಿಧ ಕಡೆಗಳಿಂದ ದಸರಾ ವೀಕ್ಷಣೆಗೆ ಮೈಸೂರು ನಗರಕ್ಕೆ ಬರುವ ಪ್ರವಾಸಿಗರು, ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ( KSRTC) ನಿಗಮವು ಪ್ರಸ್ತುತ ಕಾರ್ಯಾಚರಣೆ ಮಾಡಲಾಗುತ್ತಿದೆ.ಟೂರ್ ಪ್ಯಾಕೇಜ್ ಘೋಷಣೆ ಎಲ್ಲಿಂದ ಎಲ್ಲಿಗೆ, ವಿಶೇಷ ಬಸ್‌ಗಳ ಕಾರ್ಯಾಚರಣೆ ಮಾರ್ಗ, ಪ್ರಮುಖ ದಿನಾಂಕಗಳ ವಿವರ ಇಲ್ಲಿದೆ.
KSRTC ಸಂಸ್ಥೆ ದಸರಾಗಾಗಿ ಕರ್ನಾಟಕ ಸಾರಿಗೆ (ವೇಗದೂತ), ರಾಜಹಂಸ, ಸ್ಲೀಪರ್, ಐರಾವತ,ಐರಾವತ ಕ್ಲಬ್ ಕ್ಲಾಸ್ (ಮಲ್ಟಿ ಆಕ್ಸಲ್) ಹಾಗೂ ಅಂಬಾರಿ ಕ್ಲಬ್ ಕ್ಲಾಸ್, ಪಲ್ಲಕ್ಕಿ ಸ್ಲೀಪರ್, ಅಶ್ವಮೇಧ ಸಾರಿಗೆ ಸೇವೆಗಳ ಜೊತೆಗೆ ಈ ಕೆಳಕಂಡಂತೆ ಹೆಚ್ಚುವರಿ ಬಸ್‌ಗಳ ವಿಶೇಷ ಸೇವೆ ನೀಡಲಿದೆ. ಇದೇ ಅ.16 ರಿಂದ 20 ರವರೆಗೆ ಬೆಂಗಳೂರಿನಿಂದ ರಾಜ್ಯದ ಮತ್ತು ಅಂತರರಾಜ್ಯದ ಮಾರ್ಗಗಳಲ್ಲಿ 3000ಕ್ಕೂ ಹೆಚ್ಚು ಬಸ್‌ಗಳು ಓಡಾಡಲಿವೆ.

ಎಲ್ಲಿಂದ ಬಸ್‌ಗಳ ಸಂಚಾರ?
ದಸರಾ ವಿಶೇಷ ಬಸ್‌ಗಳು ಕೆಂಪೇಗೌಡ ಬಸ್ ನಿಲ್ದಾಣ, ಮೈಸೂರು ರಸ್ತೆ ಬಸ್ ನಿಲ್ದಾಣ ಮತ್ತು
ಶಾಂತಿನಗರದ ಬಿಎಂಟಿಸಿ ಬಸ್ ನಿಲ್ದಾಣದಿಂದ ಹೊರಡಲಿವೆ. ಮುಂಗಡ ಟಿಕೆಟ್ ಬುಕಿಂಗ್ ಬಸ್‌ಗಳು ವಿಜಯನಗರ ಬಿಎಂಟಿಸಿ ಟಿಟಿಎಂಸಿ, ಯಶವಂತಪುರ ಟಿಟಿಎಂಸಿ, ಬಸವೇಶ್ವರನಗರ ಬಸ್ ನಿಲ್ದಾಣ,
ದೊಮ್ಮಲೂರು ಬಸ್ ನಿಲ್ದಾಣ, ಬನಶಂಕರಿ ಟಿಟಿಎಂಸಿ, ಹಾಗೂ ಇನ್ನಿತರೆ ಬಸ್ ನಿಲ್ದಾಣಗಳಿಂದ
ಕಾಯಾಚರಣೆ ಮಾಡಲಿವೆ. ನಂತರ ರಾಜ್ಯದ ಮತ್ತು ಅಂತಾರಾಜ್ಯದ ವಿವಿಧ ಸ್ಥಳಗಳಿಂದ
ಬೆಂಗಳೂರಿಗೆ ಅ.20 ರಿಂದ 21ರವರೆಗೆ ವಿಶೇಷ ವಾಹನಗಳು ಸಂಚರಿಸಲಿವೆ.
ವಿಶೇಷ ಬಸ್ ಮಾರ್ಗಗಳು:
ಮಂಗಳೂರು, ಉಡುಪಿ, ಕುಂದಾಪುರ, ಪುತ್ತೂರು, ಧರ್ಮಸ್ಥಳ, ಕುಕ್ಕೆಸುಬ್ರಹ್ಮಣ್ಯ, ಶೃಂಗೇರಿ,
ಹೊರನಾಡು, ಶಿವಮೊಗ್ಗ, ಮಡಿಕೇರಿ, ದಾವಣಗೆರೆ, ಗೋಕರ್ಣ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ,
ವಿಜಯಪುರ, ಕಾರವಾರ, ಬಳ್ಳಾರಿ, ಹೊಸಪೇಟೆ, ಕಲಬುರಗಿ, ರಾಯಚೂರು ಮುಂತಾದ ಸ್ಥಳಗಳಿಗೆ
ಹಾಗೂ ನೆರೆರಾಜ್ಯಗಳಲ್ಲಿನ ಹೈದರಾಬಾದ್, ವಿಜಯವಾಡ, ನೆಲ್ಲೂರು, ಚೆನೈ, ಊಟಿ, ಕೊಡೈಕೆನಾಲ್,
ಸೇಲಂ, ತಿರುಚಿನಾಪಳ್ಳಿ, ಕುಂಭಕೋಣಂ, ಕೊಯಂಬತ್ತೂರು, ಮಧುರೈ, ಪಣಜಿ, ಮಂತ್ರಾಲಯ,
ಪೂನಾ, ಏರ್ನಾಕುಲಂ, ಪಾಲ್ಗಾಟ್ ಮಾರ್ಗದ ಪ್ರಯಾಣಿಕರು ಈ ಬಸ್ ಸೇವೆ ಲಾಭ ಪಡೆಯಬಹುದು.
ಸ್ಯಾಟ್‌ಲೈನ್‌ನಿಂದ 700 ಬಸ್ ಸಂಚಾರ! ಪ್ರೇಕ್ಷಣೀಯ ಸ್ಥಳಗಳಿಗೆ ಸೇವೆ
ದಸರಾ ಪ್ರಯುಕ್ತ ಪ್ರತ್ಯೇಕ 700 ವಿಶೇಷ ಸಾರಿಗೆ ಬಸ್‌ಗಳು ಬೆಂಗಳೂರಿನ ಮೈಸೂರು ರಸ್ತೆ ಬಸ್ ನಿಲ್ದಾಣದಿಂದ ಮೈಸೂರಿಗೆ ಸಂಚರಿಸಲಿವೆ. ಇದರಲ್ಲಿ 400 ಬಸ್‌ಗಳುಮೈಸೂರಿನ ಸುತ್ತಮುತ್ತಲಿನ ಪ್ರೇಕ್ಷಣೀಯ, ಧಾರ್ಮಿಕ ಹಾಗೂ ಪ್ರವಾಸಿ ತಾಣಗಳಾದ ಚಾಮುಂಡಿಬೆಟ್ಟ, ಕೆ.ಆರ್.ಎಸ್.ಅಣೆಕಟ್ಟು/ಬೃಂದಾವನ, ಶ್ರೀರಂಗಪಟ್ಟಣ, ನಂಜನಗೂಡು ಸೇರಿದಂತೆ ಮಡಿಕೇರಿ, ಮಂಡ್ಯ, ಮಳವಳ್ಳಿ, ಹೆಚ್.ಡಿ.ಕೋಟೆ, ಚಾಮರಾಜನಗರ, ಹುಣಸೂರು, ಕೆ.ಆರ್.ನಗರ, ಗುಂಡ್ಲುಪೇಟೆ ಇತ್ಯಾದಿ ಸ್ಥಳಗಳಿಗೆ ಸಂಪರ್ಕ ಕಲ್ಪಿಸಲಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮೈಸೂರಿಗೆ 'ಫ್ಲೈ
ಬಸ್"ಮೂಲಕ ನೇರ ಸಾರಿಗೆ ಸೌಲಭ್ಯ ಕಲ್ಪಿಸಲಾಗಿರುತ್ತದೆ ನೀವು ಅಧಿಕೃತ ವೆಬ್‌ಸೈಟ್ www.ksrtc.karnataka.gov.in ಮೂಲಕ ಟಿಕೆಟ್ ಬುಕ್ ಮಾಡಬಹುದು. ಕರ್ನಾಟಕ ಹಾಗೂ ಇತರ ರಾಜ್ಯಗಳ ಪ್ರಯಾಣಿಕರಿಗೆ ಮುಂಗಡ ಆಸನ ಕಾಯ್ದಿರಿಸಬಹುದು. ನಾಲ್ಕು ಜನರ ಅಥವಾ ಎರಡು ಬದಿ ಟಿಕೆಟ್ ಬುಕಿಂಗ್ ನಲ್ಲಿ ಎಂದಿನಂತೆ ರಿಯಾಯಿತಿ ಲಭ್ಯವಿರುತ್ತದೆ.
KSRTC ಟೂರ್ ಪ್ಯಾಕೇಜ್ ಘೋಷಣೆ, ಸಂಚಾರ ಮಾರ್ಗ
ಮೈಸೂರಿಗೆ ಬರುವ ಪ್ರವಾಸಿಗರ ಅನುಕೂಲಕ್ಕಾಗಿ KSRTC ಒಂದು ದಿನದ ವಿಶೇಷ ಪ್ರವಾಸ ಘೋಷಿಸಲಾಗಿದೆ. ಅ.15ರಿಂದ 26ರವರೆಗೆ ಈ ಪ್ಯಾಕೇಜ್ ಸೇವೆ ಪಡೆಯಬಹುದಾಗಿದೆ.
* ಗಿರಿದರ್ಶಿನಿ ಪ್ರವಾಸ: ಬಂಡೀಪುರ, ಗೋಪಾಲಸ್ವಾಮಿ ಬೆಟ್ಟ, ಬಿಳಿಗಿರಿರಂಗನ ಬೆಟ್ಟ, ನಂಜನಗೂಡು ಮತ್ತ ಚಾಮುಂಡಿ ಬೆಟ್ಟ (ಪ್ರಯಾಣ ದರ ವಯಸ್ಕರಿಗೆ: ರೂ.400/- ಮತ್ತು ಮಕ್ಕಳಿಗೆ: ರೂ.250/-)
* ಜಲದರ್ಶಿನಿ: ಗೋಲ್ಡನ್ ಟೆಂಪಲ್ (ಬೈಲಕುಪ್ಪೆ), ದುಬಾರೆ ಅರಣ್ಯ ನಿಸರ್ಗಧಾಮ, ರಾಜಾಸೀಟ್ ಹಾರಂಗಿ ಜಲಾಶಯ ಮತ್ತು ಕೆ.ಆರ್.ಎಸ್. (ಪ್ರಯಾಣ ದರ ವಯಸ್ಕರಿಗೆ: ರೂ.450/- ಮತ್ತು ಮಕ್ಕಳಿಗೆ: ರೂ.300/-)
* ದೇವದರ್ಶಿನಿ: ನಂಜನಗೂಡು, ಬ್ಲಫ್, ಮುಡುಕುತೊರೆ, ತಲಕಾಡು, ಸೋಮನಾಥಪುರ, ಶ್ರೀರಂಗಪಟ್ಟಣ (ಪ್ರಯಾಣ ದರ ವಯಸ್ಕರಿಗೆ: ರೂ.300/-ಮತ್ತು ಮಕ್ಕಳಿಗೆ: ರೂ.200/-)
ಮಡಿಕೇರಿಯಿಂದಲೂ KSRTC ಟೂರ್ ಪ್ಯಾಕೇಜ್ (ಅ.11-26ರವರೆಗೆ)
* ಕಾವೇರಿ ದರ್ಶನ: ಮಡಿಕೇರಿ ಬಸ್ ನಿಲ್ದಾಣದಿಂದ ಓಂಕಾರೇಶ್ವರ ದೇವಸ್ಥಾನ-ಇಗ್ಗುತಪ್ಪ ದೇವಸ್ಥಾನ-ಭಾಗಮಂಡಲ ದೇವಸ್ಥಾನ-ತಲಕಾವೇರಿ ದೇವಸ್ಥಾನ-ಅಬ್ಬಿ ಜಲಪಾತ-ರಾಜಾಸೀಟು-ಮಡಿಕೇರಿ ಬಸ್ ನಿಲ್ದಾಣ(ಪ್ರಯಾಣ ದರ ವಯಸ್ಕರಿಗೆ: ರೂ.400/- ಮತ್ತು ಮಕ್ಕಳಿಗೆ: ರೂ.300/-)
* ಕೊಡಗಿನ ಸೊಬಗು: ಮಡಿಕೇರಿ ಬಸ್ ನಿಲ್ದಾಣದಿಂದ ಓಂಕಾರೇಶ್ವರ ದೇವಸ್ಥಾನ-ಹಾರಂಗಿ ಜಲಾಶಯ/ಆನೆ ಕ್ಯಾಂಪ್-ಗೋಲ್ಡನ್ ಟೆಂಪಲ್-ಕಾವೇರಿ ನಿಸರ್ಗಧಾಮ-ಕಾಫೀ ಪ್ಲಾಂಟೇಷನ್-ಅಬ್ಬಿ ಜಲಪಾತ-ರಾಜಾಸೀಟು-ಮಡಿಕೇರಿ (ಪ್ರಯಾಣ ದರ ವಯಸ್ಕರಿಗೆ: ರೂ.400/- ಮತ್ತು ಮಕ್ಕಳಿಗೆ: ರೂ.300/-)


Click it and Unblock the Notifications
