KSRTC Mantralaya Bus: ಕರಾವಳಿ ಜನರಿಗೆ ಗುಡ್‌ನ್ಯೂಸ್, ಮಂಗಳೂರು-ಮಂತ್ರಾಲಯ ಪಲ್ಲಕ್ಕಿ ಬಸ್‌ಗಳ ಸಂಚಾರ, ವೇಳಾಪಟ್ಟಿ

ಮಂಗಳೂರು: ರಾಜ್ಯಾದ್ಯಂತ ತನ್ನ ಸಾರಿಗೆ ಸೇವೆ, ಹೊಸ ಉಪ್ರಕಮಗಳಿಂದಲೇ ಹೆಸರುವಾಸಿಯಾಗಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಕರಾವಳಿ ಭಾಗದ ಜನರಿಗೆ ಗುಡ್‌ನ್ಯೂಸ್ ನೀಡಿದೆ. ಕರಾವಳಿಯ ಮಂಗಳೂರು, ಉಡುಪಿ, ಮಲೆನಾಡು ಮಾರ್ಗವಾಗಿ ರಾಯಚೂರು ಹತ್ತಿರದ ಆಂಧ್ರ ಪ್ರದೇಶದ ಕರ್ನೂಲ ಜಿಲ್ಲೆಯಲ್ಲಿರುವ ಶ್ರೀ ಮಂತ್ರಾಲಯಕ್ಕೆ ವಿಶೇಷ ನಾನ್ ಎಸಿ ಪಲ್ಲಕ್ಕಿ ಬಸ್‌ಗಳನ್ನು ಕಾರ್ಯಾಚರಣೆ ಆರಂಭಿಸಿದೆ.

ಕರಾವಳಿ ಸೇರಿ ವಿವಿಧ ಭಾಗದ ಪ್ರಯಾಣಿಕರ ಅನುಕೂಲಕ್ಕಾಗಿ ಮಂಗಳೂರಿನಿಂದಲೇ ನಾಲ್ಕು ಬಸ್‌ಗಳು ಮಂತ್ರಾಲಯಕ್ಕೆ ಸಂಚರಿಸಲಿವೆ. ಈ ವಿಶೇಷ ಬಸ್‌ಗಳ ಸಂಚಾರಕ್ಕೆ ಸ್ಥಳೀಯ ಶಾಸಕ ವೇದವ್ಯಾಸ್ ಕಾಮತ್ ಅವರು ಚಾಲನೆ ನೀಡಿದರು. ಬಳಿಕ ಎರಡು ಕಿಲೋ ಮೀಟರ್‍‌ವರೆಗೆ ಸ್ವತಃ ಬಸ್ ಚಾಲನೆ ಮಾಡುವ ಮೂಲಕ ಮಂಗಳೂರು- ಮಂತ್ರಾಲಯ ಕೆಎಸ್‌ಆರ್‍‌ಟಿಸಿ ಪಲ್ಲಕ್ಕಿ ಬಸ್ ಕಾರ್ಯಾಚರಣೆಗೆ ಹಸಿರು ನಿಶಾನೆ ತೋರಿಸಿದರು.

KSRTC Mangaluru-Mantralaya

ಮಂಗಳೂರು- ಮಂತ್ರಾಲಯ ನಾನ್ ಎಸಿ ಸ್ಲೀಪರ್ ಬಸ್‌ಗಳನ್ನು ಮೇಲ್ದರ್ಜೆಗೆ ಏರಿಸಿ ನೂತನ ಪಲಕ್ಕಿ ನಾನ್ ಎಸಿ ಸ್ಲೀಪರ್ ಬಸ್‌ಗಳ ಕಾರ್ಯಾಚರಣೆ ಮಾಡಲಾಗುತ್ತಿದೆ. ಈ ಬಸ್‌ಗಳ ಮಾರ್ಗ, ಸಮಯ, ನಿಲ್ದಾಣಗಳು, ಟಿಕೆಟ್ ದರ ಮಾಹಿತಿ ಇಲ್ಲಿದೆ.

Tour Package: ರಾಯರ ಭಕ್ತರಿಗೆ ಶುಭ ಸುದ್ದಿ, ಬೆಂಗಳೂರು-ಮಂತ್ರಾಲಯ ಟೂರ್ ಪ್ಯಾಕೇಜ್, ಬುಕಿಂಗ್ ಹೇಗೆ?
Tour Package: ರಾಯರ ಭಕ್ತರಿಗೆ ಶುಭ ಸುದ್ದಿ, ಬೆಂಗಳೂರು-ಮಂತ್ರಾಲಯ ಟೂರ್ ಪ್ಯಾಕೇಜ್, ಬುಕಿಂಗ್ ಹೇಗೆ?

KSRTC 4 ಬಸ್‌ಗಳ ವೇಳಾಪಟ್ಟಿ, ಟಿಕೆಟ್ ದರ

ಒಟ್ಟು 04 ಪಲ್ಲಕ್ಕಿ ನಾನ್ ಎಸಿ ಬಸ್‌ಗಳು ಉಡುಪಿ, ಶಿವಮೊಗ್ಗ, ಚಿತ್ರದುರ್ಗ ಮತ್ತು ಬಳ್ಳಾರಿ-ಅದೋನಿ ಮಾರ್ಗವಾಗಿ ಮಂತ್ರಾಲಯವನ್ನು 12 ಗಂಟೆಗಳಲ್ಲಿ ಕ್ರಮಿಸಲಿವೆ. ಕರಾವಳಿ ಜನರಿಗೆ ಕೆಎಸ್‌ರ್ ಟಿಸಿ ಮತ್ತಷ್ಟು ಹತ್ತಿರವಾಗಲಿದೆ. ಮಂಗಳೂರು ನಗರ, ಉಡುಪಿ, ಶಿವಮೊಗ್ಗದ ಸೇರಿ ವಿವಿಧ ಜಿಲ್ಲೆಗಳ ಶ್ರೀ ರಾಘವೇಂದ್ರ ಸ್ವಾಮಿಗಳ ಭಕ್ತರಿಗೆ ಸಹಾಯವಾಗಲಿದೆ.

ಒಬ್ಬರಿಗೆ ಟಿಕೆಟ್ ದರವೆಷ್ಟು?

ತಲಾ ಒಬ್ಬರಿಗೆ ಮಂಗಳೂರು-ಮಂತ್ರಾಲಯ ಟಿಕೆಟ್ ದರ 1500, ಉಡುಪಿ-ಮಂತ್ರಾಲಯ 1450 ರೂಪಾಯಿ ಮತ್ತು ಕುಂದಾಪುರದಿಂದ-ಮಂತ್ರಾಲಯ ಟಿಕೆಟ್ ದರ 1400 ರೂಪಾಯಿ ನಿಗದಿಪಡಿಸಲಾಗಿದೆ ಎಂದು ಕೆಎಸ್‌ಆರ್ ಟಿಸಿ ಮಂಗಳೂರು ಘಟಕದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬಸ್‌ಗಳ ನಿರ್ಗಮನ, ಆಗಮನ ಸಮಯ

* ಮಂಗಳೂರು-ಮಂತ್ರಾಲಯ (ಮಾರ್ಗ ಸಂಖ್ಯೆ 236) ಪಲ್ಲಕ್ಕಿ ನಾನ್ ಎಸಿ ಬಸ್ ಮಂಗಳೂರಿನಿಂದ ಮಧ್ಯಾಹ್ನ 3.30ಕ್ಕೆ (15:30) ಹೊರಟು ಮಾರನೇ ದಿನ ಬೆಳಗ್ಗೆ 6.15ಕ್ಕೆ ಮಂತ್ರಾಲಯವನ್ನು ತಲುಪುತ್ತದೆ.

* ಮರಳಿ ಮಂತ್ರಾಲಯದಿಂದ ಮಂಗಳೂರಿಗೆ ಬಸ್ (237) ಸಂಜೆ 5.30ಕ್ಕೆ ಹೊರಟು ಮಾರನೇ ದಿನ ಬೆಳಗ್ಗೆ 7.30ಕ್ಕೆ (15:30) ಮಂಗಳೂರಿಗೆ ಬರುತ್ತದೆ.

* ಮಂಗಳೂರು-ಮಂತ್ರಾಲಯ (247) ಪಲ್ಲಕ್ಕಿ ನಾನ್ ಎಸಿ ಬಸ್ ಮಂಗಳೂರಿನಿಂದ ಸಂಜೆ 06 ಗಂಟೆಗೆ (18:00) ಹೊರಟು ಮಾರನೇ ದಿನ ಬೆಳಗ್ಗೆ 8.15ಕ್ಕೆ ಮಂತ್ರಾಲಯವನ್ನು ತಲುಪುತ್ತದೆ.

* ಮರಳಿ ಮಂತ್ರಾಲಯದಿಂದ ಮಂಗಳೂರಿಗೆ ಬಸ್ (248) ಸಂಜೆ 06.30 ಗಂಟೆಗೆ (18:30) ಹೊರಟು ಮರುದಿನೇ ದಿನ ಬೆಳಗ್ಗೆ 6.30ಕ್ಕೆ (18:30) ಮಂಗಳೂರು ನಿಲ್ದಾಣಕ್ಕೆ ಬರುತ್ತದೆ.

Gold Bag: ನಗದು-ಲಕ್ಷಾಂತರ ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗ್ ಹಿಂತಿರುಗಿಸಿದ ಪ್ರಾಮಾಣಿಕ ಬಸ್ ಚಾಲಕ, NWKRTC
Gold Bag: ನಗದು-ಲಕ್ಷಾಂತರ ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗ್ ಹಿಂತಿರುಗಿಸಿದ ಪ್ರಾಮಾಣಿಕ ಬಸ್ ಚಾಲಕ, NWKRTC

ಆನ್‌ಲೈನ್/ದೂರವಾಣಿ ಮೂಲಕ ಟಿಕೆಟ್ ಬುಕ್ ಮಾಡಿ

ಪ್ರಯಾಣಿಕರು ಆನ್‌ಲೈನ್ ಮೂಲಕ ಮುಂಗಡ ಟಿಕೆಟ್ ಬುಕ್ ಮಾಡಬಹುದು. ಅದಕ್ಕಾಗಿ ನೀವು www.ksrtc.in ಗೆ ಪ್ರಯಾಣಿಸಬಹುದು. ಟಿಕೆಟ್ ಬುಕಿಂಗ್ ಮತ್ತು ಹೆಚ್ಚಿನ ಮಾಹಿತಿಗೆ ಮಂಗಳೂರು ಬಸ್ ನಿಲ್ದಾಣ 77609 90720, ಮುಂಗಡ ಬುಕ್ಕಿಂಗ್ ಶಾಖೆ 96632 11553 ಸಂಖ್ಯೆಗೆ ಕರೆ ಮಾಡಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+