KSRTC Tour Package: ಮಂಗಳೂರು 'ದಸರಾ ವಿಶೇಷ ಏಕದಿನ ಪ್ರವಾಸ ಪ್ಯಾಕೇಜ್'! ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳ ದರ್ಶನ
ಮಂಗಳೂರು: ನಾಡಹಬ್ಬ ದಸರಾ ಮಂಗಳೂರು ಭಾಗದಲ್ಲೂ ಅದ್ಧೂರಿಯಾಗಿ ನಡೆಯುತ್ತದೆ. ಈ ವರ್ಷ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ( KSRTC) ಮಂಗಳೂರು ಘಟಕದ ವತಿಯಿಂದ ಪ್ರವಾಸಿಗರಿಗೆ ಗುಡ್‌ನ್ಯೂಸ್ ನೀಡಿದೆ. ಐದು 'ದಸರಾ ವಿಶೇಷ ಏಕದಿನ ಪ್ರವಾಸ ಪ್ಯಾಕೇಜ್' ಘೋಷಿಸಲಾಗಿದೆ. ಮಲೆನಾಡು, ಕರಾವಳಿ ಭಾಗದ ಐತಿಹಾಸಿಕ ಸುಂದರ ತಾಣಗಳನ್ನು ಒಂದು ದಿನದಲ್ಲಿ ನೋಡಬಹುದಾಗಿದೆ.
ಅಕ್ಟೋಬರ್ 11ರಿಂದ 20ರ ವರೆಗೆ ಈ ವಿಶೇಷ ಬಸ್‌ಗಳು ಸಂಚಾರ ಮಾಡಲಿವೆ. ಈಗಾಗಲೇ ಕೆಎಸ್ ಆರ್ ಟಿಸಿ ಅಧಿಕೃತ ವೆಬ್‌ಸೈಟ್‌ಗಳಿಂದ ಟಿಕೆಟ್ ಮುಂಗಡ ಬುಕಿಂಗ್ ಶುರುವಾಗಿದೆ. ದಸರಾ ರಜಾ ದಿನಗಳಲ್ಲಿ ಮಕ್ಕಳೊಂದಿಗೆ ಕುಟುಂಬ ಸಮೇತರಾಗಿ ಈ ಟೂರ್ ಪ್ಯಾಕೇಜ್‌ನ ಸದುಪಯೋಗ ಪಡೆದುಕೊಳ್ಳಬಹುದು ಎಂದು ಮಂಗಳೂರು ವಿಭಾಗೀಯ ನಿಯಂತ್ರಣಾಧಿಕಾರಿಗಳು ತಿಳಿಸಿದ್ದಾರೆ.

ಎಲ್ಲಿಂದ ಎಲ್ಲಿಗೆ ಬಸ್ ಸಂಚಾರ
ಮಂಗಳೂರು ನಿಲ್ದಾಣದಿಂದ ಬೆಳಗ್ಗೆ ಹೊರಟು ರಾತ್ರಿ ಮರಳಿ ನಗರಕ್ಕೆ ತಂದು ಬಿಡಲಾಗುತ್ತದೆ. 'ನವದುರ್ಗಾ ದರ್ಶನ, ತಲಕಾವೇರಿ ಭಾಗಮಂಡಲ, ಮಂಗಳೂರು ಕೊಲ್ಲೂರು, ಮಂಗಳೂರು-ಸಿಗಂದೂರು, ಮಂಗಳೂರು ಶೃಂಗೇರಿ' ಮಾರ್ಗದಲ್ಲಿ ವಿಶೇಷ ಬಸ್‌ಗಳು ಸಂಚಾರ ಮಾಡಲಿವೆ.
'ನವದುರ್ಗಾ ದರ್ಶನ' ಪ್ಯಾಕೇಜ್
ಮಂಗಳೂರು ನಿಲ್ದಾಣದಿಂದ ಬೆಳಗ್ಗೆ 8 ಗಂಟೆಗೆ ಹೊರಟು 'ಮರೋಳಿ ಸೂರ್ಯನಾರಾಯಣ, ಬೋಳಾರ ಮಾರಿಯಮ್ಮ, ಮಂಗಳಾದೇವಿ, ಪೊಳಲಿ ರಾಜರಾಜೇಶ್ವರಿ, ಹೊಸನಾಡು ಕೊಡಿಯಡ್ಕ, ಕಟೀಲು, ಬಪ್ಪನಾಡು, ಸಸಿಹಿತ್ಲು ಭಗವತಿ, ಚಿತ್ರಾಪುರ, ಉರ್ವ ಮಾರಿಯಮ್ಮ ಮತ್ತು ಕುದ್ರೋಳಿ ಗೋಕರ್ಣನಾಥ ಕ್ಷೇತ್ರ' ತೋರಿಸಿಕೊಂಡು ಮರಳಿ ರಾತ್ರಿ 8ಕ್ಕೆ ಮಂಗಳೂರಿಗೆ ಮರಳಲಾಗುತ್ತದೆ.
ಈ ಪ್ಯಾಕೇಜ್‌ನ ಟಿಕೆಟ್ ದರ
ವಯಸ್ಕರಿಗೆ - 500 ರೂ.
ಮಕ್ಕಳಿಗೆ - 400 ರೂ.
ತಲಕಾವೇರಿ-ಭಾಗಮಂಡಲ ಪ್ಯಾಕೇಜ್
ಬೆಳಗ್ಗೆ 7ಕ್ಕೆ ಬಸ್ ಸಂಚಾರ ಆರಂಭಿಸುತ್ತದೆ. 'ಪುತ್ತೂರು ಮಹಾಲಿಂಗೇಶ್ವರ, ತಲಕಾವೇರಿ, ಭಗಂಡೇಶ್ವರ ದೇವಾಲಯ, ತ್ರಿವೇಣಿ ಸಂಗಮ, ಅಬ್ಬಿ ಫಾಲ್ಸ್ ಮತ್ತು ರಾಜಾಸೀಟ್' ದರ್ಶನ ಬಳಿಕ ರಾತ್ರಿ 9.30ಕ್ಕೆ ಮಂಗಳೂರಿಗೆ ಮರಳುತ್ತದೆ.
ಟಿಕೆಟ್ ದರ
* ವಯಸ್ಕರು - 600 ರೂ.
* ಮಕ್ಕಳು - 500 ರೂ.
ಮಂಗಳೂರು-ಕೊಲ್ಲೂರು ದರ್ಶನ
ಬೆಳಗ್ಗೆ 8 ಗಂಟೆಗೆ ಬಸ್ ಹೊರಡುತ್ತದೆ. 'ಉಚ್ಚಿಲ ಮಹಾಲಕ್ಷ್ಮಿ, ಕಾಪು ಮಾರಿಯಮ್ಮ, ಮಂದಾರ್ತಿ ದುರ್ಗಾಪರಮೇಶ್ವರಿ, ಕಮಲಶಿಲೆ, ಕೊಲ್ಲೂರು ಮೂಕಾಂಬಿಕಾ ಮತ್ತು ಮಾರಣಕಟ್ಟೆ ಬ್ರಹ್ಮಲಿಂಗೇಶ್ವರ ಕ್ಷೇತ್ರ' ದರ್ಶನ ಬಳಿಕ ರಾತ್ರಿ 8ಕ್ಕೆ ಮಂಗಳೂ ನಿಲ್ದಾಣಕ್ಕೆ ಆಗಮಿಸುತ್ತದೆ.
ಟಿಕೆಟ್ ದರ
* ವಯಸ್ಕರು - 600 ರೂ.
* ಮಕ್ಕಳು - 500 ರೂ.
ಮಂಗಳೂರು-ಸಿಗಂಧೂರು ದೇವಿ ದರ್ಶನ
ಬೆಳಗ್ಗೆ 7ಕ್ಕೆ ಬಸ್ ಸಂಚಾರ ಆರಂಭವಾಗುತ್ತದೆ. 'ಕುಂದಾಪುರ, ಸಿಗಂದೂರು ಚೌಡೇಶ್ವರಿ ದೇವಾಲಯ ಮತ್ತು ಕೊಲ್ಲೂರು ಮೂಕಾಂಬಿಕಾ ಕ್ಷೇತ್ರ' ದರ್ಶನ ಮುಗಿಸಿ ರಾತ್ರಿ 7.30ಕ್ಕೆ ಬಸ್ ಮರಳುತ್ತದೆ.
ಟಿಕೆಟ್ ದರ
* ವಯಸ್ಕರು - 700 ರೂ.
* ಮಕ್ಕಳು - 600 ರೂ.
ಮಂಗಳೂರು-ಶೃಂಗೇರಿ ಪ್ಯಾಕೇಜ್
ಬಸ್ ಬೆಳಗ್ಗೆ 8ಕ್ಕೆ ಹೊರಟು 'ಹೊಸನಾಡು ಕೊಡಿಯಡ್ಕ ಅನ್ನಪೂರ್ಣೇಶ್ವರಿ, ಶೃಂಗೇರಿ ಶಾರದಾಂಬೆ, ಹರಿಹರಪುರ ಮಠ ಮತ್ತು ಕಿಗ್ಗಾದ ಋಷ್ಯಶೃಂಗೇಶ್ವರ ದೇವಾಲಯ.' ದರ್ಶನ ಬಳಿಕ ರಾತ್ರಿ 7.30ಕ್ಕೆ ಮಂಗಳೂರಿಗೆ ಮರಳುತ್ತದೆ.
ಟಿಕೆಟ್ ದರ
* ವಯಸ್ಕರು - 600 ರೂ.
* ಮಕ್ಕಳು - 500 ರೂ.
ಪ್ರಯಾಣಿಕರು ಹೆಚ್ಚಿನ ಮಾಹಿತಿಗೆ, ಟಿಕೆಗಾಗಿ ಮಂಗಳೂರು ಘಟಕ-1 ವ್ಯವಸ್ಥಾಪಕರ ಮೊಬೈಲ್ ಸಂಖ್ಯೆ: 7760990713, ಮಂಗಳೂರು ಘಟಕ-3 ವ್ಯವಸ್ಥಾಪಕರು ಮೊ: 7760990723, ಮುಂಗಡ ಕಾಯ್ದಿರಿಸುವಿಕೆ ಕೌಂಟರ್ ಸಂಖ್ಯೆ: 9663211553, ಬಸ್ ನಿಲ್ದಾಣ: 7760990720 ಅಥವಾ
ವಿಭಾಗೀಯ ಕಚೇರಿ: 7760990711 ಇಲ್ಲವೇ 9663266221 ಈ ಸಂಖ್ಯೆಗೆ ನೀವು ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.


Click it and Unblock the Notifications
