KSRTC Bus: ತುರ್ತು ಸಂದರ್ಭಗಳಲ್ಲಿ ಸ್ಪಂದಿಸಲು ವಿಶೇಷ ವಾಹನಗಳಿಗೆ ಚಾಲನೆ: ರಾಮಲಿಂಗಾ ರೆಡ್ಡಿ
Accident Emergency Response Vehicle: ರಸ್ತೆಗಳಿಗೆ ಹೊಸ ವಾಹನಗಳು ಇಳಿಯುವ ಸಂಖ್ಯೆ ಹೆಚ್ಚುತ್ತಲೇ ಇದೆ. ಇದರ ಜೊತೆ ಜೊತೆಗೆ ರಸ್ತೆ ಅಪಘಾತಗಳು ಹೆಚ್ಚಾಗುತ್ತಿವೆ. ಸರ್ಕಾರವು ಇಂಧನ ಮತ್ತು ಎಲೆಕ್ಟ್ರಿಕ್ ಹೊಸ ಬಸ್‌ಗಳನ್ನು ಸಾರಿಗೆ ಇಲಾಖೆಗೆ ಸೇರ್ಪಡೆ ಮಾಡಿಕೊಳ್ಳುವ ಯೋಜನೆ ಪ್ರಗತಿಯಲ್ಲಿದೆ. ದೈನಂದಿನ ಬಸ್ ಕಾರ್ಯಾಚರಣೆಯಲ್ಲಿ ಅಪಘಾತಗಳ ಸಂದರ್ಭದಲ್ಲಿ ತುರ್ತಾಗಿ ಸ್ಪಂದಿಸಬೇಕೆಂಬ ಮಹತ್ತರ ಉದ್ದೇಶದಿಂದ ನೂತನ 'ಅಪಘಾತ ತುರ್ತು ಸ್ಪಂದನ ವಾಹನಗಳ' ಸೇವಾರಂಭಕ್ಕೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಶನಿವಾರ ಚಾಲನೆ ನೀಡಿದರು.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಒಳಗೊಂಡಂತೆ ಇತರ ಸಾರಿಗೆ ನಿಗಮಗಳ ಬಸ್‌ಗಳು ಸಂಚರಿಸುವಾಗ ಮಾರ್ಗ ಮಧ್ಯೆ ಅಪಘಾತ/ ಅವಘಡಕ್ಕೀಡಾಗಿ (ಬ್ರೇಕ್ ಡೌನ್) ದುರಸ್ತಿಗೊಳಿಸುವ ಅಗತ್ಯವಿದ್ದಲ್ಲಿ ಸದರಿ ವಾಹನವನ್ನು ಶೀಘ್ರವಾಗಿ ರಿಪೇರಿಗೊಳಿಸುವ ಸಲುವಾಗಿ ಮೊಬೈಲ್ ವರ್ಕ್‌ಶಾಪ್ ಮಾದರಿಯಲ್ಲಿ ಈ ತುರ್ತು ಸ್ಪಂದನೆಯ ವಾಹನಗಳು ಸಹಾಯಕ್ಕೆ ಬರಲಿವೆ. ಈ ಉದ್ದೇಶದಿಂದ ಇಲಾಖೆ ವ್ಯಾಪ್ತಿಗೆ ಸೇರ್ಪಡೆಗೊಳಿಸಲು ಉದ್ದೇಶಿಸಲಾಗಿದೆ ಎಂದು ಸಚಿವರು ತಿಳಿಸಿದರು.

ಈ ವಾಹನಗಳ ನಿಯೋಜನೆ ಎಲ್ಲೆಲ್ಲಿ?
ಸದ್ಯ ಎರಡು ವಾಹನಗಳಿಗೆ ಚಾಲನೆ ನೀಡಲಾಗಿದೆ. ಇವುಗಳನ್ನು ಬೆಂಗಳೂರು ಹಾಗೂ ಮೈಸೂರು ಕೇಂದ್ರ ಸ್ಥಳಗಳಲ್ಲಿ ನಿಯೋಜಿಸಲಾಗುವುದು. ಇದರಿಂದ ಬೆಂಗಳೂರು ಸುತ್ತಮುತ್ತ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಮೈಸೂರು, ಮಂಡ್ಯ, ಪ್ರದೇಶದಲ್ಲಿ ಉಂಟಾಗುವ ಅಪಘಾತ/ಅವಘಢಗಳನ್ನು ಶೀಘ್ರದಲ್ಲಿ ಸ್ಪಂದಿಸಲು ಅನುಕೂಲವಾಗುತ್ತದೆ ಎಂದರು.
ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣ ಹಾಗೂ ಮೈಸೂರು ರಸ್ತೆ ಬಸ್ ನಿಲ್ದಾಣದಿಂದ ರಾಜ್ಯದ ಹಾಗೂ ಅಂತಾರಾಜ್ಯದ ಭಾಗಗಳಿಗೆ ವಿವಿಧ ಮಾದರಿಯ ಬಸ್ಸುಗಳು ವಿವಿಧ ಸ್ಥಳಗಳಿಗೆ ಕಾರ್ಯಾಚರಣೆ ಮಾಡುತ್ತವೆ. ಬಸ್ಸುಗಳು ವಿವಿಧ ಸ್ಥಳಗಳಲ್ಲಿ ತಾಂತ್ರಿಕ ದೋಷದಿಂದಾಗಿ ಕೆಟ್ಟು ನಿಲ್ಲುವ ಸಂದರ್ಭದಲ್ಲಿ, ಉಂಟಾಗುವ ಟ್ರಾಫಿಕ್ ಸಮಸ್ಯೆ ಪರಿಹರಿಸಲು ಈ ವಾಹನವು ಸಹಕಾರಿಯಾಗಲಿದೆ.
ಕೆಂಪೇಗೌಡ ಬಸ್ ನಿಲ್ದಾಣ ಹಾಗೂ ಮೈಸೂರು ರಸ್ತೆ ಬಸ್ ನಿಲ್ದಾಣದ ತಾಂತ್ರಿಕ ಸಿಬ್ಬಂದಿ ವಾಹನ ಅವಘಡ/ ಅಪಘಾತ ಸಮಯದಲ್ಲಿ ಶೀಘ್ರವಾಗಿ ಬಿಡಿಭಾಗಗಳು / ಇತರೆ ಪರಿಕರಗಳೊಂದಿಗೆ ಸದರಿ ಸ್ಥಳಗಳಿಗೆ ತೆರಳಿ ವಾಹನ ದುರಸ್ಥಿಗೊಳಿಸಲು ಮೊಬೈಲ್ ವರ್ಕ್‌ಶಾಪ್ ವಾಹನವನ್ನು ಸೇರ್ಪಡೆಗೊಳಿಸಲಾಗುವುದು.
ಬಸ್ಸುಗಳು ಅಪಘಾತ/ಅವಘಡಕ್ಕೀಡಾದಲ್ಲಿ (ಬ್ರೇಕ್ ಡೌನ್) ಚಾಲಕ, ನಿರ್ವಾಹಕರಿಗೆ ತಕ್ಷಣದಲ್ಲಿ ಸಹಾಯ ನೀಡಲು ಹಾಗೂ ಗಾಯಗೊಂಡಿದಲ್ಲಿ ಹತ್ತಿರದ ಆಸ್ಪತ್ರೆಗೆ ದಾಖಲಿಸಲು ಸಹ ಸ್ಪಂದನ ವಾಹನವು ಉಪಯುಕ್ತವಾಗುತ್ತದೆ. ಪ್ರತಿ ವಾಹನದ ಬೆಲೆ ರೂ.7.22 ಲಕ್ಷಗಳಾಗುತ್ತದೆ. ಜನವರಿ-2026ರ ಅಂತ್ಯಕ್ಕೆ ಹೆಚ್ಚುವರಿಯಾಗಿ 10 ಹೊಸ ವಾಹನಗಳು ಸೇರ್ಪಡೆಗೊಳ್ಳಲಿದ್ದು, ಸದರಿ ವಾಹನಗಳನ್ನು ಉಳಿದ ಜಿಲ್ಲೆಗಳಿಗೆ ಕ್ರಮವಾಗಿ ನಿಯೋಜನೆ ಮಾಡಲಾಗುವುದು.
ಅವಘಡ/ ಅಪಘಾತ ಸಮಯದಲ್ಲಿ ಶೀಘ್ರವಾಗಿ ಬಿಡಿಭಾಗಗಳು/ಇತರೆ ಪರಿಕರಗಳೊಂದಿಗೆ ಸದರಿ ಸ್ಥಳಗಳಿಗೆ ತೆರಳಿ ವಾಹನ ದುರಸ್ಥಿಗೊಳಿಸಲು Ashok Leyland DOST XL High Side Deck - BS4 ಮಾದರಿಯ ವಾಹನವನ್ನು ಖರೀದಿಸಲಾಗಿದೆ.
BS4 ಮಾದರಿಯ ವಾಹನ ವೈಶಿಷ್ಟ್ಯಗಳನ್ನು ನೋಡುವುದಾದರೆ,ಬಿಲ್ಟ್ ಅಪ್ ಟ್ರಕ್ (V2) ಇದಾಗಿದ್ದು, ಟರ್ಬೋ ಚಾರ್ಜ್ಡ್ ಮತ್ತು ಇಂಟರ್‌ಕೂಲ್ಡ್ ಡೀಸೆಲ್ ಎಂಜಿನ್ ಮತ್ತು ಕಾರ್ಯಕ್ಷಮತೆ ಹೊಂದಿದೆ. BS-VI ಮಾನದಂಡಗಳಿಗೆ ಅನುಗುಣವಾಗಿರುವ ಕಡಿಮೆ ಮಾಲಿನ್ಯ ಹೊರಸೂಸುವ ವ್ಯವಸ್ಥೆ ಇದರಲ್ಲಿ. ಉತ್ತಮ ಇಂಧನ ದಕ್ಷತೆ ಮತ್ತು ಶಕ್ತಿ ಉತ್ಪಾದನೆ, ಉತ್ತಮೆ ಹೈ ಸೈಟ್ ಡೆಕ್ (HSD) ವಿನ್ಯಾಸಗೊಳಿಸಲಾಗಿದೆ. ಸರಕುಗಳನ್ನು ಸುರಕ್ಷಿತವಾಗಿ ಸಾಗಿಸಲು ಅನುಕೂಲ ಒದಗಿಸಲಿದೆ ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ತಿಳಿಸಿದರು.












Click it and Unblock the Notifications