4 ಜಿಲ್ಲೆಗಳಿಂದ ತಿರುಪತಿ ಕೆಎಸ್ಆರ್‌ಟಿಸಿ ಪ್ಯಾಕೇಜ್‌ ಪ್ರವಾಸ ಆರಂಭ

ಬೆಂಗಳೂರು, ಮೇ 27 : ಕೆಎಸ್ಆರ್‌ಟಿಸಿಯ ಬೆಂಗಳೂರು-ತಿರುಪತಿ ಪ್ಯಾಕೇಜ್‌ಗೆ ಜನರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಆದ್ದರಿಂದ, ರಾಜ್ಯದ ವಿವಿಧ ನಗರಗಳಿಂದ ತಿರುಪತಿಗೆ ಪ್ಯಾಕೇಜ್ ಪ್ರವಾಸವನ್ನು ವಿಸ್ತರಣೆ ಮಾಡಲಾಗಿದೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಮಂಗಳೂರು, ದಾವಣಗೆರೆ, ಶಿವಮೊಗ್ಗ ಮತ್ತು ಮೈಸೂರಿನಿಂದ ತಿರುಪತಿ ಪ್ಯಾಕೇಜ್ ಪ್ರವಾಸ ಆರಂಭಿಸಿದೆ. ಮಂಗಳೂರು, ದಾವಣಗೆರೆ, ಶಿವಮೊಗ್ಗದಿಂದ ತಿರುಪತಿ-ಕಾಳಹಸ್ತಿ ಪ್ಯಾಕೇಜ್ ಪ್ರವಾಸ ಆರಂಭಿಸಲಾಗಿದೆ.

ಕೆಎಸ್ಆರ್‌ಟಿಸಿ ಕೌಂಟರ್ ಅಥವ ಆನ್‌ಲೈನ್/ಮೊಬೈಲ್ ಮೂಲಕ 30 ದಿನ ಮುಂಚಿತವಾಗಿ ಜನರು ಸೀಟು ಕಾಯ್ದಿರಿಸುವ ಮೂಲಕ ಪ್ಯಾಕೇಜ್‌ನಲ್ಲಿ ಪ್ರಯಾಣ ಮಾಡಬಹುದಾಗಿದೆ. ಪ್ಯಾಕೇಜ್‌ನ ದರಪಟ್ಟಿಯನ್ನು ಕೆಎಸ್ಆರ್‌ಟಿಸಿ ಬಿಡುಗಡೆ ಮಾಡಿದೆ.

ಪ್ಯಾಕೇಜ್ ಪ್ರವಾಸ ಆಯ್ಕೆ ಮಾಡಿಕೊಂಡರೆ ಐರಾವತ ಕ್ಲಬ್ ಕ್ಲಾಸ್ ಬಸ್‌ನಲ್ಲಿ ಸಂಚಾರ ನಡೆಸಬಹುದಾಗಿದೆ. ರಜಾ ದಿನಗಳಿಗೆ ಮತ್ತು ಸಾಮಾನ್ಯ ದಿನಗಳಿಗೆ ಬೇರೆ-ಬೇರೆ ದರ ನಿಗದಿ ಮಾಡಲಾಗಿದೆ. ಈ ಪ್ಯಾಕೇಜ್‌ನ ವಿವರ ಇಲ್ಲಿದೆ....

ಪ್ಯಾಕೇಜ್‌ ಏನನ್ನು ಒಳಗೊಂಡಿದೆ

ಪ್ಯಾಕೇಜ್‌ ಏನನ್ನು ಒಳಗೊಂಡಿದೆ

ತಿರುಪತಿ-ಕಾಳಹಸ್ತಿ ಪ್ಯಾಕೇಜ್‌ ಪ್ರವಾಸದಲ್ಲಿ ಐರಾವತ ಕ್ಲಬ್ ಕ್ಲಾಸ್ ಬಸ್‌ನಲ್ಲಿ ಪ್ರಯಾಣ ಮಾಡಬಹುದಾಗಿದೆ. ಹೋಟೆಲ್‌ನಲ್ಲಿ ಫ್ರೆಶ್‌ ಅಪ್, ಪದ್ಮಾವತಿದೇವಿ ದರ್ಶನ, ಉಪಹಾರ, ತಿರುಪತಿ ತಿರುಮಲಕ್ಕೆ ಎಪಿಎಸ್‌ಆರ್‌ಟಿಸಿ ಸಾರಿಗೆ ವ್ಯವಸ್ಥೆ, ತಿರುಮಲದಲ್ಲಿ ಶೀಘ್ರ ದರ್ಶನ ಮತ್ತು ಊಟ, ತಿರುಪತಿ ಸ್ಥಳೀಯ ದೇವಾಲಯಗಳ ಭೇಟಿ. ಕಾಳಹಸ್ತಿ ದೇವಸ್ಥಾನದಲ್ಲಿ ರಾತ್ರಿ ಊಟ ಮತ್ತು ತಂಗಲು ವ್ಯವಸ್ಥೆ, ಬೆಳಗ್ಗೆ ದೇಗುಲ ದರ್ಶನ, ಉಪಹಾರ, ಮಧ್ಯಾಹ್ನದ ಊಟದ ವ್ಯವಸ್ಥೆ ಈ ಪ್ಯಾಕೇಜ್‌ನಲ್ಲಿ ಒಳಗೊಂಡಿದೆ.

ಶೀಘ್ರ ದರ್ಶನ ವ್ಯವಸ್ಥೆ

ಶೀಘ್ರ ದರ್ಶನ ವ್ಯವಸ್ಥೆ

ಮೈಸೂರು-ತಿರುಪತಿ ಪ್ಯಾಕೇಜ್‌ನಲ್ಲಿ ಹೋಟೆಲ್‌ನಲ್ಲಿ ಫ್ರೆಶ್ ಅಪ್, ಪದ್ಮವತಿ ದರ್ಶನ, ಉಪಹಾರ, ತಿರುಪತಿ ತಿರುಮಲಕ್ಕೆ ಎಪಿಎಸ್‌ಆರ್‌ಟಿಸಿ ಸಾರಿಗೆ ವ್ಯವಸ್ಥೆ, ತಿರುಮಲದಲ್ಲಿ ಶೀಘ್ರ ದರ್ಶನ ಮತ್ತು ಊಟ ಒಳಗೊಂಡಿದೆ.

ಪ್ಯಾಕೇಜ್ ದರಗಳ ವಿವರ

ಪ್ಯಾಕೇಜ್ ದರಗಳ ವಿವರ

* ಮಂಗಳೂರಿನಿಂದ ಮಧ್ಯಾಹ್ನ 12ಕ್ಕೆ ಬಸ್ ಹೊರಡಲಿದೆ. ಸಾಮಾನ್ಯ ದಿನಗಳಲ್ಲಿ ವಯಸ್ಕರಿಗೆ 5,100, ಮಕ್ಕಳಿಗೆ 4,100 ದರವಿದೆ. ವಾರಾಂತ್ಯದಲ್ಲಿ ವಯಸ್ಕರಿಗೆ 5,400, ಮಕ್ಕಳಿಗೆ 4,300 ದರ ನಿಗದಿ ಮಾಡಲಾಗಿದೆ.

* ದಾವಣಗೆರೆ (ಚಿತ್ರದುರ್ಗ ಮಾರ್ಗ) ಸಂಜೆ 4.06ಕ್ಕೆ ಬಸ್ ಹೊರಡಲಿದೆ. ಸಾಮಾನ್ಯ ದಿನಗಳಲ್ಲಿ ವಯಸ್ಕರಿಗೆ 4500, ಮಕ್ಕಳಿಗೆ 3600 ದರವಿದೆ. ವಾರಾಂತ್ಯದಲ್ಲಿ ವಯಸ್ಕರಿಗೆ 4800, ಮಕ್ಕಳಿಗೆ 3900 ದರವಿದೆ.

ಶಿವಮೊಗ್ಗ,ಮೈಸೂರು

ಶಿವಮೊಗ್ಗ,ಮೈಸೂರು

* ಶಿವಮೊಗ್ಗ (ಭದ್ರಾವತಿ ಮಾರ್ಗ) ಸಂಜೆ 4.01ಕ್ಕೆ ಬಸ್ ಹೊರಡಲಿದೆ. ಸಾಮಾನ್ಯ ದಿನಗಳಲ್ಲಿ ವಯಸ್ಕರಿಗೆ 4500, ಮಕ್ಕಳಿಗೆ 3600 ದರವಿದೆ. ವಾರಾಂತ್ಯದಲ್ಲಿ ವಯಸ್ಕರಿಗೆ 4800, ಮಕ್ಕಳಿಗೆ 3900 ದರವಿದೆ.

* ಮೈಸೂರು ರಾತ್ರಿ 7.31ಕ್ಕೆ ಬಸ್ ಹೊರಡಲಿದೆ. ಸಾಮಾನ್ಯ ದಿನಗಳಲ್ಲಿ ವಯಸ್ಕರಿಗೆ 3100, ಮಕ್ಕಳಿಗೆ 2200 ದರವಿದೆ. ವಾರಾಂತ್ಯದಲ್ಲಿ ವಯಸ್ಕರಿಗೆ 3,300, ಮಕ್ಕಳಿಗೆ 2400 ದರವಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+