ಕೆಎಸ್‌ಆರ್‌ಟಿಸಿ ನೌಕರರಿಗೆ ಸಿಹಿ ಸುದ್ದಿ: ನಗದು ರಹಿತ ಆರೋಗ್ಯ ಚಿಕಿತ್ಸೆ ಉಪಕ್ರಮ ಜಾರಿ, ಪ್ರಯೋಜನೆಗಳೇನು?

ಬೆಂಗಳೂರು, ಜನವರಿ 02: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ತನ್ನ ನೌಕರರಿಗೆ ಹೊಸ ವರ್ಷಕ್ಕೆ ಖುಷಿ ಸುದ್ದಿಯೊಂದನ್ನು ಪ್ರಕಟಿಸಿದೆ. ನಗರ ರಹಿತ ಆರೋಗ್ಯ ಚಿಕಿತ್ಸೆ ವ್ಯವಸ್ಥೆಯೊಂದನ್ನು ಈ ವರ್ಷದಿಂದ ಪರಿಚಯಿಸಲು ನಿರ್ಧರಿಸಿರುವ ಸಾರಿಗೆ ಇಲಾಖೆಯು ನಂತರದ ದಿನಗಳಲ್ಲಿ ಈ ಉಪಕ್ರಮವನ್ನು ಇತರ ಮೂರು ಸಾರಿಗೆ ನಿಮಗಳಿಗೆ ವಿಸ್ತರಣೆ ಮಾಡಲಿದೆ. ಹಾಗಾದರೆ ಈ ನಗದು ರಹಿತ ವ್ಯವಸ್ಥೆ ಜಾರಿ ಯಾವಾಗ? ಪ್ರಯೋಜನಗಳು ಏನು?, ಲಿಮಿಟ್ಸ್, ಆಸ್ಪತ್ರೆಗಳ ಮಾಹಿತಿ ಇಲ್ಲಿದೆ.

225 ಆಸ್ಪತ್ರೆಗಳಲ್ಲಿ ನಗದು ರಹಿತ ಚಿಕಿತ್ಸೆ

ಕರ್ನಾಟಕ KSRTC ನೌಕರರಿಗೆ, ಕಾರ್ಮಿಕರಿಗೆ ನಗದು ಇಲ್ಲದೇ ನಿಗದಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬಹುದಾಗಿದೆ. ಮುಂಗಡ ಹಣ ಪಾವತಿಯ ಕಿರಿ ಕಿರಿ, ಹಣದ ಆತಂಕವನ್ನು ಇದು ತಪ್ಪಿಸಲಿದೆ.

KSRTC Employees to Receive Cashless Medical Treatment in 225 Hospitals from January 6th

ಸದ್ಯ ಈ ವ್ಯವಸ್ಥೆಯಡಿ ರಾಜ್ಯದಲ್ಲಿ 225 ಆಸ್ಪತ್ರೆಗಳನ್ನು ತರಲಾಗಿದ್ದು, ಈ ಆಸ್ಪತ್ರೆಗಳಲ್ಲಿ ನೌಕರರು, ಕಾರ್ಮಿಕರು ಚಿಕಿತ್ಸೆ ಪಡೆಯಬಹುದಾಗಿದೆ. ಈ ಮೂಲಕ ಕೆಎಸ್‌ಆರ್‌ಟಿಸಿ ಹೊಸ ವರ್ಷಕ್ಕೆ ಮಹತ್ವದ ಹೆಜ್ಜೆ ಇಟ್ಟಿದೆ.

ನೌಕರರ ಮೇಲಿನ ಹಣಕಾಸಿನ ಒತ್ತಡ ಕಡಿಮೆ

ಉತ್ತಮ ಆರೋಗ್ಯ ಹೊಂದುವುದು ಎಲ್ಲರ ಗುರಿಯಾಗಿರುತ್ತದೆ. ಆದರೆ ಕೆಲಸದ ಒತ್ತಡ, ನಿದ್ದೆ ಇಲ್ಲದ ಕಾರ್ಯ ನಿರ್ವಹಣೆ, ಜವಾಬ್ದಾರಿ ನಿರ್ವಹಣೆ ವೇಳೆ ಆರೋಗ್ಯದ ಕಡೆಗೆ ಗಮನ ಹರಿಸಲು ಆಗದೇ ಅನಾರೋಗ್ಯಕ್ಕೆ ತುತ್ತಾಗಬೇಕಾಗುತ್ತದೆ. ಕೆಲವೊಮ್ಮೆ ಅಕಾಲಿಕವಾಗಿ ಅನಾರೋಗ್ಯಕ್ಕೆ ತುತ್ತಾಗಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ಸಾರಿಗೆ ನೌಕರರ ಮೇಲೆ ಉಂಟಾಗುವ ಹಣಕಾಸಿನ ಒತ್ತಡವನ್ನು ಈ ನಗದು ರಹಿತ ಆರೋಗ್ಯ ಚಿಕಿತ್ಸೆ ಉಪಕ್ರಮ ನಿವಾರಣೆ ಮಾಡಲಿದೆ.

ಸದ್ಯ ಈ ಸೇವೆಯನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ)ಯಲ್ಲಿ ಜಾರಿಗೆ ಬರಲಿದೆ. ಮುಂದಿನ ದಿನಗಳಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ), ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಕೆಕೆಆರ್‌ಟಿಸಿ) ಮತ್ತು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಎನ್‌ಡಬ್ಲುಕೆಆರ್‌ಟಿಸಿ) ಗಳಲ್ಲಿಯು ಜಾರಿಗೆ ತರಲಾಗುವುದು ಎಂದು ಸಾರಿಗೆ ಇಲಾಖೆ ಮೂಲಗಳು ಮಾಹಿತಿ ನೀಡಿವೆ.

KSRTC Employees to Receive Cashless Medical Treatment in 225 Hospitals from January 6th

ನೌಕರರಿಗೆ ಆರೋಗ್ಯ ಕಾರ್ಡ್ ವಿತರಣೆ

ಕೆಎಸ್‌ಆರ್‌ಟಿಸಿ ಅಧ್ಯಕ್ಷ ಎಸ್.ಆರ್. ಶ್ರೀನಿವಾಸ್ ಅವರು ಪ್ರತಿಕ್ರಿಯಿಸಿ, ಸದ್ಯ ನೌಕರರಿಗೆ ಯಾವೆಲ್ಲ ಆಸ್ಪತ್ರೆಗಳಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ಪಡೆಯುತ್ತೇವೆ. ಉಪಕ್ರಮದ ಭಾಗವಾಗಿ ನೌಕರರಿಗೆ ಆರೋಗ್ಯ ಕಾರ್ಡ್ ವಿತರಿಸಲಾಗುವುದು. ಈ ಕಾರ್ಡ್ ತೋರಿಸಿ ಸೂಕ್ತ ಆಸ್ಪತ್ರೆಗಳಲ್ಲಿ ನಗದು ರಹಿತ ಆರೋಗ್ಯ ಸೇವೆ ಪಡೆಯಬಹುದು ಎಂದರು.

ನೌಕರರು ಅನಾರೋಗ್ಯ ಸಂದರ್ಭದಲ್ಲಿ ಕಾರ್ಡ್ ಇದ್ದರೆ ಸಾಕು ಆಸ್ಪತ್ರೆಗಳಿಗೆ ಚಿಕಿತ್ಸೆಗೆ ನೇರವಾಗಿ ಪ್ರವೇಶ ಪಡೆಯಬಹುದು. ಮುಂಗಡ ಹಣ ಕಟ್ಟಬೇಕು ಎಂಬಿತ್ಯಾದಿ ಹಣಕಾಸಿನ ಕಿರಿ ಕಿರಿ ಇರುವುದಿಲ್ಲ. ಸಕಾಲದಲ್ಲೂ ಸೂಕ್ತ ಆರೋಗ್ಯ ಸೇವೆ ಪಡೆಯಲು ಈ ಕಾರ್ಡ್ ನೆರವಾಗುತ್ತದೆ ಎಂದು ಅಧಿಕಾರಿಗಳು

ನಗದು ರಹಿತ ಆರೋಗ್ಯ ಸೇವೆಯ ಪ್ರಯೋಜನ

ಆರೋಗ್ಯ ಕಾರ್ಡ್ ಪಡೆದ ನೌಕರರನು ಪೋಷಕರು, ಪತ್ನಿ ಮತ್ತು ಮಕ್ಕಳು ಮಾತ್ರವಲ್ಲದೇ, ತೀರಾ ಹತ್ತಿರದ ಕುಟುಂಬ ಸದಸ್ಯರಿಗೂ ಈ ಯೋಜನೆ ಅನ್ವಯಿಸುತ್ತದೆ. ಈಗಾಗಲೇ ಏಳ ಲಕ್ಷ ಕುಟುಂಬಗಳು ಉಪಕ್ರಮ ವ್ಯಾಪ್ತಿಗೆ ಬರಲಿದ್ದಾರೆ. ಮುಂದೆ ಇದು ನಾಲ್ಕು ನಿಗಮಗಳಿಗೆ ವಿಸ್ತರಣೆ ಆದರೆ, ಒಟ್ಟು 1.15 ಲಕ್ಷ ಉದ್ಯೋಗಿಗಳು ನಗದು ರಹಿತ ಆರೋಗ್ಯ ಸೇವೆ ಪಡೆಯಲಿದ್ದಾರೆ ಎಂದು ನಿಗಮದ ಮೂಲಗಳು ಮಾಹಿತಿ ನೀಡಿವೆ.

ಈ ಹಿಂದೆ ಜೀವ ವಿಮಾ ಮೊತ್ತ ಹೆಚ್ಚಿಸಿದ್ದ KSRTC ಇದೀಗ ಉಪಕ್ರಮ ಜಾರಿ ಮೂಲಕ ತನ್ನ ಸಿಬ್ಬಂದಿ, ಕಾರ್ಮಿಕರ ಕುಟುಂಬಗಳ ಮೇಲೆ ಕಾಳಜಿ ವಹಿಸಿದೆ. ನಿಗಮವು ತನ್ನ ಬದ್ಧತೆ ಮರೆದಿದೆ.

ಈ ಉಪಕ್ರಮದ ಭಾಗವಾಗಲು, ಕಾರ್ಡ್ ಮೂಲಕ ಆರೋಗ್ಯ ಸೇವೆ ಪಡೆಯಲು ಖಾಯಂ ನೌಕರರು ವರ್ಷಕ್ಕೆ 650 ರೂಪಾಯಿ ಪಾವತಿಸಬೇಕಾಗುತ್ತದೆ. ನಿಗಮವು ಯೋಜನೆಗೆ ಶೇಕಡಾ 5ರಷ್ಟು ಸಬ್ಸಿಡಿ ನೀಡಲಿದೆ. ಪ್ರತಿ ಹಂತದಲ್ಲೂ ತನ್ನ ಉದ್ಯೋಗಿಗಳನ್ನು ನಿಗಮ ಬೆಂಬಲಿಸಲು ಮುಂದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+