Get Updates
Get notified of breaking news, exclusive insights, and must-see stories!

KSRTC ನೌಕರರಿಗೆ ಸಿಹಿ ಸುದ್ದಿ: 38 ತಿಂಗಳ ಬಾಕಿ ವೇತನ ಪಾವತಿಯ ಅಪ್ಡೇಟ್

ಬೆಂಗಳೂರು, ನವೆಂಬರ್ 20: ಪ್ರಯಾಣಿಕರಿಗೆ ಉತ್ತಮ ಸಾರಿಗೆ ಸೇವೆ ನೀಡುವಲ್ಲಿ ಹೆಸರುವಾಸಿಯಾದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಉದ್ಯೋಗಿಗಳಿಗೆ ಕರ್ನಾಟಕ ಸರ್ಕಾರ ಸಿಹಿ ಸುದ್ದಿ ನೀಡಲಿದೆ. ಕಳೆದ ಒಂದೂವರೆಗೆ ವರ್ಷದಿಂದ ವೇತನ ಹೆಚ್ಚಳದ ಬಾಕಿಯನ್ನು ನೀಡುವಂತೆ ಸರ್ಕಾರಕ್ಕೆ ವಿವಿಧ ನೌಕರ ಸಂಘಟನೆಗಳು ಮನವಿ ಮಾಡಿದ್ದವು. ಅವರ ಮನವಿಗೆ ಸರ್ಕಾರ ಸ್ಪಂದಿಸಿ ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತಿದೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ನೌಕರರಿಗೆ ಬಾಕಿ ಇರುವ 38 ತಿಂಗಳ ವೇತನ ಹೆಚ್ಚಳದ ಹಿಂಬಾಕಿಯನ್ನು ಇನ್ನೊಂದು ವಾರದಲ್ಲಿ ಅರ್ಹರ ಬ್ಯಾಂಕ್ ಖತೆಗೆ ಜಮೆ ಮಾಡಲು ಸರ್ಕಾರ ನಿರ್ಧರಿಸಿದೆ. ಈ ಕುರಿತು ಸರ್ಕಾರ ಶೀಘ್ರವೇ ಮಹತ್ವದ ನಿರ್ಧಾರ ಕೈಗೊಂಡು ಅಧಿಕೃತ ಘೋಷಣೆ ಮಾಡಲಿದೆ ಎಂದು ಮೂಲಗಳು ಮಾಹಿತಿ ನೀಡಿವೆ.

KSRTC Employees to Get 38 Months Salary Increase Arrears Within a Week Govt

2023 ಮೇ ತಿಂಗಳಲ್ಲಿ ಕರ್ನಾಟಕ ಕಾಂಗ್ರೆಸ್‌ಗೆ ಬಹುಮತ ಬಂದು ಅಧಿಕಾರ ಲಭಿಸಿತು. ಅಂದಿನಿಂದಲೂ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರಿಗೆ ಮನವಿಗಳನ್ನು ಸಲ್ಲಿಸಲಾಗುತ್ತಾ ಬರಲಾಗಿತ್ತು. ಇದೀಗ ಸರ್ಕಾರ ನೌಕರರಿಗೆ ಹಿಂಬಾಕಿ ನೀಡಲು ಮನಸ್ಸು ಮಾಡಿದೆ.

ಸಾರಿಗೆ ನೌಕರರಿಗೆ 2020 ಜನವರಿ 01ರಿಂದ ಬಾಕಿ ಇರುವ ವೇತನ ಹೆಚ್ಚಳದ ಅಂಶವು ಇದೀಗ ನೌಕರರಿಗೆ ಮುಂದಿನ ಒಂದು ಇಲ್ಲವೇ ಎರಡು ವಾರದಲ್ಲಿ ಖಾತೆಗೆ ಜಮೆ ಆಗಲಿದೆ. ಈ ಮೂಲಕ ವರ್ಷಾಂತ್ಯಕ್ಕೆ ನೌಕರರಿಗೆ ಭರ್ಜರಿ ಸುದ್ದಿಯೊಂದನ್ನು ರಾಜ್ಯ ಸರ್ಕಾರ ನೀಡಿದೆ.

2020ರಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ವೇತನದಲ್ಲಿ ಶೇಕಡಾ 15ರಷ್ಟು ಹೆಚ್ಚಳ ಮಾಡಲಾಗಿತ್ತು. ಅದಾದ ಬಳಿಕ ವೇತನದಲ್ಲಿ ಹೆಚ್ಚಾದ ಹಣ ನೌಕರರಿಗೆ ಪಾವತಿ ಆಗದೇ ಬಾಕಿ ಉಳಿಕೊಂಡಿತ್ತು. ಆ ಬೇಡಿಕೆಯ ಇದೀಗ ಈಡೇರುವ ಕಾಲ ಸಮೀಪಿಸಿದೆ. ಸದ್ಯಕ್ಕೆ ಸರ್ಕಾರ ಅಧಿಕೃತವಾಗಿ ಏನ್ನನ್ನು ತಿಳಿಸಿಲ್ಲ. ಬದಲಾಗಿ ಬಾಕಿ ಪಾವತಿಗೆ ಸಜ್ಜಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.

ವೇತನ ಹೆಚ್ಚಾದರೂ ಸಹಿತ ಸರ್ಕಾರ ಹಿಂಬಾಕಿ ನೀಡದ ಕಾರಣ, ಕೆಲವು ಭಾರಿ ಪ್ರತಿಭಟಿಸಲಾಗಿತ್ತು. ಕೊನೆಗೆ ಕಳೆದ ವರ್ಷ 2023ರ ಫೆಬ್ರವರಿಯಲ್ಲಿ ಹಿಂಬಾಕಿ ನೀಡದ ಸರ್ಕಾರದ ಕ್ರಮ ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗಲು ನಿವೃತ್ತ ನೌಕರರು ಗುಟ್ಟಾಗಿ ಮಾಹಿತಿ ಕಲೆ ಹಾಕಿದ್ದರು.

ಸದ್ಯ ಸರ್ಕಾರ ಬಂದ ಬಳಿಕ ಶಕ್ತಿ ಯೋಜನೆ ಜಾರಿಯಾದ ಮೇಲೆ ಸಾರಿಗೆ ಇಲಾಖೆಗೆ ಮತ್ತಷ್ಟು ದಕ್ಷತೆಯಿಂದ ಕಾರ್ಯ ನಿರ್ವಹಿಸಿದೆ. ಈ ನಡುವೆ ಮತ್ತೊಮ್ಮೆ ನೌಕರರ ಸಂಘವು ಸರ್ಕಾರಕ್ಕೆ ಹಿಂಬಾಕಿಗೆ ಮನವಿ ಮಾಡಿತ್ತು. ಸ್ಪಂದಿಸುವುದಾಗಿ ಸಾರಿಗೆ ಸಚಿವರು ಮಾಹಿತಿ ನೀಡಿದ್ದರು. ಇದೆಲ್ಲ ಬೆಳವಣಿಗೆ ನಡುವೆ ಇದೀಗ ಮುಂದಿನ ಒಂದು ವಾರದೊಳಗೆ ಎಲ್ಲ 38 ತಿಂಗಳ ವೇತನ ಹೆಚ್ಚಳದ ಹಿಂಬಾಕಿಯನ್ನು ನೀಡುವುದಾಗಿ ಸರ್ಕಾರ ತಿಳಿಸಿದೆ..

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+